ಮುಸ್ಲಿಂ

Fact Check: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಜಾಗೃತಿಗಾಗಿ ಮಾಡಿದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ತುಣುಕೊಂದು(ರೀಲ್‌) ಹರಿದಾಡುತ್ತಿದ್ದು, ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ದಂಪತಿಗಳ ನಡುವೆ ಬರುವ ಇನ್ನೊಬ್ಬ ವ್ಯಕ್ತಿ ತನ್ನ ಅಂಗಿಯನ್ನು ತೆಗೆದು ಸ್ನಾಯುಗಳನ್ನು ಪ್ರದರ್ಶಿಸುತ್ತಾನೆ. ಇದರಿಂದ ಕೋಪಗೊಂಡ ಮಹಿಳೆ ಅರೆಬೆತ್ತಲಾದ ಪುರುಷನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾಳೆ, ಅವನನ್ನು ಬಹುತೇಕ ಓಡಿಸುತ್ತಾಳೆ. ಈ ವೀಡಿಯೊವನ್ನು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಹಂಚಿಕೊಳ್ಳುವವರು ಅಂಗಿ ಇಲ್ಲದ ಪುರುಷ ಮುಸ್ಲಿಂ ಮತ್ತು ಮಹಿಳೆ ಹಿಂದೂ ಎಂದು ಪ್ರತಿಪಾದಿಸಲಾಗುತ್ತಿದೆ. ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡು “ಅಬ್ದುಲ್” ತನ್ನ…

Read More
ವಕ್ಫ್

Fact Check: ಇಸ್ಲಾಮಿಕ್ ರಾಷ್ಟ್ರಗಳು ವಕ್ಫ್ ಆಸ್ತಿಯನ್ನು ಹೊಂದಿಲ್ಲ ಎಂಬ PIB ಪ್ರತಿಪಾದನೆ ಸುಳ್ಳು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8 ರಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024 ಅನ್ನು ಪ್ರಸ್ತಾಪಿಸಿದರು. ಈ ಮಸೂದೆಯು ವಿವಾದವನ್ನು ಹುಟ್ಟುಹಾಕಿದೆ, ಸಮುದಾಯದ ಮುಖಂಡರು, ಕಾರ್ಯಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ತಜ್ಞರು ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಬೆದರಿಕೆ ಹಾಕಬಹುದು ಎಂಬ ಆಧಾರದ ಮೇಲೆ ಟೀಕಿಸಿದ್ದಾರೆ. ವಕ್ಫ್ ಕಾಯ್ದೆಯಲ್ಲಿ ಪ್ರಸ್ತಾವಿತ ಬದಲಾವಣೆಗಳನ್ನು ಪರಿಶೀಲಿಸಲು 21 ಲೋಕಸಭಾ ಮತ್ತು 10…

Read More
ದೇವೇಂದ್ರ ಫಡ್ನವೀಸ್

Fact Check: ದೇವೇಂದ್ರ ಫಡ್ನವೀಸ್ ಬಂದೂಕು ಹಿಡಿದಿರುವ ಹಳೆಯ ಪೋಸ್ಟರ್ ಅನ್ನು ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಗುಜರಾತ್‌ನ ಸಬರಮತಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಅವರ ಆದೇಶದ ಮೇರೆಗೆ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಅವರನ್ನು ಕಳೆದ ವಾರ ಅಕ್ಟೋಬರ್ 12 ರಂದು ಮುಂಬೈನ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಂದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರನ್ನು ಒಳಗೊಂಡ ಪೋಸ್ಟರ್‌ ಒಂದರ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. “ಸೇಡು ತೀರಿಸುವಿಕೆ ಪೂರ್ಣಗೊಂಡಿದೆ” ಎಂಬ ಹಿಂದಿ ಪಠ್ಯದೊಂದಿಗೆ…

Read More

Fact Check | ಮಣಿಪುರದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಿಂದ ಕ್ರಿಶ್ಚಿಯನ್ ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಣಿಪುರದಲ್ಲಿನ ಗಲಭೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಯುತ್ತಿದೆ. ಅವರ ರಕ್ಷಣೆಗೆ ಯಾರು ಧಾವಿಸುತ್ತಿಲ್ಲ. ಈಗಾಗಲೇ ಸಾವಿರಾರು ಕ್ರೈಸ್ತರು ಮಣಿಪುರದಲ್ಲಿನ ಸಶಸ್ತ್ರ ಪಡೆಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈಗ ಅಮಾಯಕ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು, ಇದೇ ಸಶಸ್ತ್ರ ಪಡೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಈ‌ ಮೂಲಕ ಈಗ ಅಲ್ಲಿ ಉಳಿದಿರುವ ಕೆಲವೇ ಕೆಲವು ಕ್ರೈಸ್ತರಲ್ಲೂ ಭಯದ ವಾತಾವರಣವನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರನ್ನು ಥಳಿಸುತ್ತಿರುವುದು ಮತ್ತು ತನ್ನನ್ನು ಹೊಡೆಯದಂತೆ ಮಹಿಳೆ ಅಂಗಲಾಚುತ್ತಿರುವುದನ್ನು…

Read More
ಗುಜರಾತ್‌

Fact Check: 2022 ರಲ್ಲಿ ಗುಜರಾತ್‌ನ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಪೊಲೀಸರು ಥಳಿಸುವ ಹಳೆಯ ವಿಡಿಯೊವನ್ನು ಇತ್ತೀಚಿನದು ಎಂದು ಹಂಚಿಕೆ

ನವರಾತ್ರಿ ಹಬ್ಬದ ನಂತರ ಭಾರತದ ಅನೇಕ ರಾಜ್ಯಗಳಲ್ಲಿ ದುರ್ಗಾ ಮಾತೆಗೆ ಅವಮಾನಿಸಲಾಗಿದೆ ಎಂದು ಹಳೆಯ ವಿಡಿಯೋಗಳನ್ನು ಬಳಸಿಕೊಂಡು ದ್ವೇಷ ಹರಡಲು ಪ್ರಯತ್ನಿಸಲಾಗುತ್ತಿದೆ. ಈಗ, ಇತ್ತೀಚೆಗೆ ಗುಜರಾತ್‌ನ ಖೇಡಾ ಪ್ರದೇಶದಲ್ಲಿ ಮಸೀದಿಯೊಂದರ ಬಳಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ಹರಿದಾಡುತ್ತಿದ್ದು, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪೊಲೀಸರು ಯುವಕರನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸುವ ಮೂಲಕ ಅಪರಾಧಿಗಳನ್ನು ಶಿಕ್ಷಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಲಾಗುತ್ತಿದೆ. ಆರ್ಕೈವ್…

Read More
ಸಲ್ಮಾನ್ ಖಾನ್

Fact Check: ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಕೋವಿಡ್ -19 ಕುರಿತು ಜನರನ್ನು ಎಚ್ಚರಿಸುವ ವಿಡಿಯೋ ಹಂಚಿಕೆ

ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಶಾಸಕ ಬಾಬಾ ಸಿದ್ದಿಕಿ ಅವರ ಹತ್ಯೆಯ ಹಿನ್ನೆಲೆಯಲ್ಲಿ, ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಅವರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧಕ್ಕಾಗಿ ಬಾಬಾ ಸಿದ್ದಿಕಿ ಅವರನ್ನು ಕೊಲ್ಲಲಾಗಿದೆ ಎಂಬ ವರದಿಗಳ ನಡುವೆ ಇದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ನೀವು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ವೈರಲ್ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ವೈರಲ್ ವೀಡಿಯೊದಿಂದ ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ,…

Read More
ಕಾಶ್ಮೀರ

Fact Check: ಯುಎಇ ಯುವರಾಜ ಕಾಶ್ಮೀರದ ಕುರಿತು ಮಾತನಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಮುಸ್ಲಿಂ ಧರ್ಮಗುರುವಿನ ಭಾಷಣದ ವಿಡಿಯೋ ವೈರಲ್

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯುವರಾಜ ಕಾಶ್ಮೀರವನ್ನು “ಹಿಂದೂಗಳ ಭೂಮಿ” ಎಂದು ಕರೆಯುತ್ತಿರುವುದನ್ನು ತೋರಿಸುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಕಾಶ್ಮೀರ ವಿಷಯದ ಬಗ್ಗೆ ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ, ನಾನು ರಾಜಕಾರಣಿಯಲ್ಲ, ನಾನು ಇತಿಹಾಸ ಮತ್ತು ಧರ್ಮದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇನೆ. ಆಗಲೇ ಅಸ್ತಿತ್ವದಲ್ಲಿದ್ದ ಹಿಂದೂ ಧರ್ಮಕ್ಕಿಂತ ಬಹಳ ಹಿಂದೆಯೇ ಇಸ್ಲಾಂ ಧರ್ಮವು ಭಾರತಕ್ಕೆ ಬಂದಿತು ಎಂದು ನನಗೆ ತಿಳಿದಿದೆ. ಇದೆಲ್ಲವೂ ನಡೆದ ನಂತರ, 70 ವರ್ಷಗಳ ಹಿಂದೆ ಪಾಕಿಸ್ತಾನವು ಸ್ವಾತಂತ್ರ್ಯವನ್ನು…

Read More
ದುರ್ಗಾ ಪೂಜಾ

Fact Check: ಮುಸ್ಲಿಂ ಮಹಿಳೆಯೊಬ್ಬರು ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸ್ಕ್ರಿಪ್ಟೆಡ್‌ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗಷ್ಟೇ ದೇಶದಾದ್ಯಂತ ನವರಾತ್ರಿ ಹಬ್ಬದ ಪ್ರಯುಕ್ತ ದುರ್ಗಾ ಮಾತೆಯನ್ನು ಪ್ರತಿಷ್ಟಾಪಿಸಿ ಹತ್ತನೇ ದಿನಕ್ಕೆ ದುರ್ಗಾ ದೇವಿಯ ವಿಸರ್ಜನಾ ಆಚರಣೆಗಳು ಮುಗಿಯುತ್ತಿವೆ. ಆದರೆ ಕೆಲವರು ಸುಳ್ಳು ಆರೋಪಗಳೊಂದಿಗೆ ಕೆಲವು ಕಡೆಗಳಲ್ಲಿ ದುರ್ಗಾ ದೇವಿಗೆ ಅವಮಾನಿಸಲಾಗಿದೆ ಎಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯೊಬ್ಬಳು ಬುರ್ಖಾವನ್ನು ತೆಗೆದುಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಈ ವೀಡಿಯೊವನ್ನು ನೀವು ನೋಡಲೇಬೇಕು, ಇದು ಪಶ್ಚಿಮ ಬಂಗಾಳದ್ದಾಗಿದೆ. ಮುಸ್ಲಿಂ…

Read More

Fact Check | ರಾಸಾಯನಿಕಗಳಿಂದ ಕೃತಕ ಹಾಲು ಉತ್ಪಾದನೆ ಎಂಬ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ

“ಸಾಮಾಜಿಕ ಜಾಲತಾಣದಲ್ಲಿ ರಾಸಾಯನಿಕವೊಂದನ್ನು ಬಳಸಿ ಹಾಲನ್ನು ತಯಾರಿಸಲಾಗುತ್ತಿದೆ. ಇದನ್ನು ಹೇಗಾದರು ಮಾಡಿ ನಿಲ್ಲಿಸಬೇಕಾಗಿದೆ. ರೈಲ್ವೇ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಕಾಫಿ, ಟೀ ಸೇವಿಸುವವರು ಬಹಳಷ್ಟು ಎಚ್ಚರವನ್ನು ವಹಿಸಬೇಕು, ಇದು ಎಲ್ಲರಿಗೂ ಹೇಳುತ್ತಿರುವುದಲ್ಲ. ಆದರೆ ಇಂತಹದೊಂದು ಜಾಲ ಬಹಳ ದೊಡ್ಡ ಮಟ್ಟದಲ್ಲಿ ಇದೆ. ಈ ಬಗ್ಗೆ ದಯವಿಟ್ಟು ಎಲ್ಲರೂ ಎಚ್ಚರದಿಂದಿರಿ”  ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಕೆಲವರು ಆರೋಗ್ಯ ಸಂಸ್ಥೆ (WHO) ಪ್ರಕಾರ ಭಾರತದಲ್ಲಿ ಕೇವಲ 14 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತದೆ….

Read More

Fact Check | ದೀಪಾವಳಿಯಂದು ಚೀನಾ ಭಾರತಕ್ಕೆ ಅಸ್ತಮಾ ಉಂಟುಮಾಡುವ ಪಟಾಕಿಗಳನ್ನು ಕಳುಹಿಸುತ್ತಿದೆ ಎಂಬುದು ಸುಳ್ಳು

“ಪ್ರಮುಖ ಮಾಹಿತಿ… ಗುಪ್ತಚರ ಪ್ರಕಾರ, ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದೆ.. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಇದಲ್ಲದೆ, ಕುರುಡುತನಕ್ಕೆ ಕಾರಣವಾಗುವ ಕಣ್ಣಿನ ಕಾಯಿಲೆ ಹರಡುವ ಬೆಳಕಿನ ಅಲಂಕಾರಿಕ ದೀಪಗಳನ್ನು ಅಭಿವೃದ್ದಿಪಡಿಸಿ ಭಾರತಕ್ಕೆ ಕಳಿಸಲಿದೆ. ಬಹಳಷ್ಟು ಪಾದರಸವನ್ನು ಬಳಸಲಾಗಿದೆ, ದಯವಿಟ್ಟು ಈ ದೀಪಾವಳಿಯಲ್ಲಿ ಜಾಗರೂಕರಾಗಿರಿ ಮತ್ತು ಈ ಚೈನೀಸ್ ಉತ್ಪನ್ನಗಳನ್ನು ಬಳಸಬೇಡಿ. ಎಲ್ಲಾ ಭಾರತೀಯರಿಗೆ ಈ…

Read More