Pramod Belagod

ಮಧ್ಯ ಪ್ರದೇಶ

Fact Check: ರೈಲ್ವೆ ನಿಲ್ದಾಣದಲ್ಲಿ ಪೋಲಿಸ್ ಪೇದೆಯೊಬ್ಬರು ವೃದ್ಧನಿಗೆ ತಳಿಸಿರುವ ವೀಡಿಯೋ ಮಧ್ಯಪ್ರದೇಶದ್ದಾಗಿದ್ದು ಉತ್ತರ ಪ್ರದೇಶದ್ದಲ್ಲ

ಮಧ್ಯಪ್ರದೇಶದ ಜಬಲ್‌ಪುರ ರೈಲು ನಿಲ್ದಾಣದಲ್ಲಿ ಪೊಲೀಸ್ ಪೇದೆಯೊಬ್ಬರು ವೃದ್ಧೆಯೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಹಳೆಯ ವಿಡಿಯೋವನ್ನು ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಪೊಲೀಸ್ ಪೇದೆಯೊಬ್ಬರು ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. “ಉತ್ತರ ಪ್ರದೇಶವು ಜಂಗಲ್ ರಾಜ್‌ನತ್ತ ಸಾಗುತ್ತಿದೆ. ಪೊಲೀಸರು ಮುದುಕನನ್ನು ಹೇಗೆ ನಿರ್ದಯವಾಗಿ ಥಳಿಸುತ್ತಿದ್ದಾರೆ ಎಂಬುದನ್ನು ನೋಡಿ. ಅಮಾಯಕ ಮುಸ್ಲಿಮರ ಮನೆಗಳ ಮೇಲೆ ಗುಂಪು ಹತ್ಯೆ, ಬುಲ್ಡೋಜರ್ ಈಗ ಯುಪಿಯಲ್ಲಿ ಸಾಮಾನ್ಯವಾಗಿದೆ.” ಎಂಬ…

Read More

Fact Check: ಕೇರಳದಲ್ಲಿ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ತಪ್ಪು ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗಿದೆ

ಕೇರಳದ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಾದ ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆ ತನ್ನ ಮಗನಿಗೆ ಹೂವಿನ ಹಾರ ಹಾಕಿರುವುದನ್ನು ಕಾಣಬಹುದು.  ವೀಡಿಯೋದಲ್ಲಿ “ಜೀನತ್ ಜಹಾನ್, ಕೇರಳದ ಮುಸ್ಲಿಂ ಮಹಿಳೆ, ಅವರ ಪತಿ ನಿಧನರಾದರು. ಅವರಿಗೆ 3 ಮಕ್ಕಳಿದ್ದರು. ಅವರು ತಮ್ಮ ಹಿರಿಯ ಮಗನನ್ನು ತಮ್ಮ ಮನೆಯಲ್ಲಿಯೇ ಮದುವೆಯಾದರು.” ಎಂಬ ಶೀರ್ಷಿಕೆಯೊಂದಿಗೆ ಅನೇಕರು ಈ ವೀಡಿಯೋವನ್ನು ಹಂಚಿಕೊಂಡು ಇಸ್ಲಾಂ ಧರ್ಮವನ್ನು…

Read More

Fact Check: ಕರ್ನಾಟಕದಲ್ಲಿ ಜೈನ ಮುನಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ವಿಕ್ರಂ ಹೆಗ್ಡೆ ಹಂಚಿಕೊಂಡಿದ್ದ ಸುಳ್ಳು ಮತ್ತೆ ವೈರಲ್ 

ಇತ್ತೀಚೆಗೆ, ಕರ್ನಾಟಕದಲ್ಲಿ ಜೈನ ಸನ್ಯಾಸಿಯೊಬ್ಬರ ಮೇಲೆ ಮುಸ್ಲಿಮರಿಂದ ಹಲ್ಲೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಕೈಗೆ ಗಾಯವಾಗಿರುವ ವ್ಯಕ್ತಿಯ ಫೋಟೋ ಒಂದು ಹರಿದಾಡುತ್ತಿದೆ. ಜೈನ ಮುನಿಯ ಮೇಲಿನ ದಾಳಿಕೋರರು ‘ಕಾಂಗ್ರೆಸ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಪ್ರತಿಪಾದಿಸಲಾಗುತ್ತಿದೆ. “ಇದು ಕಾಂಗ್ರೆಸ್‌ಗೆ ಮತ ಹಾಕುವ ಹಿಂದೂಗಳ ಭವಿಷ್ಯ” ಎಂದು ಸಂದೇಶದೊಂದಿಗೆ ಈ ಪೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಪೋಟೋವನ್ನು ಮೊದಲು ಹರಿಬಿಟ್ಟವರು ಸುಳ್ಳು ಸುದ್ಧಿ ಹರಡಲು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಕುಖ್ಯಾತಿ ಪಡೆದಿರುವ ಪೋಸ್ಟ್‌ ಕಾರ್ಡ್‌…

Read More
ಮೋದಿ

Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…

Read More

Fact Check: ಮುಸ್ಲಿಂ ಹೋಟೆಲ್‌ಗಳಲ್ಲಿ ಹಿಂದುಗಳಿಗೆ ನೀಡುವ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುತ್ತದೆ ಎಂಬುದು ಸುಳ್ಳು

ಮುಸ್ಲಿಂ ಹೋಟೆಲ್‌ಗಳಲ್ಲಿ ಹಿಂದೂಗಳಿಗೆ ನೀಡುವ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವರ್ಷಗಳಿಂದ ಹರಿದಾಡುತ್ತಿದೆ. ಈ ಮೂಲಕ ಹಿಂದುಗಳು ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದನ್ನು ಭಹಿಷ್ಕರಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ” ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದ ಹೆದ್ದಾರಿಗಳಲ್ಲಿ 40ಕ್ಕೂ ಹೆಚ್ಚು ಮುಸ್ಲಿಂ ಢಾಬಾಗಳ ಮೇಲೆ ದಾಳಿ ನಡೆಸಿದ್ದು, ಈ ಎಲ್ಲಾ ಹೋಟೆಲ್‌ಗಳಲ್ಲಿ ಹಿಂದೂಗಳಿಗೆ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುವುದು ಪತ್ತೆಯಾಗಿದೆ. ಆ ಹೋಟೆಲ್‌ಗಳ ಬಗ್ಗೆ ಎಚ್ಚರದಿಂದಿರಿ. ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು…

Read More

Fact Check: ಬೀದಿ ನಾಟಕದ ವೀಡಿಯೋವನ್ನು ಕೇರಳದಲ್ಲಿ RSS ಬೆಂಬಲಿತ ಮಹಿಳೆಯನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆ ಎಂದು ಹಂಚಿಕೆ

“ಕೇರಳದಲ್ಲಿ RSS ಬೆಂಬಲಿತ ಹಿಂದು ಮಹಿಳೆಯೊಬ್ಬಳು ಮುಸ್ಲಿಮರ ಗುಂಡಿಗೆ ಬಲಿಯಾಗಿದ್ದಾಳೆ(केरल में RSS समर्थक हिन्दू महिला को मुस्लिमों ने गोली मारी)” ಎಂದು ಪ್ರತಿಪಾದಿಸಿದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.(ಇಲ್ಲಿ ಮತ್ತು ಇಲ್ಲಿ) ವೀಡಿಯೋದಲ್ಲಿ ಮಲಯಾಳಂನಲ್ಲಿ ಮಾತನಾಡುವುದನ್ನು ನಾವು ಕೇಳಬಹುದು. ಈ ವೈರಲ್ ವೀಡಿಯೋ ಕನ್ನಡದ ಖ್ಯಾತ ಲೇಖಕ ಪಿ. ಲಂಕೇಶ್ ಅವರ ಮಗಳು ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭದ ವೀಡಿಯೋ ಎಂದು ಪತ್ತೆಯಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ,…

Read More
ಕೇರಳ

Fact Check: ಕೇರಳದ ಚರ್ಚ್ ಒಂದರಲ್ಲಿ ₹7,000 ಕೋಟಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂಬುದು ಸುಳ್ಳು

ಕೇರಳದ ಚರ್ಚ್‌ನಲ್ಲಿ ಇತ್ತೀಚೆಗೆ ನಡೆದ ಇಡಿ ದಾಳಿಯ ವೇಳೆ ₹7,000 ಕೋಟಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂದು ₹ 500 ನೋಟುಗಳ ದೊಡ್ಡ ರಾಶಿಯ ಪಕ್ಕದಲ್ಲಿ ಪಾದ್ರಿಯೊಬ್ಬರು ಇರುವ ಫೋಟೋ ಕೊಲಾಜ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಹಲವರು ಹಂಚಿಕೊಂಡಿದ್ದಾರೆ ಮತ್ತು ಮಾಧ್ಯಮಗಳು ಈ ಸುದ್ದಿಯನ್ನು ನಿರ್ಲಕ್ಷಿಸುತ್ತಿವೆ ಎಂದು ಟೀಕಿಸಿದ್ದಾರೆ. ಫೇಸ್‌ಬುಕ್ ಬಳಕೆದಾರರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಹಂಚಿಕೊಳ್ಳುತ್ತಿದ್ದಾರೆ: “ಇಡಿ, ಕೇರಳದ 7000 ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣವನ್ನು…

Read More
ಚೀನಾ

Fact Check: ಚೀನಾದ ಸ್ಯಾಂಡ್‌ಬ್ಯಾಂಕ್ ಸಮುದ್ರ ತೀರದ ವೀಡಿಯೋವನ್ನು, ಮೋಸೆಸ್‌ ದಾಟಿದ ಕೆಂಪು ಸಮುದ್ರದ ಸ್ಥಳ ಎಂದು ಹಂಚಿಕೆ

ಸುತ್ತಲು ಸಮುದ್ರದ ನೀರಿನಿಂದ ಸುತ್ತುವರೆದಿರುವ ಮರಳಿನ ಕಿರಿದಾದ ದ್ವೀಪವನ್ನು ತೋರಿಸುವ ವೀಡಿಯೊ ಒಂದನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಹೀಬ್ರೂ ಪ್ರವಾದಿ ಮೋಸೆಸ್ ಅವನ ಜನರು ಫರೋಹನ ಸೈನ್ಯದಿಂದ ತಪ್ಪಿಸಿಕೊಳ್ಳಲು ಸಹಾಯವಾಗಲೆಂದು ನೀರನ್ನು ಬೇರ್ಪಡಿಸಿದ ಎಂದು ನಂಬಲಾದ ಕೆಂಪು ಸಮುದ್ರದ ಸ್ಥಳ. ಈ ದಾರಿ ವರ್ಷಕ್ಕೆ ಎರಡು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ. ನಂತರ ಅದೃಶ್ಯವಾಗುತ್ತದೆ” ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಮೊದಲಿಗೆ ನಾವು ಈ ವೈರಲ್ ವೀಡಿಯೋಗೆ ಅನೇಕರು ಇದು ಆಫ್ರಿಕಾ…

Read More
ಪ್ರಧಾನ ಮಂತ್ರಿ ವಿಶ್ವಕರ್ಮ

Fact Check: ‘ಪ್ರಧಾನ ಮಂತ್ರಿ ವಿಶ್ವಕರ್ಮ ಉಚಿತ ಹೊಲಿಗೆ ಯಂತ್ರ ಯೋಜನೆ’ಯಡಿಯಲ್ಲಿ ಕೇಂದ್ರ ಸರ್ಕಾರ 15 ಸಾವಿರ ನೀಡಲಿದೆ ಎಂಬುದು ಸುಳ್ಳು

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ, ಹೊಲಿಗೆ ಯಂತ್ರವನ್ನು ಖರೀದಿಸಲು ಕೇಂದ್ರ ಸರ್ಕಾರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ 15,000 ರೂ ಜಮೆ ಮಾಡಲಾಗುತ್ತದೆ. ಹಾಗಾಗಿ ಟೈಲರಿಂಗ್ ಮಾಡಿ ಹಣ ಸಂಪಾದಿಸಬಹುದು. ಕೇಂದ್ರ ಸರ್ಕಾರ ರೂ.20 ಸಾವಿರದವರೆಗೆ ಸಾಲ ನೀಡುತ್ತಿದೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ. ಇದನ್ನು ಅನೇಕ ಸ್ಥಳೀಯ ಮಾಧ್ಯಮಗಳು ಈ…

Read More

Fact Check: G7 ಶೃಂಗಸಭೆಯಲ್ಲಿ ಪೋಪ್ ಅವರನ್ನು ಭೇಟಿ ಮಾಡಿದ ಏಕೈಕ ನಾಯಕ ಪ್ರಧಾನಿ ಮೋದಿ ಎಂದು 2021 ರ ಹಳೆಯ ವೀಡಿಯೊ ಹಂಚಿಕೆ

ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹಾಸ್ಯ ಮಾಡುವ ಪೋಸ್ಟ್‌ ಒಂದನ್ನು ಕೇರಳ ಕಾಂಗ್ರೆಸ್‌ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಇತ್ತೀಚೆಗೆ ವಿವಾದವನ್ನು ಹುಟ್ಟುಹಾಕಿದೆ. ನಂತರ ಕಾಂಗ್ರೆಸ್‌ ಶೀಘ್ರದಲ್ಲೇ ಪೋಸ್ಟ್ ಅನ್ನು ಅಳಿಸಿ ಕ್ರಿಶ್ಚಿಯನ್ನರಲ್ಲಿ ಕ್ಷಮೆಯಾಚಿಸಿದೆ. ಈ ಮಧ್ಯೆ, ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪೋಪ್ ಅವರನ್ನು ಭೇಟಿ ಮಾಡಲು ಎಲ್ಲಾ ರಾಷ್ಟ್ರದ ನಾಯಕರುಗಳ ಪೈಕಿ ಪ್ರಧಾನಿ ಮೋದಿಯನ್ನು ಮಾತ್ರ ಪೋಪ್ ಆಹ್ವಾನಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಪ್ ಪ್ರಧಾನಿ…

Read More