Fact Check | ಮಣಿಪುರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು

ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿಕೊಳ್ಳುತ್ತಿರುವ ಬಂಡುಕೋರರು ಹೊಡೆದುರುಳಿಸಿದ್ದಾರೆ. ಇದು ಭಾರತದ ಸೇನೆಗೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿದೆ. ಭಾರತದಲ್ಲೇ ಇದ್ದು ಭಾರತಕ್ಕೆ ದ್ರೋಹ ಬಗೆಯುವ ಈ ಜನರಿಗೆ ಏನು ಹೇಳಬೇಕು ತೋಚುತ್ತಿಲ್ಲ.” ಎಂದು ವಿಡಿಯೋವೊಂದನ್ನು ಹಲವರು ಹಂಚಿಕೊಂಡರೆ, ಇನ್ನೂ ಕೆಲವರು ಮಣಿಪುರದ ಮುಕ್ತಿಜೋಧಾ ಸಂಘಟನೆ ಭಾರತದ ಸೇನಾ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. 🚨🚨🚨#Indian fighter helicopter shot down by guided missile in #Manipur pic.twitter.com/JDo33x01FK…

Read More

Fact Check : ಬ್ರಿಟನ್ನಿನ ಮುಸ್ಲಿಂ ವೈದ್ಯರ ಸಂಘದ ಕಾರ್ಯಕ್ರಮದ ಹಳೆಯ ಚಿತ್ರವನ್ನು ಭಾರತದ್ದು ಎಂದು ಹಂಚಿಕೆ

ಭಾರತದಲ್ಲಿ  “ಮುಸ್ಲಿಂ ವೈದ್ಯರ ಸಂಘ” (MDA)  ಕಾರ್ಯನಿರ್ವಹಿಸುತ್ತಿದೆ .ಮತ್ತು  ಹಿಂದೂ ವೈದ್ಯರ ಸಂಘವಿದ್ದರೆ ಜಾತ್ಯತೀತರು ಹೇಗೆ ವರ್ತಿಸುತ್ತಿದ್ದರು? ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಸ್ಟ್‌ರ್‌ನ ಹೆಸರನ್ನು ಕೀವರ್ಡ್ ಆಗಿ ಬಳಸಿಕೊಂಡು Google ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ “ಮುಸ್ಲಿಂ ವೈದ್ಯರ ಸಂಘ”ದ (MDA) ಅಧಿಕೃತ ಮುಸ್ಲಿಂ ಡಾಕ್ಟರ್ಸ್‌ ವೆಬ್‌ಸೈಟ್‌ ಲಭಿಸಿದೆ. ಅದರಲ್ಲಿ  “ಮುಸ್ಲಿಂ ವೈದ್ಯರ ಸಂಘ ಮತ್ತು ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ (CIC)” ಎಂಬ ಸಂಸ್ಥೆಗಳು ಯುಕೆಯಲ್ಲಿ…

Read More

Fact Check | ಕನೌಜ್ ಅತ್ಯಾಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಹೆದರಿ ಅಖಿಲೇಶ್ ಯಾದವ್ ಓಡಿ ಹೋದರು ಎಂಬುದು ಸುಳ್ಳು

” ಕನೌಜ್‌ನಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ಪತ್ರಕರ್ತರು ಅಖಿಲೇಶ್‌ ಯಾದವ್‌ ಅವರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದರು, ಆದರೆ ಪತ್ರಕರ್ತರ ಯಾವ ಪ್ರಶ್ನೆಗಳಿಗೂ ಉತ್ತರಿಸದ ಅಖಿಲೇಶ್‌ ಯಾದವ್‌ ಅವರು ಹೆದರಿಕೊಂಡು ಕಾಂಪೌಂಡ್‌ ಗೇಟ್‌ ಹಾರಿ ಓಡಿಹೋಗಿದ್ದಾರೆ. ಈ ರೀತಿಯ ನಾಯಕನನ್ನು ಉತ್ತರ ಪ್ರದೇಶ ಈ ಹಿಂದೆ ಎಂದೂ ನೋಡಿರಲಿಲ್ಲ. ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ವೈರಲ್‌ ಕೂಡ ಆಗಿದೆ. सपा नेता नवाब सिंह यादव का DNA sample…

Read More

Fact Check | ಪ್ರಶ್ನಾರ್ಥಕ ಚಿಹ್ನೆ ಬಳಸಿ ಸುಳ್ಳು ಶೀರ್ಷಿಕೆ ನೀಡಿದ ಏಷ್ಯಾನೆಟ್ ಸುವರ್ಣ ನ್ಯೂಸ್

“ಅಮೆರಿಕಾದಲ್ಲಿ ಕುಳಿತು ಚೀನಾವನ್ನು ಹೊಗಳಿದ್ದೇಕೆ ರಾಹುಲ್ ಗಾಂಧಿ? ಬಿಜೆಪಿ ಹೇಳಿದ್ದೇನು?” ಎಂದು ಶೀರ್ಷಿಕೆ ನೀಡಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ಜನ‌ಸಾಮಾನ್ಯರಲ್ಲಿ ರಾಹುಲ್ ಗಾಂಧಿ ಬಗ್ಗೆ ತಪ್ಪು ಅಭಿಪ್ರಾಯ‌ ಮೂಡುವಂತೆ ಮಾಡಿದೆ. ಹೀಗೆ ಶೀರ್ಷಿಕೆ ನೀಡಿರುವ  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತನ್ನ ಸುದ್ದಿಯಲ್ಲಿ ಮಾತ್ರ ರಾಹುಲ್‌ ಗಾಂಧಿ ಅವರು ಏನು ಹೇಳಿದ್ದಾರೋ ಅದನ್ನೇ ಉಲ್ಲೇಖಿಸಿದೆ. ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಮೂಡಿಸುವುದರ ಜೊತೆಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಲಾಗಿದೆ. ಅಮೆರಿಕಾದಲ್ಲಿ ಕುಳಿತು ಚೀನಾವನ್ನು ಹೊಗಳಿದ್ದೇಕೆ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಪ್ರವಾಹ ಎಂದು ಎಐ-ರಚಿಸಿದ ಚಿತ್ರಗಳ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಬಾಂಗ್ಲಾದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಾನ್ಸೂನ್ ಮಳೆ ಮತ್ತು ಉಕ್ಕಿ ಹರಿಯುವ ನದಿಗಳಿಂದ ಉಂಟಾದ ಇತ್ತೀಚಿನ ಪ್ರವಾಹದಿಂದ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 5.2 ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಹೇಳಲಾದ ಮೂರು ಚಿತ್ರಗಳು ವೈರಲ್ ಆಗಿವೆ. ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತ ತನ್ನ ಅಣೆಕಟ್ಟೆಗಳಿಂದ ನೀರು ಬಿಟ್ಟ ಕಾರಣದಿಂದ ಬಾಂಗ್ಲಾದೇಶದಲ್ಲಿ ಪ್ರವಾಹದ ಪರಿಸ್ಥಿತಿ ಸಂಭವಿಸಿದೆ. ಎಂದು ಭಾರತವನ್ನು ತೆಗಳಲು ಸಹ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ದುರಂತ ಮತ್ತು ವೈರಲ್ ಚಿತ್ರಗಳು ಬಾಂಗ್ಲಾದೇಶದಲ್ಲಿ…

Read More
ಆರ್ ಜಿ ಕರ್

Fact Check: ಪಶ್ಚಿಮ ಬಂಗಾಳದ ಜಾತ್ರೆಯೊಂದರ ವೀಡಿಯೋವನ್ನು ಬಿಜೆಪಿ ಆಯೋಜಿಸಿದ್ದ ಆರ್ ಜಿ ಕರ್ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ನೃತ್ಯ ಮಾಡಿದ್ದಾಳೆ ಎಂದು ಹಂಚಿಕೆ

ಯುವತಿಯೊಬ್ಬಳು ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ನೃತ್ಯಗಾರ್ತಿಯ ಹಿಂದಿನ ವೇದಿಕೆಯಲ್ಲಿ, ‘ಜಸ್ಟಿಸ್ ಫಾರ್ ಆರ್ ಜಿ ಕರ್’ ಪೋಸ್ಟರ್ ಗಳನ್ನು ನೋಡಬಹುದು. ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ವೀಡಿಯೊ ಇದಾಗಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆಗಸ್ಟ್ 9 ರಂದು ಕಿರಿಯ ವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಾಗಿನಿಂದ, ಸರ್ಕಾರದಿಂದ ಉತ್ತರದಾಯಿತ್ವ ಮತ್ತು ಅಪರಾಧಿಗಳಿಗೆ ತ್ವರಿತ ಶಿಕ್ಷೆ…

Read More

Fact Check| ಕೆಪಿಎಸ್‌ಸಿ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ

ಕರ್ನಾಟಕದಲ್ಲಿ ಆಗಸ್ಟ್ 27ರಂದು ನಡೆಯಲಿರುವ ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಸಣ್ಣ  ಗುಂಪೊಂದು ಆಗಸ್ಟ್ 24ರಂದು ಪ್ರತಿಭಟನೆ ನಡೆಸಿದ್ದು, ಇದರ ಫೋಟೋ ಬಳಸಿಕೊಂಡು “ಕರ್ನಾಟಕದಲ್ಲಿ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ, ರಾಹುಲ್ ಗಾಂಧಿ ಮೌನವಾಗಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ‌. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿ ಆಗುತ್ತಿರುವ ಹಗರಣಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಶೂಗಳನ್ನು ಪಾಲಿಶ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ….

Read More

Fact Check: ಪ್ರಧಾನಿ ಮೋದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಸುಳ್ಳು. ನೂರಕ್ಕೂ ಹೆಚ್ಚು ಬಾರಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಭಾಷಣ ಮಾಡಿದ್ದಾರೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದ ರೀಲ್ಸ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ” ಮೋದಿಯವರು ಒಂದೇ ಒಂದು ಬಾರಿಯೂ ಕೂಡ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂದು ಹೇಳಲಿಲ್ಲ! ಆದರೂ ಕೂಡ, ಒಬ್ಬನೇ ಒಬ್ಬ ಮುಸಲ್ಮಾನನು ಮೋದಿಜಿಯವರಿಗೆ ಓಟು ನೀಡುವುದಿಲ್ಲ. ಆದರೆ ರಾಹುಲ್ ಗಾಂಧಿಯವರು ಅನೇಕ ಸಲ ಹೇಳಿದ್ದಾರೆ! ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂದು. ಆದರೂ ಸಹ ಹಿಂದುಗಳು ರಾಹುಲ್ ಗಾಂಧಿಯವರಿಗೆ ಓಟು ಹಾಕುತ್ತಾರೆ. ಇದರಿಂದಲೇ ಹಿಂದೂಗಳು…

Read More
ಮುಸ್ಲಿಂ ಯೂತ್ ಲೀಗ್‌

Fact Check: ಮುಸ್ಲಿಂ ಯೂತ್ ಲೀಗ್‌ನ ಹಿಂದೂ ವಿರೋಧಿ ಘೋಷಣೆಗಳ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸುವ ರ್ಯಾಲಿಯಲ್ಲಿ ಮುಸ್ಲಿಂ ಲೀಗ್ ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದೆ ಎಂದು ಪ್ರತಿಪಾದಿಸಲು ನ್ಯೂಸ್ 18 ಇಂಡಿಯಾ ವರದಿಯ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ವಯನಾಡ್‌ನಲ್ಲಿ ನಡೆದ ಮುಸ್ಲಿಂ ಲೀಗ್ ರ್ಯಾಲಿ ರಾಹುಲ್ ಗಾಂಧಿಯನ್ನು ಬೆಂಬಲಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿರುವ ಅನೇಕರು “ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿ. ಹಿಂದೂಗಳನ್ನು ದೇವಾಲಯಗಳಲ್ಲಿ ಗಲ್ಲಿಗೇರಿಸಿ. “ನಿಮಗೆ ರಾಮಾಯಣವನ್ನು ಓದಲು ಸಾಧ್ಯವಾಗುವುದಿಲ್ಲ.” ಈ ಘೋಷಣೆಗಳು ಪಾಕಿಸ್ತಾನದ್ದಲ್ಲ. ಅವರು ಭಾರತದ ಕೇರಳದವರು! ಈ ಘೋಷಣೆಗಳನ್ನು…

Read More
ಟ್ರಂಪ್

Fact Check: COVID-19 ಕುರಿತು ಟ್ರಂಪ್ ಮಾತನಾಡಿರುವ ಹಳೆಯ ವೀಡಿಯೊವನ್ನು ಇತ್ತೀಚಿನ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

2024 ರ ಯುಎಸ್ಎ ಅಧ್ಯಕ್ಷೀಯ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲು ಲಾಕ್‌ಡೌನ್‌ಗಳನ್ನು ಮತ್ತು ಲಸಿಕೆಗಳ ಆದೇಶಗಳನ್ನು ಹೊರಡಿಸಲು ಸಜ್ಜಾಗಿರುವುದರಿಂದ, ಯುನೈಟೆಡ್‌ ಸ್ಟೇಟ್ಸ್‌ನ ಮಾಜಿ ಅಧ್ಯಕ್ಷರು ಮತ್ತು ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್‌ರವರು ಅವುಗಳ ವಿರುದ್ಧ ಹೊಸ ರೂಪಾಂತರವನ್ನು ತರುವ ಉದ್ದೇಶದಿಂದ ಸಲಹೆಯನ್ನು ನೀಡುತ್ತಿರುವ ವಿಡೀಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ವೀಡಿಯೊಗಳನ್ನು ನೀವು ( ಇಲ್ಲಿ , ಇಲ್ಲಿ , ಇಲ್ಲಿ , ಮತ್ತು ಇಲ್ಲಿ ) ನೋಡಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಕಾಳಜಿಯ ಉದ್ದೇಶವನ್ನಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು…

Read More