Fact Check : ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಮಧ್ಯಪ್ರದೇಶದ ಜನರಿಗೆ ಅಮಿತ್‌ ಶಾ ಹೇಳಿಲ್ಲ.!

ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ದೇಪಾಲ್ಪುರ್‌ ಬಿಜೆಪಿ ಅಭ್ಯರ್ಥಿ ಮನೋಜ್‌ ನಿರ್ಭಯ್‌ ಸಿಂಗ್‌ಗೆ ಮತ ಹಾಕಬೇಡಿ ಎಂದು ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಈ ವಿಡಿಯೋ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಈ ವಿಡಿಯೋ ಎಡಿಟೆಡ್‌ ಎಂದು ತಿಳಿದು ಬಂದಿದೆ. ಇದೇ ನವಂಬರ್‌ 11 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು…

Read More

Fact Check : ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್ ಬಿಜೆಪಿ ಸರ್ಕಾರದ ಯೋಜನೆ ನಿಲ್ಲಿಸುತ್ತೇನೆ ಎಂದು ಹೇಳಿಲ್ಲ

ದೇಶದ ಕೆಲವು ರಾಜ್ಯಗಳು ವಿಧಾನಸಭೆ ಚುನಾವಣೆಗೆ ತಯಾರಿಯನ್ನ ನಡೆಸುತ್ತಿವೆ. ಈ ನಡುವೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭ ಮಾಡಿದ್ದಾರೆ. ಇದು ಹಲವು ರಾಜಕೀಯ ನಾಯಕರ ವೈಯಕ್ತತಿಕ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಹೀಗಾಗಿ ಹಲವು ನಾಯಕರು ಮುಜುಗರ ಅನುಭವಿಸು ಹಾಗಾಗಿದೆ. ಇದೇ ರೀತಿಯಾದ ಮುಜುಗರ ಮತ್ತು ಸುಳ್ಳು ಸುದ್ದಿಯಿಂದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಎದುರಿಸುತ್ತಿದ್ದಾರೆ. ಈಗ ಅವರ ವಿರುದ್ಧ ಸುಳ್ಳು ಸುದ್ದಿ ಹರಡಲು ಪ್ರಾರಂಭ ಮಾಡಿರುವ ಮಧ್ಯ ಪ್ರದೇಶದ…

Read More
ಕಾರ್ತಿಕ್ ಆರ್ಯನ್

ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿಲ್ಲ

ಪಂಚರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಿರುಸಿನಿಂದ ಪ್ರಚಾರ ನಡೆಸುತ್ತಿವೆ. ಅದರ ಜೊತೆಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಅದರಂತೆ, ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿದ್ದಾರೆ ಎಂಬ ಜಾಹಿರಾತಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ಲೋಗೋ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಉದ್ದೇಶಿತ ಯೋಜನೆಗಳನ್ನು ವಿವರಿಸುವ ವಾಯ್ಸ್ ಓವರ್ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್…

Read More

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋದಿ ಹೆಸರಿನಲ್ಲಿ ಓಟು ಕೇಳಿ ಎಂದು ಹೇಳಿಲ್ಲ

ಪಂಚರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ತ್ರೀವ್ರವಾದ ಸಂಚಲನ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳ ನಡುವೆ ಕೆಲವು ಸುಳ್ಳು ಸುದ್ದಿಗಳು ಸಹ ಹರಿದಾಡುತ್ತಿವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರವರು ತಮ್ಮ ಪಕ್ಷದ ಆಂತರಿಕ ಸಭೆಯಲ್ಲಿ “ಬೆಲೆ ಏರಿಕೆಯಿಂದ, ನಿರುದ್ಯೋಗದಿಂದ ಮಧ್ಯಪ್ರದೇಶದ ಜನ ಬಿಜೆಪಿಯ ಕುರಿತು ಬೇಜಾರಾಗಿದ್ದಾರೆ. ಸರ್ವೆಗಳು ಸಹ ನಮ್ಮ ಪಾರ್ಟಿಯ ಸ್ಥಿತಿ ಚಿಂತಾಜನಕವಾಗಿವೆ ಎಂದು ಹೇಳುತ್ತಿವೆ. ಹಾಗಾಗಿ ನಾನು ಎಲ್ಲರಿಗೂ…

Read More

Fact Check | ಮೀಸಲಾತಿ ಕುರಿತ ರಾಹುಲ್‌ ಗಾಂಧಿ ಹೇಳಿಕೆಯನ್ನು ತಿರುಚಿದ ಬಿಜೆಪಿ

“ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೇ ಬೆಂಕಿ ಇಡಲು @INCIndia ಚಿಂತನೆ ನಡೆಸಿದೆ. ಮಂದ ಬುದ್ಧಿಯ ಬಾಲಕ @RahulGandhi ಅವರು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನೇ ಕಿತ್ತು ಹಾಕುವುದಾಗಿ ದೂರದ ಅಮೆರಿಕದಲ್ಲಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಬಡವರು, ದೀನ ದಲಿತರು, ಶೋಷಿತರು, ಪರಿಶಿಷ್ಟರು, ಬುಡಕಟ್ಟು ಸಮುದಾಯದವರ ವಿರೋಧಿ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು?” ಎಂದು ಬಿಜೆಪಿ ಕರ್ನಾಟಕ ತನ್ನ ಎಕ್ಸ್‌ ( ಈ ಹಿಂದಿನ ಟ್ವಿಟರ್‌)ನಲ್ಲಿ ಎಡಿಟೆಡ್‌ ವಿಡಿಯೋದೊಂದಿಗೆ ಹಂಚಿಕೊಂಡಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೇ…

Read More

Fact Check | ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳ ಕಾಲ ಚೀನಾ ಉತ್ಪನ್ನಗಳನ್ನು ಬಳಸಬೇಡಿ ಎಂದು ಹೇಳಿಲ್ಲ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಅದರ ಪ್ರಕಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 90 ದಿನಗಳ ಕಾಲ ವಿದೇಶಿ ವಸ್ತುಗಳನ್ನು, ವಿಶೇಷವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಖರೀದಿಸದಂತೆ ಭಾರತದ ಜನರನ್ನು ಒತ್ತಾಯಿಸಿದ್ದಾರೆ. ಈ ಪೋಸ್ಟ್‌ನ ಪ್ರಕಾರ, ಎಲ್ಲಾ ಭಾರತೀಯರು ಹೀಗೆ ಚೀನಾ ಉತ್ಪನ್ನಗಳನ್ನು ಖರೀದಿ ಮಾಡದಿದ್ದರೆ, ಭಾರತವು ವಿಶ್ವದ ಎರಡನೇ ಶ್ರೀಮಂತ ರಾಷ್ಟ್ರವಾಗಬಹುದು ಮತ್ತು ಅದೇ ಸಮಯದೊಳಗೆ ಭಾರತೀಯ ರೂಪಾಯಿ ಮೌಲ್ಯವು 2 ರೂಪಾಯಿಗೆ ಒಂದು ಯುಎಸ್ ಡಾಲರ್‌ಗೆ ತಲುಪಬಹುದು. ಕಳೆದ ವರ್ಷ ದೀಪಾವಳಿ…

Read More
ಪಾಕಿಸ್ತಾನ

Fact Check: ಭೋಪಾಲ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಥಳಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅನೇಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಹಲವಾರು ಬಳಕೆದಾರರು ಈ ವೀಡಿಯೊ ಹಳೆಯದು ಮತ್ತು ಮಧ್ಯಪ್ರದೇಶದ ಭೋಪಾಲ್‌ನದು ಎಂದು ಗಮನಸೆಳೆದಿರುವುದನ್ನು ಗಮನಿಸಿದೆ. ಇದರ ಸೂಚನೆಯನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಸುಮಾರು ಎರಡು ವರ್ಷಗಳ ಹಿಂದಿನ…

Read More

Fact Check: ಪ್ರಧಾನಿ ಮೋದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಸುಳ್ಳು. ನೂರಕ್ಕೂ ಹೆಚ್ಚು ಬಾರಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಭಾಷಣ ಮಾಡಿದ್ದಾರೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದ ರೀಲ್ಸ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ” ಮೋದಿಯವರು ಒಂದೇ ಒಂದು ಬಾರಿಯೂ ಕೂಡ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂದು ಹೇಳಲಿಲ್ಲ! ಆದರೂ ಕೂಡ, ಒಬ್ಬನೇ ಒಬ್ಬ ಮುಸಲ್ಮಾನನು ಮೋದಿಜಿಯವರಿಗೆ ಓಟು ನೀಡುವುದಿಲ್ಲ. ಆದರೆ ರಾಹುಲ್ ಗಾಂಧಿಯವರು ಅನೇಕ ಸಲ ಹೇಳಿದ್ದಾರೆ! ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂದು. ಆದರೂ ಸಹ ಹಿಂದುಗಳು ರಾಹುಲ್ ಗಾಂಧಿಯವರಿಗೆ ಓಟು ಹಾಕುತ್ತಾರೆ. ಇದರಿಂದಲೇ ಹಿಂದೂಗಳು…

Read More

Fact Check | IPS ಅಧಿಕಾರಿ ಅನು ಬೆನಿವಾಲ್ ತಂದೆ ಕೂಡ IPS ಅಧಿಕಾರಿಯಾಗಿದ್ದರು ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ನಕಲಿ ಅಂಗವಿಕಲತೆ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಗ್ಗೆ ತರಬೇತಿ ಪಡೆದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧದ ಆರೋಪಗಳು ಹೆಚ್ಚಾಗುತ್ತಿವೆ. ಇದೇ ರೀತಿಯಲ್ಲಿ ” ಮಧ್ಯಪ್ರದೇಶ ಕೇಡರ್‌ನ 2022 ರ ಬ್ಯಾಚ್ ಐಪಿಎಸ್ ಅಧಿಕಾರಿ ಅನು ಬೇನಿವಾಲ್ ಅವರು ಐಪಿಎಸ್ ಅಧಿಕಾರಿಯ ಮಗಳಾಗಿದ್ದರೂ ಕೇಂದ್ರ ಸಾರ್ವಜನಿಕ ಸೇವೆಗಳಿಗೆ ಆಯ್ಕೆ ಮಾಡಲು EWS (ಆರ್ಥಿಕವಾಗಿ ದುರ್ಬಲ ವಿಭಾಗ) ಕೋಟಾವನ್ನು ಬಳಸಿದ್ದಾರೆ” ಎಂದು ಆರೋಪಿಸಲಾಗುತ್ತಿದೆ. Wasn't EWS quota introduced in 2019 fir inke…

Read More

Fact Check | ಅಫ್ಘಾನಿಸ್ತಾನ ಆಟಗಾರರು ‘ವಂದೇ ಮಾತರಂ’ ಹಾಡಿದ್ದಾರೆ ಎಂಬ ವಿಡಿಯೋ ಸುಳ್ಳು.!

ಪ್ರಸ್ತುತ ಭಾರೀ ಸದ್ದು ಮಾಡುತ್ತಿರುವ T-20 ಕ್ರಿಕೆಟ್ ವಿಶ್ವಕಪ್ ಹಲವು ರೋಚಕ ಕ್ಷಣಗಳಿಗೆ ಕಾರಣವಾಗುತ್ತಿದೆ. ಈ ಪಂದ್ಯವಾಳಿಗಳಲ್ಲಿ ಅಫ್ಘಾನ್ ಆಟಗಾರರು ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಟಿ- 20 ವಿಶ್ವಕಪ್‌ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಈ ನಡುವೆ “ಅಫ್ಘಾನಿಸ್ತಾನದ ಆಟಗಾರರು T-20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದ ನಂತರ ‘ವಂದೇ ಮಾತರಂ’ ಹಾಡಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಇರಬಹುದು ಎಂದು ಸಾಕಷ್ಟು…

Read More