ಬ್ರಾಹ್ಮಣರು

ಅಂಬೇಡ್ಕರ್‌ರವರಿಗೆ ಪ್ರತಿ ಹಂತದಲ್ಲಿ ಬ್ರಾಹ್ಮಣರು ಸಹಾಯ ಮಾಡಿದ್ದಾರೆ ಎಂಬುದು ಸುಳ್ಳು

ಜಗತ್ತು ಕಂಡ ಶೋಷಿತರ ಪರವಾಗಿನ ಅಪ್ರತಿಮ ಹೋರಾಟಗಾರ, ಮಹಾನ್ ಜ್ಞಾನಿ, ವಿದ್ವಾಂಸ, ಭಾರತದ ಸಂವಿಧಾನದ ಕತೃ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್‌ರವರ ಕುರಿತು ಹಲವು ಸುಳ್ಳು ಸುದ್ದಿಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದಲಿತ ಸಮುದಾಯದಲ್ಲಿ ಹುಟ್ಟಿ, ತನ್ನ ಸ್ವಂತ ಪರಿಶ್ರಮದಿಂದ ಓದಿ, ವಿದ್ವತ್ ಗಳಿಸಿ, ಸತತ ಕೆಲಸಗಳ ಮೂಲಕ ಶೋಷಿತರ ವಿಮೋಚಕರಾದ ಅಂಬೇಡ್ಕರ್‌ರವರನ್ನು ವಿರೋಧಿಸುವ ಒಂದು ವರ್ಗ ಇರುವುದು ನಿಮಗೆಲ್ಲ ಗೊತ್ತಿದೆ. ಅಂತವರು ಸೃಷ್ಟಿಸಿದ ಸುಳ್ಳು ಸುದ್ದಿಗಳು ಮತ್ತು ಅದರ ಹಿಂದಿನ ವಾಸ್ತವವನ್ನು ತಿಳಿಯೋಣ. ಅಂಬೇಡ್ಕರ್‌ರವರ…

Read More

Fact Check: ನ್ಯೂಯಾರ್ಕ್‌ನಲ್ಲಿ ಇಸ್ರೇಲ್‌ ವಿರುದ್ಧ ಯಹೂದಿಗಳ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ಪ್ರಾರಂಭವಾದ ನಂತರ ಸಾಕಷ್ಟು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವಿಪರೀತವಾಗಿ ಹಬ್ಬುವುದಕ್ಕೆ ಪ್ರಾರಂಭವಾಗಿದೆ., ಹೀಗಾಗಿ ಈ ಯುದ್ಧದ ಕುರಿತು ಯಾವ ಸುದ್ದಿಯನ್ನು ನಂಬಬೇಕು ಮತ್ತು ನಂಬಬಾರದು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಮನೆ ಮಾಡಿದೆ. ಇದೇ ರೀತಿಯಾಗಿ, “ಇತ್ತೀಚಿಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇಸ್ರೇಲ್ ವಿರುದ್ಧ ಸಾವಿರಾರು ಯಹೂದಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಯಹೂದಿಗಳೇ ಒತ್ತಾಯಿಸಿದ್ದಾರೆ., ಈ ಪ್ರತಿಭಟನೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ.” ಎಂಬ ಸುದ್ದಿ…

Read More

ಬಿಜೆಪಿಯು 3 ತಿಂಗಳ ಉಚಿತ ರೀಚಾರ್ಜ್‌ ನೀಡುತ್ತಿದೆ ಎಂಬುದು ಸುಳ್ಳು, ವಂಚನೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನರೆಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿ 3 ತಿಂಗಳ ಫ್ರೀ ರೀಚಾರ್ಜ್ ಮಾಡಿಸುತ್ತಿದೆ. ಅಕ್ಟೋಬರ್ 15, 2024 ಕೊನೆಯ ದಿನಾಂಕವಾಗಿದೆ ಎಂಬ ಸಂದೇಶವೊಂದು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್: ವಾಟ್ಸಾಪ್ ನಲ್ಲಿ ಬಂದ ಸಂದೇಶದ ಕೊನೆಯಲ್ಲಿರುವ ವೆಬ್‌ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ Website Status Suspicious ಎಂಬ ಎಚ್ಚರಿಕೆ ಕಾಣುತ್ತದೆ. ಆದರೂ ಪರವಾಗಿಲ್ಲ ಮುಂದುವರೆಯಿರಿ ಎಂಬುದರ ಮೇಲೆ ಒತ್ತಿದ್ದಾಗ 404 error…

Read More

Fact Check : ಕೇರಳದಲ್ಲಿ ನಡೆದ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆಯಲ್ಲಿ ಇಟಲಿ ಧ್ವಜ ಪ್ರದರ್ಶನವಾಗಿಲ್ಲ

ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕೇರಳ ಕುರಿತು ಮತ್ತು ಅಲ್ಲಿನ ರಾಜಕೀಯ ಪಕ್ಷಗಳ ಕುರಿತು ಹೆಚ್ಚು ಸುಳ್ಳು ಸುದ್ದಿಗಳು ಹರಡುವುದಕ್ಕೆ ಪ್ರಾರಂಭವಾಗೊದೆ ಇದೇ ರೀತಿಯಾಗಿ “ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಪ್ಯಾಲೆಸ್ಟೈನ್ ಧ್ವಜದ ಬದಲು ಇಟಲಿ ಧ್ವಜವನ್ನು ಪ್ರದರ್ಶಿಸಲಾಗಿದೆ. ಪ್ರತಿಭಟನಾಕಾರರಿಗೆ ಪ್ಯಾಲೆಸ್ಟೈನ್ ಧ್ವಜ ಮತ್ತು ಇಟಲಿ ಧ್ವಜದ ನಡುವೆ ಇರುವ ವ್ಯತ್ಯಾಸ ಗೊತ್ತಿಲ್ಲದಂತಾಗಿದೆ.” ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ ಈ ಕುರಿತು ಸತ್ಯಾಸತ್ಯತೆಯನ್ನ ಪರಿಶೀಲಿಸಿದಾಗ ಕೇರಳದಲ್ಲಿ…

Read More
ಪಿಂಚಣಿ

ಗಾಂಧೀಜಿಯವರು ಬ್ರಿಟೀಷರಿಂದ ತಿಂಗಳಿಗೆ 100 ರೂ. ಪಿಂಚಣಿ ಪಡೆಯುತ್ತಿದ್ದರು ಎಂಬುದು ಸುಳ್ಳು

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕುರಿತು ಸದಾ ಒಂದಿಲ್ಲೊಂದು ಸುಳ್ಳು ಸುದ್ದಿಗಳು ಭಾರತದಾದ್ಯಂತ ಇಂದಿಗೂ ಈ ಕ್ಷಣಕ್ಕೂ ಹರಿದಾಡುತ್ತಲೇ ಇರುತ್ತವೆ.  ಬಹುಶಃ ಸ್ವತಂತ್ರ್ಯ ಚಳುವಳಿಯ ಪ್ರಮುಖ ನಾಯಕರಲ್ಲಿ ಗಾಂಧೀಜಿಯವರ ಕುರಿತು ಹರಿದಾಡಿದಷ್ಟು ಸುಳ್ಳುಗಳು ಮತ್ತೊಬ್ಬರದಿಲ್ಲ. ಇತ್ತೀಚೆಗೆ ಗಾಂಧಿಜಿಯವರ ಕುರಿತು ಇನ್ನೊಂದು ಸುದ್ದಿ ಹರಿದಾಡುತ್ತಿದ್ದು, ಅದು 1930 ರಲ್ಲಿ ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದಾಗ ಮಹಾತ್ಮಾ ಗಾಂಧಿಯವರು ತಮ್ಮ ವೈಯಕ್ತಿಕ ನಿರ್ವಹಣೆಗಾಗಿ 100 ರೂಪಾಯಿ ಪಿಂಚಣಿ ಅಥವಾ ಭತ್ಯೆಯನ್ನು ಪಡೆಯುತ್ತಿದ್ದರು ಎಂಬ ಸುಳ್ಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಾ. ವಿಕ್ರಮ್ ಸಂಪತ್…

Read More

Fact Check : ಡಿವ್‌ ಕಂಪನಿಯ ನೀರು ಕುಡಿದು ತಾಂಜೇನಿಯದಲ್ಲಿ 160 ಮಂದಿ ಸಾವನಪ್ಪಿಲ್ಲ.!

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿವೆ. ಇಂತಹ ಸುಳ್ಳು ಸುದ್ದಿಗಳು ಜನರ ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿವೆ. ಅಂತಹ ಸುಳ್ಳು ಸುದ್ದಿಯಲ್ಲಿ “ಡಿವ್‌ ಕಂಪನಿಯ ನೀರು ಅಪಾಯಕಾರಿಯಾಗಿದೆ. ಈ ಕಂಪನಿಯ ನೀರು ಕುಡಿದು ತಾಂಜೇನಿಯದಲ್ಲಿ 160ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ದಯವಿಟ್ಟು ಈ ಕಂಪನಿಯ ಬಾಟಲಿ ನೀರನ್ನು ಯಾರೂ ಕುಡಿಯಬೇಡಿ.” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್‌ ಆಗಿದೆ. Fact Check : ಅಸಲಿಗೆ ಈ ಸುದ್ದಿಯ ಕುರಿತು ಫ್ಯಾಕ್ಟ್‌…

Read More

Fact Check: ಪ್ಯಾಲೆಸ್ಟೈನ್ ಮಗುವಿನ ಮೃತದೇಹವೆಂದು ಬೊಂಬೆಯನ್ನು ತೋರಿಸಿಲ್ಲ

ಹಮಾಸ್ ನವರು ಇಸ್ರೇಲ್ ದಾಳಿಯಿಂದ ಸತ್ತ ಪ್ಯಾಲೆಸ್ಟೈನ್ ಮಗು ಎಂದು ಹರಿಬಿಟ್ಟ ವಿಡಿಯೋದಲ್ಲಿರುವುದು ಬೊಂಬೆ. ಮಗುವಿನ ಗೊಂಬೆ! ನಿಜವಾದ ಮಗುವಿನ ಮೃತದೇಹವಲ್ಲ ಎಂದು ಪ್ರತಿಪಾದಿಸಿ ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್‌: ಅಕ್ಟೋಬರ್ 12, 2023ರಂದು ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಆರನೇ ದಿನ, ಇಸ್ರೇಲ್ ಗಾಜಾ ನಗರದ ಮೇಲೆ ವೈಮಾನಿಕ ದಾಳಿಯನ್ನು(ಏರ್ ಸ್ರೈಕ್) ನಡೆಸಿತು. ಇದೇ ಸಂದರ್ಭದಲ್ಲಿ ಬಲಿಯಾದ ಸಂತ್ರಸ್ತರ ಅಂತ್ಯಕ್ರಿಯೆಯ ಸಮಯದಲ್ಲಿ…

Read More

ರೈತನ ಕಾಲಿನಿಂದ ಒದ್ದ ಕಾಂಗ್ರೆಸ್ ಶಾಸಕನ ವಿಡಿಯೋ ರಾಜಸ್ತಾನದ್ದು, ಕರ್ನಾಟಕದ್ದಲ್ಲ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ವ್ಯಾಪಕವಾಗಿ ಸುಳ್ಳು ಸುದ್ದಿಗಳನ್ನ ಹೆಚ್ಚು ಹೆಚ್ಚು ಹಬ್ಬಿಸಲಾಗುತ್ತಿದೆ.. ಇದೀಗ ಇಂತಹದ್ದೇ ಸುಳ್ಳು ಸುದ್ದಿಯೊಂದು ರಾಜ್ಯ ರಾಜಕಾರಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಸದ್ದು ಮಾಡುತ್ತಿದೆ ಆ ಸುಳ್ಳು ಸುದ್ದಿಯಲ್ಲಿ “ಬಡ ರೈತನನ್ನು ಕಾಲಲ್ಲಿ ಒದ್ದ ಕಾಂಗ್ರೆಸ್‌ ಶಾಸಕ, ಕಾಂಗ್ರೆಸ್‌ಗೆ ಓಟು ಹಾಕಿ ಮೋಸ ಹೋದ ಜನ, ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೇ ರಾಜ್ಯಕ್ಕೆ ಅಪಾಯ” ಎಂಬ ರೀತಿಯ ಹಲವು ತಲೆ ಬರಹಗಳೊಂದಿಗೆ ಒಂದೇ ವಿಡಿಯೋವನ್ನ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿದ ಸಾಕಷ್ಟು ಮಂದಿ  ಇದು…

Read More

Fact Check: ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ ಎಂಬುದು ಸುಳ್ಳು

ಸೋನಿಯಾಗಾಂಧಿ ವಿಶ್ವದ ನಾಲ್ಕನೆ ಶ್ರೀಮಂತ ವ್ಯಕ್ತಿ/ರಾಜಕಾರಣಿ ಮತ್ತು ಬ್ರಿಟನ್ ರಾಣಿಗಿಂತ ಹೆಚ್ಚು ಶ್ರೀಮಂತೆ. ಸೋನಿಯಾರವರ ಒಟ್ಟು ಆಸ್ತಿ ಮೊತ್ತ 12 ಸಾವಿರ ಕೋಟಿ. ಎಂಬ ಸುದ್ದಿಯೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪ್ಯಾಕ್ಟ್‌ಚೆಕ್: 2021 ರ ʼಪೋರ್ಬ್ಸ್‌ʼ ಸಂಸ್ಥೆ ಬಿಡುಗಡೆ ಮಾಡಿದ ಪ್ರಪಂಚದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೋನಿಯಾಗಾಂಧಿ ಹೆಸರು ಇಲ್ಲ. ಇನ್ನೂ ‘ಬಿಜೆನೆಸ್‌ ಇನ್ಸೈಡರ್‌’ ನವರು ಬಿಡುಗಡೆ ಮಾಡಿದ ‘Top 10 Richest women in India’ ಪಟ್ಟಿಯಲ್ಲಿಯೂ…

Read More

Fact Check : ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಪ್ರತಿ 15 ವರ್ಷಗಳಿಗೊಮ್ಮೆ ವಿಗ್ರಹದ ಮುಖವನ್ನು ತೋರಿಸಲಾಗುತ್ತದೆ ಎಂಬುದು ಸುಳ್ಳು

ಇತ್ತೀಚೆಗಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ಮತ್ತು ಧಾರ್ಮಿಕ ವಿಚಾರದಲ್ಲಿ ಹಲವು ರೀತಿಯಾದ ಸುಳ್ಳು ಸುದ್ದಿಗಳು ಮತ್ತು ನಕಲಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯಾಗಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿಯ ವಿಗ್ರಹವನ್ನು ಪ್ರತೀ 15 ವರ್ಷಗಳಿಗೊಮ್ಮೆ ಮಾತ್ರ ದೇವಿಯ ಮುಖವನ್ನು ಅನಾವರಣಗೊಳಿಸಲಾಗುತ್ತದೆ ಎಂದು ವೀಡಿಯೊದೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು. ಇದು ನಿಜ ಎಂದು ಭಾವಿಸಿದ ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದಾರೆ. Fact Check : ಇನ್ನು ಈ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ…

Read More