Fact Check | ಅದಾನಿ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲೆಬಾಗಿ ನಮಸ್ಕರಿಸಿದ್ದಾರೆ ಎಂಬುದು ಸುಳ್ಳು..!

ಸಾಮಾಜಿಕ ಜಾಲತಾಣದಲ್ಲಿ “ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಮುಂದೆ ತಲೆಬಾಗಿ ನಮಸ್ಕರಿಸಿದ್ದಾರೆ. ಪ್ರಧಾನಿ ಅವರು ಹೀಗೆ ನಮಸ್ಕರಿಸುತ್ತಿರುವುದು ರೈತ ಮಹಿಳೆಗೊ, ಯೋಧ ಮಹಿಳೆಗೊ ಅಲ್ಲ, ಬದಲಿಗೆ ಮೋದಿ ನಮಸ್ಕರಿಸುತ್ತಿರುವ ಮಹಿಳೆ ಖ್ಯಾತ ಉದ್ಯಮಿ ಅದಾನಿ ಅವರ ಪತ್ನಿ ಪ್ರೀತಿ” ಎಂದು ಮಹಿಳೆಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮಸ್ಕರಿಸಿರುವ ಫೋಟೋ ವೈರಲ್‌ ಆಗಿದೆ. ಇದನ್ನು ಸಾಕಷ್ಟು ಮಂದ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಯನ್ನು ಮಾಡುತ್ತಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ ಚೆಕ್‌  ನಡೆಸಿದಾಗ…

Read More

Fact Check | ರೋಹಿತ್‌ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬುದು ಸುಳ್ಳು.!

ಏಕದಿನ ವಿಶ್ವಕಪ್‌ ಕಿಕೆಟ್‌ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತ ತಂಡದ ಆಟಗಾರರ ಮೇಲೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅದರಲ್ಲೂ ಪ್ರಮುಖವಾಗಿ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಕುರಿತು ಹಲವು ರೀತಿಯಾದ ಸುಳ್ಳು ಸುದ್ದಿಗಳು ಹಬ್ಬಲು ಪ್ರಾರಂಭವಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿಯೆಂದರೆ ರೋಹಿತ್‌ ಶರ್ಮಾ ಅವರ ನಿವೃತ್ತಿ ವಿಚಾರ ಇದಕ್ಕೆ ಸಂಬಂಧ ಪಟ್ಟಂತೆ ಪೋಸ್ಟರ್‌ವೊಂದು ವೈರಲ್‌  ಕೂಡ ಆಗಿತ್ತು ಅದರಲ್ಲಿ “ಬ್ರೆಕಿಂಗ್‌ ನ್ಯೂಸ್‌…..

Read More

Fact Check | ವಿರಾಟ್‌ ಕೊಹ್ಲಿ ಪ್ರಧಾನಿ ಮೋದಿಯವರಿಗೆ Herbalife ಉಡುಗೊರೆ ನೀಡಿದ್ದಾರೆಂಬುದು ಸುಳ್ಳು

“ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಹೆರ್ಬಲೈಫ್‌ ಸಂಸ್ಥೆಯ ಭಾಗವಾಗಿದ್ದಾರೆ ಮತ್ತು ದಂಪತಿ ಸಮೇತವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಹೆರ್ಬಲೈಫ್‌ ಗಿಫ್ಟ್‌ ಬ್ಯಾಗ್‌ ಅನ್ನು ನೀಡಿದ್ದಾರೆ” ಎಂಬ ಉಲ್ಲೇಖದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ವರ್ಷಗಳಿಂದ ಫೋಟೋವೊಂದು ವೈರಲ್‌ ಆಗುತ್ತಿದೆ. ಈ ಫೋಟೋದಲ್ಲಿ ವಿರಾಟ್‌ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವುದು ಕಂಡು ಬಂದಿದ್ದು. ವಿರಾಟ್‌ ಕೊಹ್ಲಿ ದಂಪತಿ ಪ್ರಧಾನಿ ಮೋದಿ ಅವರಿಗೆ ಉಡುಗೊರೆಯನ್ನು ನೀಡುವುದು ಕಾಣಬಹುದಾಗಿ. ಇದೇ ಫೋಟೋವನ್ನು…

Read More
ವಿಡಿಯೋ

ಎಡಿಡೆಟ್ ವಿಡಿಯೋ ಹಂಚಿಕೊಂಡು ಸುಳ್ಳು ಹರಡಿದ ಅಸ್ಸಾಂ ಸಿಎಂ ಹಿಮಂತ ಶರ್ಮಾ

ನವೆಂಬರ್ 25ರ ಶನಿವಾರದಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ಹಾಲಿ ಸಿಎಂ ಅಶೋಕ್ ಗೆಹ್ಲೋಟ್‌ರವರು ಟೋಂಕ್‌ನಲ್ಲಿ ತಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಭಾಷಣ ಮಾಡುವ ವೇಳೆ ಸಭಿಕರು ಮೋದಿ ಮೋದಿ ಎಂದು ಕೂಗುವ ಮೂಲಕ ಗೆಹ್ಲೋಟ್ ಭಾಷಣಕ್ಕೆ ಅಡ್ಡಿಪಡಿಸಿ ಅವಮಾನ ಮಾಡಿದ್ದಾರೆ ಎಂದು 17 ಸೆಕೆಂಡ್‌ಗಳ ವಿಡಿಯೋವನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. मोदी जी का गारंटी –…

Read More
ಮುಜರಾಯಿ

ಮುಂದೊಂದು ದಿನ ಎಲ್ಲಾ ಮುಜರಾಯಿ ದೇವಸ್ಥಾನದ ಅರ್ಚಕರೂ ಮುಸ್ಲಿಮರೇ ಎಂಬುದು ಸುಳ್ಳು

ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಕಳೆದ ಹಲವು ವರ್ಷಗಳಿಂದ ನೂರಾರು ಸುಳ್ಳು ಸುದ್ದಿಗಳು, ಆರೋಪಗಳು ಪ್ರತಿನಿತ್ಯದಂತೆ ಹರಿದಾಡುತ್ತಿವೆ. ಇವುಗಳ ಸತ್ಯಾಸ್ಯತೆಯನ್ನು ಪರಿಶೀಲಿಸದೆ ಸಾಮಾನ್ಯ ಜನರು ನಂಬಿಕೊಳ್ಳುತ್ತಿದ್ದಾರೆ. ಇಂತಹ ದ್ವೇಷ ಹರಡುವ ಕೃತ್ಯದಲ್ಲಿ ರಾಜಕೀಯ ಪಕ್ಷಗಳು ಸಹ ಸಕ್ರಿಯವಾಗಿವೆ. ಮುಸ್ಲೀಮರ ಕುರಿತು ಹರಿದಾಡುತ್ತಿರುವ ಹಲವಾರು ಸುಳ್ಳು ಸುದ್ದಿಗಳನ್ನು ಹೀಗಾಗಲೇ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಸತ್ಯಶೋದನೆ ನಡೆಸಿ ಸುಳ್ಳನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು. ಇತ್ತೀಚೆಗೆ, ಮುಂದೊಂದು ದಿನ ಎಲ್ಲಾ ಮುಜರಾಯಿ ದೇವಸ್ಥಾನದ ಅರ್ಚಕರೂ ಮುಸ್ಲೀಮರೇ. ಅನುಮಾನ…

Read More
Japan Muslim

Fact Check: ಜಪಾನ್‌ನಲ್ಲಿ ಮುಸ್ಲಿಮರಿಗೆ ಪೌರತ್ವ ಮತ್ತು ಬಾಡಿಗೆಗೆ ಮನೆ ನೀಡುವುದಿಲ್ಲ ಎಂಬುದು ಸುಳ್ಳು

ಇತ್ತೀಚೆಗೆ ಭಾರತದಲ್ಲಿ ಮತೀಯ ದ್ವೇಷಗಳು, ಹಲ್ಲೆಗಳು, ಅಪಪ್ರಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿಸಿಕೊಂಡು ಅತಿ ಹೆಚ್ಚು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪುಟಗಳು, ಖಾತೆಗಳನ್ನು ಇತರ ಧರ್ಮಗಳ ಕುರಿತು ನಿರಂತರವಾಗಿ ದ್ವೇಷ ಹರಡಲೆಂದೆ ರೂಪಿತವಾಗಿವೆ. “ಮುಸ್ಲಿಮರಿಗೆ ಪೌರತ್ವ ನೀಡದ ವಿಶ್ವದ ಏಕೈಕ ದೇಶ ಜಪಾನ್. ಹಾಗೂ ಜಪಾನ್‌ನಲ್ಲಿ ಮುಸ್ಲಿಮರಿಗೆ ಬಾಡಿಗೆಗೆ ಮನೆಗಳನ್ನು ನೀಡಲಾಗುವುದಿಲ್ಲ. ಇಸ್ಲಾಂ ಪ್ರಚಾರವನ್ನು ಮಾಡುವಂತಿಲ್ಲ, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅರಬಿಕ್ ಕಲಿಸುವಂತಿಲ್ಲ ಹೀಗೆ ಜಪಾನಿನ…

Read More

Fact Check | ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ಎಂಬ ವಿಡಿಯೋ ಉತ್ತರ ಪ್ರದೇಶದ್ದು..!

ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ನಡೆಯುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.. ಈ ವಿಡಿಯೋವನ್ನು ಶೇರ್‌ ಮಾಡಿ ಎಂಬ ತಲೆ ಬರಹದೊಂದಿದೆ ವೈರಲ್‌ ಆಗಿರುವ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ. ಹೀಗೆ ತಲೆ ಬರಹದೊಂದಿಗೆ ವೈರಲ್‌ ಆಗಿರುವ ವಿಡಿಯೋ 14 ಫೆಬ್ರುವರಿ 2022ರದ್ದಾಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿರುವ ಸರ್ಕಾರಿ ರಾಝಾ ಪಿಜಿ ಕಾಲೇಜಿನಲ್ಲಿರುವ ಬೂತ್‌ನಲ್ಲಿ ಈ ಇಬ್ಬರು ಮಹಿಳೆಯರು ನಕಲಿ ಮತ ಚಲಾಯಿಸಲು ಪ್ರಯತ್ನಿಸಿದಾಗ ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ ಒಬ್ಬರು ನಕಲಿ…

Read More
Love Marriage

ಪ್ರೇಮ ವಿವಾಹ ಅಥವಾ ನ್ಯಾಯಾಲಯ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ

ಭಾರತದಲ್ಲಿ ಪ್ರೇಮ ವಿವಾಹಗಳು ಇಂದಿಗೂ ಸವಾಲಾಗಿಯೇ ಪರಿಣಮಿಸುತ್ತಿವೆ. ಜಾತಿಗ್ರಸ್ಥ ದೇಶವಾದ ನಮ್ಮಲ್ಲಿ ಅಂತರ್ಜಾತಿ ಅಥವಾ ಅಂತರ್ಧಮಿಯ ವಿವಾಹವಾದರೆಂತೂ ಮನೆಯಿಂದ ತಮ್ಮ ಕುಲದಿಂದ ಹೊರಗಿಡುವ, ಮರ್ಯಾದೆ ಹತ್ಯೆಯಂತಹ ಅಮಾನುಷ, ಅಮಾನವೀಯ ನಡೆಗಳು ಇಂದಿಗೂ ನಮ್ಮ ಸಮಾಜವನ್ನು ಬಾದಿಸುತ್ತಿವೆ. ಇಂದಿಗೂ ತಾವು ಪ್ರೀತಿಸಿದ ಯುವಕ/ಯುವತಿಯನ್ನು ಮದುವೆಯಾಗುವ ಸ್ವತಂತ್ರ್ಯ ನಮ್ಮ ದೇಶದ ಯುಪೀಳಿಗೆಗೆ ಕಷ್ಟಸಾಧ್ಯವಾಗಿದೆ. ಇತ್ತೀಚೆಗೆ ನಮ್ಮ ಸಂವಿಧಾನ ಕಲ್ಪಿಸಿರುವ ಸ್ವೆಷಲ್ ಮ್ಯಾರೆಜ್ ಆಕ್ಟ್‌ ಕೂಡ ಕೆಲವರ ಬಾಯಲ್ಲಿ “ಲವ್‌ ಜಿಹಾದ್” ಎಂದು ಕರೆಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರೇಮ ವಿವಾಹಗಳ ಕುರಿತು…

Read More

Fact Check | ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಲೇವಡಿಗಾಗಿ ತಿರುಚಿದ ಬಿಜೆಪಿ..!

ಸಾಮಾಜಿಕ ಜಾಲತಾಣದಲ್ಲಿ “ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣದಲ್ಲಿ ದೇಶದ ಏಕತೆಗಾಗಿ ರಾಹುಲ್‌ ಗಾಂಧಿ ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರಿಗೆ ಯಾರು ರಾಹುಲ್‌ ಗಾಂಧಿ ಯಾರು ರಾಜೀವ್‌ ಗಾಂಧಿ ಏಂಬುದೇ ತಿಳಿದಿಲ್ಲ” ಎಂಬ ತಲೆ ಬರಹದೊಂದಿಗೆ ವಿಡಿಯೋ ಕ್ಲಿಪ್‌ವೊಂದು ವೈರಲ್‌ ಆಗಿದೆ. ये कब हुआ? https://t.co/OCCR65Q1qc — BJP (@BJP4India) November 20, 2023 ಆದರೆ ಇದರ ಪೂರ್ಣ ವಿಡಿಯೋವನ್ನು ಹಂಚಿಕೊಳ್ಳದ  ಬಿಜೆಪಿ ಸೇರಿದ ಹಾಗೆ ಹಲವು ಪಕ್ಷಗಳು ಕ್ಲಿಪ್‌ ವಿಡಿಯೋವನ್ನು ಹಂಚಿಕೊಳ್ಳುವ…

Read More

Fact Check : ಭಾರತದ ಫುಟ್‌ಬಾಲ್‌ ತಂಡ 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ ಎಂಬ ಸುದ್ದಿ ಸುಳ್ಳು

“2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಈಗ, ಭಾರತ ಅಧಿಕಕೃತವಾಗಿ ಅರ್ಹತೆಯನ್ನು ಪಡೆದುಕೊಂಡಿದೆ. ಆ ಮೂಲಕ ಭಾರತ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಎಂಬ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಂಳ್ಳುತ್ತಿದ್ದಾರೆ. ಈ ಪೋಸ್ಟ್‌ ಜೊತೆ ಎರಡು ಫೋಟೋಗಳನ್ನು ಸೇರಿಸಿ ಎಡಿಟ್‌ ಮಾಡಿ ಒಂದು ಫೋಟೋವಾಗಿ ಪರಿವರ್ತಿಸಿ ಇದೇ ರೀತಿಯ ತಲೆ ಬರಹವನ್ನು ನೀಡಲಾಗಿದ್ದು. ಇದಕ್ಕೆ ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ…

Read More