ಶಿವಮೊಗ್ಗ ಗಲಭೆಯ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು

ಶಿವಮೊಗ್ಗ ಗಲಭೆ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳು

ಅಕ್ಟೋಬರ್ 01ರ ಭಾನುವಾರ ಸಂಜೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ ಪರಿಣಾಮ ಗಲಭೆ ಉಂಟಾಗಿತ್ತು. ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ 60 ಮಂದಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸ್ ಎನ್‌ಕೌಂಟರ್ ನಿಂದ ಮುಸ್ಲಿಂ ಯುವಕ ಮೃತ್ಯು ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಕತ್ತಿಗಳನ್ನಿಡಿದು ಮುಸ್ಲಿಮರ ಮೆರವಣಿಗೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ…

Read More

ಹಾರಿಕಾ ಮಂಜುನಾಥ್ ಹೇಳಿದ ಹಸಿ‌ ಸುಳ್ಳು ಬಟಾ ಬಯಲು..!

1955ರಲ್ಲಿ ಸೌದಿ ರಾಜ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಮಾಜಿ ಪ್ರಧಾನಿ ನೆಹರು ಸೌದಿ ರಾಜನ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಕಾಶಿ ವಿಶ್ವನಾಥ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಿಗೆ ಪರದೆ ಹಾಕಿಸಿದ್ದರು ಎಂದು ಹರಿಕಾ ಮಂಜುನಾಥ್ ಭಾಷಣವೊಂದನ್ನು ಮಾಡಿದ್ದಾಳೆ. ಆ ವಿಡಿಯೋ ಕಳೆದೊಂದು ವಾರದಿಂದ ಸಂಘ ಪರಿವಾರ ಹಾಗೂ ಹಿಂದುತ್ವ ಕಾರ್ಯಕರ್ತರ ಮಧ್ಯ ಬಹಳ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತದೆ. ಇದನ್ನೇ ಎಷ್ಟು ಮಂದಿ ಅಮಾಯಕರು ನಿಜವೆಂದು ನಂಬುತ್ತಿದ್ದಾರೆ. ಆ ಮುಖೇನ ಯುವಜನರನ್ನು ದಾರಿ ತಪ್ಪಿಸುವ…

Read More

ಇದು ರಾಜಸ್ತಾನದ ಹಿಂದೂ- ಮುಸ್ಲಿಂ ಸೌಹಾರ್ದತೆಯ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಈಗ ದೇವಸ್ಥಾನದಲ್ಲಿ ನಮಾಜ್ ಮಾಡಿಸುತ್ತಿದೆ, ಅದೂ ಕೂಡ ಪೋಲೀಸರನ್ನು ನಿಯೋಜಿಸಿ, ನಾವೆಲ್ಲರೂ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ, ಅದಕ್ಕಾಗಿಯೇ ಈ ವೀಡಿಯೋವನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಇದರಿಂದ ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳಿಗೆ ಮತ ಹಾಕುವ ಜಾತ್ಯಾತೀತ ಹಿಂದೂಗಳು ಕಣ್ಣು ತೆರೆಯಬಹುದು ಎಂಬ ವೀಡಿಯೋ ಒಂದು ವೈರಲ್ ಆಗುತ್ತಿದೆ. ಸತ್ಯವೇನೆಂದರೆ ರಾಜಸ್ತಾನದ ಜೈಪುರದಲ್ಲಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಸಮುಚ್ಚಾಯದಲ್ಲೇ ಸೈಯದ್ ಚಾಂಡಿ ವಾಲೆ ದೇಗುಲವಿದೆ ಇಲ್ಲಿ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯವಿದೆ. ಇದನ್ನು 40–50…

Read More

ಈ ಜಾಹೀರಾತಿನಲ್ಲಿರುವುದು ಭಾರತದ ಬೋರ್ಡಿಂಗ್ ಸ್ಕೂಲ್ ಅಲ್ಲ, ಜರ್ಮನ್ ಅಧ್ಯಕ್ಷರ ಅಧಿಕೃತ ನಿವಾಸ!

ಇತ್ತೀಚಿನ ದಿನಮಾನಗಳಲ್ಲಿ ದಿನಪತ್ರಿಕೆಗಳು ಮತ್ತು ಸುದ್ಧಿವಾಹಿನಿಗಳು ತಮ್ಮ ಜಾಹಿರಾತಿನಲ್ಲಿಯೂ ಕೂಡ ಸುಳ್ಳು ಮಾಹಿತಿಗಳ ಮೂಲಕ ಜನಸಾಮಾನ್ಯರ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿವೆ. ಇದಕ್ಕೆ ಪೂರಕ ಎಂಬಂತೆ ದೇಶದ ಪ್ರತಿಷ್ಠಿತ ಸುದ್ಧಿ ಪತ್ರಿಕೆಯಾದ ಹಿಂದುಸ್ತಾನ್ ಟೈಮ್ಸ್ ಕೂಡ ಇಂತಹದ್ದೊಂದು ಜಾಹಿರಾತು ಪ್ರಕಟಿಸಿದೆ. ಅದರಲ್ಲಿ ಭಾರತದ ಮುಂಚೂಣಿಯಲ್ಲಿರುವ 30ಕ್ಕೂ ಹೆಚ್ಚು ವಸತಿ ಶಾಲೆಗಳ ಸಮಾಗಮ ನಡೆಯುತ್ತಿದೆ. ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಜಾಹಿರಾತೊಂದು ಬಿತ್ತರವಾಗಿದೆ.   ಫ್ಯಾಕ್ಟ್‌ಚೆಕ್; ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಬೋರ್ಡಿಂಗ್ ಶಾಲೆಗಳ ಕುರಿತು ನೀಡಲಾದ ಜಾಹಿರಾತಿನಲ್ಲಿ…

Read More

ವಿದೇಶಿ ವಿನಿಮಯ ಪರಿವರ್ತನಾ ಶುಲ್ಕದ ರಸೀದಿ RBI ನೀಡುವುದಿಲ್ಲ..!

ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿದ್ದು ಸಮಾಜದಲ್ಲಿ ಅಶಾಂತಿಗಳಿಗೆ ಮತ್ತು ಗೊಂದಲಗಳಿಗೆ ಕಾರಣವಾಗುತ್ತಿವೆ. ಇವುಗಳ ಬಗ್ಗೆ ಸತ್ಯಾಸತ್ಯತೆಯ ಪರಿಶೀಲನೆ ಮಾಡದೆ ಸಾಕಷ್ಟು ಮಂದಿ ತಮಗೆ ಬಂದ ಸುದ್ದಿಗಳನ್ನು ಇತರರಿಗೆ ಫಾರ್ವರ್ಡ್ ಮಾಡುವ ಮೂಲಕ ಸುಳ್ಳು ಸುದ್ದಿ ಹಬ್ಬಲು ತಾವು ಕೂಡ ಕಾರಣಕರ್ತರಾಗುತ್ತಿದ್ದಾರೆ. ಈ ಸುದ್ದಿಯನ್ನು ಓದಿದ್ದೀರಾ? ;ಈ ಸೈನಿಕನ ಚಿತ್ರ ಮೆಸಪಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ ಇತ್ತೀಚೆಗಿನ ದಿನಮಾನಗಳಲ್ಲಿ ಸುಳ್ಳು ಸುದ್ದಿಗಳು ಸರ್ಕಾರಿ ಸಂಸ್ಥೆಗಳನ್ನು ಕೂಡ ಬಿಡುತ್ತಿಲ್ಲ ಇದಕ್ಕೆ ಉತ್ತಮ ಉದಾಹರಣೆಯೆಂದರೆ ಆರ್‌ಬಿಐ. ಹೌದು.. ಆರ್‌ಬಿಐ ಕುರಿತು ಕಳೆದೊಂದು…

Read More

ಈ ಸೈನಿಕನ ಚಿತ್ರ ಮೆಸಪಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ

ಇದು ಬ್ರಿಟನ್ನಿನ ಇಂಪೀರಿಯಲ್ ವಾರ್ ಮ್ಯೂಸಿಯಂನಲ್ಲಿ ಇಡಲಾಗಿರುವ ಚಿತ್ರ. ಇದರ ಬಗ್ಗೆ ಎಷ್ಟು ಜನರಿಗೆ ಗೊತ್ತಿರಬಹುದು? ವಿಶ್ವ ಪ್ರಥಮ ಮಹಾಯುದ್ಧದಲ್ಲಿ, ಬ್ರಿಟಿಷರ ಪರವಾಗಿ ಹೋರಾಡುತ್ತಿದ್ದ ಬ್ರಿಟಿಷ್ ಸೈನ್ಯದ ಹಿಂದೂ ಸೈನಿಕನು, ತನಗಾಗಿ ಸೈನ್ಯದಲ್ಲಿ ಕೊಟ್ಟ ಆಹಾರವನ್ನು ತಾನು ಕುಳಿತಿದ್ದ ಕುದುರೆಯ ಮೇಲಿನಿಂದ ಬಾಗಿ, ತನ್ನ ಶತ್ರು ರಾಷ್ಟ್ರವಾದ ಫ್ರಾನ್ಸಿ‌ನ ಹಸಿದ ಮಹಿಳೆಗೆ ನೀಡಿದನು ಎಂಬ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್: ಈ‌ ಚಿತ್ರವನ್ನು 1918 ರಲ್ಲಿ ಮೆಸಪೊಟೋಮಿಯಾದಲ್ಲಿ ಸೆರೆ ಹಿಡಿಯಲಾಗಿದೆ. ಪಂಜಾಬ್ ಮೂಲದ ಭಾರತೀಯ…

Read More
ಕಾವೇರಿ

ಕಾವೇರಿ ಗಲಾಟೆಯ ಈ ವಿಡಿಯೋ ಇತ್ತೀಚಿನದ್ದಲ್ಲ: 2016ರಲ್ಲಿ ನಡೆದಿರುವುದು

ಕಾವೇರಿ ಹೋರಾಟದಲ್ಲಿ ತಮಿಳುನಾಡಿನವರು ಕರ್ನಾಟಕದ ಬಸ್ ಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯ ನೋಡಿ ಎಂಬ ವಿಡಿಯೋವೊಂದನ್ನು ಇತ್ತೀಚೆಗೆ ನಡೆದ ಘಟನೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.   ಕಪ್ಪು ಬಟ್ಟೆ ಧರಿಸಿರುವ ಹಲವು ಯುವಕರು ಸರ್ವೋದಯ ಎಂದು ಬರೆದಿರುವ ಕರ್ನಾಟಕದ ಬಸ್‌ ಅನ್ನು ದೊಣ್ಣೆಗಳಿಂದ ಹೊಡೆಯುವುದು, ಕಾವೇರಿ ಯಾರದು ಎಂದು ಜನರನ್ನು ಪ್ರಶ್ನಿಸುವುದು ಹಾಗೂ ಕೊನೆಯಲ್ಲಿ ಅವರನ್ನು ಪೊಲೀಸರು ಬಂಧಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಕುರಿತ ಫ್ಯಾಕ್ಟ್ ಚೆಕ್ ನಡೆಸಿದಾಗ, “ಇದೇ ವಿಡಿಯೋ ಸೆಪ್ಟಂಬರ್ 12, 2016ರಲ್ಲಿಯೇ…

Read More

ಮೋದಿಯವರನ್ನು ನೇಪಾಳದ ಸಂಸದರು ಟೀಕಿಸಿದ್ದಾರೆ ಎಂಬುದು ಸುಳ್ಳು

ನೇಪಾಳದ ಸಂಸದರೊಬ್ಬರು ತಮ್ಮ ಸಂಸತ್ತಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ನೀತಿ, ವಿದೇಶಿ ಪ್ರವಾಸ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಟೀಕಿಸಿದ್ದಾರೆ ಎಂಬ ವಿಡಿಯೋವೊಂದು ಟ್ವಿಟರ್(X), ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾನಗಲಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ.    ಫ್ಯಾಕ್ಟ್‌ಚೆಕ್: ಈ ವಿಡಿಯೋ ನೇಪಾಳದ್ದಲ್ಲ. ಬದಲಿಗೆ ಹಿಮಾಚಲ ಪ್ರದೇಶದ ಕಿನ್ನೌರ್ ಶಾಸಕ ಜಗತ್ ಸಿಂಗ್ ನೇಗಿಯವರು ಮಾರ್ಚ್ 15, 2021ರಲ್ಲಿ ನಡೆದ ತಮ್ಮ ರಾಜ್ಯದ ಬಜೆಟ್ ಮಂಡನೆಯ ಕಲಾಪದಲ್ಲಿ ಮಂಡಿಸಿದ ಭಾಷಣವಾಗಿದೆ. ಇದನ್ನು ಮಾರ್ಚ್ 21, 2021ರಲ್ಲಿ…

Read More

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು

“ಸತ್ಯವನ್ನು ಎಷ್ಟು ಮುಚ್ಚಿಟ್ಟರೂ ಅದು ಹೊರಬರುತ್ತದೆ. ಇದು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ನಿಜವಾದ ಛಾಯಾಚಿತ್ರ, ಈ ನಕಲಿ ಗಾಂಧಿ ಕುಟುಂಬವು ವಾಸ್ತವವಾಗಿ ಮೊಹಮ್ಮದ್  ಘಾಜಿಯ ಕುಟುಂಬವಾಗಿದೆ. ಈ ಫೋಟೋವನ್ನು 10 ಜನರಿಗೆ ಕಳುಹಿಸಿ, ದೇಶವನ್ನು ಜಾಗೃತಗೊಳಿಸಿ ಮತ್ತು ಭಾರತವನ್ನು ಪಾಕಿಸ್ತಾನವಾಗಿ ಬದಲಾಗದಂತೆ ರಕ್ಷಿಸಿ.” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಈ ಚಿತ್ರಗಳು ರಾಜೀವ್ ಮತ್ತು ಸೋನಿಯಾರವರ ವಿವಾಹೋತ್ಸವ ಸಂದರ್ಭದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದಾಗಿದೆ. ಇಂಡಿಯನ್ ಕಲ್ಚರ್ ಸಂಸ್ಥೆಯ ಅಧಿಕೃತ…

Read More