Likith Rai

Fact Check | ಮಹಾಲಕ್ಷ್ಮಿ ಕೊಲೆ ಆರೋಪಿಯನ್ನು ಮುಸ್ಲಿಂ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೆ

“ಅಂದು ಶ್ರದ್ಧಾಳ ಗೆಳೆಯ ಅಫ್ತಾ಼ಬ್‌ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಇಂದು ಬೆಂಗಳೂರಿನ ಮಹಾಲಕ್ಷ್ಮಿಯನ್ನು ಆಕೆಯ ಗೆಳೆಯ ಅಶ್ರಫ್‌ 32 ತುಂಡುಗಳಾಗಿ ಕತ್ತರಿಸಿದ್ದಾನೆ. ಹಿಂದೂಗಳೆ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ನಿಮ್ಮ ಹೆಣ್ಣು ಮಕ್ಕಳಿಗೂ ಇದೆ ರೀತಿಯ ಅನಾಹುತ ಸಂಭವಿಸಬಹುದು” ಎಂದು ಫೋಟೋವಿನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಬಹುತೇಕರ ವಾದ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್‌ ಎಂಬುದು. ಹೀಗಾಗಿ ಪೋಸ್ಟ್‌ ವೈರಲ್‌ ಆಗಿದೆ. ಈ ಪೋಸ್ಟ್‌ ಅನ್ನು ನೋಡಿದ ಹಲವು ಮಂದಿ…

Read More

Fact Check | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವವನ್ನು ಪಡೆದಿದೆ ಎಂಬುದು ಸುಳ್ಳು

“ಇತ್ತೀಚೆಗೆ, 23 ಸೆಪ್ಟೆಂಬರ್ 2024 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ ಮತ್ತು ವಿಟೋ ಅಧಿಕಾರವನ್ನು ಪಡೆದುಕೊಂಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. BHARAT GOT A PERMANENT MEMBERSHIP IN UNSC WITH VETO…

Read More

Fact Check | ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಪ್ರಸಾದ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಇತ್ತೀಚೆಗೆ ವಿರೋಧ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ” ತಿರುಮಲದ ಲಡ್ಡು ಇವರಿಗೆ ವಾಸನೆ ಬರುತ್ತದೆ. ಇವರು ಮನೆಯಲ್ಲಿಯೇ ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಅಲ್ಲಿ ತೀರ್ಥವನ್ನು ಕೊಟ್ಟರೆ, ಕುಡಿದಂತೆ ನಟಿಸಿ, ಎಸೆಯುತ್ತಾರೆ. ಈ ಜಗನ್‌ ಮೋಹನ್‌ ರೆಡ್ಡಿ ಕಳೆದ 5 ವರ್ಷಗಳಿಂದ ದೇವರನ್ನು ಅಪವಿತ್ರಗೊಳಿಸಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. తిరుమల లడ్డూ…

Read More

Fact Check | ಹಿಂದೂ ವ್ಯಕ್ತಿಯೊಬ್ಬ ಉಗುಳಿ ರೊಟ್ಟಿ ತಯಾರಿಸುತ್ತಿದ್ದರು ಎಂಬುದು ಸುಳ್ಳು

” ನೋಡಿ ಈ ಹೋಟೆಲ್‌ನಲ್ಲಿ ರೊಟ್ಟಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂದು.. ಇದನ್ನು ಯಾವುದೋ ಮುಸಲ್ಮಾನ ತಯಾರಿಸುತ್ತಿರುವುದಲ್ಲ. ಈ ಹೋಟೆಲ್‌ ಹೆಸರು ನೋಡಿ. ಇದು ಹಿಂದೂ ವ್ಯಕ್ತಿಯೊಬ್ಬ ನಡೆಸುತ್ತಿರುವ ಹೋಟೆಲ್‌. ಈಗ ಈ ವ್ಯಕ್ತಿ ರೊಟ್ಟಿ ತಯಾರಿಸುವಾಗ ಅದಕ್ಕೆ ಉಗುಳಿ ತಯಾರು ಮಾಡುತ್ತಿದ್ದಾನೆ. ಈಗ ಹಲವು ಹಿಂದೂಗಳು ಕೂಡ ಆಹಾರಗಳಿಗೆ ಉಗುಳಿ ತಯಾರಿಸಲು ಪ್ರರಾಂಭಿಸಿದ್ದಾರೆ. ಇವರ ವಿರುದ್ಧ ಕ್ರಮ ಯಾವಾಗ?” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈಗ ಈ ವಿಡಿಯೋವನ್ನು ವಿವಿಧ ಆಯಾಮಗಳಿಂದ ಹಲವರು ವಿವಿಧ ಬರಹಗಳೊಂದಿಗೆ…

Read More

Fact Check | ಬಾಂಗ್ಲಾ ಬೌಲರ್‌ ಹಸನ್‌ ಮಹಮದ್‌ಗೆ ರೋಹಿತ್‌ ಶರ್ಮಾ ಕಾಲಿನಿಂದ ಒದ್ದಿದ್ದಾರೆ ಎಂಬುದು ಸುಳ್ಳು

“ಹಸನ್ ಮಹಮೂದ್ ಮೈದಾನದಲ್ಲಿ ಸಜ್ದಾ ಮಾಡಲು ಪ್ರಯತ್ನಿಸಿದ್ದ.. ಆದರೆ ದುರದೃಷ್ಟವಶಾತ್ ರೋಹಿತ್ ಶರ್ಮಾ ಅವನನ್ನು ಒದ್ದು ನಿಕಾಲ್,,, ಚಲ್ ಹಟ್ ಎಂದು ಹೇಳಿದ್ರು, ರೋಹಿತ್ ಅವರ ಈ ವರ್ತನೆ ವಿರುದ್ಧ ವಾರ್ತಾ ಭಾರತಿ, ಸಾಣೆಹಳ್ಳಿ ಮಠ ಸೇರಿದಂತೆ ಬಾಂಧವರ ಕೃಪಾಪೋಷಿತ ಜಾತ್ಯತೀತ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋ ಹಲವರು ವ್ಯಂಗ್ಯಯುತವಾಗಿ ಮತ್ತುಅಶ್ಲೀಲವಾಗಿ ಕೂಡ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ನಿಜವೆಂದು ನಂಬಿದರೆ, ಮತ್ತೆ ಕೆಲವರು ಇದೇ…

Read More

Fact Check | ತಿರುಪತಿ ದೇಗುಲದ ಅರ್ಚಕರ ಪುತ್ರಿಯರ ಮದುವೆಗೆ ನೂರು ಕೆಜಿ ಚಿನ್ನ ಬಳಕೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

“ಇದು ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರ ಮೂವರು ಪುತ್ರಿಯರ ಮದುವೆಯ ಫೋಟೋ, ಎಲ್ಲಾ ಮೂವರ ಚಿನ್ನದ ಆಭರಣಗಳ ತೂಕ 125 ಕೆಜಿ! ಭಾರತೀಯ ನಾಗರಿಕರು ಎಲ್ಲಿ ದಾನ ಮಾಡಬೇಕೆಂದು ಯೋಚಿಸಬೇಕು. ಏಕೆಂದರೆ ನೀವು ದಾನ ಮಾಡುವ ಚಿನ್ನದ ಆಭರಣಗಳು ದೇವಾಲಯದ ಅಭಿವೃದ್ಧಿಗೆ ಹೋಗುತ್ತಿಲ್ಲ. ಬದಲಾಗಿ ಅಲ್ಲಿನ ಅರ್ಚಕರ ಮನೆಗೆ ಸೇರುತ್ತಿದೆ. ಏಕೆ ಈ ಬಗ್ಗೆ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದು ಧರ್ಮದ್ರೋಹ ಅಲ್ಲವೆ?” ಎಂದು  ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. He’s a pandit of…

Read More

Fact Check | ಫರೀದ್‌ಪುರ ದೇವಸ್ಥಾನದಲ್ಲಿ ವಿಗ್ರಹಗಳನ್ನು ದ್ವಂಸಗೊಳಿಸಿದ ವ್ಯಕ್ತಿ ಬಾಂಗ್ಲಾದೇಶದವನೇ ಹೊರತು ಭಾರತೀಯನಲ್ಲ

“ಹರಿ ಮಂದಿರ ಮತ್ತು ಕಾಳಿ ಎಂಬ ಎರಡು ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದ್‌ಪುರದ ಪೊಲೀಸರು 45 ವರ್ಷ ವಯಸ್ಸಿನ ಸಂಜಿತ್ ಬಿಸ್ವಾಸ್ ಅವರನ್ನು ಬಂಧಿಸಿದ್ದಾರೆ . ಈ ಸರಣಿ ಘಟನೆಗಳು ಇದೇ ಸೆಪ್ಟೆಂಬರ್ 14 ರ ರಾತ್ರಿ ಸಂಭವಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.” ಎಂದು ಕೆಲವರು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು “ಇತ್ತೀಚೆಗೆ, ಧರ್ಮದಿಂದ ಹಿಂದೂ ಆಗಿರುವ ಮತ್ತು ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿರುವ ಭಾರತೀಯ ವ್ಯಕ್ತಿಯೊಬ್ಬರು ಬಾಂಗ್ಲಾದೇಶದಲ್ಲಿ ಹಿಂದೂ ವಿಗ್ರಹಗಳನ್ನು ಧ್ವಂಸ…

Read More

Fact Check | ತಿರುಪತಿ ಲಾಡು ತಿಂದವರಿಗೆ ಮನೆ ಕೊಡುವುದಿಲ್ಲ ಎಂಬುದು ಎಡಿಟೆಡ್‌ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ” ಸಸ್ಯಹಾರಿಗಳಿಗೆ ಮಾತ್ರ ಮನೆ ನೀಡುಲಾಗುತ್ತದೆ. ತಿರುಪತಿ ಲಾಡು ಸೇವಿಸಿದವರಿಗೆ ಮನೆ ನೀಡಲಾಗುವುದಿಲ್ಲ” ಎಂಬ ಅರ್ಥದಲ್ಲಿ ಮನೆಯ ಮುಂದಿನ ಗೇಟ್‌ನಲ್ಲಿ ಪೋಸ್ಟರ್‌ವೊಂದನ್ನು ಹಾಕಿರುವ ಫೋಟೋವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ನೋಡಿದ ಹಲವು ಮಂದಿ ಫೇಸ್‌ಬುಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮಂದಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. திருப்பதி லட்டு சாப்பிடுபவர்களுக்கு வீடு இல்லயாம் 🤭🤭🤭🤭#beefladdu #thirumalathirupathi #nohouseforrent pic.twitter.com/eoADFs4yXv — Shyammsundarr_vck, Msc,B.Ed,PhD., (@Shyamsu24) September 23, 2024…

Read More

Fact Check | ಕಾನ್ಪುರದಲ್ಲಿ ನಡೆದ ಸಾಹಿಲ್ ಹತ್ಯೆ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಯುವಕನೊಬ್ಬನಿಗೆ ಥಳಿಸುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಯುಪಿಯ ಕಾನ್ಪುರದಲ್ಲಿ ಮುಸ್ಲಿಂ ಯುವಕ ಸಾಹಿಲ್ ಅನ್ನು ಹಿಂದೂ ಯುವಕರು ಹೊಡೆದು ಕೊಂದಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹಲವರು ಯುಪಿಯಲ್ಲಿ ಇತ್ತೀಚೆಗೆ ಕೋಮು ಸಂಬಂಧಿತ ಗಲಭೆಗಳು ಹಾಗೂ ಹತ್ಯೆಗಳು ಜಾಸ್ತಿಯಾಗುತ್ತಿದೆ ಎಂದು ಬರೆದುಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. उत्तर प्रदेश: कानपुर में साहिल नामक मुस्लिम युवक की…

Read More

Fact Check | ಲೆಬನಾನ್‌ನಲ್ಲಿನ ಅಗ್ನಿ ದುರಂತದ ವಿಡಿಯೋವನ್ನು ಇಸ್ರೇಲ್‌ ದಾಳಿಯ ವಿಡಿಯೋ ಎಂದು ಹಂಚಿಕೆ

ಈ ವಿಡಿಯೋ ನೋಡಿ “ಇಸ್ರೇಲಿ ವಾಯುಪಡೆಯು ನೂರು ಲಾಂಚರ್‌ಗಳನ್ನು ಹೊಡೆದು ಲೆಬನಾನ್‌ನಲ್ಲಿ ಸುಮಾರು 1,00,000 ಶೆಲ್‌ಗಳನ್ನು ನಾಶಪಡಿಸಿದೆ. ಇಸ್ರೇಲ್‌ನ ಮೆಟುಲಾ ನಗರದ ಮೇಲೆ ದಾಳಿ ಮಾಡಲು ಹಿಜ್ಬುಲ್ಲಾ ಸಿದ್ಧವಾಗುತ್ತಿರುವಾಗ ಇಸ್ರೇಲ್‌ ದಾಳಿ ನಡೆಸಿ ಹಿಜ್ಬುಲ್ಲಾಗಳ ಯೋಜನೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಸ್ರೇಲ್‌ನ ಈ ದಾಳಿಯಿಂದಾಗಿ, ಕನಿಷ್ಟ ಸಾವಿರಕ್ಕೂ ಅಧಿಕ ಹಿಜ್ಬುಲ್ಲಾಗಳು ಸಾವನ್ನಪ್ಪಿರುವ ಸಾದ್ಯತೆ ಇದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಗಿ ಹಂಚಿಕೊಳ್ಳಲಾಗುತ್ತಿದೆ.  Incredible footage…Israeli Air Force attacked 100 #Hezbollah launchers & 1,000 launch…

Read More