ವಾರಣಾಸಿ

Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

“ಈ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯದು” ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು.  ಈಗ, ‘ಸಲೀಂ…

Read More

Fact Check | ಪಾಯಲ್‌ ಕಪಾಡಿಯಾ ಅವರ ಹೆಸರಿನಲ್ಲಿ ನಕಲಿ ಎಕ್ಸ್‌ (ಟ್ವಿಟರ್‌) ಖಾತೆ ಸೃಷ್ಟಿ

ಪಾಯಲ್​ ಕಪಾಡಿಯಾ ಅವರಿಗೆ ಕಾನ್​ ಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್​ ಪ್ರಿಕ್ಸ್​’ ಪ್ರಶಸ್ತಿ ನೀಡಲಾಗಿದೆ. ‘ಆಲ್​ ವಿ ಇಮ್ಯಾಜಿನ್​ ಆಯಸ್​ ಲೈಟ್​’ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು, ಇದೇ ವೇಳೆಯಲ್ಲಿ ಅವರ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆ ಚರ್ಚೆಗೆ ಕಾರಣವಾಗಿದೆ. ಕಾರಣ ಪಾಯಲ್‌ ಕಾಪಾಡಿಯಾ ಅವರ ಟ್ವಿಟರ್‌ ಖಾತೆಯಲ್ಲಿ ಯಾವುದು ನಿಜವಾದ ಖಾತೆ ಮತ್ತು ಯಾವುದು ನಕಲಿ ಖಾತೆ ಎಂಬ ಮಾಹಿತಿ ಸಿಗದೆ, ಹಲವು ಗಣ್ಯವ್ಯಕ್ತಿಗಳು ಸೇರಿದಂತೆ, ಚಿತ್ರರಂಗದ ನಟ-ನಟಿಯರಲ್ಲೂ ಕೂಡ ಗೊಂದಲವನ್ನು ಉಂಟು ಮಾಡಿದೆ….

Read More
ರೇವಂತ್ ರೆಡ್ಡಿ

Fact Check: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಸ್ಲಿಂ ಕಲ್ಯಾಣಕ್ಕಾಗಿ ದೇವಸ್ಥಾನದ ಜಮೀನು ಮಾರುತ್ತೇವೆ ಎಂದು ಹೇಳಿಲ್ಲ

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯದಲ್ಲಿನ ಮುಸ್ಲಿಮರ ಕಲ್ಯಾಣಕ್ಕಾಗಿ ದೇವಸ್ಥಾನದ ಜಮೀನುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಪ್ರಕಟಿಸಿದ್ದಾರೆ ಎಂದು ಎನ್‌ಟಿವಿ ಪ್ರಸಾರ ಮಾಡಿದ ಸುದ್ದಿ ಬುಲೆಟಿನ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಸ್ಲಿಂ ಘೋಷಣೆಗೆ ಹಣ ಸಂಗ್ರಹಿಸಲು ರೇವಂತ್ ರೆಡ್ಡಿ ದೇವಸ್ಥಾನದ ಭೂಮಿಯನ್ನು ಹರಾಜು ಹಾಕಲಿದ್ದಾರೆ ಎಂಬ ವೇ2ನ್ಯೂಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಕೆಲವರು ಹಂಚಿಕೊಂಡಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು Revanth Reddy, CM of…

Read More

Fact Check | ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು

“ಕ್ರಿಶ್ಚಿಯನ್‌ ಅಧಿಕಾರಿಯನ್ನು ಕುಕ್ಕೆ ದೇವಸ್ಥಾನದ ಮುಖ್ಯ ಅಧಿಕಾರಿಯಾಗಿ ಕಾಂಗ್ರೆಸ್‌ ಸರ್ಕಾರ ನೇಮಿಸಿದೆ. ಏನಿದರ ಹುನ್ನಾರ..?” ಎಂದು ಪೋಸ್ಟರ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರಲ್ಲಿ ಕಾಂಗ್ರೆಸ್‌ ಸರ್ಕಾರ ಹಿಂದೂ ದೇವಸ್ಥಾನಕ್ಕೆ ಅಪಚಾರ ಮಾಡಲು ಹೊರಟಿದೆ. ಇದರ ಹಿಂದೆ ಏನೋ ಷಡ್ಯಂತ್ರವಿದೆ ಎಂದು ಬಿಂಬಿಸಲಾಗಿದೆ. ಹೀಗಾಗಿ ಇದು ನಿಜವಿರಬಹುದು ಎಂದು ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರ ಹೆಸರನ್ನು ನೋಡಿದ ತಕ್ಷಣವೇ ಬಹುತೇಕರು ಇವರು ಕ್ರೈಸ್ತರಿರಬಹುದು ಎಂದು…

Read More

Fact Check | BJP ನಾಯಕನ ಅಶ್ಲೀಲ ಫೋಟೋವನ್ನು ಡಿ.ಕೆ.ಶಿವಕುಮಾರ್‌ ಫೋಟೋ ಎಂದು ಸುಳ್ಳು ಮಾಹಿತಿ ಹಂಚಿಕೆ

ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು “ಯಾರಿರಬಹುದು ಕಾಮೆಂಟ್ ಬಾಕ್ಸ್ ನಿಮ್ಮದೇ..! ಸಿಡಿ ಶಿ….ಕುಮಾರನ ಸಂತತಿಗಳೇ ಹು ಶುರು ಮಾಡಿ ನೀವು HD ವಿಡಿಯೋ ರಿಲೀಸ್ ಮಾಡಿ ನಾವು FullHD ರಿಲೀಸ್ ಮಾಡ್ತೀವಿ … ಅಬ್ಬಬಾ ರುಚಿಕರ ಸಂಭಾಷಣೆ..ವಿಡಿಯೋ ತುಂಬಾ ಕಾಸ್ಟ್ಲಿ ಯಾರು ಕೇಳಬೇಡಿ ಅವರು ಬಿಟ್ಟರೆ ನಾವು ಬಿಡೋಣ ಈಗಲೇ ಬಿಟ್ಟರೆ ಏನು ಮಜ…ಬಿಡ್ರೋ ಬಿಡ್ರಿ ನೋಡೋಣ…” ಎಂದು ಜೆಡಿಎಸ್‌ ಯುವ ಘಟಕ ಫೋಟೋವೊಂದನ್ನು ಹಂಚಿಕೊಂಡಿದೆ. ಈ ಫೋಟೋದಲ್ಲಿ…

Read More
ಮುಂಬೈ ಸೇತುವೆ

Fact Check: ಮೋದಿಯವರ ಕಾಲದಲ್ಲಿ ನಿರ್ಮಿತವಾದ ಮುಂಬೈ ಸೇತುವೆ ಎಂದು ಚೀನಾದ ಪೋಟೋ ಹಂಚಿಕೊಳ್ಳಲಾಗುತ್ತಿದೆ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಸಮಯದಿಂದಲೂ ಸಹ ಬೇರೆ ದೇಶಗಳ ಪೋಟೋ ಮತ್ತು ವಿಡಿಯೋಗಳನ್ನು ಬಳಿಸಿ ಭಾರತದ್ದು ಮತ್ತು ಮೋದಿಯವರು ನಿರ್ಮಾಣ ಮಾಡಿರುವುದು ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಇದರಲ್ಲಿ ಬೆರಳಣಿಕೆಯಷ್ಟು ನಿಜವಿದ್ದರೆ ಬಹುತೇಕ ಸುಳ್ಳಾಗಿರುತ್ತವೆ. ಗುಜರಾತ್ ಮೋಡೆಲ್ ಎಂದು ಭಾರತದಾದ್ಯಂತ ಹರಿದಾಡಿದ ಹಲವಾರು ರಸ್ತೆ, ಹೆದ್ದಾರಿ, ಸೇತುವೆ ಮತ್ತು ಕಟ್ಟಡ ನಿರ್ಮಾಣದ ಚಿತ್ರಗಳು ಅಭಿವೃದ್ಧಿ ಹೊಂದಿದ ಇತರೆ ರಾಷ್ಟ್ರಗಳದ್ದಾಗಿವೆ. ಈಗ ಅದೇ ರೀತಿ, “ಇದು ಅಮೇರಿಕಾ ಅಥವಾ ಚೀನಾ ಅಲ್ಲ, ಇದು ಮುಂಬೈನ ಹೆದ್ದಾರಿ, ನೋಡಿ!…

Read More

Fact Check | ಮಣಿಪುರದಲ್ಲಿ ನಡೆದ ಗಲಾಟೆ ನಕಲಿ ಮತದಾನಕ್ಕೆ ಸಂಬಂಧಿಸಿದ್ದಾಗಿದೆ

“ಈ ವಿಡಿಯೋ ನೋಡಿ ಮಣಿಪುರದ ಮಹಿಳೆಯರು ಯಾವುದೇ ಬಟನ್ ಒತ್ತಿದರೂ ಕಮಲದ ಚಿಹ್ನೆಯನ್ನು ಮಾತ್ರ ಮುದ್ರಿಸಿರುವುದನ್ನು ಗಮನಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಜನ ಇವಿಎಂಗಳನ್ನು ಒಡೆದು ಹಾಕಿದ್ದಾರೆ.”  ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ವಿವಿ ಪ್ಯಾಟ್‌ನಲ್ಲಿ ಹಲವು ದೋಷಗಳು ಇವೆ ಎಂದು ಹಂಚಿಕೊಳ್ಳಲಾಗುತ್ತದೆ. मणिपुर में महिलाओं ने EVM को तब तोड़ दिया जब उन्होंने देखा कि कोई भी बटन दबाने पर उन्हें केवल कमल…

Read More
ಪಾಕಿಸ್ತಾನ

Fact Check: ಬೆಳಗಾವಿಯ ಕಾಂಗ್ರೆಸ್‌ ರ್ಯಾಲಿಯಲ್ಲಿ ಮುಸ್ಲಿಂ ಸಂಘಟನೆಯ ಬಾವುಟ ಹಾರಿಸಲಾಗಿದೆಯೇ ಹೊರತು ಪಾಕಿಸ್ತಾನದ್ದಲ್ಲ

ಹಲವಾರು ದಿನಗಳಿಂದ ಎಲ್ಲಿ ಮುಸ್ಲಿಂ ಬಾವುಟಗಳು ಹಾರಿಸಿದರೂ ಸಹ ಅದನ್ನು ಪಾಕಿಸ್ತಾನ ಬಾವುಟವನ್ನು ಹಾರಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಕಾರಣ ಬಾವುಟದಲ್ಲಿ ಇರುವಂತಹ ಅರ್ಧ ಚಂದ್ರ ಮತ್ತು ನಕ್ಷತ್ರದ ಗುರುತಿನಿಂದಾಗಿ ಅನೇಕರು ತಪ್ಪಾಗಿ ತಿಳಿಯುತ್ತಾರೆ.  ಇಂತಹ ಅನೇಕ ಸುದ್ದಿಯನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಸತ್ಯಶೋದನೆ ನಡೆಸಿರುವುದನ್ನು ನೀವಿಲ್ಲಿ ನೋಡಬಹುದು. ಆದರೆ ಇನ್ನೂ ಕೆಲವರು ಬೇಕಂತಲೇ ರಾಜಕೀಯವಾಗಿ ಎತ್ತಿಕಟ್ಟಲು, ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಬಿತ್ತುವ ಸಂದೇಶಗಳೋಂದಿಗೆ ಸುದ್ದಿ ಹಂಚಿಕೊಳ್ಳುತ್ತಾರೆ. ಈಗ, ತುಮಕೂರಿನ ಗುಬ್ಬಿ ಗೇಟ್ ಬಳಿ ಕಾಂಗ್ರೆಸ್ಸಿನ…

Read More

Fact Check | IUML ಪಕ್ಷದ ಕಚೇರಿಯ ಚಿತ್ರವನ್ನು ವಯನಾಡ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಸುಳ್ಳು ಮಾಹಿತಿ ಹಂಚಿಕೆ

“ಇಲ್ಲ ಇದು ಪಾಕಿಸ್ತಾನವಲ್ಲ.. ಹೀಗೆ ಯೋಚಿಸುವುದೇ ಮಹಾಪಾಪ.. ಇದು ವಯನಾಡಿನ ಕಾಂಗ್ರೆಸ್‌ ಕಛೇರಿ, ಅಲ್ಲಿಂದ ರಾಹುಲ್‌ ಗಾಂಧಿ ಸಂಸದರಾಗಿದ್ದಾರೆ.. ಇದನ್ನು ನೋಡಿ ಜಾತ್ಯಾತೀತತೆಯ ಕವಚ ತೊಟ್ಟಿರುವ ಹಿಂದೂಗಳಿಗಾದರೂ ಬುದ್ದಿ ಬರಬೇಕು..” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. pic.twitter.com/EP5L1fZxj3 — मानव मानव (@rLeN2TlCJWGutpd) April 20, 2021 ಈ ಫೋಟೋವನ್ನು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಜನ ಇದನ್ನೇ ನಿಜ ಎಂದು ನಂಬಿಕೊಂಡು ಕಾಂಗ್ರೆಸ್‌ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತಿದೆ…

Read More

Fact Check | ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂಬುದು ಸುಳ್ಳು

“ಚೀನಾ ಮುನಿಸುಕೊಳ್ಳುತ್ತದೆ ಎಂಬ ಕಾರಣಕ್ಕೆ ಅರುಣಾಚಲ ಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ ಮತ್ತು ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೂಡ ಲಡಾಕ್‌ನಲ್ಲಿ ನಡೆಸಲಾಗಿಲ್ಲ. ಇದು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರಿಗೆ ಚೀನಾದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತಿದೆ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದೇ ಪೋಸ್ಟ್‌ ಗಮನಿಸಿದ ಸಾಕಷ್ಟು ಮಂದಿ ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಳತಾಣದ…

Read More