Pramod Belagod

ಆಕಸ್ಮಿಕವಾಗಿ ನಾನು ಹಿಂದೂ! ಎಂದು ಜವಹರಲಾಲ್ ನೆಹರುರವರು ಹೇಳಿಲ್ಲ

ಕಳೆದ ಒಂದು ದಶಕಗಳಿಂದ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರುರವರ ಕುರಿತು ಇನ್ನಿಲ್ಲದ ಆರೋಪಗಳು ಕೇಳಿಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಬಿಜೆಪಿ ಬೆಂಬಲಿಗರು, ಬಲಪಂಥೀಯರು ದೇಶಕ್ಕೆ ನೆಹರೂರವರ ಕೊಡುಗೆಗಳು ಶೂನ್ಯ ಎನ್ನುವಂತೆ ಬಿಂಬಿಸುತ್ತಿದ್ದಾರೆ . ಇನ್ನೂ ನೆಹರುರವರ ಮೂಲ ಧರ್ಮ ಇಸ್ಲಾಂ, ಆತನೊಬ್ಬ ಅವಕಾಶವಾದಿ ರಾಜಕಾರಣಿ, ಸ್ತ್ರೀಲೋಲ ಹೀಗೆ ನಾನಾ ವಿಧವಾಗಿ ಪಂಡಿತ್ ನೆಹರೂರವರ ಇತಿಹಾಸವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ. ನಾನು ಶಿಕ್ಷಣದಿಂದ ಕ್ರಿಶ್ಚಿಯನ್, ಸಂಸ್ಕೃತಿಯಿಂದ ಮುಸ್ಲಿಂ, ಆಕಸ್ಮಿಕವಾಗಿ ಹಿಂದೂ! ಎಂದು ಜವಾಹರಲಾಲ್ ನೆಹರು ಹೇಳಿಕೊಂಡಿದ್ದಾರೆ ಎಂಬ…

Read More

Fact Check: ಪ್ರಧಾನಿ ಮೋದಿಯವರು ಗಾರ್ಬಾ ನೃತ್ಯದಲ್ಲಿ ಭಾಗವಸಿದ್ದಾರೆ ಎಂಬುದು ಸುಳ್ಳು

ಕೆಲವುದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಂಪಿ ಉತ್ಸವದಲ್ಲಿ ವೀರ ಮಕ್ಕಳ ಕುಣಿತದಲ್ಲಿ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಹಲವರು ಇದನ್ನು ಶ್ಞಾಘಿಸಿದರೆ ಅನೇಕರು ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ. ಈಗ ನರೇಂದ್ರ ಮೋದಿಯವರು ನವರಾತ್ರಿಯ ಗುಜರಾತಿನ ಪಾರಂಪರಿಕ ಗಾರ್ಬಾ ನೃತ್ಯದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಸಿದ್ದರಾಮಯ್ಯ ಕುಣಿದರೆ ತಪ್ಪು ಮೋದಿಯವರು ಕುಣಿದರೆ ಸರಿ, ಇದು ಭಕ್ತರ ಲಾಜಿಕ್” ಎಂದು ಹಲವರು ಇದನ್ನು ಟೀಕಿಸಿ ಹಂಚಿಕೊಂಡರೆ, ಇನ್ನೂ ಮೋದಿಯವರ ಅಭಿಮಾನಿಗಳು “ದೇಶಕ್ಕಾಗಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ…

Read More
ರಾಮ ನವಮಿ

ಕರ್ನಾಟಕದ ರಾಮನವಮಿಯ ತಿರುಚಿದ ವಿಡಿಯೋವನ್ನು ಉಜ್ಜೈನಿಯದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಭಾರತದಲ್ಲಿ ಕಳೆದೆರಡು ದಶಕಗಳಿಂದ ಹಿಂದು ಮುಸ್ಲಿಂ ಕಲಹ ತಾರಕಕ್ಕೇರುತ್ತಿದೆ. ಹಿಂದು ಮುಸ್ಲಿಂ ಸಾಮರಸ್ಯ ಬೆಸೆಯಬೇಕಾದ ಅಧಿಕಾರರೂಢ ಸರ್ಕಾರಗಳೇ ಕೋಮುವಾದಕ್ಕೆ ಬೆಂಬಲ ನೀಡುತ್ತಿವೆ. ಪ್ರತಿನಿತ್ಯ ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು, ಆ ಸಮುದಾಯದ ಮೇಲೆ ಜನರಿಗೆ ದ್ವೇಷ ಮೂಡಿಸುವ ಸಲುವಾಗಿ ಅನೇಕ ಸುಳ್ಳುಗಳನ್ನು ಹರಿಬಿಡಲಾಗುತ್ತಿದೆ. ಅಂತಹದ್ದೆ ಒಂದು ಸುಳ್ಳು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಮುಸ್ಲಿಮರು ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ “ಪಾಕಿಸ್ತಾನ ಜಿಂದಾಬಾದ್” ಎಂದು ಫೋಷಣೆ ಕೂಗಿದ್ದಾರೆ. ಮಾರನೇ ದಿನವೇ ಆ ನಗರದ ಎಲ್ಲಾ ಹಿಂದುಗಳು…

Read More
ರಾಹುಲ್ ಗಾಂಧಿ

ರಾಹುಲ್ ಗಾಂಧಿಯವರು ಮೂರು ತಿಂಗಳ ಉಚಿತ ರಿಚಾರ್ಜ್ ಯೋಜನೆಯನ್ನು ಘೋಷಿಸಿದ್ದಾರೆಂಬುದು ಸುಳ್ಳು

ಪಂಚರಾಜ್ಯಗಳ ಚುನಾವಣೆಯ ಈ ಸಂದರ್ಭದಲ್ಲಿ ಆಯಾ ರಾಜ್ಯಗಳನ್ನು ಆಧರಿಸಿ  ಎರಡೂ ರಾಷ್ಟ್ರೀಯ ಪಕ್ಷಗಳು ಅನೇಕ ಯೋಜನೆಯನ್ನು ಘೋಷಿಸಿವೆ. ಈ ಯೋಜನೆಗಳ ಕುರಿತು ಹಲವು ಪರ-ವಿರೋಧಗಳು ಮತ್ತು ಅಪಪ್ರಚಾರದ ಸುಳ್ಳುಗಳು ಹರಿದಾಡುತ್ತಿವೆ. ಇಂತಹದ್ದೇ ಒಂದು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಜನರು ಕಾಂಗ್ರೆಸ್‌ಗೆ ಮತ ಚಲಾಯಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ “ಮೂರು ತಿಂಗಳ ಉಚಿತ ರೀಚಾರ್ಜ್” ನೀಡುವುದಾಗಿ ಹೇಳಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಲಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ…

Read More
ಸಾರಾ ತೆಂಡುಲ್ಕರ್

ಒಟ್ಟಿಗೆ ಕಾಣಿಸಿಕೊಂಡ ಸಾರಾ ತೆಂಡುಲ್ಕರ್ ಮತ್ತು ಶುಬ್ಮನ್ ಗಿಲ್ ಎಂಬುದು ಸುಳ್ಳು

ಸೆಲೆಬ್ರಿಟಿಗಳ ಮಕ್ಕಳ ಕುರಿತು ಸದಾ ಒಂದಿಲ್ಲೊಂದು ಗಾಸಿಪ್‌ಗಳು, ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸುದ್ದಿ ಮಾಧ್ಯಮಗಳೆಂತು ಪ್ರತಿನಿತ್ಯ ಇಂತಹ ಹೊಸ ಗಾಸಿಪ್‌ಗಳ ಹಂಚುವಲ್ಲಿ ತೊಡಗಿಕೊಂಡಿವೆ. ಈಗ ಕ್ರಿಕೆಟ್‌ ದೇವರು ಎಂದೇ ಕರೆಯುವ ಸಚಿನ್ ತೆಂಡುಲ್ಕರ್‌ರವರ ಮಗಳ ಮೇಲೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. “ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಕ್ರಿಕೆಟರ್ ಶುಬ್ಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.” ಎಂಬ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ಸಾರಾ ತೆಂಡುಲ್ಕರ್ 24 ಸೆಪ್ಟೆಂಬರ್…

Read More

Fact Check: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ ಮೋದಿ ಘೋಷಿಸಿದ್ದಾರೆ ಎಂಬುದು ಸುಳ್ಳು

ಭಾರತದಲ್ಲೇ ಮೊಟ್ಟಮೊದಲ ಇಂಟರ್ಸಿಟಿ ಎಲೆಕ್ಟ್ರಾನಿಕ್ ಬಸ್ ಸೇವೆಯನ್ನು ಅಳವಡಿಸಿಕೊಂಡ ರಾಜ್ಯ ನಮ್ಮ ಕರ್ನಾಟಕ. “ಸ್ಮಾರ್ಟ್‌ ಸಿಟಿ” ಯೋಜನೆಯ ಅಡಿಯಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋಟೇಷನ್ ಕಾರ್ಪೋರೇಷನ್(BMTC)ಯು ಮೊದಲು 1 ಅಕ್ಟೋಬರ್  2021ರಲ್ಲಿ ತನ್ನ ಪ್ರಯೋಗಿಕ ಇ-ಬಸ್‌ ಸೇವೆಯನ್ನು ಬೆಂಗಳೂರಿನಲ್ಲಿ ನಡೆಸಿತ್ತು. ಇದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ್ದರು. ನಂತರ KSRTCಯು 16 ಜನವರಿ 2023ರಿಂದ ಇಂಟರ್ಸಿಟಿ ಇ-ಬಸ್‌ಗೆ ಚಾಲನೆ ನೀಡಲಾಗಿದ್ದು ಬೆಂಗಳೂರು-ಮೈಸೂರಿನ ಪ್ರಯಾಣಿಕರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಈ ಇ-ಬಸ್‌ ಯೋಜನೆಯ ಕುರಿತು ಜನರಿಂದ ಮೆಚ್ಚುಗೆ…

Read More
ಕನ್ಹಯ್ಯ ಕುಮಾರ್

ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಕನ್ಹಯ್ಯ ಕುಮಾರ್ ಹೇಳಿಲ್ಲ

ಹಿಂದು ಧರ್ಮ ಕೆಟ್ಟದ್ದು, ಅಲ್ಲಾ ಶಕ್ತಿಶಾಲಿ: ಇಸ್ಲಾಮಿಗೆ ಮತಾಂತರ ಆಗಿ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು “ಕುತಂತ್ರಿ ಕನ್ಹಯ್ಯ ಕುಮಾರ್ ವಂಚನೆ ಬಯಲಾಗಿದೆ. ಹಿಂದೂ ಹೆಸರನ್ನು ಇಟ್ಟುಕೊಂಡು ಎಲ್ಲರ ಕಣ್ಣಗೆ ಮಣ್ಣು ಎರಚುತ್ತಿರುವ ಮುಲ್ಲಾ ಇವನು. ಅವನು ಒಬ್ಬ ದೇಶದ್ರೋಹಿ; ಅವರು(ಮೌಲಾನಾ ಅಬ್ದುಲ್ ಕಾಲಂ) ದೇಶದ ಅತಿದೊಡ್ಡ ದೇಶದ್ರೋಹಿ. ಮುಸ್ಲಿಮರ ರಹಸ್ಯ ಸಭೆಯಲ್ಲಿ ತಮ್ಮ ವಾಸ್ತವವನ್ನು ಹೇಳಿದ್ದಾರೆ. ಮುಸ್ಲಿಂ ಎಂಬ ಅವರ ಸ್ವಂತ ಹೇಳಿಕೆಯಿಂದ…

Read More

ಇಸ್ರೇಲ್ ಅಧಿಕೃತ ಟ್ವಿಟರ್ ಖಾತೆಗಳಿಂದ ಫೆಲೆಸ್ತೀನಿಯರು ಸಾವುಗಳೆಂದು ನಟಿಸುತ್ತಿದ್ದಾರೆ ಎಂಬ ಸುಳ್ಳು ಹಂಚಿಕೆ

ಹಮಾಸ್‌ನವರಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಅಶ್ರು ದಾಳಿ ನಡೆಸಿದೆ.  ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದ, ಗಾಯಗೊಂಡ ಪ್ಯಾಲಸ್ಟೈನಿಗರ ಅನೇಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಆದರೆ ಇವುಗಳನ್ನು ಅಲ್ಲಗೆಳೆದಿರುವ ಇಸ್ರೇಲ್ ಸತ್ತ ಮಗು ಎಂದು ತೋರಿಸುತ್ತಿರುವುದು ಬೊಂಬೆ, ಯುದ್ದದ ಗಾಯಾಳುಗಳು ಎಂದು ಮೇಕಪ್ ಮಾಡಿಕೊಂಡು ನಾಟಕವಾಡುತ್ತಿದ್ದಾರೆ, ಮೃತದೇಹ ಎಂದು ಮಲಗಿಸಿರುವ ಹೆಣಗಳು ಚಲಿಸುತ್ತಿವೆ ಹೀಗೆ ವಾಸ್ತವವನ್ನು ತಿರುಚಲು ನಾನಾ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ.  ಇಸ್ರೇಲ್ ಮತ್ತು ಪ್ಯಾಲಸ್ಟೈನ್ ಯುದ್ಧಕ್ಕೆ ಸಂಬಂಧಿಸಿದಂತೆ ಇಂತಹ ಅನೇಕ ಸುಳ್ಳುಗಳು…

Read More

ಕಾಂಗ್ರೆಸ್ ನಾಯಕ ಶಶಿ ತರೂರ್ ಹಮಾಸ್‌ರವರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್‌ ಬೆಂಬಲದೊಂದಿಗೆ ಭಯೋತ್ಪಾದಕರಾದ ಹಮಾಸರನ್ನು ಬೆಂಬಲಿಸಿ ಕೇರಳದಲ್ಲಿ ಬೃಹತ್ ರ್ಯಾಲಿಯೊಂದು ನಡೆದಿದೆ. ಇದು ನಡೆದಿರುವುದು ಪಾಕಿಸ್ತಾನದಲ್ಲೋ, ಪ್ಯಾಲೆಸ್ಟೈನ್‌ನಲ್ಲೋ ಅಲ್ಲ ದೇವರ ನಾಡು ಕೇರಳದಲ್ಲಿ.  ಎಂಬ ತಲೆಬರಹದ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ಅಕ್ಟೋಬರ್ 26ರಂದು ಕೇರಳದ ಕೋಜಿಕೊಡೆ ತೀರದಲ್ಲಿ ನಡೆದ ಪ್ಯಾಲಸ್ಟೈನ್ ಪರವಾಗಿ ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿದ ಶಶಿ ತರೂರ್ ಹಮಾಸ್‌ ಮತ್ತು ಇಸ್ರೇಲ್‌ನ ಕೃತ್ಯವನ್ನು ಖಂಡಿಸಿದ್ದಾರೆ. ಇಬ್ಬರ ನಡೆಗಳು ಕೂಡ ನೂರಾರು ನಾಗರೀಕರನ್ನು ಬಲಿ ತೆಗೆದುಕೊಳ್ಳುತ್ತದೆ…

Read More

ಮುಸ್ಲಿಂ ಸಮುದಾಯದ ಕುರಿತು ಪ್ರೊಪಗಂಡದ ಸುಳ್ಳು ವಿಡಿಯೋ ಹಂಚಿಕೊಂಡ ಪೋಸ್ಟ್‌ಕಾರ್ಡ್

ಜಗತ್ತಿನ ಯಾವುದೇ ರಾಷ್ಟ್ರದಲ್ಲೇ ಆಗಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ, ಧರ್ಮಗಳ ಮೇಲೆ, ಅಲ್ಲಿನ ಬಹುಸಂಖ್ಯಾತರು ನಿರಂತರವಾಗಿ ಶೋಷಿಸುತ್ತಾರೆ. ಮತ್ತು ಅವರ ಸಂಸ್ಕೃತಿಯನ್ನು ತುಚ್ಚಿಕರಿಸಿ, ಅವರ ಕಥೆಗಳನ್ನು, ಕೊಡುಗೆಗಳನ್ನು ಮರೆವಿಗೆ ಸರಿಸಿ, ಸಾಧ್ಯವಾದಷ್ಟು ಅವರ ಮೇಲೇ ಸಲ್ಲದ ಆರೋಪಗಳನ್ನು ಹೊರಿಸಿ ನಂತರ ಅವರ ಮೇಲೆ ನೇರ ದಾಳಿ ನಡೆಸುತ್ತವೆ. ಬಹುಸಂಖ್ಯಾತ ಕ್ರಿಶ್ಚಿಯನ್ ಪ್ರಾಭಲ್ಯದ ದೇಶಗಳಲ್ಲಿ ಯಹೂದಿ ಮತ್ತು ಮುಸ್ಲಿಮರನ್ನು ನಡೆಸಿಕೊಂಡಂತೆ, ಮುಸ್ಲಿಂ ದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಹಿಂದುಗಳನ್ನು ನಡೆಸಿಕೊಂಡಂತೆ, ಬಹುಸಂಖ್ಯಾತ ಹಿಂದು ಸಮಾಜದ ಭಾರತದಲ್ಲಿ ಮುಸ್ಲೀಮರನ್ನು, ಕ್ರಿಶ್ಚಿಯನ್ನರನ್ನೂ ಹೀಗೆಯೇ…

Read More