Fact Check: ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯನ್ನು ಮತಾಂತರಿಸಲಾಗಿದೆ ಎಂದು ಅವಾಮಿ ಲೀಗ್‌ನ ಮುಸ್ಲಿಂ ಯುವತಿಯ ವೀಡಿಯೊ ವೈರಲ್
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಹಿಂದೂ ಹುಡುಗಿಯನ್ನು ಸೆರೆಹಿಡಿದು, ಅವಮಾನಿಸಿ ಕೊಳದಲ್ಲಿ ಮುಳುಗಿಸಲಾಗಿದೆ ಎಂದು ವೀಡಿಯೊ ಒಂದು ವೈರಲ್ ಆಗಿದೆ. ವೈರಲ್ ವೀಡಿಯೊವನ್ನು ಹಂಚಿಕೊಳ್ಳುವವರು “ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಲಾಗುತ್ತಿದೆ ಮತ್ತು ಹಿಂದೂಗಳು ಮುಸ್ಲಿಮರಾಗಲು ಸಿದ್ಧರಿದ್ದಾರೆ ಮತ್ತು ನಿಮ್ಮ ಪೂರ್ವಜರು ಯಾವ ಸ್ಥಿತಿಯಲ್ಲಿ ಬದುಕಿದ್ದರು ಎಂದು ಯೋಚಿಸಿ ನೋಡಿ.. ಮತ್ತು ಮುಂದೊಂದು ದಿನ ನೀವು ಕೂಡ ಅದೇ ಸ್ಥಿತಿಯಲ್ಲಿರುತ್ತೀರಿ” ಎಂದು ಪ್ರತಿಪಾದಿಸಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. https://twitter.com/AshwiniUpadhyay/status/1822474926936277150 ಎಕ್ಸ್(ಟ್ವಿಟರ್)ನಲ್ಲಿ ವೈರಲ್ ಹೇಳಿಕೆಗಳ…