Fact Check : Sir ಎಂಬುದರ ಪೂರ್ಣ ರೂಪ Slave I Remember (ನಾನು ಗುಲಾಮ ಮರೆಯದಿರಿ) ಎಂದಲ್ಲ

Sir ಎಂಬ ಪದದ ನಿಜವಾದ ಅರ್ಥ Slave I Remember ಅಂದರೆ ನಾನು ಗುಲಾಮ ಮರೆಯದಿರಿ ಎಂಬ ಅರ್ಥವಿದೆ. ಬ್ರೀಟಿಷರು ತಮ್ಮ ಆಡಳಿತದ ಕಾಲದಲ್ಲಿ ಭಾರತೀಯರನ್ನು ಹೀಯಾಳಿಸುವ ಸಲುವಾಗಿ ಹೀಗೆ ಬಳಸುವಂತೆ ಮಾಡಿದ್ದಾರೆ ಎಂದು ಪ್ರತಿಪಾದಿಸಲಾಗಿರುವ  ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಈ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ Sir ಎಂಬುದರ ಪೂರ್ಣ ರೂಪ Slave I Remember ಎಂಬುದೇ ಅಥವಾ Slave I Remain ಎಂಬುದೇ ಎಂದು ಅಂತರ್ಜಾಲದಲ್ಲಿ ಹುಡುಕಿದಾಗಿದೆ. ಈ…

Read More

Fact Check : ಛತ್ತೀಸ್‌ಗಢ ಬಿಜೆಪಿ 2 ಲಕ್ಷ ರೂ ರೈತರ ಸಾಲ ಮನ್ನಾ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆ ರಾಜ್ಯದಲ್ಲಿ ರಾಜಕೀಯವಾಗಿ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿವೆ. ಅದೇ ರೀತಿಯಲ್ಲಿ ಇದೀಗ ಛತ್ತೀಸ್‌ಗಢದ ಬಿಜೆಪಿ ಪ್ರಣಾಳಿಕೆಯ ವಿಚಾರ ಸದ್ದು ಮಾಡುತ್ತಿದೆ ಅದರಲ್ಲಿ  “ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರು ಮತ್ತು ಸ್ವಸಹಾಯ ಸಂಘಗಳ ಸುಮಾರು 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಛತ್ತೀಸ್‌ಗಢ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದು ಅಲ್ಲಿನ ಚುನಾವಣೆಯ…

Read More
ಸಾರಾ ತೆಂಡುಲ್ಕರ್

ಒಟ್ಟಿಗೆ ಕಾಣಿಸಿಕೊಂಡ ಸಾರಾ ತೆಂಡುಲ್ಕರ್ ಮತ್ತು ಶುಬ್ಮನ್ ಗಿಲ್ ಎಂಬುದು ಸುಳ್ಳು

ಸೆಲೆಬ್ರಿಟಿಗಳ ಮಕ್ಕಳ ಕುರಿತು ಸದಾ ಒಂದಿಲ್ಲೊಂದು ಗಾಸಿಪ್‌ಗಳು, ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸುದ್ದಿ ಮಾಧ್ಯಮಗಳೆಂತು ಪ್ರತಿನಿತ್ಯ ಇಂತಹ ಹೊಸ ಗಾಸಿಪ್‌ಗಳ ಹಂಚುವಲ್ಲಿ ತೊಡಗಿಕೊಂಡಿವೆ. ಈಗ ಕ್ರಿಕೆಟ್‌ ದೇವರು ಎಂದೇ ಕರೆಯುವ ಸಚಿನ್ ತೆಂಡುಲ್ಕರ್‌ರವರ ಮಗಳ ಮೇಲೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. “ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಕ್ರಿಕೆಟರ್ ಶುಬ್ಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.” ಎಂಬ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಸಾರಾ ತೆಂಡುಲ್ಕರ್ 24 ಸೆಪ್ಟೆಂಬರ್…

Read More

Fact Check: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು

ಭಾರತದಲ್ಲೇ ಮೊಟ್ಟಮೊದಲ ಇಂಟರ್ಸಿಟಿ ಎಲೆಕ್ಟ್ರಾನಿಕ್ ಬಸ್ ಸೇವೆಯನ್ನು ಅಳವಡಿಸಿಕೊಂಡ ರಾಜ್ಯ ನಮ್ಮ ಕರ್ನಾಟಕ. “ಸ್ಮಾರ್ಟ್‌ ಸಿಟಿ” ಯೋಜನೆಯ ಅಡಿಯಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋಟೇಷನ್ ಕಾರ್ಪೋರೇಷನ್(BMTC)ಯು ಮೊದಲು 1 ಅಕ್ಟೋಬರ್  2021ರಲ್ಲಿ ತನ್ನ ಪ್ರಯೋಗಿಕ ಇ-ಬಸ್‌ ಸೇವೆಯನ್ನು ಬೆಂಗಳೂರಿನಲ್ಲಿ ನಡೆಸಿತ್ತು. ಇದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ್ದರು. ನಂತರ KSRTCಯು 16 ಜನವರಿ 2023ರಿಂದ ಇಂಟರ್ಸಿಟಿ ಇ-ಬಸ್‌ಗೆ ಚಾಲನೆ ನೀಡಲಾಗಿದ್ದು ಬೆಂಗಳೂರು-ಮೈಸೂರಿನ ಪ್ರಯಾಣಿಕರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಈ ಇ-ಬಸ್‌ ಯೋಜನೆಯ ಕುರಿತು ಜನರಿಂದ ಮೆಚ್ಚುಗೆ…

Read More
ಪಟಾಕಿ

ಫ್ಯಾಕ್ಟ್ ಚೆಕ್: ದೇಶಾದ್ಯಂತ ಪಟಾಕಿ ನಿಷೇಧ ಎಂದು ಸುಪ್ರೀಂ ಆದೇಶಿಸಿಲ್ಲ

ದೇಶಾದ್ಯಂತ ಪಟಾಕಿ ನಿಷೇಧಿಸಿ ಸುಪ್ರೀಂ ತೀರ್ಪು! ದೀಪಾವಳಿಗೂ ಮುನ್ನ ಮಹತ್ವದ ಆದೇಶ ಎಂಬ ಶೀರ್ಷಿಕೆಯಲ್ಲಿ ಕನ್ನಡದ ಹೊಸದಿಂಗತ, ನ್ಯೂಸ್ 18 ಕನ್ನಡ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಪ್ರಕಟಿಸಿವೆ. ಹಿಂದೂಗಳ ಹಬ್ಬಕ್ಕೆ ಮಾತ್ರ ನಿಷೇಧವೇಕೆ ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ನವೆಂಬರ್ 07 ರಂದು ದೆಹಲಿಯಲ್ಲಿ ಪಟಾಕಿ ನಿಷೇಧದ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ 2021ರ ಆದೇಶದಂತೆ ಬೇರಿಯಂ ಲವಣ ಮತ್ತು ನಿಷೇಧಿತ…

Read More

Fact Check : ತಾಯಿ ಜಿಂಕೆ ತನ್ನ ಮರಿಗಳನ್ನು ಉಳಿಸಲು ಚಿರತೆಗಳ ಕೈಗೆ ಸಿಲುಕಿ ಪ್ರಾಣ ತ್ಯಾಗ ಮಾಡಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋಗಳಿಗೂ ಹಾಗೂ ಅವುಗಳೊಂದಿಗೆ ಹಂಚಿಕೊಳ್ಳಲಾಗುವ ಸಾಕಷ್ಟು ವಿಚಾರಗಳಿಗೂ ಸಂಬಂಧವೇ ಇರುವುದಿಲ್ಲ. ಅಂತಹದ್ದೇ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಳೆದ 6 ವರ್ಷಗಳಿಂದ ವ್ಯಾಪಕವಾಗಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ  “ಚಿರತೆಗಳು ಒಂದು ತಾಯಿ ಜಿಂಕೆ ಮತ್ತು ಎರಡು ಮರಿಗಳನ್ನ ಬೆನ್ನಟ್ಟಿದ್ದವು, ತಾಯಿ ಜಿಂಕೆ ಆ ಚಿರತೆಗಿಂತ ವೇಗವಾಗಿತ್ತು. ಆದರೆ ಅದರ ಮಕ್ಕಳು ಅಷ್ಟು ವೇಗವಾಗಿರಲಿಲ್ಲ. ಆದ್ದರಿಂದ ಆ ತಾಯಿ ಜಿಂಕೆ ತನ್ನ ಎರಡು ಮಕ್ಕಳು ತಪ್ಪಿಸಲು ತನ್ನನ್ನು ತಾನೇ ಆ…

Read More

Fact Check : ಮಸೀದಿ ಭೂಮಿ ಮತ್ತು ಆರ್ಟಿಕಲ್‌ 370 ವಾಪಸ್ಸು ಪಡೆಯುತ್ತೇವೆ ಎಂದು ಕಮಲ್‌ ನಾಥ್‌ ಹೇಳಿಲ್ಲ

ಮಧ್ಯಪ್ರದೇಶ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಕಮಲ್‌ ಅವರ ಕುರಿತು ವ್ಯಾಪಕವಾದ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದು ಅಲ್ಲಿನ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚುನಾವಣೆ ಎದುರಾಗಲಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಲ್ ನಾಥ್ ಅವರು ಮುಸ್ಲಿಂ ಸಮುದಾಯದೊಂದಿಗೆ ಸಭೆ ನಡೆಸುತ್ತಿರುವುದನ್ನು ವಿಡಿಯೋದಲ್ಲೆ ಕಾಣಬಹುದಾಗಿದೆ. ಸಭೆಯಲ್ಲಿ ಕಮಲ್ ನಾಥ್ ಅವರು ಮುಸ್ಲಿಮರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ ಮತ್ತು ಮಸೀದಿ…

Read More

ಕಾಶ್ಮೀರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ

ಮಹಮದ್ ರಫಿ ಬರೆದಿದ್ದ ಕಾಶ್ಮಿರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಕಾರಣ ಪಾಕಿಸ್ತಾನ ಈ ಹಾಡನ್ನು ಬ್ಯಾನ್ ಮಾಡಿ ಭಾರತದಲ್ಲಿ ಎಂದು ಅಂದಿನ ಪ್ರಧಾನಿಗೆ ಮನವಿ ಮಾಡಿದ ಕಾರಣ ನಿಲ್ಲಿಸಲಾಗಿತ್ತು…. ಅದೆಂತ ಪ್ರೀತಿ ಪಾಕಿಸ್ತಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಪ್ರಶ್ನಿಸಿ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಈ ಹಿಂದಿ ಹಾಡಿನ ಮೊದಲ ಸಾಲು ‘ಜನ್ನತ್ ಕಿ ಹೈ ತಸ್ವೀರ್ ಯೇ’ ಎಂಬ…

Read More
ಕನ್ಹಯ್ಯ ಕುಮಾರ್

ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಕನ್ಹಯ್ಯ ಕುಮಾರ್ ಹೇಳಿಲ್ಲ

ಹಿಂದು ಧರ್ಮ ಕೆಟ್ಟದ್ದು, ಅಲ್ಲಾ ಶಕ್ತಿಶಾಲಿ: ಇಸ್ಲಾಮಿಗೆ ಮತಾಂತರ ಆಗಿ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು “ಕುತಂತ್ರಿ ಕನ್ಹಯ್ಯ ಕುಮಾರ್ ವಂಚನೆ ಬಯಲಾಗಿದೆ. ಹಿಂದೂ ಹೆಸರನ್ನು ಇಟ್ಟುಕೊಂಡು ಎಲ್ಲರ ಕಣ್ಣಗೆ ಮಣ್ಣು ಎರಚುತ್ತಿರುವ ಮುಲ್ಲಾ ಇವನು. ಅವನು ಒಬ್ಬ ದೇಶದ್ರೋಹಿ; ಅವರು(ಮೌಲಾನಾ ಅಬ್ದುಲ್ ಕಾಲಂ) ದೇಶದ ಅತಿದೊಡ್ಡ ದೇಶದ್ರೋಹಿ. ಮುಸ್ಲಿಮರ ರಹಸ್ಯ ಸಭೆಯಲ್ಲಿ ತಮ್ಮ ವಾಸ್ತವವನ್ನು ಹೇಳಿದ್ದಾರೆ. ಮುಸ್ಲಿಂ ಎಂಬ ಅವರ ಸ್ವಂತ ಹೇಳಿಕೆಯಿಂದ…

Read More

Fact Check : ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಗಾಜಾವನ್ನು ಬೆಂಬಲಿಸುವ ಪೋಸ್ಟ್‌ ಹಾಕಿದ್ದಾರೆ ಎಂಬುದು ಸುಳ್ಳು

ಭಾರತದ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು ಗಾಜಾವನ್ನು ಬೆಂಬಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವ್ಯಾಪಕವಾಗಿ ಹರಡಲಾಗುತ್ತಿದೆ. ಆ ಸುದ್ದಿಯನ್ನು ವ್ಯಾಪಾಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಆ ಪೋಸ್ಟ್‌ನ ತಲೆಬರಹದಲ್ಲಿ “ಕೊಹ್ಲಿ ತಮ್ಮ ಏಕದಿನ ಪಂದ್ಯದಲ್ಲಿ 49ನೇ ಶತಕದ ಸಿಡಿಸಿದ ನಂತರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ “ಇನ್‌ ಸಾಲಿಡರಿಟಿ ವಿಥ್‌ ಗಾಜಾ” ಎಂಬ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಪ್ಯಾಲೆಸ್ಟೈನ್‌ ಬೆಂಬಲಕ್ಕೆ ನಿಂತಿದ್ದಾರೆ.” ಎಂದು ಪೋಸ್ಟ್‌ನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸುದ್ದಿ ಮತ್ತು ಪೋಸ್ಟ್‌ನ ಕುರಿತು…

Read More