Fact Check | ಗ್ಯಾರಂಟಿ ಯೋಜನೆಯ ಹಣ ಕೇಳಿದ ಮಹಿಳೆಯನ್ನು ದಿಗ್ವಿಜಯ ಸಿಂಗ್‌ ಓಡಿಸಿದ್ದಾರೆ ಎಂಬುದು ಸುಳ್ಳು

“ಗ್ಯಾರಂಟಿ ಯೋಜನೆಯ ಹಣ ಕೇಳಲು ಬಂದ ಮಹಿಳೆಯೊಬ್ಬರನ್ನು ಕಾಂಗ್ರೆಸ್‌ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರು ನಿಂದಿಸಿ ಕಳುಹಿಸಿದ್ದಾರೆ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. https://twitter.com/Modified_Hindu9/status/1800441400271704393 ಇನ್ನು ದಿಗ್ವಿಜಯ್ ಸಿಂಗ್‌ ತನ್ನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯನ್ನು ಓಡಿಸುವಂತೆ ತನ್ನ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹಾಗೆಯೇ ‘ಈ ಮಹಿಳೆಗೆ…

Read More
ಮಾಧವಿ ಲತಾ

Fact Check: ಚುನಾವಣಾ ಸೋಲಿನ ನಂತರ ಮಾಧವಿ ಲತಾ ಮುಸ್ಲಿಮರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಧವಿ ಲತಾ ಅವರು ಭಾರತೀಯ ಮುಸ್ಲಿಮರು ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂದು ಹೇಳುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ತಾನು ಈ ಹಿಂದೆ ಅವಮಾನಿಸಿದ ಸಮುದಾಯದ ಬಗ್ಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋ ವೈರಲ್ ಆಗಿದೆ. ಮಾಧವಿ ಲತಾ ಅವರು AIMIMನ ಅಸಾದುದ್ದೀನ್ ಓವೈಸಿ ವಿರುದ್ಧ ಹೈದರಾಬಾದ್‌ನಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 3,38,087 ಮತಗಳ…

Read More
ಕಂಗನಾ ರನೌತ್

Fact Check: ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ CISF ಕಾನ್‌ಸ್ಟೆಬಲ್ ಜೊತೆ ಗಾಂಧಿ ಕುಟುಂಬ ಪೋಟೋ ತೆಗೆಸಿಕೊಂಡಿಲ್ಲ

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದು ಕೆಲವು ದಿನಗಳ ನಂತರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆ ಮಹಿಳೆಯೊಂದಿಗೆ ಚಿತ್ರ ತೆಗೆಸಿಕೊಂಡಿರುವ ಪೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. ಗಾಂಧಿ ಕುಟುಂಬದೊಂದಿಗೆ ಪೋಸ್ ನೀಡುತ್ತಿರುವ ಮಹಿಳೆ ರನೌತ್‌ಗೆ ಕಪಾಳ ಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಎಂದು ಹೇಳಲಾಗುತ್ತಿದೆ.  ಹಿಂದಿಯಲ್ಲಿ ಚಿತ್ರದೊಂದಿಗೆ ಶೀರ್ಷಿಕೆ ಹೀಗಿದೆ:…

Read More

Fact Check | ಕೇರಳದ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕ ಕೆ.ಸಿ ವೇಣುಗೋಪಲ್‌ ಕುಡಿದಿದ್ದು ಬ್ಲ್ಯಾಕ್‌ ಟೀ ಹೊರತು ವಿಸ್ಕಿ ಅಲ್ಲ

“ನಿನ್ನೆ ರಾಹುಲ್‌ ಗಾಂದಿ ಅವರು ಕೇರಳಕ್ಕೆ ತೆರಳಿದ್ದರು, ಈ ವೇಳೆ ಅವರು ಕೇರಳದ ವೈಟ್‌ ಹೌಸ್‌ ಎಂಬ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಖಾದ್ಯಗಳನ್ನು ತಯಾರಿಸುವ ವಿಧಾನ ಮತ್ತು ಅಲ್ಲಿನ ಕೆಲಸದವರನ್ನು ಮಾತನಾಡಿಸಿದ್ದಾರೆ. ಬಳಿಕ ಅಲ್ಲೇ ಆಹಾರವನ್ನು ಸೇವಿಸಿದ ಅವರು ತಮ್ಮ ಜೊತೆಗಿದ್ದ ಕೆ.ಸಿ. ವೇಣುಗೋಪಲ್‌ ಅವರಿಗೆ ಐಸ್‌ಕ್ರೀಮ್‌ ನೀಡಲು ಮುಂದಾಗಿದ್ದಾರೆ. ಆದರೆ ಕೆ.ಸಿ ವೇಣುಗೋಪಲ್‌ ಮದ್ಯವನ್ನು ಸೇವಿಸುತ್ತಿದ್ದಾರೆ. ಬಳಿಕ ಮದ್ಯ ಸೇವನೆಗೆ ರಾಹುಲ್‌ ಗಾಂಧಿ ಅನುವು ಮಾಡಿಕೊಟ್ಟಿದ್ದಾರೆ.”  ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ….

Read More
ಸಂವಿಧಾನ

Fact Check: ಕಾಂಗ್ರೆಸ್ ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದೆ ಎಂಬುದು ಸುಳ್ಳು

“ಬಿಜೆಪಿ 400ಕ್ಕೂ ಅಧಿಕ ಸೀಟುಗಳನ್ನು ಗೆದ್ದರೆ ಅವರು ಸಂವಿಧಾನವನ್ನೇ ಬದಲಿಸುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ರಿಯಾಲಿಟಿ ಏನೆಂದರೆ ಜವಹರಲಾಲ ನೆಹರೂ 17 ಬಾರಿ ಸಂವಿಧಾನ ಬದಲಿಸಿದ್ದಾರೆ. ಇಂದಿರಾಗಾಂಧಿ  28 ಸಲ ಬದಲಿಸಿದ್ದು, ರಾಜೀವ್ ಗಾಂಧಿ 10 ಸಲ ಬದಲಿಸಿದ್ದು, ಮನಮೋಹನ್ ಸಿಂಗ್/ಸೋನಿಯಾ ಗಾಂಧಿ 7 ಸಲ ಬದಲಿಸಿದ್ದಾರೆ.  ಮಣ್ಣು ತಿನ್ನೋ ಕೆಲಸ ಮಾಡೋದು ಕಾಂಗ್ರೆಸ್ಸಿಗರು.. ಅಪವಾದ ಹಾಕೋದು ಮಾತ್ರ ಬಿಜೆಪಿ ಮೇಲೆ..! ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು…

Read More
ಕಾಂಗ್ರೆಸ್

Fact Check: ಬ್ಯಾಂಕ್‌ನ ಹೊರಗೆ ಮಹಿಳೆಯರು  ಕಾಯುತ್ತಿರುವ  ಹಳೆಯ ವೀಡಿಯೋವನ್ನು ಕಾಂಗ್ರೆಸ್‌ನ ಗ್ಯಾರಂಟಿ ಹಣಕ್ಕಾಗಿ ನಿಂತಿದ್ದಾರೆ ಎಂದು ತಪ್ಪಾಗಿ ಹಂಚಿಕೆ

ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಇಂಡಿಯಾ ಒಕ್ಕುಟ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪರಿಚಯಿಸುವ ಬಗ್ಗೆ ಮಾತನಾಡಿದ್ದರು. ಖಾತೆಗಳಲ್ಲಿ ಜಮಾ ಆಗುತ್ತಿರುವ ಹಣದ ಕುರಿತು ಮಾತನಾಡುವಾಗ, ಉದ್ಯೋಗದ ಜೊತೆಗೆ ಫಲಾನುಭವಿಗಳು ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು “ಖಾತಾ-ಖಾತ್, ಖಾತಾ-ಖಾತ್, ಖಾತಾ-ಖಾತ್” ಎಂದು ಹಿಂದಿಯಲ್ಲಿ ತಕ್ಷಣವೇ ಪಡೆಯುತ್ತಾರೆ ಎಂದು ರಾಹುಲ್ ಹೇಳಿದ್ದರು. ಇದೇ ಮಹಾಲಕ್ಷ್ಮಿ ಯೋಜನೆಯ…

Read More

Fact Check: ಇತ್ತೀಚೆಗೆ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ ಎಂದು ಹಳೆಯ ವೀಡಿಯೋ ಹಂಚಿಕೆ

ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲು ಕ್ಷಣಗಣನೆ ಆರಂಭವಾಗಿದೆ. ಎನ್‌ಡಿಎ ಮೈತ್ರಿ ಪಕ್ಷಗಳ ಮುಖಂಡರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಆದರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ತೇಜಸ್ವಿ ಯಾದವ್ ಸೇರಿದಂತೆ INDIA ಒಕ್ಕೂಟದ ನಾಯಕರೊಂದಿಗೆ JD(U) ಮುಖ್ಯಸ್ಥ ಮತ್ತು NDA ಮಿತ್ರ ನಿತೀಶ್ ಕುಮಾರ್ ಅವರು ಭೇಟಿಯಾಗಿದ್ದಾರೆ ಎಂದು ವೀಡಿಯೊವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಅನೇಕರ ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ,…

Read More

ಗಾಂಧಿ ಸಿನಿಮಾ ಬಿಡುಗಡೆಗೂ ಮುನ್ನ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು

ಲೋಕಸಭಾ ಚುನಾವಣೆಯ ಅಂಗವಾಗಿ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ಮೋದಿಯವರು “ಗಾಂಧಿ ಸಿನಿಮಾ ಬಿಡುಗಡೆಯಾಗುವವರೆಗೂ ಮಹಾತ್ಮ ಗಾಂಧಿಯವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ.  ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಜಗತ್ತು ಮಹಾನ್ ನಾಯಕನ ಬಗ್ಗೆ ಜಾಗೃತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಭಾರತೀಯ ರಾಜಕೀಯ ನಾಯಕರ ಜವಾಬ್ದಾರಿಯಾಗಿದೆ. ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರು ವಿಶ್ವಾದ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದರೆ, ಮಹಾತ್ಮ ಗಾಂಧಿಯನ್ನು ವಿಶ್ವಪ್ರಸಿದ್ಧ ವ್ಯಕ್ತಿಯಾಗಿ ಮಾಡಲು ಭಾರತವು ಉತ್ತಮವಾಗಿ ‘ಕೆಲಸ’ ಮಾಡಬೇಕಿತ್ತು ಎಂದು ವಿಶ್ವವನ್ನು ಸುತ್ತಿದ…

Read More
ವಾರಣಾಸಿ

Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

“ಈ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯದು” ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು.  ಈಗ, ‘ಸಲೀಂ…

Read More

Fact Check | ಪಾಯಲ್‌ ಕಪಾಡಿಯಾ ಅವರ ಹೆಸರಿನಲ್ಲಿ ನಕಲಿ ಎಕ್ಸ್‌ (ಟ್ವಿಟರ್‌) ಖಾತೆ ಸೃಷ್ಟಿ

ಪಾಯಲ್​ ಕಪಾಡಿಯಾ ಅವರಿಗೆ ಕಾನ್​ ಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್​ ಪ್ರಿಕ್ಸ್​’ ಪ್ರಶಸ್ತಿ ನೀಡಲಾಗಿದೆ. ‘ಆಲ್​ ವಿ ಇಮ್ಯಾಜಿನ್​ ಆಯಸ್​ ಲೈಟ್​’ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು, ಇದೇ ವೇಳೆಯಲ್ಲಿ ಅವರ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ಖಾತೆ ಚರ್ಚೆಗೆ ಕಾರಣವಾಗಿದೆ. ಕಾರಣ ಪಾಯಲ್‌ ಕಾಪಾಡಿಯಾ ಅವರ ಟ್ವಿಟರ್‌ ಖಾತೆಯಲ್ಲಿ ಯಾವುದು ನಿಜವಾದ ಖಾತೆ ಮತ್ತು ಯಾವುದು ನಕಲಿ ಖಾತೆ ಎಂಬ ಮಾಹಿತಿ ಸಿಗದೆ, ಹಲವು ಗಣ್ಯವ್ಯಕ್ತಿಗಳು ಸೇರಿದಂತೆ, ಚಿತ್ರರಂಗದ ನಟ-ನಟಿಯರಲ್ಲೂ ಕೂಡ ಗೊಂದಲವನ್ನು ಉಂಟು ಮಾಡಿದೆ….

Read More