Pramod Belagod

Fact Check: 2023 ರ ಇಸ್ರೇಲ್ ತಂಡದ ಫೋಟೋವನ್ನು ಪ್ಯಾರಿಸ್ 2024ರ ಒಲಿಂಪಿಕ್ಸ್‌ನ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಒಲಿಂಪಿಕ್ ತಂಡವು ‘ಅವರನ್ನು ಈಗ ಮನೆಗೆ ತನ್ನಿ’ ಎಂಬ ರಚನೆಯನ್ನು ಮಾಡುತ್ತಿರುವ ಫೋಟೋ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. “ಅವರನ್ನು ಮನೆಗೆ ತನ್ನಿ! ಇಸ್ರೇಲಿ ಒಲಂಪಿಕ್ ತಂಡವು ಒಲಿಂಪಿಕ್ ಕ್ರೀಡಾಕೂಟದಲ್ಲಿ ‘ಬ್ರಿಂಗ್ ದೆಮ್ ಹೋಮ್’ ಪಿನ್ ಅನ್ನು ಧರಿಸಲು ಅನುಮತಿಸಲಿಲ್ಲ, ಆದ್ದರಿಂದ ಸಿಂಕ್ರೊನೈಸ್ ಮಾಡಿದ ಈಜು ತಂಡವು ತಮ್ಮದೇ ಆದ ‘ಬ್ರಿಂಗ್ ದೆಮ್ ಹೋಮ್’ ಅಭಿಯಾನವನ್ನು ರಚಿಸಿತು.” ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ವೈರಲ್ ಹೇಳಿಕೆಯ ಸತ್ಯಾಸತ್ಯತೆಯನ್ನು…

Read More

Fact Check: ಮಹಿಳೆಯರು ತಮಗೆ ಇಷ್ಟ ಬಂದ ಬಟ್ಟೆ ಧರಿಸಬಹುದು ಎಂದು ಸೌದಿ ಅರೇಬಿಯಾ ರಾಜಕುಮಾರನ ಹೇಳಿಲ್ಲ

ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಮಹಿಳೆಯರು ಏನು ಧರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಇತ್ತೀಚೆಗೆ ಹೇಳಿದ್ದಾರೆ ಎಂಬ ಸಂದೇಶದ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್: ಇನ್ನು ಮುಂದೆ, ಸೌದಿ ಅರೇಬಿಯಾದ ಮಹಿಳೆಯರು ಮಾತ್ರ ಯಾವ ಬಟ್ಟೆಗಳನ್ನು ಧರಿಸಬೇಕೆಂದು ನಿರ್ಧರಿಸಬಹುದು” ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ ಬಳಕೆದಾರರು ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಅನ್ನು ಇಲ್ಲಿ ವೀಕ್ಷಿಸಿ. ಇದನ್ನು ಫೇಸ್ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ,…

Read More

Fact Check: ಬೆಂಗಳೂರಿಗೆ ಸರಬರಾಜು ಆಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ರಾಜಸ್ಥಾನದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ರೈಲಿನಲ್ಲಿ ಸರಬರಾಜು ಆಗುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವನ್ನು ಬೆರೆಸಲಾಗಿದೆ ಎಂದು ಆರೋಪಿಸಿ ವಿವಾದಿತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದುಪರ ಸಂಘಟನೆಗಳು ಕೆಎಸ್‌ಆರ್‌(ಯಶವಂತಪುರ) ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉದ್ದನೆಯ ಬಾಲ ಇರುವ ಕುರಿ ಮಾಂಸ ಕಂಡು ಇದು ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ದಾಖಲೆಯನ್ನು ಒದಗಿಸಿಲ್ಲ. ಇದರ ನಂತರ ಅಲ್ಲಿಗೆ ಆಗಮಿಸಿದ ಪೋಲಿಸರು ಮತ್ತು ಆಹಾರ…

Read More
ನಮಾಜ್‌

Fact Check: ರಸ್ತೆಯಲ್ಲಿ ನಮಾಜ್‌ ಸಲ್ಲಿಸಿದ ಮುಸ್ಲಿಂ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂಬುದು ಸುಳ್ಳು

ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಧರ್ಮಗುರು ಅಥವಾ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. “ಹೀಗಾಗಿಯೇ ಬಾಂಗ್ಲಾದೇಶ ಪೊಲೀಸರು ಮೌಲಾನಾರನ್ನು ಬಂಧಿಸಿ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಎಲ್ಲ ನಮಾಜಿಗಳನ್ನು ಹೊರಹಾಕಿದರು. ಯಾವುದೇ ಇಸ್ಲಾಮಿಕ್ ರಾಷ್ಟ್ರವು ಅಥವಾ ಸೌದಿಯಲ್ಲಿ ರಸ್ತೆಯಲ್ಲಿ ನಮಾಜ್ ಅನ್ನು ಅನುಮತಿಸುವುದಿಲ್ಲ ಅವರು ರಸ್ತೆಯಲ್ಲಿ ನಮಾಜ್ ಮಾಡುವವರನ್ನು ಬಂಧಿಸಿ ದಂಡ ವಿಧಿಸುತ್ತಾರೆ. ಭಾರತದಲ್ಲಿ ಪ್ರತಿಪಕ್ಷಗಳು ಅಳಲು ಪ್ರಾರಂಭಿಸುತ್ತವೆ.” ಎಂದು ಅದನ್ನು ಭಾರತಕ್ಕೆ ಹೋಲಿಸಿ ಹಂಚಿಕೊಂಡಿದ್ದಾರೆ. pic.twitter.com/KaKT4uwqnb@imMAK02 @khanumarfa @RanaAyyub This…

Read More

Fact Check: ಏಷ್ಯನ್ ದಾಖಲೆ ಮುರಿದ ಭಾರತೀಯ ಪುರುಷರ ರಿಲೇ ತಂಡದ 2023ರ ವಿಡಿಯೋ ಇತ್ತೀಚಿನದು ಎಂದು ವೈರಲ್

ಕಳೆದ ವರ್ಷದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ಭಾರತೀಯ ಪುರುಷರ ರಿಲೇ ತಂಡವು 2 ನಿಮಿಷ 59.05 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಏಷ್ಯನ್ ದಾಖಲೆಯನ್ನು ಮುರಿಯುವ ವೀಡಿಯೊ ಇತ್ತೀಚಿನದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 4 ನಿಮಿಷ 14 ಸೆಕೆಂಡುಗಳ ವೀಡಿಯೊದಲ್ಲಿ ಭಾರತದ ಪುರುಷರ 4×400 ಮೀಟರ್ ರಿಲೇ ತಂಡವು ಗ್ರೇಟ್ ಬ್ರಿಟನ್ ಮತ್ತು ಜಪಾನ್ ನಂತಹ ತಂಡಗಳನ್ನು ಹಿಂದಿಕ್ಕಿ, 2 ನಿಮಿಷ 59.05 ಸೆಕೆಂಡುಗಳಲ್ಲಿ ಗುರಿ ತಲುಪಿ ಯುನೈಟೆಡ್ ಸ್ಟೇಟ್ಸ್…

Read More
ಮುಂಬೈ

Fact Check: 2015 ರಲ್ಲಿ ಮುಂಬೈನ ಸ್ಥಳೀಯ ರೈಲು ಪ್ಲಾಟ್ಫಾರ್ಮ್‌ಗೆ ಡಿಕ್ಕಿ ಹೊಡೆದ ವೀಡಿಯೊವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ

ಪ್ಯಾಸೆಂಜರ್ ರೈಲು ಪ್ಲಾಟ್ ಫಾರ್ಮ್ ಗೆ ಡಿಕ್ಕಿ ಹೊಡೆಯುವ ಸಿಸಿಟಿವಿ ದೃಶ್ಯಾವಳಿಗಳು (ಇಲ್ಲಿ ಮತ್ತು ಇಲ್ಲಿ) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡ ಬಳಕೆದಾರರು ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆಯಲ್ಲಿ ಏನು ನಡೆಯುತ್ತಿದೆ ಎಂದು ಕೇಳುತ್ತಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತಗಳ ನಂತರ ಇದು ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ವೈರಲ್ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ವೈರಲ್ ವೀಡಿಯೊದ ಕೆಲವು ಕೀಫ್ರೇಮ್ಗಳನ್ನು ಬಳಸಿಕೊಂಡು ನಾವು ರಿವರ್ಸ್…

Read More
ಕಮಲಾ ಹ್ಯಾರಿಸ್

Fact Check: ಜೆಫ್ರಿ ಎಪ್ಸ್‌ಸ್ಟೈನ್ ಜೊತೆ ಕಮಲಾ ಹ್ಯಾರಿಸ್ ಇರುವ AI ಫೋಟೋ ಹಂಚಿಕೊಳ್ಳುತ್ತಿರುವ ಟ್ರಂಪ್ ಬೆಂಬಲಿಗರು

ಜೋ ಬೈಡನ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದಕ್ಕೆ ಸರಿದು ತಮ್ಮ ಸ್ಥಾನಕ್ಕೆ  ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆ, ಡೆಮಕ್ರಟಿಕ್ ಪಕ್ಷದ ವಿರೋಧಿಗಳು ಮತ್ತು ಡೊನಾಲ್ಡ್‌ ಟ್ರಂಪ್ ಬೆಂಬಲಿಗರು ಹಾಗೂ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಕಮಲಾ ಹ್ಯಾರಿಸ್‌ ಅವರ ಮೇ AI ರಚಿತ ಜೆಫ್ರಿ ಎಪ್ಸ್‌ಸ್ಟೈನ್ ಜೊತೆ ಕಮಲಾ ಹ್ಯಾರಿಸ್ ಇರುವ ಚಿತ್ರವನ್ನು ಹಂಚಿಕೊಳ್ಳುತ್ತಿರುವ ಟ್ರಂಪ್ ಬೆಂಬಲಿಗರು ಈಗ, ಕೆರಿಬಿಯನ್ ದ್ವೀಪದಲ್ಲಿ ಶಿಕ್ಷೆಗೊಳಗಾದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೈನ್…

Read More
ಪಶ್ಚಿಮ ಬಂಗಾಳ

Fact Check: ಪಶ್ಚಿಮ ಬಂಗಾಳದಲ್ಲಿ ಮಹಿಳೆ ಮೇಲೆ ಹಲ್ಲೆ: ಸುಳ್ಳು ಕೋಮು ಆರೋಪದೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಪುರುಷರ ಗುಂಪೊಂದು ಮಹಿಳೆಯನ್ನು ಕ್ರೂರವಾಗಿ ಥಳಿಸುತ್ತಿರುವ ಆತಂಕಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು “ಪಶ್ಚಿಮ ಬಂಗಾಳದಲ್ಲಿ ಪೊಲೀಸರ ಸಮ್ಮುಖದಲ್ಲಿ ಹಿಂದೂ ಮಹಿಳೆಯ ಮೇಲೆ ಮುಸ್ಲಿಂ ಪುರುಷರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಹಂಚಿಕೊಳ್ಳುತ್ತಿದ್ದಾರೆ. (ಗಮನಿಸಿ: ವೀಡಿಯೊ ಹಿಂಸಾತ್ಮಕ ದೃಶ್ಯದಿಂದ ಕೂಡಿರುವುದರಿಂದ ನಾವು ಆರ್ಕೈವ್ ಗಳು ಅಥವಾ ಲಿಂಕ್ ಗಳನ್ನು ಒದಗಿಸಿಲ್ಲ) ಫ್ಯಾಕ್ಟ್‌ ಚೆಕ್: ಈ ಹೇಳಿಕೆ ಸುಳ್ಳಾಗಿದ್ದು, ಮಕ್ಕಳ ಅಪಹರಣದ ಶಂಕೆಯ ಮೇಲೆ ಗುಂಪೊಂದು ಮಹಿಳೆಯನ್ನು ಥಳಿಸಿದೆ ಎಂದು ಬರಾಸತ್‌ನ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ಷಾ ಝಖಾರಿಯಾ ದಿ…

Read More
ಲೆಬನಾನ್

Fact Check: ಲೆಬನಾನ್‌ನ ಹಳೆಯ ವೀಡಿಯೊವನ್ನು ಲಂಡನ್ ನಲ್ಲಿ ನಡೆದ ಮೊಹರಂ ರ್ಯಾಲಿಯ ದೃಶ್ಯಗಳು ಎಂದು ಹಂಚಿಕೊಳ್ಳಲಾಗಿದೆ

ಮೊಹರಂ ಆಚರಣೆಯ ಭಾಗವಾಗಿ ಹಲವಾರು ವ್ಯಕ್ತಿಗಳು ಹರಿತವಾದ ವಸ್ತುಗಳಿಂದ ತಮ್ಮನ್ನು ಹಾನಿಗೊಳಿಸಿಕೊಳ್ಳುವ, ರಕ್ತಸ್ರಾವ ಮಾಡಿಕೊಳ್ಳುವ ಮತ್ತು ಆಶುರಾ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಮೊಹರಂ ರ್ಯಾಲಿಯನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ಕೈಯಲ್ಲಿ ಉದ್ದವಾದ, ಚೂಪಾದ ವಸ್ತುಗಳನ್ನು (ಮಚ್ಚುಗಳು) ಹೊಂದಿರುವ ಜನರು, ರಕ್ತಸಿಕ್ತ ಬಿಳಿ ಬಟ್ಟೆಗಳನ್ನು ಧರಿಸಿ, ಮೆರವಣಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆಯುವುದನ್ನು ನಾವು ನೋಡಬಹುದು. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌…

Read More
ಜಾತಿ ದೌರ್ಜನ್ಯ

Fact Check: ಮಧ್ಯಪ್ರದೇಶದಲ್ಲಿ ಮಹಿಳೆಯರನ್ನು ಜೀವಂತ ಸಮಾಧಿ ಮಾಡಿದ ಘಟನೆ ಜಾತಿ ದೌರ್ಜನ್ಯದ ಪ್ರಕರಣವಲ್ಲ

ಮಧ್ಯಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂದು ಹೇಳಲಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಈ ಪೋಟೋವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದರೂ, ಪ್ರಕರಣದ ಸಂತ್ರಸ್ತರು ಮತ್ತು ಆರೋಪಿಗಳು ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಇದು ಜಾತಿ ದೌರ್ಜನ್ಯದ ಪ್ರಕರಣವಲ್ಲ. ಇಬ್ಬರು ಮಹಿಳೆಯರನ್ನು ಮಮತಾ ಪಾಂಡೆ ಮತ್ತು ಆಶಾ…

Read More