Fact Check : ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಗಾಜಾವನ್ನು ಬೆಂಬಲಿಸುವ ಪೋಸ್ಟ್‌ ಹಾಕಿದ್ದಾರೆ ಎಂಬುದು ಸುಳ್ಳು

ಭಾರತದ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು ಗಾಜಾವನ್ನು ಬೆಂಬಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವ್ಯಾಪಕವಾಗಿ ಹರಡಲಾಗುತ್ತಿದೆ. ಆ ಸುದ್ದಿಯನ್ನು ವ್ಯಾಪಾಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಆ ಪೋಸ್ಟ್‌ನ ತಲೆಬರಹದಲ್ಲಿ “ಕೊಹ್ಲಿ ತಮ್ಮ ಏಕದಿನ ಪಂದ್ಯದಲ್ಲಿ 49ನೇ ಶತಕದ ಸಿಡಿಸಿದ ನಂತರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ “ಇನ್‌ ಸಾಲಿಡರಿಟಿ ವಿಥ್‌ ಗಾಜಾ” ಎಂಬ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಪ್ಯಾಲೆಸ್ಟೈನ್‌ ಬೆಂಬಲಕ್ಕೆ ನಿಂತಿದ್ದಾರೆ.” ಎಂದು ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಮತ್ತು ಪೋಸ್ಟ್‌ನ ಕುರಿತು…

Read More

ಕಾಂಗ್ರೆಸ್ ನಾಯಕ ಶಶಿ ತರೂರ್ ಹಮಾಸ್‌ರವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್‌ ಬೆಂಬಲದೊಂದಿಗೆ ಭಯೋತ್ಪಾದಕರಾದ ಹಮಾಸರನ್ನು ಬೆಂಬಲಿಸಿ ಕೇರಳದಲ್ಲಿ ಬೃಹತ್ ರ್ಯಾಲಿಯೊಂದು ನಡೆದಿದೆ. ಇದು ನಡೆದಿರುವುದು ಪಾಕಿಸ್ತಾನದಲ್ಲೋ, ಪ್ಯಾಲೆಸ್ಟೈನ್‌ನಲ್ಲೋ ಅಲ್ಲ ದೇವರ ನಾಡು ಕೇರಳದಲ್ಲಿ.  ಎಂಬ ತಲೆಬರಹದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ಅಕ್ಟೋಬರ್ 26ರಂದು ಕೇರಳದ ಕೋಜಿಕೊಡೆ ತೀರದಲ್ಲಿ ನಡೆದ ಪ್ಯಾಲಸ್ಟೈನ್ ಪರವಾಗಿ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ ಶಶಿ ತರೂರ್ ಹಮಾಸ್‌ ಮತ್ತು ಇಸ್ರೇಲ್‌ನ ಕೃತ್ಯವನ್ನು ಖಂಡಿಸಿದ್ದಾರೆ. ಇಬ್ಬರ ನಡೆಗಳು ಕೂಡ ನೂರಾರು ನಾಗರೀಕರನ್ನು ಬಲಿ ತೆಗೆದುಕೊಳ್ಳುತ್ತದೆ…

Read More

Fact Check : ಇಸ್ರೇಲಿ ಕಂಪನಿ ಪೆಪ್ಸಿ ಹಮಾಸ್‌ಗೆ ಬೆಂಬಲ ನೀಡಲು ತನ್ನ ಡಿಸೈನ್‌ ಬದಲಿಸಿಕೊಂಡಿದೆ ಎಂಬುದು ಸುಳ್ಳು

ಹಮಾಸ್‌ ಇಸ್ರೇಲ್‌ ನಡುವಿನ ಯುದ್ದ ಹಲವು ಸುಳ್ಳು ಸುದ್ದಿಗೆ ಸಾಕ್ಷಿಯಾಗಿದೆ. ಈ ಯುದ್ಧದಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆಯೂ ಕೂಡ ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿದೆ. ಆ ಸುಳ್ಳು ಸುದ್ದಿಗಳಿಂದಾಗಿ ಹಲವು ಬಹು ರಾಷ್ಟ್ರೀಯ ಕಂಪನಿಗಳು ಕೂಡ ಈಗ ಹೊಸ ಹೊಸ ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಿವೆ. ಈಗ ಹೀಗೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸರಣಿ ಜಾಗತಿಕ ಮನ್ನಣೆ ಗಳಿಸಿರುವ ಹಾಗೂ ತನ್ನ ತಂಪು ಪಾನಿಯ ಉತ್ಪನ್ನಗಳ ಮೂಲಕ ಹೆಸರುವಾಸಿಯಾಗಿರುವ ಪೆಪ್ಸಿಕೊ ಕಂಪನಿಯದ್ದು. ಕಳೆದ ಎರಡು ಮೂರು ದಿನಗಳಿಂದ ಪೆಪ್ಸಿ…

Read More

ಬಿಜೆಪಿಯು 3 ತಿಂಗಳ ಉಚಿತ ರೀಚಾರ್ಜ್‌ ನೀಡುತ್ತಿದೆ ಎಂಬುದು ಸುಳ್ಳು, ವಂಚನೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನರೆಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿ 3 ತಿಂಗಳ ಫ್ರೀ ರೀಚಾರ್ಜ್ ಮಾಡಿಸುತ್ತಿದೆ. ಅಕ್ಟೋಬರ್ 15, 2024 ಕೊನೆಯ ದಿನಾಂಕವಾಗಿದೆ ಎಂಬ ಸಂದೇಶವೊಂದು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್: ವಾಟ್ಸಾಪ್ ನಲ್ಲಿ ಬಂದ ಸಂದೇಶದ ಕೊನೆಯಲ್ಲಿರುವ ವೆಬ್‌ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ Website Status Suspicious ಎಂಬ ಎಚ್ಚರಿಕೆ ಕಾಣುತ್ತದೆ. ಆದರೂ ಪರವಾಗಿಲ್ಲ ಮುಂದುವರೆಯಿರಿ ಎಂಬುದರ ಮೇಲೆ ಒತ್ತಿದ್ದಾಗ 404 error…

Read More
ಪಿಂಚಣಿ

ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕುರಿತು ಸದಾ ಒಂದಿಲ್ಲೊಂದು ಸುಳ್ಳು ಸುದ್ದಿಗಳು ಭಾರತದಾದ್ಯಂತ ಇಂದಿಗೂ ಈ ಕ್ಷಣಕ್ಕೂ ಹರಿದಾಡುತ್ತಲೇ ಇರುತ್ತವೆ.  ಬಹುಶಃ ಸ್ವತಂತ್ರ್ಯ ಚಳುವಳಿಯ ಪ್ರಮುಖ ನಾಯಕರಲ್ಲಿ ಗಾಂಧೀಜಿಯವರ ಕುರಿತು ಹರಿದಾಡಿದಷ್ಟು ಸುಳ್ಳುಗಳು ಮತ್ತೊಬ್ಬರದಿಲ್ಲ. ಇತ್ತೀಚೆಗೆ ಗಾಂಧಿಜಿಯವರ ಕುರಿತು ಇನ್ನೊಂದು ಸುದ್ದಿ ಹರಿದಾಡುತ್ತಿದ್ದು, ಅದು 1930 ರಲ್ಲಿ ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದಾಗ ಮಹಾತ್ಮಾ ಗಾಂಧಿಯವರು ತಮ್ಮ ವೈಯಕ್ತಿಕ ನಿರ್ವಹಣೆಗಾಗಿ 100 ರೂಪಾಯಿ ಪಿಂಚಣಿ ಅಥವಾ ಭತ್ಯೆಯನ್ನು ಪಡೆಯುತ್ತಿದ್ದರು ಎಂಬ ಸುಳ್ಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಾ. ವಿಕ್ರಮ್ ಸಂಪತ್…

Read More

Fact Check : ಡಿವ್‌ ಕಂಪನಿಯ ನೀರು ಕುಡಿದು ತಾಂಜೇನಿಯದಲ್ಲಿ 160 ಮಂದಿ ಸಾವನಪ್ಪಿಲ್ಲ.!

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ. ಇಂತಹ ಸುಳ್ಳು ಸುದ್ದಿಗಳು ಜನರ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿವೆ. ಅಂತಹ ಸುಳ್ಳು ಸುದ್ದಿಯಲ್ಲಿ “ಡಿವ್‌ ಕಂಪನಿಯ ನೀರು ಅಪಾಯಕಾರಿಯಾಗಿದೆ. ಈ ಕಂಪನಿಯ ನೀರು ಕುಡಿದು ತಾಂಜೇನಿಯದಲ್ಲಿ 160ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ದಯವಿಟ್ಟು ಈ ಕಂಪನಿಯ ಬಾಟಲಿ ನೀರನ್ನು ಯಾರೂ ಕುಡಿಯಬೇಡಿ.” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್‌ ಆಗಿದೆ. Fact Check : ಅಸಲಿಗೆ ಈ ಸುದ್ದಿಯ ಕುರಿತು ಫ್ಯಾಕ್ಟ್‌…

Read More

Fact Check: ಮುಂಬೈನ ಎಸ್‌ಆರ್‌ಸಿಸಿ ಖಾಸಗಿ ಆಸ್ಪತ್ರೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್‌ಗೆ ಸಹಾಯ ಮಾಡುತ್ತಿಲ್ಲ

ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು 10ರಿಂದ 12 ಲಕ್ಷದಷ್ಟು ರೋಟರಿ ಕ್ಲಬ್ ಆಫ್ ಮುಂಬೈ ವರ್ಲಿ ಧನಸಹಾಯ ಮಾಡುತ್ತಿದ್ದು, ಮುಂಬೈನ ಎಸ್‌ಆರ್‌ಸಿಸಿ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಹಾಯ ಮಾಡುತ್ತಿದೆ. ಸಂಪರ್ಕಿಸಿ; ರೋಟರಿ ಕ್ಲಬ್ ಆಫ್ ಮುಂಬೈ ವರ್ಲಿ ಡಿಜಿ ಆರ್ಟಿಎನ್ ರಾಜೇಂದ್ರ ಅಗರ್ವಾಲ್ 9820085149. ಎಂಬ ವಾಟ್ಸಾಪ್ ಸಂದೇಶವೊಂದು  ಎಲ್ಲೆಡೆ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಮುಂಬೈನ ಎಸ್‌ಆರ್‌ಸಿಸಿ ಖಾಸಗಿ ಆಸ್ಪತ್ರೆ ಆಗಿದ್ದು, ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಯಾವ ಪ್ರಕಟಣೆಯನ್ನೂ ಅಧಿಕೃತವಾಗಿ ನೀಡಿಲ್ಲ. ಈ ಆಸ್ಪತ್ರೆಯಲ್ಲಿ…

Read More

ಪ್ಯಾಲೇಸ್ಟೈನಿಗರು ಮೇಕಪ್ ಬಳಸಿಕೊಂಡು ಯುದ್ಧದ ಗಾಯಳುಗಳಂತೆ ನಟಿಸುತ್ತಿದ್ದಾರೆ ಎಂಬುದು ಸುಳ್ಳು

ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧವನ್ನು ಧರ್ಮಗಳ ಆಧಾರದಲ್ಲಿ ನೋಡುವ ಕ್ರಮವೊಂದು ನಿರ್ಮಾಣವಾಗಿದೆ. ಭಾರತದಲ್ಲಿಯೂ ಸಹ ಹಿಂದು-ಮುಸ್ಲಿಂ ಸಮುದಾಯಗಳು ಪರ-ವಿರೋಧದ ಹೆಸರಿನಲ್ಲಿ ಸುಳ್ಳುಗಳನ್ನು ಹಂಚಿಕೊಳ್ಳುತ್ತಿವೆ. ಇತ್ತೀಚೆಗೆ “ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ವಿಕ್ಟಿಮ್ ಕಾರ್ಡ್ ಗೆ ಸ್ವಾಗತ. ಇಲ್ಲಿ ನೀವು ರಾಸಾಯನಿಕವನ್ನು ಬಳಸಿಕೊಂಡು ಪೂರ್ಣ ಮೇಕಪ್ ಮಾಡುವುದು ಮತ್ತು ಅಳುವುದು ಹೇಗೆ ಎಂದು ಕಲಿಯಬಹುದು ಮತ್ತು ನಂತರ ಇಸ್ರೇಲ್ ಅನ್ನು ದೂಷಿಸಬಹುದು. ಈ ವಿಶ್ವವಿದ್ಯಾಲಯವು ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನು ಹೊಂದಿದೆ.” ಎಂಬ ಹೇಳಿಕೆಯ ವಿಡಿಯೋ ಒಂದು…

Read More
ಇಸ್ರೇಲ್

ಇಸ್ರೇಲ್ – ಪ್ಯಾಲೇಸ್ತೀನ್ ಹೆಸರಿನಲ್ಲಿ ಹರದಾಡುತ್ತಿವೆ ನಕಲಿ ವಿಡಿಯೋ-ಫೋಟೊಗಳು

ಪ್ಯಾಲೇಸ್ತೀನ್‌ನಲ್ಲಿ ಹಮಾಸ್‌ನವರು ಚಿಕ್ಕ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿ ಪಂಜರದಲ್ಲಿ ಕೂಡಿಹಾಕಿದ್ದಾರೆ ಎಂಬ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. They are killing innocents, holding foreigners hostage, women's are being butchered, raped, paraded naked, now they killed 10 Nepali Hindu students and put Jewish childrens in animal cage! What kind of liberation war they are fighting for? #IStandWithIsrael #IsraelPalestineWar pic.twitter.com/rEBDeDQ7fx…

Read More

ಬಾಲಕನೊಬ್ಬನ ಶಿರಚ್ಛೆದ ಮಾಡಿದ ವಿಡಿಯೋ ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೈನ್ ಯುದ್ದಕ್ಕೆ ಸಂಬಂಧಿಸಿದ್ದಲ್ಲ

ಹಮಾಸ್ ಉಗ್ರಗಾಮಿಗಳು ಪ್ಯಾಲೆಸ್ತೈನಿನ ಮುಗ್ದ ಬಾಲಕನೊಬ್ಬನ ಶಿರಚ್ಛೆದ ಮಾಡಿದ್ದಾರೆ. ಇದು ಕಾಶ್ಮೀರದ ಹತ್ಯಾಕಂಡವನ್ನು ನೆನಪಿಸುತ್ತಿದೆ. ಇವರು ಮನುಷ್ಯರಲ್ಲ, ಇವರ ನಂಬಿಕೆಗಳೆ ಇವರನ್ನು ಪ್ರಾಣಿಯನ್ನಾಗಿಸಿವೆ. ಇಂತಹ ಹಂದಿಗಳನ್ನು ಸೆಕ್ಯುಲರ್‌ಗಳು ಬೆಂಬಲಿಸುತ್ತಿದ್ದಾರೆ. ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸಿರಿಯಾದ ಉತ್ತರ ಅಲೆಪ್ಪೋದ ಹಂದರಾತ್‌ನಲ್ಲಿ 2016ರ ಹರಕಾತ್ ನೌರ್ ಅಲ್-ದಿನ್ ಅಲ್-ಝೆಂಕಿ ಉಗ್ರಗಾಮಿಗಳು ಕ್ರೂರವಾಗಿ ಪ್ಯಾಲೆಸ್ತೈನ್ ನಿರಾಶ್ರಿತ ಶಿಬಿರದಲ್ಲಿದ್ದ ಅಬ್ದುಲ್ಲಾ ಇಸ್ಸಾ ಎಂಬ 12 ವರ್ಷದ ಬಾಲಕನೊಬ್ಬನ ಶಿರಚ್ಛೆದ ಮಾಡಿದ್ದ ವಿಡಿಯೋ ಆಗಿದೆ. ಇದು 2016ರ ಸಿರಿಯಾ…

Read More