Pramod Belagod

ಎಐ ಚಿತ್ರಗಳು

Fact Check: ರಾಮಾಯಣ ಕಾಲದ ಕುಂಭಕರ್ಣನ ದೈತ್ಯ ಖಡ್ಗ ಪತ್ತೆಯಾಗಿದೆ ಎಂದು ಎಐ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೃಹತ್ ಖಡ್ಗ ಒಂದರ ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಖಡ್ಗವು ರಾಮಾಯಣ ಕಾಲದ ಕುಂಬಕರ್ಣನ ಖಡ್ಗ ಎಂದು ಪ್ರತಿಪಾದಿಸಲಾಗುತ್ತಿದೆ. ಇದೇ ರೀತಿಯ ಅನೇಕ ಪ್ರತಿಪಾದನೆಗಳನ್ನು ಕೆಲವು ಬಲಪಂಥೀಯರು ಹರಿಬಿಡುತ್ತಿದ್ದು ಆಸ್ಟ್ರೇಲಿಯಾ ದೇಶ ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ “ಅಸ್ತ್ರಾಲಯ” ಎಂಬ ಪ್ರದೇಶವಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದೆ. ಬೃಹತ್ ಖಡ್ಗವನ್ನು ಹಂಚಿಕೊಂಡಿರುವ ಕೆಲವರು “ಕುಂಭಕರ್ಣನ ಖಡ್ಗ ಪತ್ತೆ ರಾಮಾಯಣ ನಡೆದಿದೆ ಎಂಬುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕುಂಭಕರ್ಣನ ಖಡ್ಗ ಪತ್ತೆ…

Read More
ಅಶ್ವಿನಿ ವೈಷ್ಣವ್

Fact Check: ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನದಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. “ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳ ತ್ರಿವೇಣಿ” ಎಂದು ವಿಡಿಯೋ ಜೊತೆಗೆ ಶೀರ್ಷಿಕೆ ಬರೆದುಕೊಂಡಿದ್ದರು. ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲೊಂದನ್ನು ತೋರಿಸಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆ ಇಲಾಖೆಯನ್ನು ಅಭಿವೃದ್ದಿ ಮಾಡುತ್ತಿದೆ ಎಂಬ ಸಂದೇಶವನ್ನು ವಿಡಿಯೋ ಹೊಂದಿತ್ತು. ಸಚಿವರು ವಿಡಿಯೋ ಪೋಸ್ಟ್ ಮಾಡಿದ್ದ ಸ್ವಲ್ಪ ಹೊತ್ತಿನಲ್ಲೇ ಅದನ್ನು…

Read More
ಪಾಕಿಸ್ತಾನ

Fact Check: ಪಾಕಿಸ್ತಾನ ಸೇನೆಯು ಪಶ್ತೂನ್ ಮತ್ತು ಬಲೂಚ್‌ ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ವಿಯೆಟ್ನಾಂನ ಜೈಲಿನ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ

ಸಣ್ಣ ಕೋಣೆಗಳಲ್ಲಿ ಕೆಲವು ಜನರನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು “ಪಾಕಿಸ್ತಾನ ಸೇನೆಯ ಜೈಲುಗಳಲ್ಲಿ ಪಶ್ತೂನ್ ಮತ್ತು ಬಲೂಚ್ ಮೇಲೆ ನಡೆಸಿದ ಕ್ರೌರ್ಯಗಳು ಹೇಳಲಾಗದವು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಮಾಹಿತಿ ಸುಳ್ಳಾಗಿದ್ದು, ವಿಯೆಟ್ನಾಂನ ಕಾನ್ ಡಾವೊ ಎಂಬ ಕಾರಾಗೃಹವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ, ಅದನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ನಮ್ಮ ತಂಡ ವೈರಲ್ ಪೋಸ್ಟ್ ಅನ್ನು…

Read More
ವಕ್ಫ್ ತಿದ್ದುಪಡಿ

Fact Check: ವಕ್ಫ್ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ಮುಸ್ಲಿಮರ ಪ್ರತಿಭಟನೆ ಎಂದು ಕಾಲಾ ತಾಜಿಯಾ ಮೆರವಣಿಗೆಯ ವಿಡಿಯೋ ಹಂಚಿಕೆ

ಆಗಸ್ಟ್ 8, 2024 ರಂದು, ವಕ್ಫ್ (ತಿದ್ದುಪಡಿ) ಮಸೂದೆ, 2024 ಮತ್ತು ಮುಸ್ಲಿಂ ವಕ್ಫ್ (ರದ್ದತಿ) ಮಸೂದೆ, 2024 ಎಂಬ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ದೇಶದ ಅನೇಕ ಮುಸ್ಲಿಂ ಸಂಘಟನೆಗಳು ಈ ಮಸೂದೆಯ ವಿರುದ್ಧ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದವು. ಈಗ ಈ ಪ್ರತಿಭಟನೆಗಳಿಗೆ ಹೋಲಿಸಿ ವೀಡಿಯೊ ಒಂದು ವೈರಲ್ ಆಗಿದ್ದು, ದೆಹಲಿಯ ಕನ್ನಾಟ್ ಪ್ಲೇಸ್ ರಸ್ತೆ ತಡೆ ನಡೆಸುವ ಮೂಲಕ ಮುಸ್ಲಿಮರು ವಕ್ಫ್ ಮಂಡಳಿ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟಿಸಿದರು ಎಂದು ಹೇಳಲಾಗಿದೆ. ಈ ಒಂದು…

Read More

Fact Check: ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಗೆ ಥಳಿಸುವ ವಿಡಿಯೋವನ್ನು ಅನೇಕ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಬೈಕ್‌ ನಲ್ಲಿ ಬರುವ ಹುಡುಗ ಮತ್ತು ಹುಡುಗಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುವ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಯುವಕನ ಜೊತೆಗೆ ಅಪ್ರಾಪ್ತ ಹಿಂದೂ ಬಾಲಕಿ ಓಡಿಹೋಗುತ್ತಿದ್ದ ಸಂದರ್ಭ ಹಿಂದೂ ಸಂಘಟನೆಯ ಯುವಕರು ಹಿಡಿದು ಆತನಿಗೆ ಬುದ್ಧಿ ಕಲಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ವೀಡಿಯೋವನ್ನು “ಮುಸ್ಲಿಂ ಹುಡುಗ “ಹಿಂದೂ ಅಪ್ರಾಪ್ತ ಬಾಲಕಿ”ಯೊಂದಿಗೆ ಓಡಿಹೋಗುತ್ತಿದ್ದನು; ಮುಂದೆ ಏನಾಯಿತು, ಇದು ಈ ಸಮಯದ ಅಗತ್ಯ – ಜನರು ತಪ್ಪಾದ ಸಂದರ್ಭದಲ್ಲಿ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ…

Read More
ದೀಪೇಂದರ್ ಸಿಂಗ್ ಹೂಡ

Fact Check: ಹರಿಯಾಣದಲ್ಲಿ ಕಾಂಗ್ರೆಸ್‌ ಸೋತ ಬಳಿಕ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡ ಕಣ್ಣೀರು ಹಾಕಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದರೂ ಸಹ ಕಾಂಗ್ರೆಸ್ 36 ಸ್ಥಾನಕ್ಕಷ್ಟೇ ಸೀಮಿತವಾಗಿದೆ ಮತ್ತು ಬಿಜೆಪಿ 48 ಸೀಟುಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಹರಿಯಾಣ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡಾ ಕಣ್ಣೀರು ಹಾಕುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅನೇಕ ಎಕ್ಸ್ ಮತ್ತು ಫೇಸ್‌ಬುಕ್‌ ಬಳಕೆದಾರರು ಹೂಡಾ ಅವರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿ “#HaryanaElectionResult,…

Read More
ಇಸ್ರೇಲ್

Fact Check: ಲೆಬನಾನ್ ಜನರು ಇಸ್ರೇಲ್ ರಕ್ಷಣಾ ಪಡೆಯ ಸೈನಿಕರನ್ನು ಬೆಂಬಲಿಸಿದ್ದಾರೆ ಎಂಬುದು ಸುಳ್ಳು

ಲೆಬನಾನ್ ಬೀದಿಗಳಲ್ಲಿ ಇಸ್ರೇಲ್ ರಕ್ಷಣಾ ಪಡೆಯ (ಐಡಿಎಫ್) ಸೈನಿಕರನ್ನು ಲೆಬನಾನ್ ನಾಗರಿಕರು ಸ್ವಾಗತಿಸುತ್ತಿರುವುದನ್ನು ತೋರಿಸುವ 1 ನಿಮಿಷ 35 ಸೆಕೆಂಡುಗಳ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. “ಲೆಬನಾನ್ ಜನರು… ಇಸ್ರೇಲಿ ಧ್ವಜಗಳನ್ನು ಹಾರಿಸಿದರು, ಸೈನಿಕರಿಗೆ ನೀರಿನ ಬಾಟಲಿಗಳು ಮತ್ತು ಉಪಾಹಾರವನ್ನು ನೀಡಿದರು ಮತ್ತು ನಮ್ಮನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಹೇಳಿದರು. ಆದರೆ ಮತ್ತೊಂದೆಡೆ, ಭಾರತದಲ್ಲಿ ಕೆಲವರು #HezbollahTerrorists ಗಳನ್ನು ತಮ್ಮ ತಂದೆಯರು ಎಂದು ಏಕೆ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ” ಎಂದು ಎಕ್ಸ್ ನಲ್ಲಿ ಬರೆದು…

Read More
ತಾಲಿಬಾನ್

Fact Check: RSS, BJP ಬಗ್ಗೆ ಪಾಕಿಸ್ತಾನದ ಇಸ್ಲಾಮಿಕ್ ಬೋಧಕ ಮಾತನಾಡಿದ್ದಾರೆಯೇ ಹೊರತು ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಅಲ್ಲ

ಸಾಂಪ್ರದಾಯಿಕ ಇಸ್ಲಾಮಿಕ್ ಉಡುಪನ್ನು ಧರಿಸಿದ ವ್ಯಕ್ತಿಯೊಬ್ಬ ಆರ್‌ಎಸ್ಎಸ್, ಬಿಜೆಪಿ ಮತ್ತು ಮರಾಠರ ಬಗ್ಗೆ ಮಾತನಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವೀಡಿಯೋದಲ್ಲಿರುವ ವ್ಯಕ್ತಿ ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ. “ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಯಾವುದೇ ದೇಶವು ಭಾರತದ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಬಿಜೆಪಿ ಮತ್ತು ಆರ್‌ಎಸ್ಎಸ್ ಅತ್ಯಂತ ಶಕ್ತಿಶಾಲಿ” ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಭಾರತದ ಮೇಲೆ ದಾಳಿ ಮಾಡಲು, ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿದ್ದಾರೆ ಎಂದು…

Read More
ದೆಹಲಿ

Fact Check: ದೆಹಲಿಯಲ್ಲಿ ಚಾಕು ಹಿಡಿದು ಯುವಕರು ಮಹಿಳೆಗೆ ಬೆದರಿಕೆ ಹಾಕುವ ವಿಡಿಯೋವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ದೆಹಲಿಯ ಸುಲ್ತಾನ್ಪುರಿಯ ಜನನಿಬಿಡ ಪ್ರದೇಶದಲ್ಲಿ ಕೆಲವು ಹದಿಹರೆಯದವರು ಮಹಿಳೆಗೆ ಚಾಕುವಿನಿಂದ ಬೆದರಿಕೆ ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಅಪರಾಧಕ್ಕೆ ಮುಸ್ಲಿಂ ಹುಡುಗರು ಕಾರಣ ಎಂದು ಅನೇಕ ಬಳಕೆದಾರರು ಆರೋಪಿಸಿ ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದ್ದು, ““ये वीडियो सुल्तान पुरी F3 दिल्ली की है इसे वाईरल कर दो ताकि ये सभी बदमास पकड़े जाए। 4 मुस्लिम लड़कों के सामने सैंकड़ों हिजड़े नामर्द…

Read More
ಸಿಯಾರಾಮ್ ಬಾಬ

Fact Check: 188 ವರ್ಷದ ವ್ಯಕ್ತಿ ಗುಹೆಯಲ್ಲಿ ಪತ್ತೆ ಎಂಬುದು ನಿಜವಲ್ಲ, ಇಲ್ಲಿದೆ ವಿವರ

ಇತ್ತೀಚೆಗೆ ಗುಹೆಯಲ್ಲಿ 188 ವರ್ಷದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ ಎಂಬ ವೀಡಿಯೋ ಒಂದು ಸಾಕಷ್ಟು ವೈರಲ್ ಆಗಿದ್ದು. ಈ ವೀಡಿಯೋದಲ್ಲಿ ಜನರು ವೃದ್ಧರಿಗೆ ನಡೆಯಲು ಸಹಾಯ ಮಾಡುವುದನ್ನು ನೋಡಬಹುದು. ಎಕ್ಸ್‌(ಟ್ವಿಟರ್) ನಲ್ಲಿ ಈ ವಿಡಿಯೋ ತುಣುಕು ಸಾಕಷ್ಟು ವೈರಲ್ ಆಗಿದ್ದು “ಇವರು ಸಂತ ಸಿಯಾರಾಮ್ ಬಾಬಾ, ಹನುಮಾನ್ ಜಿಯ ಮಹಾನ್ ಭಕ್ತ. ಬಾಬಾ ಅವರ ವಯಸ್ಸು 121 ವರ್ಷಗಳು, ಈ ವಯಸ್ಸಿನಲ್ಲೂ ಬಾಬಾ ಕನ್ನಡಕವಿಲ್ಲದೆ 16-18 ಗಂಟೆಗಳ ಕಾಲ ನಿರಂತರವಾಗಿ ರಾಮಾಯಣವನ್ನು ಓದುತ್ತಾರೆ. ಮತ್ತು ತಮ್ಮದೇ ಆದ ಆಹಾರವನ್ನು…

Read More