Fact Check | ಮಣಿಪುರದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತೆಗೆದು ಮೈತೇಯಿ ಧ್ವಜವನ್ನು ಹಾರಿಸಿದ್ದಾರೆ ಎಂಬುದು ಸುಳ್ಳು

” ಮಣಿಪುರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಗಲಭೆಗಳು ಉಂಟಾಗುತ್ತಿವೆ. ಅಲ್ಲಿ ದಿನವೂ ದೇಶದ್ರೋಹದ ಕೃತ್ಯಗಳು ನಡೆಯುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ದೇಶದ್ರೋಹದ ಕೃತ್ಯಗಳಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಆದರೂ ಈ ಬಗ್ಗೆ ಅಲ್ಲಿನ ಯಾವ ಅಧಿಕಾರಿಗಳು ಕೂಡ ಕ್ರಮ ಕೈಗೊಳ್ಳದೆ, ಪ್ರತಿಭಟನಾ ನಿರತರಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಈಗ ಮಣಿಪುರದ ಡಿಸಿ ಕಚೇರಿ ಮೇಲಿದ್ದ ರಾಷ್ಟ್ರಧ್ವಜವನ್ನು ಕಿತ್ತು ಹಾಕಿರುವ ಅಲ್ಲಿನ ವಿದ್ಯಾರ್ಥಿಗಳು ಮೈತೇಯಿ  ಧ್ವಜವನ್ನು ಅಳವಡಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ” ಎಂದು…

Read More
ಬೆಂಗಳೂರು-ಮೈಸೂರು

Fact Check : ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವೀಡಿಯೊ ಗದಗಿನದ್ದು

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಿಡ್ಲಘಟ್ಟ ಸರ್ವೀಸ್‌ ರಸ್ತೆಯಲ್ಲಿ ರಾತ್ರಿ ಹೊತ್ತಲ್ಲಿ  ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ವೀಡಿಯೊ ಕುರಿತು ಸತ್ಯಾಂಶಗಳನ್ನು ತಿಳಿದುಕೊಳ್ಳಲು ಕೀಫ್ರೇಂಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಈ ಘಟನೆಯನ್ನು 2023ರ ಎಪ್ರಿಲ್ 17ರಂದು  Marvelous belgaum  ಫೇಸ್‌ಬುಕ್‌ ಖಾತೆಯ ಪೋಸ್ಟ್‌ರ್‌ ಲಭಿಸಿದೆ. ಈ ಪೋಸ್ಟ್‌ರ್‌ನಲ್ಲಿ ವೈರಲ್‌ ಆದ ವೀಡಿಯೊ ಬೆಳಗಾವಿಯದ್ದಲ್ಲ, ಗದಗಿನದ್ದು ಎಂದು ತಿಳಿದುಬಂದಿತು. ಇದನ್ನು ಸಾಕ್ಷ್ಯವಾಗಿರಿಸಿಕೊಂಡು ಮತ್ತಷ್ಟು…

Read More

Fact Check : ಮೀಸಲಾತಿ ರದ್ದತಿಗೆ ಬೆಂಬಲಿಸಿದ್ದಾರೆ ಎಂದು ಭೂಪೇಂದರ್ ಸಿಂಗ್ ಹೂಡಾರವರ ತಿರುಚಿದ ವಿಡಿಯೋ ಹಂಚಿಕೆ

ಭಾರತದಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮೇರಿಕದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅಧಿಕಾರಕ್ಕೆ ಬಂದರೆ ಅವರ ಹೇಳಿಕೆಗಳನ್ನು ಬೆಂಬಲಿಸುತ್ತೇನೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ” ನಾನು ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸುವ ರಾಹುಲ್‌ ಗಾಂಧಿ ಹೇಳಿಕೆಗಳನ್ನು ಬೆಂಲಿಸುತ್ತೇನೆ” ಎಂದು ಭೂಪಿಂದರ್ ಸಿಂಗ್ ಹೂಡಾರ ವೀಡಿಯೊ ಕ್ಲಿಪ್‌ವೊಂದನ್ನು ಟೈಮ್ಸ್ ನೌ ನವಭಾರತ್ ನ್ಯೂಸ್ ಹಂಚಿಕೊಂಡಿದೆ. Congress will end…

Read More

Fact Check | ಪ್ರಶ್ನಾರ್ಥಕ ಚಿಹ್ನೆ ಬಳಸಿ ಸುಳ್ಳು ಶೀರ್ಷಿಕೆ ನೀಡಿದ ಏಷ್ಯಾನೆಟ್ ಸುವರ್ಣ ನ್ಯೂಸ್

“ಅಮೆರಿಕಾದಲ್ಲಿ ಕುಳಿತು ಚೀನಾವನ್ನು ಹೊಗಳಿದ್ದೇಕೆ ರಾಹುಲ್ ಗಾಂಧಿ? ಬಿಜೆಪಿ ಹೇಳಿದ್ದೇನು?” ಎಂದು ಶೀರ್ಷಿಕೆ ನೀಡಿರುವ ಏಷ್ಯಾನೆಟ್ ಸುವರ್ಣ ನ್ಯೂಸ್ ಜನ‌ಸಾಮಾನ್ಯರಲ್ಲಿ ರಾಹುಲ್ ಗಾಂಧಿ ಬಗ್ಗೆ ತಪ್ಪು ಅಭಿಪ್ರಾಯ‌ ಮೂಡುವಂತೆ ಮಾಡಿದೆ. ಹೀಗೆ ಶೀರ್ಷಿಕೆ ನೀಡಿರುವ  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತನ್ನ ಸುದ್ದಿಯಲ್ಲಿ ಮಾತ್ರ ರಾಹುಲ್‌ ಗಾಂಧಿ ಅವರು ಏನು ಹೇಳಿದ್ದಾರೋ ಅದನ್ನೇ ಉಲ್ಲೇಖಿಸಿದೆ. ಇದು ಸಾರ್ವಜನಿಕರಲ್ಲಿ ಗೊಂದಲವನ್ನು ಮೂಡಿಸುವುದರ ಜೊತೆಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಲಾಗಿದೆ. ಅಮೆರಿಕಾದಲ್ಲಿ ಕುಳಿತು ಚೀನಾವನ್ನು ಹೊಗಳಿದ್ದೇಕೆ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಪ್ರವಾಹ ಎಂದು ಎಐ-ರಚಿಸಿದ ಚಿತ್ರಗಳ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಬಾಂಗ್ಲಾದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಾನ್ಸೂನ್ ಮಳೆ ಮತ್ತು ಉಕ್ಕಿ ಹರಿಯುವ ನದಿಗಳಿಂದ ಉಂಟಾದ ಇತ್ತೀಚಿನ ಪ್ರವಾಹದಿಂದ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 5.2 ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಹೇಳಲಾದ ಮೂರು ಚಿತ್ರಗಳು ವೈರಲ್ ಆಗಿವೆ. ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತ ತನ್ನ ಅಣೆಕಟ್ಟೆಗಳಿಂದ ನೀರು ಬಿಟ್ಟ ಕಾರಣದಿಂದ ಬಾಂಗ್ಲಾದೇಶದಲ್ಲಿ ಪ್ರವಾಹದ ಪರಿಸ್ಥಿತಿ ಸಂಭವಿಸಿದೆ. ಎಂದು ಭಾರತವನ್ನು ತೆಗಳಲು ಸಹ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ದುರಂತ ಮತ್ತು ವೈರಲ್ ಚಿತ್ರಗಳು ಬಾಂಗ್ಲಾದೇಶದಲ್ಲಿ…

Read More

Fact Check| ಕೆಪಿಎಸ್‌ಸಿ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ

ಕರ್ನಾಟಕದಲ್ಲಿ ಆಗಸ್ಟ್ 27ರಂದು ನಡೆಯಲಿರುವ ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಸಣ್ಣ  ಗುಂಪೊಂದು ಆಗಸ್ಟ್ 24ರಂದು ಪ್ರತಿಭಟನೆ ನಡೆಸಿದ್ದು, ಇದರ ಫೋಟೋ ಬಳಸಿಕೊಂಡು “ಕರ್ನಾಟಕದಲ್ಲಿ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ, ರಾಹುಲ್ ಗಾಂಧಿ ಮೌನವಾಗಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ‌. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿ ಆಗುತ್ತಿರುವ ಹಗರಣಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಶೂಗಳನ್ನು ಪಾಲಿಶ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ….

Read More

Fact Check: ಪ್ರಧಾನಿ ಮೋದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಸುಳ್ಳು. ನೂರಕ್ಕೂ ಹೆಚ್ಚು ಬಾರಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಭಾಷಣ ಮಾಡಿದ್ದಾರೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದ ರೀಲ್ಸ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ” ಮೋದಿಯವರು ಒಂದೇ ಒಂದು ಬಾರಿಯೂ ಕೂಡ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂದು ಹೇಳಲಿಲ್ಲ! ಆದರೂ ಕೂಡ, ಒಬ್ಬನೇ ಒಬ್ಬ ಮುಸಲ್ಮಾನನು ಮೋದಿಜಿಯವರಿಗೆ ಓಟು ನೀಡುವುದಿಲ್ಲ. ಆದರೆ ರಾಹುಲ್ ಗಾಂಧಿಯವರು ಅನೇಕ ಸಲ ಹೇಳಿದ್ದಾರೆ! ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂದು. ಆದರೂ ಸಹ ಹಿಂದುಗಳು ರಾಹುಲ್ ಗಾಂಧಿಯವರಿಗೆ ಓಟು ಹಾಕುತ್ತಾರೆ. ಇದರಿಂದಲೇ ಹಿಂದೂಗಳು…

Read More
ಮುಸ್ಲಿಂ ಯೂತ್ ಲೀಗ್‌

Fact Check: ಮುಸ್ಲಿಂ ಯೂತ್ ಲೀಗ್‌ನ ಹಿಂದೂ ವಿರೋಧಿ ಘೋಷಣೆಗಳ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸುವ ರ್ಯಾಲಿಯಲ್ಲಿ ಮುಸ್ಲಿಂ ಲೀಗ್ ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದೆ ಎಂದು ಪ್ರತಿಪಾದಿಸಲು ನ್ಯೂಸ್ 18 ಇಂಡಿಯಾ ವರದಿಯ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ವಯನಾಡ್‌ನಲ್ಲಿ ನಡೆದ ಮುಸ್ಲಿಂ ಲೀಗ್ ರ್ಯಾಲಿ ರಾಹುಲ್ ಗಾಂಧಿಯನ್ನು ಬೆಂಬಲಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿರುವ ಅನೇಕರು “ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿ. ಹಿಂದೂಗಳನ್ನು ದೇವಾಲಯಗಳಲ್ಲಿ ಗಲ್ಲಿಗೇರಿಸಿ. “ನಿಮಗೆ ರಾಮಾಯಣವನ್ನು ಓದಲು ಸಾಧ್ಯವಾಗುವುದಿಲ್ಲ.” ಈ ಘೋಷಣೆಗಳು ಪಾಕಿಸ್ತಾನದ್ದಲ್ಲ. ಅವರು ಭಾರತದ ಕೇರಳದವರು! ಈ ಘೋಷಣೆಗಳನ್ನು…

Read More
ಇರಾನಿ ಗ್ಯಾಂಗ್‌

Fact Check: ರಾಜ್ಯದಲ್ಲಿ ಇರಾನಿ ಗ್ಯಾಂಗ್‌ ಕಳ್ಳತನ ಮತ್ತು ದರೋಡೆ ಮಾಡುತ್ತಿರುವ ಪ್ರಕರಣಗಳು ನಿಜವಾಗಿದೆ

ಇತ್ತೀಚೆಗೆ ಇರಾನಿ ಗ್ಯಾಂಗ್ ಹೆಸರಿನ ದರೋಡೆಕೋರ ಗುಂಪೊಂದು ಬೆಡ್‌ಶೀಟ್‌ ಮಾರುವ ನೆಪದಲ್ಲಿ ಮನೆಗಳನ್ನು ಲೂಟಿ ಮಾಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಸಂದೇಶದಲ್ಲಿ “ಇವರು ಬೀದರ್ ಮತ್ತು ಗುಲ್ಬರ್ಗಾ ಇರಾನಿ ಜನರು, ಇವರು ಬೆಡ್‌ಶೀಟ್ ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಅವರೆಲ್ಲರೂ ದರೋಡೆಕೋರರು ದಯವಿಟ್ಟು ಗಮನಿಸಿ. ಗ್ಯಾಂಗ್‌ನ ಸದಸ್ಯರು ಹಗಲಿನಲ್ಲಿ ಕಂಬಳಿ ಮಾರಾಟ ಮಾಡುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸುತ್ತಾರೆ, ಮನೆ ಸಮೀಕ್ಷೆ ಮಾಡಿ ನಂತರ ಮನೆಯನ್ನು ಲೂಟಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬೀಟ್…

Read More
ಅನುರಾಗ್ ಠಾಕೂರ್

Fact Check: ಮೀಸಲಾತಿ ಮತ್ತು ಅಗ್ನಿವೀರ್ ಯೋಜನೆಗಳ ಬಗ್ಗೆ ಅನುರಾಗ್ ಠಾಕೂರ್ ಅವರು ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ

ಹಮೀರ್ಪುರದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಮಾಡಿದ ಪ್ರಚೋದನಕಾರಿ ಭಾಷಣವು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜಾತಿ ಗುರುತಿನ ಬಗ್ಗೆ ಠಾಕೂರ್ ವಾಗ್ದಾಳಿ ನಡೆಸಿದರು, ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅನುರಾಗ್ ಠಾಕೂರ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಒಬಿಸಿ ಮೀಸಲಾತಿಗೆ ವಿರುದ್ಧವಾಗಿದ್ದರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮೀಸಲಾತಿಗೆ ವಿರುದ್ಧವಾಗಿದ್ದರು ಎಂದು ಆರೋಪಿಸಿದ್ದಾರೆ. ಅನುರಾಗ್ ಠಾಕೂರ್ ಅವರ ಹೇಳಿಕೆಗಳು ನಿಜವೇ ಎಂದು ನಮ್ಮ ತಂಡ ಈ…

Read More