ರಾಹುಲ್

Fact Check: ಸಿಂಗಾಪುರದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ರಾಹುಲ್ ಚಡಪಡಿಸಿದ್ದಾರೆ ಎಂಬುದು ಸುಳ್ಳು

ರಾಹುಲ್ ಸಿಂಗಾಪುರದಲ್ಲಿ ಉತ್ತರ ನೀಡಲು ಚಡಪಡಿಸಿದ ಪ್ರಶ್ನೆಗಳಿವು: 1. ಭಾರತ ಬಡದೇಶ ಅನ್ನೋದಾದ್ರೆ ನಿಮ್ಮ ಕುಟುಂಬ ಹೇಗೆ ಶ್ರೀಮಂತವಾಗಿದೆ ? 2. ಗಾಂಧಿ ಕುಟುಂಬವೇ 62ವರ್ಷ ಆಡಳಿತ ನಡೆಸಿತು ಆದರೂ ಬಡತನ ನಿರ್ಮೂಲನೆ ಯಾಕಾಗಿಲ್ಲ..? 3. ಭಾರತದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ನಾಲ್ಕು ವರ್ಷ ದೇಶ ಆಳಿದ ಮೋದಿ ಕಾರಣರೇ ಅಥವಾ 62 ವರ್ಷ ದೇಶ ಆಳಿದ ಕಾಂಗ್ರೇಸ್ ಕಾರಣವೇ..? 4. ಈ ನಿಮ್ಮ ಹೋರಾಟ ದೇಶದ ಬಡವರ ಪರವೋ ಅಥವಾ ಆರೆಸ್ಸೆಸ್ ವಿರುದ್ಧವೋ..? ಎಂಬ ಹೇಳಿಕೆಯ…

Read More
ಮುಸ್ಲಿಂ

Fact Check: ಮುಸ್ಲಿಂ ಒಲೈಕೆಗಾಗಿ ಇಂದಿರಾ ಗಾಂಧಿಯವರು ಹಿಜಾಬ್ ಧರಿಸಿದ್ದರು ಎಂಬುದು ಸುಳ್ಳು

ಕಳೆದೊಂದು ದಶಕಗಳಿಂದ ಪಂಡಿತ್ ಜವಹರಲಾಲ್ ನೆಹರು ಅವರ ಕುಟುಂಬದ ಮೇಲೆ ಸುಳ್ಳು ಆಪಾದನೆಗಳಿಂದ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ನೆಹರೂ ಅವರ ಕುಟುಂಬ ಕಾಶ್ಮೀರಿ ಪಂಡಿತರಾಗಿರದೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಪ್ರತಿಪಾದಿಸಿ ಪ್ರತಿದಿನ ಹಲವಾರು ಸುಳ್ಳುಗಳನ್ನು ಹಂಚಿಕೊಳ್ಳಲಾಗುತ್ತಿದೆ. ಬಿಜೆಪಿ ಬೆಂಬಲಿಗರು ಮತ್ತು ಬಲಪಂಥಿಯರು ಈ ಸುಳ್ಳನ್ನೇ ಜನರ ನಡುವೆ ಹರಿಬಿಡುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ, “ಬುರ್ಖಾ ಮತ್ತು ಹಿಜಾಬ್‌ನಲ್ಲಿ ಇಂದಿರಾ ಖಾನ್ ಮತ್ತು ಮುಸಲ್ಮಾನರ ಕ್ಯಾಪ್ ಧರಿಸಿರುವ ರಾಹುಲ್ ಖಾನ್ . ಇವರು ಇಡೀ ಹಿಂದೂಗಳನ್ನು ಮೂರ್ಖರನ್ನಾಗಿ ಮಾಡಿದ್ದಾರೆ”…

Read More

Fact Check : ಸೋನಿಯಾ ಗಾಂಧಿ ಹಿಂದೂ ವಿರೋಧಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಬರೆದಿದ್ದಾರೆಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಪೇಪರ್‌ ಕಟಿಂಗ್‌ವೊಂದು ವೈರಲ್‌ ಆಗುತ್ತಿದೆ. ಅದರಲ್ಲಿ ‘ಸೋನಿಯಾ ಗಾಂಧಿ ಹಿಂದೂಗಳನ್ನು ದ್ವೇಷಿಸುತ್ತಾರೆ’ ಎಂಬ ಶೀರ್ಷಿಕೆ ಇದ್ದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುಸ್ತಕ ದಿ ಕೊಯಲಿಷನ್ ಇಯರ್ಸ್ 1996-2012 ಪುಸ್ತಕದಲ್ಲಿ ಸೋನಿಯಾ ಗಾಂಧಿ ಹಿಂದೂ ವಿರೊಧಿ ಎಂದು ಬರೆಯಲಾಗಿದೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಸಾಕಷ್ಟು ಮಂದಿ ಇದನ್ನು ನಿಜವೆಂದು ನಂಬಿ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಹಾಗಾಗಿ ಈ  ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಸಿಕ್ಕ ಮಾಹಿತಿ ಬೇರೆಯದ್ದೇ ಆಗಿದೆ. ಅಸಲಿಗೆ ಪೇಪರ್‌…

Read More

Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಗಾಂಧಿ ಕೆಂಪು ಸೀರೆ ಧರಿಸಿ ದೇವಾಸ್ಥಾನದ ಗಂಟೆ ಬಾರಿಸುತ್ತಿರುವ ಫೋಟೋವೊಂದು ವ್ಯಾಪಕವಾಗ ಹಂಚಿಕೊಳ್ಳಲಾಗುತ್ತಿದೆ. ಆದರೆ ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಸಾಕಷ್ಟು ಮಂದಿ ಪ್ರಿಯಾಂಕ ಗಾಂಧಿ ಚುನಾವಣ ಪ್ರಚಾರಕ್ಕಾಗಿ ದೇವಸ್ಥಾನಕ್ಕೆ ತೆರಳುವ ನಾಟಕ ಮಾಡುತ್ತಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, “ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್‌ಘಡದಲ್ಲಿ ಚುನಾವಣೆ ಬರುತ್ತಿದೆ. ಅಜ್ಜಿಯ ಸೀರೆ ಪೆಟ್ಟಿಗೆಯಿಂದ ಆಚೆ ಬಂದಿದೆ. ಆದರೆ ನೀವು ಈ ಚುನಾವಣೆಯಲ್ಲಿ ಯಾವ ಲಾಭವನ್ನು ಪಡೆಯಲೂ ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ…

Read More

ಶೃಂಗೇರಿ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು.

ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತಿ ತೀರ್ಥರು ಹಿಂದು ವಿರೋಧಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ಮತ್ತು ಸಂಸದ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಮಾರ್ಚ್, 2018ರಲ್ಲಿ ಶೃಂಗೇರಿ ಶಾರದ ಪೀಠಕ್ಕೆ ಭೇಟಿಕೊಟ್ಟು ಜಗದ್ಗುರು ಭಾರತಿ ತೀರ್ಥರನ್ನು ಭೇಟಿಯಾಗಿದ್ದರು. ಚರ್ಚೆಯ ನಂತರ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯನವರಿಗೆ ಆಶೀರ್ವಾದಿಸಿದರು.ನಂತರ ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿಯವರ ಚಿತ್ರವನ್ನು…

Read More

ಮಹಿಳಾ ಮೀಸಲಾತಿ ಮತದಾನದ ವೇಳೆ ಸೋನಿಯಾ – ರಾಹುಲ್ ಗೈರು ಎಂಬುದು ಸುಳ್ಳು

ಲೋಕಸಭಾ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತದಾನದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ ಹಾಕದೇ ಗೈರು ಹಾಜರಾಗಿದ್ದರು ಎಂದು ಪ್ರತಿಪಾದಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ. ಫ್ಯಾಕ್ಟ್ ಚೆಕ್ ಸತ್ಯ ಏನೆಂದರೆ ಮಹಿಳಾ ಮೀಸಲಾತಿ ಅಂಗೀಕಾರದ ವೇಳೆ ಮತದಾನದಲ್ಲಿ ಸೋನಿಯಾ-ರಾಹುಲ್ ಇಬ್ಬರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಆನಂತರದ ಚರ್ಚೆಗಳಲ್ಲಿಯೂ ಭಾಗವಹಿಸಿರುವುದನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಈ ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಸದನದಲ್ಲಿ ಮಹಿಳಾ ಮೀಸಲಾತಿಯ ಪ್ರಸ್ತಾವನೆ ಸಲ್ಲಿಸುವ…

Read More

Fact Check: ಭಾರತ-ಪಾಕಿಸ್ತಾನ ವಿಭಜನೆ ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದ ಅನೇಕ ಪೋಟೋಗಳು ತಪ್ಪು ಮಾಹಿತಿಗಳೊಂದಿಗೆ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪುಬಿಳುಪಿನ ಅನೇಕ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು ಇವುಗಳಲ್ಲಿ ಅನೇಕರು ಸತ್ತು ಮಲಗಿದ್ದರೆ, ಇನ್ನೂ ಕೆಲವು ಚಿತ್ರಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ,  ಮತ್ತೊಂದು ಪೋಟೋದಲ್ಲಿ ಮಹಿಳೆಯ ಕೈಗಳನ್ನು ಕಟ್ಟಿಹಾಕಲಾಗಿದೆ, ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿದೆ ಮತ್ತು ಅರೆನಗ್ನಾವಸ್ಥೆಯಲ್ಲಿ ಮಹಿಳೆ ಇರುವುದನ್ನು ಕಾಣಬಹುದು. ಈ ಪೋಟೋವನ್ನು “ಇಸ್ಲಾಮಿಕ್ ಜಿಹಾದಿಗಳು ತಮ್ಮ ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಬೀದಿಗಳಲ್ಲಿ ಬಲಾತ್ಕಾರ ಮಾಡಿದ್ದು ಹೀಗೆ.” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ. ಹಾಗೂ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ ಹಲವು ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.   ಫ್ಯಾಕ್ಟ್‌…

Read More
ಗುಜರಾತ್‌

Fact Check: ಗುಜರಾತಿನಲ್ಲಿ ರೈಲ್ವೆ ಹಳಿ ತಪ್ಪಿಸಲು ಪ್ರಯತ್ನಿಸಿದ ನೌಕರರು ಹಿಂದೂಗಳೇ ಹೊರತು ಮುಸ್ಲಿಮರಲ್ಲ

ಇತ್ತೀಚೆಗೆ ಗುಜರಾತ್‌ನ ಸೂರತ್‌ನಲ್ಲಿ ಸೆಪ್ಟೆಂಬರ್ 21 ರಂದು ಕಿಮ್ ರೈಲು ನಿಲ್ದಾಣದ ಬಳಿ ರೈಲು ಹಳಿತಪ್ಪಿಸಲು ಸಂಚು ರೂಪಿಸಿದ ಮೂವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ಮುಸ್ಲಿಮರು ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ಕುರಿತ ಮೂವರು ಅಪರಾಧಿಗಳನ್ನು ಪೋಲಿಸರು ಬಂಧಿಸಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ” ಕರ್ನಾಟಕಕ್ಕೆ ಬರುತ್ತಿದ್ದ ಸೇನಾ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ್ದ ಮುಸ್ಲಿಂ ರೈಲ್ವೆ ನೌಕರರ ಬಂಧನ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮತ್ತು ಆರೋಪಿಗಳನ್ನು…

Read More
ಡ್ರೋನ್‌ ದಾಳಿ

Fact Check: ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ ನಡೆಸಿದೆ ಎಂದು ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ವೀಡಿಯೋ ಹಂಚಿಕೆ

ಇತ್ತೀಚೆಗೆ ಡ್ರೋನ್‌ ದಾಳಿಯಾಗುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಇಸ್ರೇಲಿ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ ಎಂದು ಡ್ರೋನ್ ದಾಳಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. https://twitter.com/Rizwanmalik49/status/1838177525500895678 ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಾವು ವೈರಲ್ ವೀಡಿಯೋವನ್ನು ಕೀಫ್ರೆಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್‌ನಲ್ಲಿ ಹುಡುಕಿದಾಗ ವೈರಲ್‌ ವಿಡಿಯೋವನ್ನು ಹೋಲುವ ವೀಡಿಯೋಗಳು ಮತ್ತು ವರದಿಗಳು ಲಭ್ಯವಾಗಿದ್ದು, ವರದಿಗಳ ಪ್ರಕಾರ,…

Read More

Fact Check | ತಿರುಪತಿ ಲಾಡು ತಿಂದವರಿಗೆ ಮನೆ ಕೊಡುವುದಿಲ್ಲ ಎಂಬುದು ಎಡಿಟೆಡ್‌ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ” ಸಸ್ಯಹಾರಿಗಳಿಗೆ ಮಾತ್ರ ಮನೆ ನೀಡುಲಾಗುತ್ತದೆ. ತಿರುಪತಿ ಲಾಡು ಸೇವಿಸಿದವರಿಗೆ ಮನೆ ನೀಡಲಾಗುವುದಿಲ್ಲ” ಎಂಬ ಅರ್ಥದಲ್ಲಿ ಮನೆಯ ಮುಂದಿನ ಗೇಟ್‌ನಲ್ಲಿ ಪೋಸ್ಟರ್‌ವೊಂದನ್ನು ಹಾಕಿರುವ ಫೋಟೋವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ನೋಡಿದ ಹಲವು ಮಂದಿ ಫೇಸ್‌ಬುಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮಂದಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. திருப்பதி லட்டு சாப்பிடுபவர்களுக்கு வீடு இல்லயாம் 🤭🤭🤭🤭#beefladdu #thirumalathirupathi #nohouseforrent pic.twitter.com/eoADFs4yXv — Shyammsundarr_vck, Msc,B.Ed,PhD., (@Shyamsu24) September 23, 2024…

Read More