Fact Check: ದೋಸೆಯನ್ನು ಭಾರತಕ್ಕೆ ಪರಿಚಯಿಸಿದವರು ಮೊಘಲರು ಎಂದು ರೋಮಿಲಾ ಥಾಪರ್ ಅವರು ಹೇಳಿದ್ದಾರೆ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿದೆ
ಇತ್ತೀಚೆಗೆ ಭಾರತದಲ್ಲಿ ತಮ್ಮ ರಾಜಕೀಯ ಸಿದ್ದಾಂತಗಳನ್ನು ವಿರೋಧಿಸುವ ಇತಿಹಾಸಕಾರರು ಮತ್ತು ಸಾಹಿತಿಗಳ ಮೇಲೆ ದಾಳಿ ಮಾಡುವುದು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಇತಿಹಾಸದ ಮೇಲೂ ಸಹ ದಾಳಿ ಮಾಡಲಾಗುತ್ತಿದೆ. ಪುರಾಣದ ಕಥೆಗಳನ್ನು ಇತಿಹಾಸವೆಂದು ಬಿಂಬಿಸುತ್ತಾ, ಐತಿಹಾಸಿಕ ವ್ಯಕ್ತಿಗಳನ್ನು ತಮ್ಮ ರಾಜಕೀಯದ ಮುಖವಾಣಿ ಮಾಡಿಕೊಳ್ಳಲು ಸಾಂಧರ್ಭಿಕ ಇತಿಹಾಸಕಾರರು ಇಂದು ಅನೇಕರು ಹುಟ್ಟಿಕೊಂಡಿದ್ದಾರೆ. ತಮಗೆ ಬೇಕಾದಂತೆ ಇತಿಹಾಸವನ್ನು ತಿರುಚಿ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಇಂತಹ ಸುಳ್ಳಿನ ಭಾಗವಾಗಿ ಗಾಂಧೀಜಿ ಮತ್ತು ನೆಹರೂ ಅವರು ಮುಸ್ಲಿಂ ಕುಟುಂಬದವರು, ಡಾ. ಬಿ.ಆರ್…