Congress

ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಪಾಕಿಸ್ತಾನದ ಬಾವುಟ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಮತ್ತು ಪ್ರತೀದಿನವೂ ಒಂದೊಂದು ಸುಳ್ಳು ಆರೋಪಗಳನ್ನು ಹರಿಬಿಡುತ್ತಿದ್ದಾರೆ. ಈಗ, “ಇಲ್ಲ! ಇದು ಪಾಕಿಸ್ತಾನವಲ್ಲ, ಆದರೆ ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರು ಕೇರಳದ ತಮ್ಮ ತ್ರಿಶೂರ್ ಕ್ಷೇತ್ರದ ಒಂದು ನಿರ್ದಿಷ್ಟ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನೀವು ಭಾರತದ ಯಾವುದಾದರೂ ಒಂದು ರಾಷ್ಟ್ರೀಯ ಧ್ವಜವನ್ನು ಗುರುತಿಸಬಹುದೇ? ಇದು ‘ಭಾರತ್ ಜೋಡೋ’ ಸಿದ್ಧಾಂತವೇ?…

Read More

Fact Check: ತುಮಕೂರಿನಲ್ಲಿ ರಥ ಸುಟ್ಟ ಆರೋಪಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಇತ್ತೀಚೆಗೆ ಭಾರತದಲ್ಲಿ ಯಾವ ದುರ್ಘಟನೆ ಸಂಭವಿಸಿದರೂ ಪೂರ್ವಾಗ್ರಹಪೀಡಿತರಾಗಿ ಅದನ್ನು ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವ ಚಾಳಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಸಹ ಇದಕ್ಕೆ ಬೆಂಬಲವಿತ್ತು ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ, “ತುಮಕೂರು ಜಿಲ್ಲೆಯ ನಿಟ್ಟೂರಿನ 800 ವರ್ಷಗಳ ಇತಿಹಾಸ ಇರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಿಂದುಗಳು ಮೌನವಾದಷ್ಟು ಅವರ ಅಟ್ಟಹಾಸ ಜಾಸ್ತಿಯಾಗುತ್ತದೆ.” ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹರಿಬಿಡಲಾಗಿದೆ….

Read More

Fact Check | ಕನ್ನಡ ಸುದ್ದಿ ಮಾಧ್ಯಮಗಳಿಂದ ಶಾಲಾ ವೇಳಾಪಟ್ಟಿ ಬಗ್ಗೆ ಸುಳ್ಳು ಸುದ್ದಿ

“ರಂಜಾನ್ ಆಚಣೆಗಾಗಿ ಸರ್ಕಾರಿ ಶಾಲೆ ಸಮಯ ಬದಲಾವಣೆ, ರಂಜಾನ್ ತಿಂಗಳ ಆರಂಭದಿಂದ ಏಪ್ರಿಲ್ ಹತ್ರವರೆಗೆ ಅನ್ವಯವಾಗುವಂತೆ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕೆ ಶಾಲೆ ಸಮಯ ಚೇಂಜ್ ಎಂಬ ಸುದ್ದಿಯೊಂದು ವ್ಯಾಪಕವಾಗಿ ಹಬ್ಬುತ್ತಿದೆ, ಜೊತೆಗೆ ಕನ್ನಡದ ಸುದ್ದಿ ಮಾಧ್ಯಮಗಳಾದಂತಹ ಟಿವಿ9 ಕನ್ನಡ, ಸುವರ್ಣ ನ್ಯೂಸ್ ಸೇರಿದ ಹಾಗೆ ಹಲವು ದೃಶ್ಯ ಮಾಧ್ಯಮಗಳು ಕೂಡ ಇದೇ ಸುದ್ದಿಯನ್ನು ಬಿತ್ತರಿಸುವೆ” ಎಂಬ ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಂಬಿ ಸಾಕಷ್ಟು ಮಂದಿ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ…

Read More

Fact Check | ʼಬೇಟ್ ದ್ವಾರಕಾ’ ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿಲ್ಲ

” ‘ಬೇಟ್ ದ್ವಾರಕಾ’ದಲ್ಲಿರುವ ಎರಡು ದ್ವೀಪಗಳು ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿದೆ” ಎಂಬ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಲಾಗುತ್ತಿದೆ. ಇನ್ನು ಈ ಸುದ್ದಿ ನಿಜವೋ ಸುಳ್ಳೋ ಎಂದು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಗುಜರಾತ್‌ ವಕ್ಫ್‌ ಬೋರ್ಡ್‌ಗೆ ಭೂವಿವಾದದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ಇದೆ. ಆದರೆ ಇದು ನಿಜಕ್ಕೂ ಬೇಟ್‌ದ್ವಾರಕದ ದ್ವೀಪಗಳ ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನೋಡೋಣ…

Read More

Fact Check: ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸೇರಿದ ಜನಸಾಗರ ಎಂದು ಎಡಿಟೆಟ್ ಪೋಟೋಗಳ ಹಂಚಿಕೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಇದೇ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ಸಲುವಾಗಿ ಅನೇಕ ಸುಳ್ಳು ಪೋಟೋಗಳನ್ನು ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇದರಂತೆ, “ರಾಷ್ಟ್ರೀಯ ಜನತಾ ದಳ(RJD) ಪಕ್ಷವು ಪಾಟ್ನಾದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸೇರಿದ ಜನಸಾಗರ. ಇಂಡಿಯಾ ಒಕ್ಕುಟದ ಎಲ್ಲಾ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.” ಎಂದು ಪ್ರತಿಪಾಧಿಸಿ RJD ಪಕ್ಷದ ಹಲವು ರಾಜಕೀಯ ಮುಖಂಡರು ತಮ್ಮ X ಖಾತೆಯಲ್ಲಿ ಮೈದಾನವೊಂದರಲ್ಲಿ ಜನಗಳು ತುಂಬಿದ ಪೋಟೋವೊಂದನ್ನು ಹಂಚಿಕೊಳ್ಳುತ್ತಿದ್ದಾರೆ….

Read More
ನೆಹರೂ

Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್

ಜವಹರಲಾಲ್ ನೆಹರೂ ಅವರ ಕುರಿತು ಪ್ರತಿ ದಿನ ಒಂದಿಲ್ಲೊಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿರುತ್ತದೆ. ಕೆಲವು ಕಿಡಿಗೇಡಿಗಳು ಇತಿಹಾಸವನ್ನು ತಿರುಚುವ ಸಲುವಾಗಿ ಅನೇಕ ಅರೋಪಗಳನ್ನು ಮಾಡುತ್ತಿರುತ್ತಾರೆ. ನೆಹರು ಅವರ ಕುರಿತ ಇಂತಹ ಅನೇಕ ಆರೋಪಗಳನ್ನು ಹೀಗಾಗಲೇ ಬಯಲು ಮಾಡಲಾಗಿವೆ. ಅವುಗಳನ್ನು ನೀವು ಇಲ್ಲಿ ಓದಬಹುದು. ಈಗ, ಅಸಲಿಗೆ ನೆಹರು ಅವರು ಕೇವಲ 14 ದಿನ ಮಾತ್ರ ಜೈಲು ವಾಸ ಅನುಭವಿಸಿದ್ದು ಮತ್ತು ಅವರು ಸಹ ನಭಾ ಜೈಲಿನಿಂದ ಹೊರಬರಲು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು. ಎಂದು ಪ್ರತಿಪಾದಿಸಲಾಗುತ್ತಿದೆ. ಕನ್ನಡದ…

Read More

Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 16, 2024ರಂದು ತನ್ನ 15ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬೆನ್ನಲ್ಲೇ ದೇಶದ ಪ್ರಮುಖ ಸುದ್ದಿ ವಾಹಿನಿಗಳಲ್ಲೊಂದಾದ CNN ನೆಟ್ವರ್ಕ್ 18 ಸಲಹಾ ಸಂಪಾದಕ ರಾಹುಲ್ ಶಿವಶಂಕರ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿದ ಪೋಸ್ಟ್ ಒಂದು ತೀವ್ರ ಚರ್ಚೆಗೆ ಗುರಿಯಾಗಿದೆ. ತಮ್ಮ ಪೋಸ್ಟ್‌ನಲ್ಲಿ ಅವರು “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಬಜೆಟ್‌ನಲ್ಲಿ ವಕ್ಫ್‌ ಆಸ್ತಿಯ ಅಭಿವೃದ್ಧಿಗಾಗಿ, ಮಂಗಳೂರಿನಲ್ಲಿ ಹಜ್ ಭವನಕ್ಕಾಗಿ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ₹330ಕೋಟಿ ಮೀಸಲಿಟ್ಟಿದೆ. ಕರ್ನಾಟಕ…

Read More
ದೇವಸ್ಥಾನ

Fact Check: ದೇವಸ್ಥಾನದ ಹಣ ವಕ್ಫ್, ಕ್ರಿಶ್ಚಿಯನ್‌ಗೆ ದಾನ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಸುವರ್ಣ ನ್ಯೂಸ್

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2024ರ ಬಜೆಟ್ ಕುರಿತಾಗಿ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕರು ಈ ಬಾರಿಯ ಬಜೆಟ್ ಅತ್ಯಂತ ಕೆಟ್ಟ ಬಜೆಟ್, ಇದರಿಂದ ರಾಜ್ಯದ ಅಭಿವೃದ್ಧಿ ಶೂನ್ಯ ಎಂದು ಆರೋಪಿಸುತ್ತಿದ್ದರೆ, ಇನ್ನೂ ಹಲವರು ಎಲ್ಲಾ ಕ್ಷೇತ್ರಗಳಿಗೂ ಬಜೆಟ್ ಹಣವನ್ನು ಸಮರ್ಪಕವಾಗಿ ಬಳಸಿದ್ದಾರೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ  “ದೇವಸ್ಥಾನದ 500 ಕೋಟಿಯಲ್ಲಿ 330 ಕೋಟಿ ರೂ ವಕ್ಫ್, ಕ್ರಿಶ್ಚಿಯನ್‌ಗೆ ದಾನ, ಬಜೆಟ್ ವಿರುದ್ಡ ಆಕ್ರೋಶ! ಎಂಬ ತಲೆಬರಹದೊಂದಿಗೆ ಕನ್ನಡದ ಸುವರ್ಣ ನ್ಯೂಸ್ ವರದಿ ಮಾಡಿದ್ದು…

Read More
ಪ್ರೇಮಿ

Fact Check: ಫೆ. 14 ಪ್ರೇಮಿಗಳ ದಿನದಂದು ಭಗತ್ ಸಿಂಗ್ ಮತ್ತು ಸಂಗಡಿಗರನ್ನು ಗಲ್ಲಿಗೇರಿಸಲಾಯಿತು ಎಂಬುದು ಸುಳ್ಳು

ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿನ ಕೆಲವು ಮೂಲಭೂತವಾದಿಗಳು ಪ್ರೇಮಿಗಳ ದಿನ ಆಚರಿಸದಂತೆ ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಪ್ರೇಮಿಗಳ ದಿನ ಆಚರಣೆ ನಮ್ಮ ಹಿಂದು ಸಂಸ್ಕೃತಿಯ ಭಾಗ ಅಲ್ಲ, ಹಾಗಾಗಿ ಅಂದು ರಸ್ತೆಯಲ್ಲಿ, ಪಾರ್ಕ್‌ಗಳಲ್ಲಿ ಯಾರಾದರೂ ಪ್ರೇಮಿಗಳನ್ನು ಕಂಡರೆ ಅವರಿಗೆ ಮದುವೆ ಮಾಡಿಸುತ್ತೇವೆ ಎಂದು ಹಲ್ಲೆ ಕೂಡ ನಡೆಸಿರುವ ಉದಾಹರಣೆಗಳಿವೆ. ಈಗ, ಫೆಬ್ರವರಿ 14ರ ಈ ದಿನ ನಾವು ಕೇವಲ ನಮ್ಮ ಯೋಧರನ್ನು ಮಾತ್ರ ಕಳೆದುಕೊಂಡ ದಿನವಲ್ಲ 1931…

Read More
ಹಿಂದೂ

Fact check: ಹಿಂದೂ ದೇವಾಲಯಗಳ ಹಣವನ್ನು ಬೇರೆ ಧರ್ಮದ ದೇವಾಲಯಗಳಿಗೆ ಬಳಸಲಾಗುತ್ತಿದೆ ಎಂಬುದು ಸುಳ್ಳು

ನನ್ನ ತೆರಿಗೆ ನನ್ನ ಹಕ್ಕು ಹೋರಾಟ ಆರಂಭವಾದ ನಂತರ ಹಾಗಾದರೆ ಹಿಂದೂಗಳು ಹಿಂದೂ ದೇವಾಲಯಕ್ಕೆ ಹಾಕುವ ಹಣ ಹಿಂದೂಗಳಿಗೆ ಸೇರಬೇಕಲ್ಲವೇ? ಭಿನ್ನ ಧರ್ಮದ ದೇವಾಲಯಗಳಿಗೆ ಏಕೆ ಕೊಡಬೇಕು? ಎಂದು ಹಲವಾರು ಜನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹ, “ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗ ಆಗಬೇಕು. ಹಿಂದುಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದುಗಳಿಗೆ ಆಗುವ ಅನ್ಯಾಯ. ಹಿಂದೂಗಳ…

Read More