ರಾಹುಲ್ ಗಾಂಧಿ ಚೀನಾದ ಸಂವಿಧಾನ ಪ್ರತಿ ತೋರಿಸಿಲ್ಲ: ಅಸ್ಸಾಂ ಸಿಎಂ ಹಿಮಂತ ಶರ್ಮಾ ಪ್ರತಿಪಾದನೆ ಸುಳ್ಳು
ಲೋಕಸಭಾ ಚುನಾವಣೆಯ ಕೊನೆಯ ಮೂರು ಹಂತದ ಮತದಾನ ಬಾಕಿಯಿದ್ದು ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಕೆಲವರು ಎದುರಾಳಿ ಪಕ್ಷಗಳನ್ನು ಹಣಿಯಲು ಸುಳ್ಳು, ದ್ವೇಷ ಭಾಷಣಗಳ ಮೊರೆ ಹೋಗಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಹ ಅಂತಹುದೇ ಸುಳ್ಳು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಎಕ್ಸ್‌ನಲ್ಲಿ “ಭಾರತದ ಸಂವಿಧಾನದ ಮೂಲ ಪ್ರತಿಯು ನೀಲಿ ಹೊದಿಕೆಯನ್ನು ಹೊಂದಿದೆ. ಮೂಲ ಚೀನೀ ಸಂವಿಧಾನವು ಕೆಂಪು ಹೊದಿಕೆಯನ್ನು ಹೊಂದಿದೆ. ರಾಹುಲ್ ಚೀನಾ ಸಂವಿಧಾನವನ್ನು ತೋರಿಸುತ್ತಿದ್ದಾರೆಯೇ? ನಾವು ಪರಿಶೀಲಿಸಬೇಕಾಗಿದೆ” ಎಂದು ರಾಹುಲ್ ಗಾಂಧಿಯ…