Fact Check | ಬಾಂಗ್ಲಾದಲ್ಲಿ ಪರಿಹಾರ ನೀಡುವ ನೆಪದಲ್ಲಿ ಹಿಂದೂ ಬಾಲಕನ ತಾಯತ ತೆಗೆಯಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಇಲ್ಲಿ ಹಿಂದೂ ಬಾಲಕನೊಬ್ಬನ ತಾಯತವನ್ನು ಮುಸ್ಲಿಂ ಮೌಲ್ವಿಯೊಬ್ಬ ತನ್ನ ಬಾಯಿಯಿಂದ ಕಚ್ಚಿ ಕತ್ತರಿಸಿದ್ದಾನೆ. ಬಳಿಕ ಆ ಹಿಂದೂ ಬಾಲಕನಿಗೆ ಒಂದಷ್ಟು ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ಕೊಟ್ಟಿದ್ದಾನೆ. ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಂದು ಭಾರತದಲ್ಲಿ ಯಾರೆಲ್ಲ ಬಾಂಗ್ಲಾದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದಾರೋ ಅವರೆಲ್ಲ ಇದಕ್ಕೆ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Bangladesh: Islamist Tears Down Hindu kid's Sacred Thread in Exchange for…

Read More

Fact Check | ಕುಮಾರಿ ಸೆಲ್ಜಾ ಅವರು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬುದು ನಿಜವಲ್ಲ

“ಇದು ಸೆಲ್ಜಾ ಅವರ ಹೇಳಿಕೆ ಹಿಂದೂ ದೇವರಾದ ರಾಮನ ಮೇಲೆ ಕಾಂಗ್ರೇಸ್‌ನವರ ದ್ವೇಷ ಎಂತಹದ್ದು ಎಂಬುದು ಸಾಬೀತಾಗಿದೆ. ಕಾಂಗ್ರೆಸ್‌ನವರು ಯಾವಾಗಲೂ ಭಗವಾನ್ ಶ್ರೀ ರಾಮನನ್ನು ಅವಮಾನಿಸುತ್ತಾರೆ. ರಾಮನ ಬಗ್ಗೆ ಇಂತಹ ಹೇಳಿಕೆಗಳನ್ನು, ಇಂತಹ ಭಾಷೆಯನ್ನು ಬಳಸಿರುವುದು ಹಿಂದುಗಳ ನಂಬಿಕೆಗೆ ಅಪಮಾನ ಮಾತ್ರವಲ್ಲ, ಎಲ್ಲಾ ಶ್ರೀರಾಮನ ಭಕ್ತರಿಗೂ ಮಾಡಿದ ಅವಮಾನವಾಗಿದೆ.” ಎಂದು ಸೆಲ್ಜಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಹರಿಯಾಣ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನು ಹೊರಹಾಕಿದೆ. कांग्रेस ने हमेशा प्रभु श्रीराम जी का अपमान किया…

Read More

Fact Check | ಗಾಂಧಿಜೀ ಅವರು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಶಿಸಿದ್ದಾರೆ ಎಂಬ ಫೋಟೋ ಎಡಿಟೆಡ್‌ ಆಗಿದೆ

ಈ ಫೋಟೋ ನೋಡಿ.. ಇದೊಂದು ಅಪರೂಪದ ಫೋಟೋ, ಇದರಲ್ಲಿ ಮಹಾತ್ಮ ಗಾಂಧಿ ಅವರು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪಾದಗಳನ್ನು ಸ್ಪರ್ಷಿಸಿ ಅವರಿಂದ ಆಶಿರ್ವಾದಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಪರೂಪದ ಫೋಟೋಗಳನ್ನು ಸರ್ಕಾರ ನಮ್ಮಿಂದ ಮುಚ್ಚಿಟ್ಟಿದ್ದು ಯಾಕೆ? ಈ ಫೋಟೋವನ್ನು ಆದಷ್ಟು ಎಲ್ಲರಿಗೂ ಹಂಚಿಕೊಳ್ಳಿ ಎಂದು” ವೈರಲ್‌ ಫೋಟೋದೊಂದಿಗೆ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ಫೋಟೋವನ್ನು ನೋಡಿದ ಹಲವು ಮಂದಿ ಇದು ನಿಜವಾದ ಫೋಟೋ ಇರಬೇಕು ಎಂದು ಭಾವಿಸಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ…

Read More

Fact Check: ಹರಿಯಾಣದಲ್ಲಿ ಆರ್‌ಎಸ್‌ಎಸ್‌ ಮೆರವಣಿಗೆ ಎಂದು ಕೇರಳದ ಹಳೆಯ ವಿಡಿಯೋ ವೈರಲ್

ಕೇರಳದ ಮಲಪ್ಪುರಂನ ತನೂರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸದಸ್ಯರು ಮೆರವಣಿಗೆ ನಡೆಸುತ್ತಿರುವ ಹಳೆಯ ವೀಡಿಯೊವನ್ನು 2024 ರ ಅಕ್ಟೋಬರ್ 1 ರಂದು ರಾಜ್ಯ ಚುನಾವಣೆಗೆ ಮುಂಚಿತವಾಗಿ ಹರಿಯಾಣದ ಇತ್ತೀಚಿನ ಮೆರವಣಿಗೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಆಗಸ್ಟ್ 29, 2024 ರಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ, ಹಿರಿಯ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ಹರಿಯಾಣ ಚುನಾವಣಾ ನಿರ್ವಹಣಾ ಸಮಿತಿ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೂಲ ಗುಂಪು ಬುಧವಾರ ರಾತ್ರಿ ಹರಿಯಾಣದ…

Read More
ಇಸ್ಕಾನ್

Fact Check: ಬಾಂಗ್ಲಾದೇಶದ ಪ್ರವಾಹ ಸಂತ್ರಸ್ತರಿಗೆ ಇಸ್ಕಾನ್ ಸದಸ್ಯರು ಆಹಾರ ವಿತರಿಸುತ್ತಿರುವ ವೈರಲ್ ವಿಡಿಯೋ ಹಳೆಯದು

ಇತ್ತೀಚಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಂಗ್ಲಾದೇಶದಲ್ಲಿ ಪ್ರವಾಹವು ಹಾನಿಯನ್ನುಂಟುಮಾಡುತ್ತಿರುವಾಗ, ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ಕಂಡ ನಂತರ, ಇಸ್ಕಾನ್ ಭಕ್ತರು ಪ್ರವಾಹ ಪೀಡಿತರಿಗೆ ಆಹಾರವನ್ನು ವಿತರಿಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಮಧ್ಯೆ ಇಸ್ಕಾನ್ ದೇವಾಲಯದ ಸದಸ್ಯರು ಕೈಗೊಂಡ ಪರಿಹಾರ ಕಾರ್ಯಗಳನ್ನು ವೀಡಿಯೊ ತೋರಿಸುತ್ತದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಹಿಂದೂ ವಿರೋಧಿ ಹಿಂಸಾಚಾರ ಮತ್ತು ದೇವಾಲಯಗಳ ಮೇಲಿನ ದಾಳಿಯ ಹೊರತಾಗಿಯೂ ಇಸ್ಕಾನ್ ಸದಸ್ಯರು ಬಾಂಗ್ಲಾದೇಶದ ಪ್ರವಾಹ…

Read More
ಬಾಂಗ್ಲಾದೇಶ

Fact Check: ಮುಸ್ಲಿಮರು ನೀರಿನಲ್ಲಿ ಪ್ರಾರ್ಥಿಸುತ್ತಿರುವ ಹಳೆಯ ಫೋಟೋವನ್ನು 2024ರ ಬಾಂಗ್ಲಾದೇಶ ಪ್ರವಾಹಕ್ಕೆ ಸಂಬಂದಿಸಿದ್ದು ಎಂದು ವೈರಲ್

ಮುಸ್ಲಿಂ ಪುರುಷರ ಗುಂಪು ಎದೆಯ ಆಳದ ನೀರಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಇದು ಬಾಂಗ್ಲಾದೇಶದಲ್ಲಿ ಪ್ರಸ್ತುತ 2024 ರ ಪ್ರವಾಹಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್ ಹೇಳಿಕೊಂಡಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ವೈರಲ್ ಚಿತ್ರದ ಬಗ್ಗೆ ಗೂಗಲ್ ಲೆನ್ಸ್ ಹುಡುಕಾಟವು ನಮ್ಮನ್ನು ‘ಮಿಲಾನೊ ಫೋಟೋ ಫೆಸ್ಟಿವಲ್‘ ವೆಬ್ಸೈಟ್‌ಗೆ ನಿರ್ದೇಶಿಸಿತು. ಇಲ್ಲಿ, ವಿಶ್ವ ಜಲ ದಿನದ ಫೋಟೋ ಸ್ಪರ್ಧೆ 2022 ರ ಬಗ್ಗೆ ಲೇಖನದಲ್ಲಿ ಕಾಣಿಸಿಕೊಂಡ ಅದೇ…

Read More

Fact Check: ಕರ್ನಾಟಕದಲ್ಲಿ ಮುಸ್ಲಿಂ ವ್ಯಕ್ತಿಗೆ ಚೂರಿಯಿಂದ ಇರಿದ ಹಳೆಯ ಪ್ರಕರಣವನ್ನು ಇತ್ತೀಚೆಗೆ ಹರಿಯಾಣದಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ

ತೀವ್ರವಾಗಿ ಗಾಯಗೊಂಡ ವ್ಯಕ್ತಿಯು ನೆಲದ ಮೇಲೆ ಮಲಗಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋವನ್ನು ಹಿಂದೂ ದೇವತೆ ಸೀತೆಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹರಿಯಾಣದ ಮೇವಾತ್‌ನ ಮುಸ್ಲಿಂ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹಂಚಿಕೊಳ್ಳುವವರು ಹೇಳಿದ್ದಾರೆ.  ಪೋಸ್ಟ್ ಹಿಂಸಾತ್ಮಕ ಸ್ವರೂಪದಿಂದ ಇರುವುದರಿಂದ ನಾವು ಅದರ ಆರ್ಕೈವ್ ಅನ್ನು ಸೇರಿಸುವುದನ್ನು ತಪ್ಪಿಸಿದ್ದೇವೆ. ಫ್ಯಾಕ್ಟ್‌ ಚೆಕ್: ವೈರಲ್ ಹೇಳಿಕೆ ಸುಳ್ಳಾಗಿದ್ದು, ಈ ಘಟನೆ 2022 ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿಯನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಆರೋಪಿಯನ್ನು…

Read More
ಪ್ರಕಾಶ್ ರಾಜ್

Fact Check: ಇಂಡೋನೇಷ್ಯಾದಲ್ಲಿ RSS ಇಲ್ಲದ ಕಾರಣ ಅಲ್ಲಿ ಕೋಮುಗಲಭೆ ಇಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿಲ್ಲ

ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ನಟ ಪ್ರಕಾಶ್‌ ರಾಜ್ ಅವರು ರಾಜಕೀಯ ವಿಶ್ಞೇಷಕರು ಸಹ ಆಗಿದ್ದಾರೆ. ಕೇಂದ್ರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಆಗಾಗ ತಮ್ಮ ಮೊನಚಾದ ಮೂತುಗಳಿಂದ ತಿವಿಯುತ್ತಿರುತ್ತಾರೆ. ಹೀಗಾಗಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಬೆಂಗಲಿಗರ ಕೆಂಗಣ್ಣಿಗೆ ಸಹ ಇವರು ಗುರಿಯಾಗಿದ್ದಾರೆ. ಈಗ, “ಇಂಡೋನೇಷ್ಯಾದಲ್ಲಿ ಶೇ.90ರಷ್ಟು ಮುಸ್ಲಿಮರು ಮತ್ತು ಶೇ.2ರಷ್ಟು ಹಿಂದೂಗಳಿರುವ ದೇಶದಲ್ಲಿ 11,000 ದೇವಾಲಯಗಳಿವೆ, ಆದರೆ ಅಲ್ಲಿ…

Read More
ಲವ್ ಜಿಹಾದ್

Fact Check: ಮಲೇಶಿಯಾದಲ್ಲಿ ಸಹೋದರಿಯನ್ನು ಥಳಿಸಿದ ಸಹೋದರನ ಹಳೆಯ ವಿಡಿಯೋವನ್ನು ‘ಲವ್ ಜಿಹಾದ್’ ಎಂದು ಹಂಚಿಕೊಳ್ಳಲಾಗುತ್ತಿದೆ

ಮುಸ್ಲಿಂ ಯುವಕನೊಬ್ಬ ಹಿಂದೂ ಸಮುದಾಯದ ಯುವತಿಯನ್ನು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಅನೇಕರು “ಲವ್ ಜಿಹಾದ್” ಎಂದು ಆರೋಪಿಸಿ ಮುಸ್ಲಿಂ ಸಮುದಾಯವನ್ನು ನಿಂದಿಸುತ್ತಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾಧನೆಗಳ ಹೆಚ್ಚಿನ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್:  ಈ ಹೇಳಿಕೆ ಸುಳ್ಳು ಮತ್ತು ಈ ವೀಡಿಯೊದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈ ವೀಡಿಯೊ 2022 ರ ಹಿಂದಿನದು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು…

Read More
ಪಾಕಿಸ್ತಾನ

Fact Check: ಭೋಪಾಲ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಥಳಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅನೇಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಹಲವಾರು ಬಳಕೆದಾರರು ಈ ವೀಡಿಯೊ ಹಳೆಯದು ಮತ್ತು ಮಧ್ಯಪ್ರದೇಶದ ಭೋಪಾಲ್‌ನದು ಎಂದು ಗಮನಸೆಳೆದಿರುವುದನ್ನು ಗಮನಿಸಿದೆ. ಇದರ ಸೂಚನೆಯನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಸುಮಾರು ಎರಡು ವರ್ಷಗಳ ಹಿಂದಿನ…

Read More