Fact Check : ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು
ಮಹಿಳೆಯೊಬ್ಬಳು ಹಿಜಾಬ್ ಧರಿಸದೆ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸುತ್ತುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ನ ವಾಯ್ಸ್ ಆಫ್ ಹಿಂದೂಸ್ ಎಂಬ ಖಾತೆಯಲ್ಲಿ ” ಯಾವುದೇ ಹಿಂದೂ ಹುಡುಗಿ ಹಿಜಾಬ್ ಧರಿಸದೆ ಬಾಂಗ್ಲಾದೇಶದಲ್ಲಿ ನಡೆದಾಡಲು ಸಾಧ್ಯವಿಲ್ಲ. ಮಹಮ್ಮದ್ ಯೂನಸ್‌ರ ಹೊಸ ಬಾಂಗ್ಲಾದೇಶಕ್ಕೆ ಸುಸ್ವಾಗತ, ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರವಾಗಿ ಯಾರೂ ನಿಲ್ಲುವುದಿಲ್ಲ. ಇದು ಅತ್ಯಂತ ಭಯಾನಕವಾದ ದೃಶ್ಯವಾಗಿದ್ದು, ನಾವೆಲ್ಲರೂ #SaveBangladesiHindus ಎಂದು ಮಾತನಾಡಬೇಕಾಗಿದೆ. ” ಗುಂಪೊಂದು…