Fact Check | ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಲೇವಡಿಗಾಗಿ ತಿರುಚಿದ ಬಿಜೆಪಿ..!

ಸಾಮಾಜಿಕ ಜಾಲತಾಣದಲ್ಲಿ “ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣದಲ್ಲಿ ದೇಶದ ಏಕತೆಗಾಗಿ ರಾಹುಲ್‌ ಗಾಂಧಿ ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರಿಗೆ ಯಾರು ರಾಹುಲ್‌ ಗಾಂಧಿ ಯಾರು ರಾಜೀವ್‌ ಗಾಂಧಿ ಏಂಬುದೇ ತಿಳಿದಿಲ್ಲ” ಎಂಬ ತಲೆ ಬರಹದೊಂದಿಗೆ ವಿಡಿಯೋ ಕ್ಲಿಪ್‌ವೊಂದು ವೈರಲ್‌ ಆಗಿದೆ. ये कब हुआ? https://t.co/OCCR65Q1qc — BJP (@BJP4India) November 20, 2023 ಆದರೆ ಇದರ ಪೂರ್ಣ ವಿಡಿಯೋವನ್ನು ಹಂಚಿಕೊಳ್ಳದ  ಬಿಜೆಪಿ ಸೇರಿದ ಹಾಗೆ ಹಲವು ಪಕ್ಷಗಳು ಕ್ಲಿಪ್‌ ವಿಡಿಯೋವನ್ನು ಹಂಚಿಕೊಳ್ಳುವ…

Read More
ಹನುಮಾನ್ ಚಾಲಿಸ

ಇಂಡಿಯಾ ಪಾಕಿಸ್ತಾನ ಪಂದ್ಯದ ವೇಳೆ 1.5ಲಕ್ಷ ಜನ ಹನುಮಾನ್ ಚಾಲಿಸ ಹಾಡಿದ್ದಾರೆ ಎಂಬುದು ಸುಳ್ಳು

ವಿಶ್ವಕಪ್ ಮುಗಿದರೂ ಅದಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಮಾತ್ರ ನಿಂತಿಲ್ಲ. ಕ್ರಿಕೆಟ್ ಅಭಿಮಾನಿಗಳು ಕೆಲವರು ಸುಳ್ಳು ಸುದ್ದಿ  ಹಬ್ಬಿಸುತ್ತಿದ್ದರೆ ಇನ್ನೂ ಕೆಲವು ಬಲಪಂಥೀಯರು ಕ್ರಿಕೆಟ್‌ಗೂ ಧರ್ಮ, ರಾಜಕಾರಣ ಬೆರೆಸಿ ಸುಳ್ಳು ಆರೋಪಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಕೆಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಸತ್ಯಶೋಧನೆ ನಡೆಸಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು. ಈಗ ಇಂಡಿಯಾ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹರಿದಾಡುತ್ತಿದ್ದು “ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಪಾಕಿಸ್ತಾನ ವಿಶ್ವಕಪ್‌ ಪಂದ್ಯದ ಸಂದರ್ಭದಲ್ಲಿ…

Read More
4 trillion Economy

Fact Check: ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂಬುದು ಸುಳ್ಳು

ಇತ್ತೀಚೆಗೆ ದೇಶದ ಆರ್ಥಿಕತೆಯ ಮೇಲೆ, ಜಿಡಿಪಿ ದತ್ತಾಂಶದ ಮೇಲೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೋವಿಡ್‌ ಅಲೆಯ ನಂತರದಲ್ಲಿ ನಿಧಾನವಾಗಿ ನಮ್ಮ ಭಾರತದ ಆರ್ಥಿಕತೆ ಸುಧಾರಿಸುತ್ತಿದೆ. ಆದರೆ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಭಾರತ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಿದೆ ಮತ್ತು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಜಿಡಿಪಿ ವರದಿ ಹೇಳಿದೆ. ಇದರ ಎಲ್ಲಾ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಲೈವ್ ಜಿಡಿಪಿ ಅಂಕಿಅಂಶಗಳ ಪ್ರಕಾರ,…

Read More

ಹಮಾಸ್‌ ಕೃತ್ಯ ಎಂದು ಸುಳ್ಳು ಪೋಟೋ ಹಂಚಿಕೊಂಡ ಇಸ್ರೇಲ್‌ನ ವಿದೇಶಾಂಗ ಸಚಿವಾಲಯ

ಇಸ್ರೇಲ್ ಹಮಾಸ್ ಸಂಘರ್ಷ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮುಂದುವರೆದಿದೆ. ಆದರೆ ಯುದ್ಧಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಊಹಾಪೋಹಗಳು, ಹಳೆಯ ಘಟನೆಗಳನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಅನೇಕ ಸುದ್ಧಿಗಳ ಸತ್ಯಶೋಧನೆಯನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಹೀಗಾಗಲೇ ಪ್ರಕಟಿಸಿದೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ನೆನ್ನೆಯಷ್ಟೆ ಇಸ್ರೇಲ್ ವಿದೇಶಾಂಗ ಸಚಿವಾಲಯ ಒಂದು ವಿಡಿಯೋ ಪ್ರಕಟಿಸಿ ಹಮಾಸ್ ಮುಗ್ದ ಮಹಿಳೆಯರನ್ನು, ಎಲ್ಜಿಬಿಟಿಕ್ಯೂ+(LGBTQ+) ಸಮುದಾಯದವರನ್ನು, ಅಲ್ಪಸಂಖ್ಯಾತರನ್ನು ಮತ್ತು ಯಹೂದಿಗಳನ್ನು ಕೊಲ್ಲುತ್ತಿದೆ. ಹಮಾಸ್‌ ನವರನ್ನು ಬೆಂಬಲಿಸುವವರು ಭಯೋತ್ಪಾದಕರನ್ನು ಬೆಂಬಲಿಸಿದಂತೆ…

Read More

ಪಶ್ಚಿಮ ಬಂಗಾಳದ ಚುನಾವಣೆಯ ಹಳೆಯ ವಿಡಿಯೋವನ್ನು ಮಧ್ಯಪ್ರದೇಶಕ್ಕೆ ಸೇರಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಂಚರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಝೋರಾಂ ನಲ್ಲಿ ಈಗಾಗಲೇ ಚುನಾವಣೆಗಳು ಜರುಗುತ್ತಿವೆ. ಈ ಸುದ್ದಿ ಬರೆಯುವ ಹೊತ್ತಿಗೆ ಮಧ್ಯ ಪ್ರದೇಶದ ಚುನಾವಣೆಯು ಮುಗಿದಿದೆ. ಆದರೆ ಮಿಕ್ಕ ರಾಜ್ಯಗಳಿಗೆ ಹೋಲಿಸಿದರೆ ಮಧ್ಯ ಪ್ರದೇಶದಲ್ಲಿ ಹರಿದಾಡಿದಷ್ಟು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಬೇರೆಲ್ಲೂ ನಡೆದಿಲ್ಲ. ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹರಿದಾಡುತ್ತಿದ್ದ ಹಲವಾರು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ಬಯಲುಗೊಳಿಸಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು. ಇತ್ತೀಚೆಗೆ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕ ಹಳ್ಳಿಗೆ ಪ್ರಚಾರಕ್ಕೆಂದು ಹೋದ…

Read More
RSS

Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು

ಇತ್ತೀಚೆಗೆ, ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರತಿ ರಾಜಕೀಯ ಪಕ್ಷಗಳು ತಮ್ಮವರೇ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆ ಮೂಲಕ ಅಂಬೇಡ್ಕರ್‌ರವರು ಪ್ರಭಾವಿಸಿದ ದೊಡ್ಡ ಜನಸಂಖ್ಯೆಯ ಒಲವು ಗಳಿಸಲು ಬಯಸುತ್ತಿದ್ದಾರೆ. ಹಾಗಾಗಿ ಅಂದು ಅಂಬೇಡ್ಕರ್ ನಮ್ಮನ್ನು ಹೊಗಳಿದ್ದರು ಎಂಬ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ಅದರಂತೆ ಡಾ. ಅಂಬೇಡ್ಕರ್ ಅವರು 1939 ರಲ್ಲಿ ಪುಣೆಯ RSS ಶಿಬಿರಕ್ಕೆ ಭೇಟಿ ನೀಡಿ “ಸ್ವಯಂಸೇವಕರು ಇತರ ಜಾತಿಯವರನ್ನು ಸಹ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಿಂದ ನಡೆಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ” ಎಂದು ಭಾಷಣ ಮಾಡಿದ್ದರು ಎಂಬ ಸುದ್ದಿಗಳು ಮತ್ತು…

Read More

Fact Check : ಸೋನಿಯಾ ಗಾಂಧಿ ಹಿಂದೂ ವಿರೋಧಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಬರೆದಿದ್ದಾರೆಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಪೇಪರ್‌ ಕಟಿಂಗ್‌ವೊಂದು ವೈರಲ್‌ ಆಗುತ್ತಿದೆ. ಅದರಲ್ಲಿ ‘ಸೋನಿಯಾ ಗಾಂಧಿ ಹಿಂದೂಗಳನ್ನು ದ್ವೇಷಿಸುತ್ತಾರೆ’ ಎಂಬ ಶೀರ್ಷಿಕೆ ಇದ್ದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುಸ್ತಕ ದಿ ಕೊಯಲಿಷನ್ ಇಯರ್ಸ್ 1996-2012 ಪುಸ್ತಕದಲ್ಲಿ ಸೋನಿಯಾ ಗಾಂಧಿ ಹಿಂದೂ ವಿರೊಧಿ ಎಂದು ಬರೆಯಲಾಗಿದೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಹಾಗಾಗಿ ಈ  ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಸಿಕ್ಕ ಮಾಹಿತಿ ಬೇರೆಯದ್ದೇ ಆಗಿದೆ. ಅಸಲಿಗೆ ಪೇಪರ್‌…

Read More

Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಗಾಂಧಿ ಕೆಂಪು ಸೀರೆ ಧರಿಸಿ ದೇವಾಸ್ಥಾನದ ಗಂಟೆ ಬಾರಿಸುತ್ತಿರುವ ಫೋಟೋವೊಂದು ವ್ಯಾಪಕವಾಗ ಹಂಚಿಕೊಳ್ಳಲಾಗುತ್ತಿದೆ. ಆದರೆ ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಸಾಕಷ್ಟು ಮಂದಿ ಪ್ರಿಯಾಂಕ ಗಾಂಧಿ ಚುನಾವಣ ಪ್ರಚಾರಕ್ಕಾಗಿ ದೇವಸ್ಥಾನಕ್ಕೆ ತೆರಳುವ ನಾಟಕ ಮಾಡುತ್ತಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, “ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್‌ಘಡದಲ್ಲಿ ಚುನಾವಣೆ ಬರುತ್ತಿದೆ. ಅಜ್ಜಿಯ ಸೀರೆ ಪೆಟ್ಟಿಗೆಯಿಂದ ಆಚೆ ಬಂದಿದೆ. ಆದರೆ ನೀವು ಈ ಚುನಾವಣೆಯಲ್ಲಿ ಯಾವ ಲಾಭವನ್ನು ಪಡೆಯಲೂ ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ…

Read More
ಹಿಂದುತ್ವ Hindutva

ಹಿಂದುತ್ವ ‘ಚುನಾವಣಾ ಆಟ ಆಡುವ ಕಾರ್ಡ್’ ಎಂದು ನರೇಂದ್ರ ಮೋದಿಯವರು ಹೇಳಿಲ್ಲ

‘ಹಿಂದುತ್ವ ಚುನಾವಣಾ ಆಟ ಆಡುವ ಕಾರ್ಡ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇದು 24 ವರ್ಷಗಳ ಹಿಂದೆ ಜೀ ನ್ಯೂಸ್‌ನವರು ನಡೆಸಿದ ನರೇಂದ್ರ ಮೋದಿಯವರ ಸಂದರ್ಶನದ ಹಳೆಯ ವಿಡಿಯೋ ಆಗಿದೆ. ಮೂಲ ಸಂದರ್ಶನದಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗೆ ವ್ಯತಿರಿಕ್ತವಾಗಿ “ಹಿಂದುತ್ವ ಕೇವಲ ಚುನಾವಣಾ ಆಟ ಆಡುವ ಕಾರ್ಡ್ ಅಲ್ಲ” ಎಂದು ಮೋದಿಯವರು ಹೇಳಿದ್ದಾರೆ. ಅವರ ಕೊನೆಯ ಪದ “ಅಲ್ಲ” ಎಂಬುದನ್ನು ತೆಗೆದುಹಾಕಿ, ಎಡಿಟ್…

Read More
ತ್ರಿವರ್ಣ ಧ್ವಜ

ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು

ಭಾರತದಲ್ಲಿಯೇ ಭಾರತದ ಧ್ವಜವನ್ನು ಅವಮಾನಿಸಲಾಗಿದೆ. ತಮಿಳುನಾಡು ಪೋಲಿಸರು ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಅವಮಾನ ಸಲ್ಲಿಸಿದ್ದಾರೆ. ಚಿದಂಬರಂ ಸ್ಟೇಡಿಯಂನಲ್ಲಿ (Chepauk ಸಚಿವ ಉದಯನಿಧಿ ಸ್ಟಾಲಿನ್ ಕ್ಷೇತ್ರ) ನಡೆದ ಪಾಕಿಸ್ತಾನದ ವಿರುದ್ದ ಆಫ್ಘಾನಿಸ್ತಾನ ವಿಶ್ವಕಪ್‌ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ಸ್ಟೇಡಿಯಂ ಒಳಗೆ ಕೊಂಡೋಯ್ಯದಂತೆ ತಮಿಳುನಾಡಿನ ಪೋಲಿಸರು ತಡೆದಿದ್ದಾರೆ.  ಭಾರತದ ಧ್ವಜವನ್ನು ಇಂಡಿಯಾ ಒಕ್ಕುಟದ ಡಿಎಂಕೆ ಪಕ್ಷ ನಿಷೇದಿಸಿದೆ. ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಡಿಎಂಕೆ ಪಕ್ಷವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಮುಖ್ಯಸ್ಥ…

Read More