Fact Check : ಪ್ರಧಾನಿ ಮೋದಿ ತಮ್ಮದೇ ಟೀಕೆಯ ವಿಡಿಯೋವನ್ನು ವೀಕ್ಷಿಸಿದ್ದಾರೆ ಎಂದು ಎಡಿಟೆಡ್ ವಿಡಿಯೋ ಹಂಚಿಕೆ
ಸರ್ಕಾರದ ಹಿರಿಯ ಸಚಿವರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಹಿಳೆಯೊಬ್ಬಳು ಟೀಕಿಸಿದ್ದಾಳೆ. ಈ ವಿಡಿಯೋವನ್ನು ಮೋದಿ ವೀಕ್ಷಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ : ಈ ವೈರಲ್ ವಿಡಿಯೋ ಕುರಿತು ನಿಜ ತಿಳಿದುಕೊಳ್ಳಲು, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಉನ್ನತ ಮಟ್ಟದ ಸಭೆಗಳ ಅಧ್ಯಕ್ಷತೆಯಲ್ಲಿ ಪ್ರಧಾನಿ ಮೋದಿಯವರ ಎರಡು ವಿಡಿಯೋಗಳು ಲಭಿಸಿವೆ. ಕೋವಿಡ್-ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪಿಎಂ ಮೋದಿಯವರು ಮಾರ್ಚ್ 2023ರಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು…