ಅಖಿಲೇಶ್ ಯಾದವ್ ಮೇಲೆ ಜನರು ಹೂ ಮತ್ತು ಹಾರಗಳನ್ನು ಎಸೆಯುವ ವೀಡಿಯೊವನ್ನು ಶೂಗಳನ್ನು ಎಸೆಯುತ್ತಿದ್ದಾರೆ ಎಂದು ಹಂಚಿಕೆ

ಕನೌಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೇಲೆ ಜನರು ಶೂ ಮತ್ತು ಚಪ್ಪಲಿಗಳನ್ನು ಎಸೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. (ಇಲ್ಲಿ ಮತ್ತು ಇಲ್ಲಿ ) ಅಖಿಲೇಶ್ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸ್ವಕ್ಷೇತ್ರದಲ್ಲಿಯೇ ಈ ರೀತಿಯ ಸ್ವಾಗತ ಎದುರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಅವರನ್ನು ಟೀಕಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ವೈರಲ್…

Read More

Fact Check: ಕಾಂಗ್ರೆಸ್ ಉಗ್ರರ ಕುಟುಂಬಕ್ಕೆ ಪರಿಹಾರ ನೀಡುತ್ತದೆ ಎಂಬ ಪೋಸ್ಟ್ ದಿಕ್ಕುತಪ್ಪಿಸುವಂತಿದೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ “ಭಾರತೀಯ ಸಶಸ್ತ್ರ ಪಡೆಗಳಿಂದ ಕೊಲ್ಲಲ್ಪಟ್ಟ ಭಯೋತ್ಪಾದಕರ ಕುಟುಂಬ ಸದಸ್ಯರಿಗೆ ತಲಾ ₹ 1 ಕೋಟಿ ನೀಡುವುದಾಗಿ, ಮತ್ತು ಸೆರೆಮನೆಯಲ್ಲಿರುವ ಎಲ್ಲಾ ಉಗ್ರರನ್ನು ಬಿಡುಗಡೆ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ಸಗೀರ್ ಸೈಯದ್ ಖಾನ್ ಭರವಸೆ ನೀಡುತ್ತಿದ್ದಾರೆ” ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫಾಕ್ಟ್ ಚೆಕ್ ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಮೇಲೆ R. ಎಂಬ ಲೋಗೊ ಇರುವುದರಿಂದ ಇದು ರಿಪಬ್ಲಿಕ್ ಟಿವಿಯ ವಿಡಿಯೋ ಎಂದು…

Read More
ಕಾಂಗ್ರೆಸ್

Fact Check: ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಹರಡುತ್ತಿರುವ ಸುಳ್ಳುಗಳೇನು ಮತ್ತು ಸತ್ಯವೇನು?

ಈ ಬಾರಿಯ ಕಾಂಗ್ರೆಸ್‌ ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಸೇರಿದಂತೆ ಅನೇಕರು ಸುಳ್ಳು ಹರಡುತ್ತಿದ್ದಾರೆ. ಈಗ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ವಿವರಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ 2024 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದರೆ, 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರದ್ದುಗೊಳಿಸುತ್ತೇವೆ, ಮತಾಂತರ ವಿರೋಧಿ…

Read More
ಮಿರಾಯ

Factcheck: ಮಿರಾಯ ವಾದ್ರಾ ಒಟ್ಟು ಆಸ್ತಿ 376 ಮಿಲಿಯನ್ ಡಾಲರ್ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ

ರಾಜಕೀಯ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಆದರೆ ಈಗ ಅವರ ಮಕ್ಕಳ ಮೇಲೂ ಸಹ ಅನಾಗತ್ಯವಾದ ಆರೋಪಗಳನ್ನು, ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. “ಮಿರಾಯ ವಾದ್ರಾ, ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ವಾದ್ರಾ ಅವರ ಪುತ್ರಿ, ಆಕೆಯ ನಿವ್ವಳ ಮೌಲ್ಯ 376 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 3,126 ಕೋಟಿ ರೂ. ತಂದೆ ರಾಬರ್ಟ್ ವಾದ್ರಾ ಅವರ ಸಂಪತ್ತು $2.1 ಬಿಲಿಯನ್ ಅಂದರೆ ಸರಿಸುಮಾರು 17,458 ಕೋಟಿ ರೂ. ಮಿರಾಯ ವಾದ್ರಾ ತನ್ನ…

Read More

Fact Check: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ

ಇತ್ತೀಚೆಗೆ ರಾಜಕೀಯ ಮುಖಂಡರ ಭಾಷಣಗಳನ್ನು ತಪ್ಪಾಗಿ ಅರ್ಥ ಬರುವಂತೆ ತಿರುಚಿ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗುತ್ತಿದೆ. ಚುನಾವಣಾ ಸಂದರ್ಭಗಳಲ್ಲಿ ಇಂತಹ ವಿಡಿಯೋಗಳನ್ನು ಹೆಚ್ಚು ಹರಿಬಿಡಲಾಗುತ್ತಿದೆ. ಅನೇಕ ಬಾರಿ ಇಂತಹ ತಿರುಚಿದ ವಿಡಿಯೋಗಳಿಂದ ಜನರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಅಥವಾ ಯಾರದೇ ಭಾ‍ಷಣದ ತುಣುಕನ್ನು ನೋಡಿದಾಗ ಅವರ ಮಾತನ್ನು ಸಂಪೂರ್ಣವಾಗಿ ನಂಬಿ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಅವರ ಪೂರ್ತಿ ಭಾಷಣ ನೋಡಿ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಈಗ,…

Read More

Fact Check | ವಯನಾಡ್ ದೇವಾಲಯ ಅತಿಕ್ರಮಣ ಎಂದು ಪಾಕಿಸ್ತಾನದ ಫೋಟೊ ಹಂಚಿಕೆ

“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಮನಿಗೆ ಸಮರ್ಪಿತವಾದ ದೇವಾಲಯದ ಸಂಕೀರ್ಣದೊಳಗೆ ಕೋಳಿ ಅಂಗಡಿಯನ್ನು ನಡೆಸಲು ಅನುಮತಿ ನೀಡಿದ್ದು ಮಾತ್ರವಲ್ಲದೆ ಆ ಅಂಗಡಿಯನ್ನು ಈ ಹಿಂದೆ ಅವರೇ ಉದ್ಘಾಟಿಸಿದ್ದಾರೆ” ಎಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅಂತಹ ಒಂದು ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾರೆ. केरल के वायनाड में राहुल गांधी और प्रियंका वाड्राइन ने चार…

Read More
ಡಾ. ಬಿ.ಆರ್ ಅಂಬೇಡ್ಕರ್

Fact Check: ಡಾ. ಬಿ. ಆರ್ ಅಂಬೇಡ್ಕರ್ ಮತದಾನ ಮನೆಯ ಹೆಣ್ಣಿದ್ದಂತೆ ಎಂದು ಎಲ್ಲಿಯೂ ಹೇಳಿಲ್ಲ

ಖ್ಯಾತ ಹೃದ್ರೋಗ ತಜ್ಞ ಮತ್ತು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಹಾಲಿ ಬೆಂಗಳೂರು ಗ್ರಾಮಂತರ ಲೋಕಸಭಾ ಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿಯ ಅಭ್ಯರ್ಥಿಯೂ ಆದ ಡಾ. ಸಿ.ಎನ್ ಮಂಜುನಾಥ್ ಅವರು ನೆನ್ನೆ (ಏಪ್ರಿಲ್ 4) ನಡೆದ ಪ್ರಚಾರದ ಸಭೆಯ ಭಾಷಣದಲ್ಲಿ, “ಮತದಾನ ಮನೆಯ ಹೆಣ್ಣು ಮಗಳಿದಂತೆ ಅದು ಮಾರಾಟ ಆಗಬಾರದು ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ” ಎಂದು ಮತದಾರರಿಗೆ ತಿಳಿಸಿದ್ದಾರೆ. ಹಾಗಾದರೆ ನಿಜಕ್ಕೂ ಡಾ. ಬಿ. ಆರ್ ಅಂಬೇಡ್ಕರ್ ಅವರು…

Read More
Aravind Kejriwal

Fact Check: ಕೇಜ್ರಿವಾಲ್ ಅವರು ನ್ಯಾಯಲಯದಲ್ಲಿ ತಮ್ಮ ಪರವಾಗಿ ತಾವೆ ವಾದ ಮಾಡಿಲ್ಲ ಮತ್ತು ಜೈಲಿನಲ್ಲಿ ಹಾಡು ಹಾಡಿಲ್ಲ

ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಅವರ ಕಸ್ಟಡಿಯನ್ನು ಮಾರ್ಚ್ 28 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ನಂತರ ಏಪ್ರಿಲ್ 1 ರವರೆಗೆ ವಿಸ್ತರಿಸಲಾಗಿತ್ತು. ಹೆಚ್ಚಿನ ಕಸ್ಟಡಿಗಾಗಿ ಜಾರಿ ನಿರ್ದೇಶನಾಲಯದ ಮನವಿಯನ್ನು ಕೇಜ್ರಿವಾಲ್ ವೈಯಕ್ತಿಕವಾಗಿ ವಿರೋಧಿಸಿದರು ಮತ್ತು ಹಗರಣವನ್ನು ಆಮ್ ಆದ್ಮಿ ಪಕ್ಷದ ವಿರುದ್ಧದ ರಾಜಕೀಯ ತಂತ್ರ ಎಂದು ಕರೆದಿದ್ದಾರೆ. ಮಾರ್ಚ್ 28 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ನಂತರದ ದಿನಗಳಿಂದ, ಕೇಜ್ರಿವಾಲ್ ಮತ್ತು ಇಡಿ…

Read More
Narendra Modi

Fact Check: ಪ್ರಧಾನಿ ಮೋದಿಯವರು ಗಣೇಶನ ವಿಗ್ರಹವನ್ನು ತೆಗೆದುಕೊಳ್ಳಲು ನಿರಾಕರಿಸಿಲ್ಲ

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ವಿರೋಧಿ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂದು ವಿರೋಧಿ ಎಂದು ಬಿಂಬಿಸಲು ನಾಯಕರ ಹಳೆಯ ವಿಡಿಯೋಗಳನ್ನು ಬಳಸಿ ತಪ್ಪಾಗಿ ಪ್ರತಿಪಾದಿಸಲಾಗುತ್ತಿದೆ. ಅಂತೆಯೇ ಈಗ, “ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಗಣೇಶನ ಮೂರ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದೇ ಕೆಲಸವನ್ನು ರಾಹುಲ್ ಗಾಂಧಿಯವರು ಮಾಡಿದ್ದರೆ ಬಿಜೆಪಿ ಮತ್ತು ಅವರ ಬೆಂಬಲಿತ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎಂದು ಊಹಿಸಿ.” ಎಂಬ ಸಂದೇಶದ…

Read More
Congress

ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಪಾಕಿಸ್ತಾನದ ಬಾವುಟ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಮತ್ತು ಪ್ರತೀದಿನವೂ ಒಂದೊಂದು ಸುಳ್ಳು ಆರೋಪಗಳನ್ನು ಹರಿಬಿಡುತ್ತಿದ್ದಾರೆ. ಈಗ, “ಇಲ್ಲ! ಇದು ಪಾಕಿಸ್ತಾನವಲ್ಲ, ಆದರೆ ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರು ಕೇರಳದ ತಮ್ಮ ತ್ರಿಶೂರ್ ಕ್ಷೇತ್ರದ ಒಂದು ನಿರ್ದಿಷ್ಟ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನೀವು ಭಾರತದ ಯಾವುದಾದರೂ ಒಂದು ರಾಷ್ಟ್ರೀಯ ಧ್ವಜವನ್ನು ಗುರುತಿಸಬಹುದೇ? ಇದು ‘ಭಾರತ್ ಜೋಡೋ’ ಸಿದ್ಧಾಂತವೇ?…

Read More