ಅರವಿಂದ್ ಕೇಜ್ರಿವಾಲ್

Fact Check: ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ಮನೀಶ್ ಸಿಸೋಡಿಯಾ ಅವರನ್ನು ದೂಷಿಸಿದ್ದಾರೆ ಎಂಬುದು ಸುಳ್ಳು

ನೆನ್ನೆಯಷ್ಟೇ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು 3 ದಿನಗಳ ಸಿಬಿಐ ವಶಕ್ಕೆ ನೀಡಿದೆ. ಆದರೆ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕಾರಣ ಎಂದು ದೂಷಿಸಿದ್ದಾರೆ ಎಂದು ಪ್ರತಿಪಾದಿಸಿ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನ್ಯೂಸ್ 18, ಲೋಕಮತ್ ಮತ್ತು ಫ್ರೀ ಪ್ರೆಸ್‌ ಜರ್ನಲ್‌ ಸೇರಿದಂತೆ ಅನೇಕ ಸುದ್ದಿ ಮಾಧ್ಯಮಗಳು ಮತ್ತು ಸಿಬಿಐ ಮೂಲಗಳು…

Read More
ಅರವಿಂದ್ ಕೇಜ್ರಿವಾಲ್

Fact Check: ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ 63 ಲಕ್ಷದಷ್ಟು ದುಬಾರಿ ಮಾವಿನ ಹಣ್ಣುಗಳನ್ನು ತಿನ್ನಲು ಖರ್ಚು ಮಾಡಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರ ಕುರಿತು ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ಒಂದು ತಿಂಗಳಷ್ಟರಲ್ಲಿ ಕೇವಲ ಮಾವಿನ ಹಣ್ಣು ತಿನ್ನಲು 63 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೈರಲ್ ವಿಡಿಯೋವನ್ನು ” ಒಬ್ಬ ಮನುಷ್ಯ ಒಂದು ತಿಂಗಳಿನಲ್ಲಿ 63 ಲಕ್ಷರೂಪಾಯಿಯ ಮಾವಿನ ಹಣ್ಣು  ತಿನ್ನಲು ಸಾಧ್ಯವೆ? ಇದನ್ನು ಜನಸಾಮಾನ್ಯ ಪಕ್ಷದ ಅರವಿಂದ ಕೇಜ್ರಿವಾಲ್ ತಿಹಾರ ಜೈಲಿನಲ್ಲಿ ಕುಳಿತು ಸಾಧನೆ ಮಾಡಿದ್ದಾರೆ…

Read More
ಧ್ರುವ ರಾಠಿ

Fact Check: ಸಂಸದೆ ಸ್ವಾತಿ ಮಲಿವಾಲ್ ಮತ್ತು ಧ್ರುವ ರಾಠಿ ನಡುವಿನ ವೈರಲ್ ಫೋನ್ ಕಾಲ್ ಡೀಪ್‌ಫೇಕ್ ಆಗಿದೆ

ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತು ಯೂಟ್ಯೂಬರ್ ಧ್ರುವ ರಾಠಿ ನಡುವಿನ ಎಐ-ರಚಿಸಿದ ಫೋನ್ ಸಂಭಾಷಣೆಯನ್ನು ಇಬ್ಬರ ನಡುವಿನ ನಿಜವಾದ ಸಂಭಾಷಣೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಡಿಯೋ ಕ್ಲಿಪ್‌ನಲ್ಲಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಮುಂದೆ ಹೇಗೆ ಹಲ್ಲೆ ನಡೆಸಲಾಯಿತು ಎಂಬುದನ್ನು ಮಲಿವಾಲ್ ವಿವರಿಸುವುದನ್ನು ಕೇಳಬಹುದು ಮತ್ತು ಅದರ ಬಗ್ಗೆ ವೀಡಿಯೊ ಮಾಡದಂತೆ ರಾಠಿಗೆ ವಿನಂತಿಸಿದ್ದಾರೆ. ನಂತರ ಇಬ್ಬರೂ ರಾಠಿಯವರ ‘ಸಂಬಳ’ ಸಮಯಕ್ಕೆ ಬರುತ್ತಿವೆಯೇ…

Read More
ಮೋದಿ

Fact Check: ಕೆನಡಾದಲ್ಲಿ ಮೋದಿ ವಿರೋಧಿ ಮೆರವಣಿಗೆಯನ್ನು AAP ನಡೆಸಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ

ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಕೆನಡಾದಲ್ಲಿ ವಿವಾದಾತ್ಮಕ ಮೋದಿ ವಿರೋಧಿ ರ್ಯಾಲಿಯನ್ನು ಆಯೋಜಿಸಿದ್ದಾರೆ ಎಂದು ಹೇಳುವ ಪೋಸ್ಟ್‌ಗಳು ಮತ್ತು ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 50 ದಿನಗಳ ನ್ಯಾಯಾಂಗ ಬಂಧನದ ನಂತರ, ಮೇ 10 ರಂದು ಸುಪ್ರೀಂ ಕೋರ್ಟ್, ಅರವಿಂದ್ ಕೇಜ್ರಿವಾಲ್ ಅವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಮತ್ತು ಅಬಕಾರಿ ನೀತಿ ಪ್ರಕರಣದಲ್ಲಿ ಜೂನ್ 1, 2024…

Read More
ಕೇಜ್ರಿವಾಲ್

Fact Check: ತಮ್ಮ ಸ್ವಂತ ಮನೆಗೆ ಪುಲ್ಕಿತ್ ಕೇಜ್ರಿವಾಲ್ 10 ಲಕ್ಷ ಬಾಡಿಗೆ ಪಡೆಯುತ್ತಿದ್ದಾರೆ ಎಂಬುದು ಸುಳ್ಳು

ಮಧ್ಯ ತೆರಿಗೆ ನೀತಿಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಧ್ಯ ಕೇಜ್ರಿವಾಲ್ ಅವರ ಭ್ರಷ್ಟಾಚಾರ ಸಂಬಂದಿಸಿದಂತೆ ನಾನಾ ಆರೋಪಗಳನ್ನು ಹರಿಬಿಡಲಾಗುತ್ತಿದೆ. ಈಗ, “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರ ಪುಲ್ಕಿತ್ ಕೇಜ್ರಿವಾಲ್ ಅವರು ತಮ್ಮ ಸ್ವಂತ ಮನೆಯಿಂದ ತಿಂಗಳಿಗೆ 10 ಲಕ್ಷ ರೂ.ಗಳನ್ನು ಬಾಡಿಗೆಯಾಗಿ ಪಡೆಯುತ್ತಾರೆ. ಜಿಮ್ ಸಲಕರಣೆಗಳಿಗಾಗಿ ಮಗನ ಕಂಪನಿಯಿಂದ ಸಿಎಂಗೆ ತಿಂಗಳಿಗೆ 10 ಲಕ್ಷ ರೂ. ಅದು ಹೇಗೆ? ಈ ವೀಡಿಯೊದಿಂದ ಅರ್ಥಮಾಡಿಕೊಳ್ಳಿ,…

Read More
Aravind Kejriwal

Fact Check: ಕೇಜ್ರಿವಾಲ್ ಅವರು ನ್ಯಾಯಲಯದಲ್ಲಿ ತಮ್ಮ ಪರವಾಗಿ ತಾವೆ ವಾದ ಮಾಡಿಲ್ಲ ಮತ್ತು ಜೈಲಿನಲ್ಲಿ ಹಾಡು ಹಾಡಿಲ್ಲ

ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಅವರ ಕಸ್ಟಡಿಯನ್ನು ಮಾರ್ಚ್ 28 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ನಂತರ ಏಪ್ರಿಲ್ 1 ರವರೆಗೆ ವಿಸ್ತರಿಸಲಾಗಿತ್ತು. ಹೆಚ್ಚಿನ ಕಸ್ಟಡಿಗಾಗಿ ಜಾರಿ ನಿರ್ದೇಶನಾಲಯದ ಮನವಿಯನ್ನು ಕೇಜ್ರಿವಾಲ್ ವೈಯಕ್ತಿಕವಾಗಿ ವಿರೋಧಿಸಿದರು ಮತ್ತು ಹಗರಣವನ್ನು ಆಮ್ ಆದ್ಮಿ ಪಕ್ಷದ ವಿರುದ್ಧದ ರಾಜಕೀಯ ತಂತ್ರ ಎಂದು ಕರೆದಿದ್ದಾರೆ. ಮಾರ್ಚ್ 28 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ನಂತರದ ದಿನಗಳಿಂದ, ಕೇಜ್ರಿವಾಲ್ ಮತ್ತು ಇಡಿ…

Read More
Aravind Kejriwal

Fact Check: ಅರವಿಂದ್ ಕೇಜ್ರಿವಾಲ್ ಕ್ರಿಪ್ಟೋ ಕ್ರಿಶ್ಚಿಯನ್ ಎಂಬುದು ಸಂಪೂರ್ಣ ಸುಳ್ಳು

ಕಳೆದ ಅನೇಕ ದಿನಗಳಿಂದ ತಮ್ಮ ವಿರೋಧ ಪಕ್ಷದ ನಾಯಕರನ್ನು ದಾಳಿ ಮಾಡಲು ಬಿಜೆಪಿ ಪಕ್ಷವು ಧರ್ಮವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಹೀಗಾಗಲೇ ನೆಹರೂ ಮನೆತನವು ಮೂಲ ಮುಸ್ಲಿಂ ಧರ್ಮಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಅದೇ ರೀತಿ ಮಹಾತ್ಮ ಗಾಂಧೀಜಿಯವರನ್ನು ಸಹ ಮುಸ್ಲಿಂ ಎಂದು ಆರೋಪಿಸಲಾಗುತ್ತಿತ್ತು. ಈಗ ಅರವಿಂದ್ ಕೇಜ್ರಿವಾಲ್ ಅವರನ್ನು ಕ್ರಿಶ್ಚಿಯನ್ ಎನ್ನಾಗುತ್ತಿದೆ. ಈ ಮೂಲಕ ಬಿಜೆಪಿ ವಿರೋದಿ ನಾಯಕರುಗಳೆಲ್ಲಾ ಮೂಲ ಹಿಂದುಗಳಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಇದರ ಸಲುವಾಗಿ, “ಅರವಿಂದ್ ಕೇಜ್ರಿವಾಲ್ ಹಿಂದೂ ವಿರೋಧಿ ಮತ್ತು ಕ್ರಿಪ್ಟೋ ಕ್ರಿಶ್ಚಿಯನ್. ಮದರ್…

Read More