Pramod Belagod

ANI

Fact Check: ಬಾಂಗ್ಲಾದೇಶದ ಹಿಂದು ವೃದ್ಧರೊಬ್ಬರು ಕಳೆದು ಹೋದ ಮಗನಿಗಾಗಿ ಪ್ರತಿಭಟಿಸಿದ್ದಾರೆ ಎಂದು ಸುಳ್ಳು ಹಂಚಿಕೊಂಡು ಕ್ಷಮೆ ಕೇಳಿದ ANI

ರಸ್ತೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಕಾಣೆಯಾದ ತನ್ನ ಮಗನ ಪೋಸ್ಟರ್‌ನೊಂದಿಗೆ ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬರು ಪ್ರತಿಭಟಿಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಹಂಚಿಕೊಳ್ಳುವವರು ಬರೆದಿದ್ದಾರೆ. ಇದನ್ನು ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್ಐ) ಕೂಡ ಇದೇ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಂಡಿದೆವು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾಧನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ಹೇಳಿಕೆ ಸುಳ್ಳಾಗಿದ್ದು, ಎಎನ್ಐ ವೀಡಿಯೊದಲ್ಲಿರುವ…

Read More
ಇರಾನಿ ಗ್ಯಾಂಗ್‌

Fact Check: ರಾಜ್ಯದಲ್ಲಿ ಇರಾನಿ ಗ್ಯಾಂಗ್‌ ಕಳ್ಳತನ ಮತ್ತು ದರೋಡೆ ಮಾಡುತ್ತಿರುವ ಪ್ರಕರಣಗಳು ನಿಜವಾಗಿದೆ

ಇತ್ತೀಚೆಗೆ ಇರಾನಿ ಗ್ಯಾಂಗ್ ಹೆಸರಿನ ದರೋಡೆಕೋರ ಗುಂಪೊಂದು ಬೆಡ್‌ಶೀಟ್‌ ಮಾರುವ ನೆಪದಲ್ಲಿ ಮನೆಗಳನ್ನು ಲೂಟಿ ಮಾಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಸಂದೇಶದಲ್ಲಿ “ಇವರು ಬೀದರ್ ಮತ್ತು ಗುಲ್ಬರ್ಗಾ ಇರಾನಿ ಜನರು, ಇವರು ಬೆಡ್‌ಶೀಟ್ ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಅವರೆಲ್ಲರೂ ದರೋಡೆಕೋರರು ದಯವಿಟ್ಟು ಗಮನಿಸಿ. ಗ್ಯಾಂಗ್‌ನ ಸದಸ್ಯರು ಹಗಲಿನಲ್ಲಿ ಕಂಬಳಿ ಮಾರಾಟ ಮಾಡುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸುತ್ತಾರೆ, ಮನೆ ಸಮೀಕ್ಷೆ ಮಾಡಿ ನಂತರ ಮನೆಯನ್ನು ಲೂಟಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬೀಟ್…

Read More

Fact Check: ಬಿಜೆಪಿ ನಾಯಕ ಬ್ಯಾಂಕ್‌ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೆ

ಬಿಜೆಪಿ ನಾಯಕನೊಬ್ಬ ಬ್ಯಾಂಕ್‌ ಮ್ಯಾನೆಜರ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಬ್ಯಾಂಕ್ ಆಫ್ ಮಹಾರಾಷ್ಟ್ರ ಕಚೇರಿಯಲ್ಲಿ ಕುಳಿತಿರುವ ಗುಂಪನ್ನು ತೋರಿಸುತ್ತದೆ, ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗುತ್ತದೆ. ಭಾರತೀಯ ಜನತಾ ಪಕ್ಷದ ನಾಯಕ ಎಂದು ಹೇಳಲಾದ ಹಲ್ಲೆಕೋರನು ಮೇಜಿನ ಮುಂದಿರುವ ವ್ಯಕ್ತಿಗೆ ಅನೇಕ ಬಾರಿ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಎಕ್ಸ್ ನಲ್ಲಿ ವೈರಲ್ ಆಗಿರುವ ಕ್ಲಿಪ್ ಅನ್ನು ಹಂಚಿಕೊಂಡ ಬಳಕೆದಾರರೊಬ್ಬರು, “ಬಿಜೆಪಿ ನಾಯಕನಿಗೆ ಸಾರ್ವಜನಿಕ…

Read More
ರಾಜ್‌ದೀಪ್‌ ಸರ್ದೇಸಾಯಿ

Fact Check: ಕೋಲ್ಕತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ರಾಜ್‌ದೀಪ್‌ ಸರ್ದೇಸಾಯಿ ಹಳೆಯ ವಿಡಿಯೋ ತಪ್ಪು ಮಾಹಿತಿಯೊಂದಿಗೆ ವೈರಲ್

ಕೋಲ್ಕತಾದ R.G ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ 31 ವರ್ಷದ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಅವರನ್ನು ಟೀಕಿಸಲಾಗುತ್ತಿದೆ. ಅವರು ದೂರದರ್ಶನದ ಪ್ಯಾನಲ್ ಚರ್ಚೆಯನ್ನು ತೋರಿಸುತ್ತಿರುವ ವೀಡಿಯೊ ವೈರಲ್ ಆಗಿದ್ದು, ಸಂಭಾಷಣೆಯನ್ನು ಬೇರೆಡೆಗೆ ತಿರುಗಿಸಲು ಅವರು ಪ್ರಯತ್ನಿಸುತ್ತಿರುವುದನ್ನು ಗಮನಿಸಿ ಸರ್ದೇಸಾಯಿ ಅವರನ್ನು ಬಳಕೆದಾರರು ಟೀಕಿಸಿದ್ದಾರೆ. “ರಾಜ್‌ದೀಪ್ “ದಲಾಲ್” ಸರ್ದೇಸಾಯಿ ಯುಪಿ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಅನುಸರಿಸುವ…

Read More
ಮುಸ್ಲಿಮರ ಜನಸಂಖ್ಯೆ

Fact Check: ಯುಕೆಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತೀಚೆಗೆ ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗುತ್ತಿದೆ. ಯರೋಪ್‌ ರಾಷ್ಟ್ರಗಳಲ್ಲಿ ವಲಸೆ ವಿರೋಧಿ ಹೋರಾಟಗಳ ಕೂಗು ಹೆಚ್ಚಾಗುತ್ತಿದ್ದಂತೆ ಈಗ, ಮುಸ್ಲಿಂ ಸಮುದಾಯ ಮತ್ತು ಅವರ ಧರ್ಮದ ಕುರಿತು ಕೆಲವು ಮತಾಂಧ(ಫ್ಯಾಸಿಸ್ಟ್)ರು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಬಿಡುವ ಮೂಲಕ ಸಮಾಜದ ಎಲ್ಲಾ ಸಮಸ್ಯೆಗಳ ಕೇಂದ್ರ ಬಿಂದು ಮುಸ್ಲಿಮರು ಎಂದು ಬಿಂಬಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಹಿಷ್ಕರಿಸುವ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿ, ಯುಕೆ ಅಥವಾ ಇಂಗ್ಲೆಂಡಿನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆಗಳ ಸಂದೇಶವೊಂದು…

Read More
ಡಾ. ಬಿ.ಆರ್ ಅಂಬೇಡ್ಕರ್

Fact Check: ಡಾ. ಬಿ.ಆರ್ ಅಂಬೇಡ್ಕರ್ ಅವರ “ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಕೃತಿಯ ಕುರಿತು ಸುಳ್ಳು ಹಂಚಿಕೊಳ್ಳಲಾಗುತ್ತಿದೆ

ಡಾ. ಬಿ. ಆರ್ ಅಂಬೇಡ್ಕರ್ ಅವರು ನಮ್ಮ ದೇಶ ಕಂಡ ಮಹಾನ್ ಜ್ಞಾನಿಗಳಲ್ಲಿ ಒಬ್ಬರು. ಹಾಗೆಯೇ ಮಹಾಮಾನವತಾವಾದಿ ಎಂದೇ ಹೆಸರಾದವರು. ಭಾರತ ದೇಶದ ಸಂವಿಧಾನವನ್ನು ರೂಪಿಸುವಾಗ ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಅವಕಾಶ, ಗೌರವಗಳು ಕಲ್ಪಿಸಿಕೊಡುವ ಸಲುವಾಗಿ ನಮ್ಮ ದೇಶವನ್ನು ಧರ್ಮ ನಿರಪೇಕ್ಷತೆಯ ರಾಷ್ಟ್ರವನ್ನಾಗಿ ಮಾಡಿ ಭಾರತದ ವೈವಿದ್ಯತೆಗೆ, ಬಹುತ್ವಕ್ಕೆ ಮತ್ತು ಜಾತ್ಯಾತೀತತೆ ತತ್ವಕ್ಕೆ ಕಾನೂನಾತ್ಮಕವಾಗಿ ಮನ್ನಣೆ ನೀಡಿದವರು. ಆದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳಿಗೆ ಸಂಬಂಧಿಸಿದಂತೆ ಅವರ ಬದುಕಿದ್ದ ಕಾಲದಿಂದ…

Read More
ಭಾರತೀಯ ಉತ್ಪನ್ನ

Fact Check: ಬಾಂಗ್ಲಾದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳುವ ಹಳೆಯ ವೀಡಿಯೋವನ್ನು ಮತ್ತೆ ವೈರಲ್ ಮಾಡಲಾಗಿದೆ

ವ್ಯಕ್ತಿಯೊಬ್ಬ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರನ್ನು ಒತ್ತಾಯಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ವ್ಯಕ್ತಿಯು ಪಾಂಪ್ಲೆಂಟ್ಸ್‌ ಹಂಚುತ್ತಾ, ಬಂಗಾಳಿ ಭಾಷೆಯಲ್ಲಿ “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ” ಎಂದು ಅಭಿಯಾನ ನಡೆಸುತ್ತಿದ್ದಾರೆ, ಎನ್ನಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ, ಭಾರತೀಯ ಸರಕುಗಳನ್ನು ಬಹಿಷ್ಕರಿಸಲು ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಲು ಮುಸ್ಲಿಂ ಅಂಗಡಿಕಾರರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ. ಆಗಸ್ಟ್ 5, 2024 ರಂದು ಬಾಂಗ್ಲಾದೇಶದ…

Read More
ಬಾಂಗ್ಲಾದೇಶ

Fact Check: ಹಸೀನಾ ಸರ್ಕಾರದ ವಿರುದ್ಧ ಬಾಂಗ್ಲಾದೇಶದ ನಟಿಯ ಪ್ರತಿಭಟನೆಯ ವೀಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಲ್ಲೆಯ ವಿರುದ್ಧ ಹಿಂದೂ ಮಹಿಳೆಯೊಬ್ಬರು ಧ್ವನಿವರ್ಧಕ ಬಳಸಿ ಧ್ವನಿ ಎತ್ತುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಆಗಸ್ಟ್ 5 ರಂದು ಶೇಖ್ ಹಸೀನಾ ರಾಜೀನಾಮೆ ನೀಡಿ ರಹಸ್ಯವಾಗಿ ದೇಶದಿಂದ ಪಲಾಯನ ಮಾಡಿದ ನಂತರ ಬಾಂಗ್ಲಾದೇಶವು ಭಾರಿ ಅಶಾಂತಿ ಮತ್ತು ರಾಜಕೀಯ ಅರಾಜಕತೆಗೆ ಸಿಲುಕಿತ್ತು. ಅವಾಮಿ ಲೀಗ್‌ನ ಹಿಂದಿನ ಆಡಳಿತದ ಸದಸ್ಯರ ಬೃಹತ್ ಕಾನೂನು ಸುವ್ಯವಸ್ಥೆ ಕುಸಿತ, ವಿಧ್ವಂಸಕತೆ, ಲೂಟಿ ಮತ್ತು ಹತ್ಯೆಗಳ ನಡುವೆ ಅಲ್ಪಸಂಖ್ಯಾತರ ವಿರುದ್ಧದ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಸರ್ಕಾರಿ ಕಾಲೇಜು ಪ್ರಾಂಶುಪಾಲರ ರಾಜೀನಾಮೆಯನ್ನು ಕೋಮು ಪ್ರತಿಪಾಧನೆಯೊಂದಿಗೆ ಹಂಚಿಕೊಳ್ಳಲಾಗಿದೆ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಹಿಂದೂ ಸರ್ಕಾರಿ ಅಧಿಕಾರಿಯನ್ನು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಮತ್ತು ಜಮಾತ್-ಎ-ಇಸ್ಲಾಂ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಮಹಿಳೆಯೊಬ್ಬಳು ಕಾಗದದ ಮೇಲೆ ಸಹಿ ಹಾಕುತ್ತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಢಾಕಾದ ಕಾಬಿ ನಜ್ರುಲ್ ಕಾಲೇಜಿನ ಪ್ರಾಂಶುಪಾಲೆ ಅಮೀನಾ ಬೇಗಂ ಅವರು ವಿದ್ಯಾರ್ಥಿ ಪ್ರತಿಭಟನಾಕಾರರ ಒತ್ತಡದಿಂದಾಗಿ ರಾಜೀನಾಮೆ ನೀಡಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಆಗಸ್ಟ್ 5 ರಂದು ಶೇಖ್ ಹಸೀನಾ ರಾಜೀನಾಮೆ…

Read More
ವಿನೇಶ್ ಫೋಗಟ್

Fact Check: ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಕ್ಷಣದ ವೀಡಿಯೋ ಎಂದು ಹಳೆಯ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಮಹಿಳೆಯರ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮುನ್ನ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಧಿಕ ತೂಕ ಹೊಂದಿರುವುದು ಕಂಡುಬಂದ ನಂತರ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ. ನಂತರ ಫೋಗಟ್ ತನ್ನ ಅನರ್ಹತೆಯ ವಿರುದ್ಧ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಬಗ್ಗೆ ತೀರ್ಪಿಗಾಗಿ ಕಾಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿನೇಶ್ ಫೋಗಟ್ ಭಾವುಕರಾಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಳ್ಳುವವರು ಇದು ಫೋಗಟ್ ಅವರ ಅನರ್ಹತೆಯ ಕ್ಷಣವನ್ನು ತೋರಿಸುತ್ತದೆ ಎಂದು…

Read More