Fact Check: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಮತ್ತು ಪತ್ನಿ ಒಲೆನಾ ಜೆಲೆನ್ಸ್ಕಾ ಅವರ ನಕಲಿ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಮತ್ತು ಅವರ ಪತ್ನಿ ಒಲೆನಾ ಜೆಲೆನ್ಸ್ಕಾ ಅವರು 100 ಡಾಲರ್ ನೋಟುಗಳ ರಾಶಿಯ ಮಧ್ಯೆ ಕುಳಿತಿರುವ ಚಿತ್ರವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. “ಸ್ಪಾಯ್ಲರ್ ಅಲರ್ಟ್: ಜೆಲೆನ್ಸ್ಕಿ ಒಳ್ಳೆಯ ವ್ಯಕ್ತಿ ಅಲ್ಲ” ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ಬಳಕೆದಾರೊಬ್ಬರು ಹಂಚಿಕೊಂಡಿರುವ ಪೋಸ್ಟ್ ಒಂದು 27,100 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 6000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಎಕ್ಸ್ ನಲ್ಲಿ ಇನ್ನೊಬ್ಬ ಬಳಕೆದಾರರು “ಜೆಲೆನ್ಸ್ಕಿ ಒಳ್ಳೆಯ ಮನುಷ್ಯನಲ್ಲ” ಎಂದು ಬರೆದಿದ್ದಾರೆ, ಈ…

Read More
ಅಯೋಧ್ಯ

Fact Check: ಅಯೋಧ್ಯೆಯ ರಾಮಪಥ ರಸ್ತೆಯ ಗುಂಡಿಯೊಂದಕ್ಕೆ ಮಹಿಳೆ ಬಿದ್ದಿದ್ದಾರೆ ಎಂದು 2022ರ ಬ್ರೆಜಿಲ್‌ನ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ರಸ್ತೆಯಲ್ಲಿ ನಡೆಯುತ್ತಿರುವ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರಸ್ತೆಯ ಗುಂಡಿಯೊಳಗೆ ಬೀಳುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಗುಂಡಿಗೆ ಬಿದ್ದ ಮಹಿಳೆಯನ್ನು ಉತ್ತರ ಪ್ರದೇಶದ ಅಯೋಧ್ಯೆ ಮೂಲದವರು ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. “ಮೊದಲ ಮಳೆಯ ನಂತರ ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ್ ಪಥ್ ರಸ್ತೆಯ ಸ್ಥಿತಿ ಇದು. ಇದರ ಉದ್ದ 13 ಕಿಲೋಮೀಟರ್. ರಸ್ತೆ ನಿರ್ಮಿಸಿದ ಕಂಪನಿ ಗುಜರಾತ್ ನಿಂದ ಬಂದಿದೆ. ಅದರ ಹೆಸರು ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಡ್. (sic.) ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ….

Read More
ಮೊಹಮ್ಮದ್ ಅಜರುದ್ದೀನ್

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

“ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶಿಯಲ್ಲಿ ಮುಸ್ಲಿಂ ಧರ್ಮವನ್ನು ತೊರೆದು ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದರು. ವಾರಣಾಸಿಯ ಭೋಜ್‌ಬೀರ್‌ನಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಪುತ್ರನೊಂದಿಗೆ ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂಬ ಸಂದೇಶವೊಂದು ವಾಟ್ಸಾಪ್‌ ಮತ್ತು ಥ್ರೆಡ್‌ನಲ್ಲಿ ಹರಿದಾಡುತ್ತಿದೆ. ಈ ಸಂದೇಶದೊಂದಿಗೆ ದಂಪತಿಯೊಂದು ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸುವ ಮತ್ತು ಅದಕ್ಕೆ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು…

Read More

Fact Check | ಮಸೀದಿಯಲ್ಲಿ ಶಸ್ತ್ರಾಸ್ತ್ರ ಪರಾವನಿಗೆಗೆ ಅರ್ಜಿ ಸಲ್ಲಿಸಲು ತರಬೇತಿ ನೀಡಲಾಗುತ್ತಿದೆ ಎಂಬುದು ಹಳೆಯ ವಿಡಿಯೋ

“ಈ ವಿಡಿಯೋ ನೋಡಿ ಮಸೀದಿಗಳು ಮುಸ್ಲಿಮರಿಗೆ ಬಂದೂಕುಗಳನ್ನು ಪಡೆಯಲು ಬಹಿರಂಗವಾಗಿ ತರಬೇತಿ ನೀಡುತ್ತಿವೆ ಮತ್ತು ಅವರು ಪರವಾನಗಿಗಾಗಿ ಫೈಲ್ ಮಾಡಲು ಎಲ್ಲಾ ರೀತಿಯಾದ ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಹಿಂದುಗಳು “ನಮಗೆ ರಾಹುಲ್ ಗಾಂಧಿ ಅವರು ನನಗೆ 1 ಲಕ್ಷ ಕಟಾಕಟ್‌ ಆಗಿ ನೀಡುತ್ತೇನೆ ಎಂದಿರುವುದರಿಂದ ನಾವು ಅವರಿಗೇ ಮತ ಹಾಕುತ್ತೇವೆ” ಎನ್ನುತ್ತಿದ್ದಾರೆ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಎಲ್ಲಾ ಹಿಂದೂಗಳಿಗೆ ತಲುಪುವವರೆಗೆ ಈ ವಿಡಿಯೋ ಶೇರ್‌ ಮಾಡಿ” ಎಂದು ಪೋಸ್ಟ್‌ವೊಂದನ್ನು…

Read More
ನೀಟ್ (ಯುಜಿ)

Fact Check: ನೀಟ್ (ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ ಎಂಬುದು ಸುಳ್ಳು

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ‘ಎಕ್ಸಾಮ್ ಜಿಹಾದ್’ ಪಿತೂರಿ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಿಬಿಐ ಬಂಧಿಸಿರುವ ಮೂವರು ಮುಸ್ಲಿಂ ವ್ಯಕ್ತಿಗಳ ಫೋಟೋಗಳನ್ನು ಹೊಂದಿರುವ ಪೋಸ್ಟ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಈ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ, ಈ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಸಿಬಿಐ ಬಂಧಿಸಿರುವ ಬಗ್ಗೆ ಹಲವಾರು ಸುದ್ದಿ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ಲಭ್ಯವಾಗಿವೆ. ಪೋಟೋದಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು,…

Read More

Fact Check: ಸೋನಾಕ್ಷಿ ಸಿನ್ಹಾ ಬಿಕಿನಿಯಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ ಎಂದು ಡೀಪ್ ಫೇಕ್ ವೀಡಿಯೋ ಹಂಚಿಕೆ

ಬಾಲಿಹುಡ್‌ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ಜೂನ್ 23 ರಂದು ನಾಗರಿಕ ವಿವಾಹವಾಗಿದ್ದಾರೆ(ಇದು ಯಾವುದೇ ಧಾರ್ಮಿಕ ಸಮಾರಂಭವನ್ನು ಒಳಗೊಂಡಿರುವುದಿಲ್ಲ ಮತ್ತು ಧಾರ್ಮಿಕ ಸಮಾರಂಭದ ಬದಲಿಗೆ ಅಧಿಕೃತ ಅಧಿಕಾರಿಯಿಂದ ಅಧ್ಯಕ್ಷತೆ ವಹಿಸಲಾಗುತ್ತದೆ). ಅವರ ಮದುವೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಫೋಟೋಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ, ಈ ಮಧ್ಯೆ, ಸೋನಾಕ್ಷಿ ಸಿನ್ಹಾ ರ್ಯಾಂಪ್‌ ವಾಕ್‌ ನಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ, ಇದರಲ್ಲಿ ಅವರು ಹಳದಿ ಬಿಕಿನಿ ಧರಿಸಿದ್ದಾರೆ. ಈ ವೀಡಿಯೊಗೆ…

Read More

Fact Check | ಲಿಕ್ಕರ್ ಹಗರಣಕ್ಕೆ ಮನೀಷ್‌ ಸಿಸೋಡಿಯ ಕಾರಣವೆಂದು ಅರವಿಂದ್‌ ಕೇಜ್ರಿವಾಲ್‌ ಹೇಳಿಲ್ಲ

“ಈ ವರದಿ ನೋಡಿ.. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಮದ್ಯ ನೀತಿಯ ಹೊಣೆಯನ್ನು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿದ್ದಾರೆ. ಇದೀಗ ಆಮ್‌ ಆದ್ಮಿ ಪಕ್ಷದ ಅಸಲಿ ಮುಖ ಹೊರ ಬಂದಿದೆ. ಪಕ್ಷದ ಒಳಗಿರುವ ಒಡಕು ಹೊರ ಬಂದಿದ್ದು, ಆಪ್‌ ಪಕ್ಷದ ನಾಯಕ ಹಾಗು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಪಕ್ಷದಿಂದಲೇ ತಪ್ಪಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. कोर्ट में CBI ने बहुत…

Read More
ಕಾಂಗ್ರೆಸ್

ಕಾಂಗ್ರೆಸ್ ಚೀನಾದ ಸಿಸಿಪಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಸುಳ್ಳು

ಜೂನ್ 24ರಂದು 18ನೇ ಲೋಕಸಭೆಯ ಕಾರ್ಯಕಲಾಪಗಳು ಆರಂಭವಾಗಿದ್ದು, ಲೋಕಸಭೆಗೆ ಸದಸ್ಯರು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಲೋಕಸಭಾ ಸದಸ್ಯರು ಕೆಂಪು ಬಣ್ಣದ ಹೊದಿಕೆ ಇರುವ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ್ದರು. ಬಹಳ ಹಿಂದೆ ಚೀನಾದ ಜನರು ಕೆಂಪು ಡೈರಿ ಹಿಡಿದು ಫೋಟೊ ತೆಗೆಸಿಕೊಂಡಿದ್ದರು. ಹಾಗಾಗಿ ಕಾಂಗ್ರೆಸ್ ಚೀನಾದ ಕಮ್ಯುನಿಸ್ಟ್ ಪಾರ್ಟಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಮೊದಲಿಗೆ ಕಾಂಗ್ರೆಸ್‌ ಸಂಸದರು ಹಿಡಿದುಕೊಂಡಿದ್ದ ಕೆಂಪು ಬಣ್ಣದ…

Read More

Fact Check | ಪ್ರಧಾನಿ ಮೋದಿ 2023ರ ಆಸ್ಟ್ರೇಲಿಯಾ ಭೇಟಿಯ ವಿಡಿಯೋವನ್ನು ಇಟಲಿಯದ್ದು ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯ ಅಜ್ಜಿಯ ಊರಿನಲ್ಲಿ ಪ್ರಧಾನಿ ಮೋದಿಗೆ ಸಿಕ್ಕ ಭವ್ಯವಾದ ಸ್ವಾಗತ. ಇದನ್ನು ಕಾಂಗ್ರೆಸ್‌ನ ಗುಲಾಮರಿಗೆ ಶೇರ್ ಮಾಡಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಹೀನ ಮತ್ತು ತುಚ್ಚವಾಗಿ ಪ್ರಧಾನಿ ಮೋದಿಗೆ ಸ್ವಾಗತ ಕೋರುತ್ತಿರುವಂತ ವಿಡಿಯೋದೊಂದಿಗೆ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ನೋಡಿದ ಹಲವರು ಇತ್ತೀಚೆಗೆ ಪ್ರಧಾನಿ ಮೋದಿ ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವೇಳೆ, ಅವರಿಗೆ ಈ ಸ್ವಾಗತ ನೀಡಲಾಗಿದೆ ಎಂದು ನಂಬಿ,…

Read More

Fact Check | 1980ರಲ್ಲಿ‌ಯೇ ಜಪಾನ್ ಪತ್ರಕರ್ತ ತನ್ನ ವರದಿ ವೇಳೆ ಐಫೋನ್‌ 13 ತೋರಿಸಿದ್ದ ಎಂಬುದು ಸುಳ್ಳು

“1980ರಲ್ಲಿ ಜಾಪಾನಿನ ಪತ್ರಕರ್ತರೊಬ್ಬರು ಜನರು ವಾಸಿಸಲು ಬಯಸದ ಹಿರೋಷಿಮಾ ಪ್ರದೇಶದಲ್ಲಿ ಪತ್ರಕರ್ತರೊಬ್ಬರು ಆ ಪ್ರದೇಶದ ಕುರಿತು ವರದಿ ಮಾಡುವಾಗ ಅವರಿಗೆ ಐ ಫೋನ್ 13 ಕಂಡುಬರುತ್ತದೆ. ಆದರೆ ಅದನ್ನು ಅವರು ಯಾವುದೋ ವಿಭಿನ್ನ ಕನ್ನಡಿ ಎಂದು ಭಾವಿಸಿ, ಐಫೋನ್ 13 ಅನ್ನು ಅಲ್ಲೇ ಬಿಟ್ಟು, ತಮ್ಮ ವರದಿಯನ್ನು ಮುಂದುವರೆಸುತ್ತಾರೆ. ಆದರೆ ಜಗತ್ತಿಗೆ ಐಫೋನ್ ಬಗ್ಗೆ ತಿಳಿಯದಿರುವ ಕಾಲದಲ್ಲಿ ಹೇಗೆ ವರದಿಯೊಂದರಲ್ಲಿ ಐಫೋನ್ ಪತ್ತೆಯಾಗಿದೆ?” ಎಂಬ ಬರಹದೊಂದಿಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಹಲವರು ಇದು…

Read More