Pramod Belagod

ಪಶ್ಚಿಮ ಬಂಗಾಳದ ಚುನಾವಣೆಯ ಹಳೆಯ ವಿಡಿಯೋವನ್ನು ಮಧ್ಯಪ್ರದೇಶಕ್ಕೆ ಸೇರಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಂಚರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಝೋರಾಂ ನಲ್ಲಿ ಈಗಾಗಲೇ ಚುನಾವಣೆಗಳು ಜರುಗುತ್ತಿವೆ. ಈ ಸುದ್ದಿ ಬರೆಯುವ ಹೊತ್ತಿಗೆ ಮಧ್ಯ ಪ್ರದೇಶದ ಚುನಾವಣೆಯು ಮುಗಿದಿದೆ. ಆದರೆ ಮಿಕ್ಕ ರಾಜ್ಯಗಳಿಗೆ ಹೋಲಿಸಿದರೆ ಮಧ್ಯ ಪ್ರದೇಶದಲ್ಲಿ ಹರಿದಾಡಿದಷ್ಟು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಬೇರೆಲ್ಲೂ ನಡೆದಿಲ್ಲ. ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹರಿದಾಡುತ್ತಿದ್ದ ಹಲವಾರು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ಬಯಲುಗೊಳಿಸಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು. ಇತ್ತೀಚೆಗೆ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕ ಹಳ್ಳಿಗೆ ಪ್ರಚಾರಕ್ಕೆಂದು ಹೋದ…

Read More

ರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ ದಿನವೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಯೋಧ್ಯೆಯ ರಾಮಮಂದಿರದ ಕೆಲಸಗಳು ಭರದಿಂದ ಸಾಗುತ್ತಿವೆ. ಅಯೋಧ್ಯೆಯ “ರಾಮ ಮಂದಿರ”, “ಹಿಂದೂ ರಾಷ್ಟ್ರ” ಮತ್ತು “ಅಖಂಡ ಭಾರತ” ಬಿಜೆಪಿ ಮತ್ತು ಬಲಪಂಥೀಯರು ಪ್ರತಿಪಾದಿಸುತ್ತಿರುವ “ಉಗ್ರ ಹಿಂದುತ್ವದ” ಪ್ರತೀಕವಾಗಿದೆ ಮತ್ತು ಆಢಳಿತಾರೂಢ ಬಿಜೆಪಿಯ ರಾಜಕೀಯದ ಅಸ್ತ್ರವಾಗಿದೆ. ಆದ್ದರಿಂದ ಬಿಜೆಪಿ ನಾಯಕರು ಭಾರತವನ್ನು ಮುಂಬರುವ ದಿನಗಳಲ್ಲಿ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ತಮ್ಮ ಪಕ್ಷದ ಬೆಂಬಲಿಗರಿಗೆ ಈಗಾಗಲೇ ಭರವಸೆಯನ್ನು ನೀಡುತ್ತಾ ಬಂದಿದ್ದಾರೆ. ಅದರಂತೆ, “ರಾಮಜನ್ಮ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಮೇಲೆ ಭಗವಧ್ವಜ ಹಾರಿಸಿದ…

Read More
BJP

ಬಿಜೆಪಿಗೆ ಮತ ನೀಡಬೇಡಿ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ಹೇಳಿಲ್ಲ

ಪಂಚರಾಜ್ಯಗಳ ಚುನಾವಣೆಯ ಈ ಸಂದರ್ಭದಲ್ಲಿ ಅನೇಕ ಸುಳ್ಳು ಸುದ್ದಿಗಳು ಆರೋಪ-ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನೂ ಹಲವು ಎಡಿಟೆಡ್ ವಿಡಿಯೋಗಳನ್ನು ಜನ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ಲೋಧಿ ಸಮಾಜವನ್ನು ಕಡೆಗಣಿಸಿರುವ ಕಾರಣಕ್ಕಾಗಿ ಈ ಬಾರಿ ಬಿಜೆಪಿಗೆ ಓಟು ನೀಡದಂತೆ ಜನರಲ್ಲಿ ಕೇಳಿಕೊಂಡಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್‌: ಈ ವಿಡಿಯೋ 1 ಫೆಬ್ರವರಿ 2023ರಂದು ಭೋಪಾಲ್‌ನ ಅಯೋಧ್ಯೆ ನಗರದ ಹನುಮಾನ್ ದೇವಸ್ಥಾನದಲ್ಲಿ ಮದ್ಯ…

Read More

ಮಧ್ಯಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹಿಂದೂ ಸಂತರು ನಿರಾಕರಿಸಿದ್ದಾರೆ ಎಂಬುದು ಸುಳ್ಳು

ಪಂಚರಾಜ್ಯಗಳ ಚುನಾವಣೆಗಳು ಜರುಗುತ್ತಿವೆ. ಆಯಾ ರಾಜ್ಯಗಳಲ್ಲಿ  ವಿವಿಧ ರಾಜಕೀಯ ಪಕ್ಷಗಳು ತೀವ್ರವಾದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ತಮ್ಮ ಎದುರಾಳಿ ಅಭ್ಯರ್ಥಿಯನ್ನು, ಪಕ್ಷವನ್ನು ಹಿಮ್ಮೆಟ್ಟಿಸಲು ಅನೇಕ ಸುಳ್ಳು ಸುದ್ದಿಗಳನ್ನು, ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಈಗ, ಮಧ್ಯಪ್ರದೇಶದಲ್ಲಿ ಹಿಂದೂ ಸಾಧು-ಸಂತರು ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ಪರ ಪ್ರಚಾರ ಮಾಡಲು ನಿರಾಕರಿಸಿದ್ದಾರೆ, ಈ ಬಾರಿ ಬಿಜೆಪಿ ಕೇವಲ 50 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಹೇಳಿದ್ದಾರೆ ಎಂಬ ವಿಡಿಯೋ ಒಂದು ಹಲವು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್‌:…

Read More

ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ನಿಲ್ಲಿಸಲು ಇರಾನ್ ಮೋದಿಯವರ ಸಹಾಯ ಕೇಳಿದೆ ಎಂಬುದು ಸುಳ್ಳು

ಇಸ್ರೇಲ್ ಹಮಾಸ್‌ ಯುದ್ಧ ಪ್ರಾರಂಭವಾದ ದಿನಗಳಿಂದ ಭಾರತೀಯ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಇಸ್ರೇಲ್ ಬಯಸಿದೆ ಅಥವಾ ಫ್ಯಾಲಸ್ಟೈನ್ ಬಯಸುತ್ತಿದೆ ಎಂದು ಹೇಳುತ್ತಲೇ ಬರುತ್ತಿವೆ. ಜಗತ್ತಿನ ದೊಡ್ಡಣ್ಣ ಅಮೇರಿಕ ನರೇಂದ್ರ ಮೋದಿಯವರ ಸಹಾಯ ಬಯಸುತ್ತಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ, ಅಂದು ಕಾಶ್ಮೀರದ ಸಮಸ್ಯೆ ಬಗೆಹರಿಸಲು ವಿಶ್ವಸಂಸ್ಥೆ ಸಹಾಯ ಕೋರಿದ್ದ ಜವಾಹರಲಾಲ್ ನೆಹರು ಇಂದು ಇಸ್ರೇಲ್ ಫ್ಯಾಲೆಸ್ಟೈನ್ ಯುದ್ಧ ನಿಲ್ಲಿಸಲು ಭಾರತದ ಪ್ರಧಾನಿ ಮೋದಿಯ ಸಹಾಯ ಕೇಳಿದ ಇರಾನ್ ದೇಶ. ಎಂಬ ಪೋಸ್ಟರ್‌ ಒಂದು ಹಲವು…

Read More

ಜವಹರಲಾಲ್ ನೆಹರೂರವರ ಕುರಿತ ಸರಣಿ ಸುಳ್ಳುಗಳು

ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರು ಭಾರತದ ಸ್ವತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರಾಗಿ, ದಕ್ಷ ಆಡಳಿತಗಾರರಾಗಿ, ದೂರ ದೃಷ್ಟಿಯ ರಾಜಕಾರಣಿಯಾಗಿ ಮತ್ತು ಬರಹಗಾರರಾಗಿ ಹೆಸರುವಾಸಿಯಾದವರು. ಆದರೆ ಕಳೆದೊಂದು ದಶಕಗಳಿಂದ ಬೆಜೆಪಿಗರು ಮತ್ತು ಬಲಪಂಥಿಯರು ಸೇರಿ ನೆಹರೂರವರ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಈ ಮೂಲಕ ನೆಹರೂರವರ ಕೊಡುಗೆಗಳನ್ನು ಇತಿಹಾಸದಿಂದಲೇ ಅಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಹರಿದಾಡುತ್ತಿರುವ ಸುದ್ದಿಗಳ ಸುಳ್ಳೇನು? ಸತ್ಯವೇನೆಂದು ತಿಳಿಯೋಣ ಬನ್ನಿ. ಸುಳ್ಳು ೧: ನೆಹರೂರವರ ತಾಯಿ ಮುಸ್ಲಿಂ. ಅವರ ಹೆಸರು ಥುಸ್ಸು…

Read More
ನೆಹರೂ

ಜವಹರಲಾಲ್ ನೆಹರೂರವರು ಲಂಡನ್ ಪೌರತ್ವವನ್ನು ತೆಗೆದುಕೊಂಡಿದ್ದರು ಎಂಬುದು ಸುಳ್ಳು

ನೆನ್ನೆಯಷ್ಟೆ ದೇಶದಾದ್ಯಂತ ಮಕ್ಕಳ ದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರು ಸ್ವತಂತ್ರ್ಯ ಭಾರತಕ್ಕೆ ನೀಡಿದ ಕೊಡುಗೆಗಳನ್ನು, ಅವರ ದೂರದೃಷ್ಟಿಯ ಯೋಜನೆಗಳನ್ನು ಜನ ನೆನೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ನೆಹರೂ ವಿರೋಧಿಗಳು ಅವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ತಮ್ಮ ರಾಜಕೀಯ ಲಾಭಕ್ಕಾಗಿ ನೆಹರೂ ಮತ್ತು ಅವರ ಮನೆತನದವರ ಮೇಲೆ ಭಾರತೀಯರಲ್ಲಿ ದ್ವೇಷ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈಗಾಗಲೇ ನೆಹರುರವರ ಕುರಿತ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಬಯಲುಗೊಳಿಸಿದೆ….

Read More
RSS

Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು

ಇತ್ತೀಚೆಗೆ, ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರತಿ ರಾಜಕೀಯ ಪಕ್ಷಗಳು ತಮ್ಮವರೇ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆ ಮೂಲಕ ಅಂಬೇಡ್ಕರ್‌ರವರು ಪ್ರಭಾವಿಸಿದ ದೊಡ್ಡ ಜನಸಂಖ್ಯೆಯ ಒಲವು ಗಳಿಸಲು ಬಯಸುತ್ತಿದ್ದಾರೆ. ಹಾಗಾಗಿ ಅಂದು ಅಂಬೇಡ್ಕರ್ ನಮ್ಮನ್ನು ಹೊಗಳಿದ್ದರು ಎಂಬ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ಅದರಂತೆ ಡಾ. ಅಂಬೇಡ್ಕರ್ ಅವರು 1939 ರಲ್ಲಿ ಪುಣೆಯ RSS ಶಿಬಿರಕ್ಕೆ ಭೇಟಿ ನೀಡಿ “ಸ್ವಯಂಸೇವಕರು ಇತರ ಜಾತಿಯವರನ್ನು ಸಹ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಿಂದ ನಡೆಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ” ಎಂದು ಭಾಷಣ ಮಾಡಿದ್ದರು ಎಂಬ ಸುದ್ದಿಗಳು ಮತ್ತು…

Read More
Kerala

ಕೇರಳದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಎಂದಿರುವ ಆಜ್‌ತಕ್‌ ವರದಿ ಸುಳ್ಳು

“ದೀಪಾವಳಿಯನ್ನು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.  ಭಾರತದಲ್ಲಿಯೂ ಸಹ ಅಂದು ರಾಷ್ಟ್ರೀಯ ರಜೆ ಘೋಷಿಸಿದ್ದಾರೆ. ಆದರೆ ಭಾರತದಲ್ಲಿ ಒಂದು ರಾಜ್ಯ ಮಾತ್ರ ಸಡಗರದಿಂದ ದೀಪಾವಳಿಯನ್ನು ಆಚರಿಸುವುದಿಲ್ಲ. ನಿಜ ನೀವು ಕೇಳಿದ್ದು ಸತ್ಯ. ಭಾರತದಾದ್ಯಂತ  ಸಂಭ್ರಮ ಸಡಗರದಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯಂದೇ ಭಗವಾನ್ ರಾಮ ತನ್ನ ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.  ಆದರೆ ಕೇರಳದಲ್ಲಿ ಈ ಹಬ್ಬವನ್ನು ಆಚರಿಸುವುದಿಲ್ಲ. ಇದರ ಕಾರಣ ಏನು ಅಂದರೆ ಆ ದಿನವೇ ಮಹಾರಾಜ ಮಹಾಬಲಿಯು…

Read More
ಮುಸ್ಲಿಂ

ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು

ಹಲವು ವರ್ಷಗಳಿಂದ ಭಾರತ ಮುಂಬರುವ ದಿನಗಳಲ್ಲಿ ಮುಸ್ಲಿಂ ರಾಷ್ಟ್ರವಾಗಲಿದೆ ಏಕೆಂದರೆ  ಮುಸ್ಲಿಂ ಜನಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಪ್ರತಿಪಾದಿಸಿದ ಹಲವು ಸುದ್ದಿಗಳು, ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ 10 ಏಪ್ರಿಲ್ 2023ರಲ್ಲಿ ದೆಹಲಿಯಲ್ಲಿ ನಡೆದ ಹಿಂದು ಒಕ್ಕುಟ ಸಭೆಯಲ್ಲಿ ಜೈ ಭಗವಾನ್ ಗೋಯಲ್ ಎಂಬ ಬಿಜೆಪಿ ನಾಯಕ “ನಾವು ತ್ರಿಶೂಲ ಹಿಡಿದು ಮಟ್ಟಹಾಕದೇ ಇದ್ದರೆ ಇನ್ನೂ ಆರೇಳು ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗಲಿ” ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅವರ ಮೇಲೆ FIR ಕೂಡ ದಾಖಲಾಗಿತ್ತು….

Read More