Likith Rai

Fact Check : ಸ್ಮೃತಿ ಇರಾನಿ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಹಿಂದೆ ಮಾತನಾಡಿದ ವಿಡಿಯೋ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ಲಿಪ್‌ನಲ್ಲಿ, ಇರಾನಿ ಸಂಸತ್ತಿನಲ್ಲಿ ಮಾತನಾಡುತ್ತಾ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ 2016 ರಲ್ಲಿ ಸ್ಮೃತಿ ಇರಾನಿಯವರ ಸಂಸದೀಯ ಭಾಷಣದ ಮೂಲ ವೀಡಿಯೊಗೆ ಇದಾಗಿದೆ ಎಂದು ತಿಳಿದು ಬಂದಿದೆ, ಇದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಶ್ರೀಮತಿ. ಸ್ಮೃತಿ ಇರಾನಿ ಅವರು…

Read More

ಶಾರುಕ್‌ ಖಾನ್‌ ಪ್ಯಾಲೆಸ್ಟೈನ್‌ ಧ್ವಜದ ಜಾಕೆಟ್‌ ಹಾಕಿದ್ದರು ಎಂಬುದು ಸುಳ್ಳು

ಕಳೆದ ಕೆಲವು ದಿನಗಳಿಂದ ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಯುದ್ಧ ತೀವ್ರವಾಗುತ್ತಿದ್ದು ಈ ಯುದ್ಧಕ್ಕೆ ಸಂಬಂಧಿಸಿದಂತೆ ಪ್ಯಾಲೆಸ್ಟೈನ್‌ ಹಾಗು ಇಸ್ರೇಲ್‌ಗೆ ಹಲವಾರು ಮಂದಿ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಪ್ಯಾಲೆಸ್ಟೈನ್‌ಗೆ ಬೆಂಬಲಿಸುವ ಉದ್ದೇಶದಿಂದ ಪ್ಯಾಲೆಸ್ಟೈನ್‌ ಧ್ವಜಕ್ಕೆ ಹೋಲಿಕೆಯಾಗುವ ಜಾಕೆಟ್‌ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. Fact Check : ಈ ಸುದ್ದಿಯ ಕುರಿತು ಸತ್ಯಾಸತ್ಯತೆಯಯನ್ನು ಪರಿಶೀಲಿಸಿದಾಗ ಶಾರುಕ್‌ ಖಾನ್‌ ಅವರ ಈ ಚಿತ್ರವನ್ನು Dubaibliss.com…

Read More

Fact Check : ತೆಲಂಗಾಣ ಚುನಾವಣ ಪ್ರಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮದ್ಯ ಸೇವಿಸಿದ್ದರು ಎಂಬುದು ಸುಳ್ಳು

ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ತೆಲಂಗಾಣದ ಚುನಾವಣ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಭಾಷಣ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ತೆಲಂಗಾಣದ ಗ್ಯಾರಂಟಿಗಳು ಕರ್ನಾಟಕದ ಗ್ಯಾರಂಟಿಗಳಿಗಿಂತ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಇರಿಸು ಮುರಿಸು ಉಂಟಾಗುವಂತೆ ನಡೆದುಕೊಂಡಿದ್ದರು. ಇನ್ನು ತೆಲಂಗಾಣದ ತಂದೂರ್‌ನಲ್ಲಿ ನಡೆದ ಈ ಪ್ರಚಾರ ಕಾರ್ಯದಲ್ಲಿ ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ಸಾಕಷ್ಟು ಮಂದಿ ಎಕ್ಸ್‌ ಬಳಕೆದಾರರು  ಡಿಕೆಶಿ ಕುಡಿದು ಪ್ರಚಾರ ಮಾಡಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ….

Read More

Fact Check : ಹಮಾಸ್‌ ಶಾಲಾ ಮಕ್ಕಳಿಗೆ ಮಿಲಿಟರಿ ತರಬೇತಿ ನೀಡುತ್ತಿದೆ ಎಂದು ಹಳೆಯ ವಿಡಿಯೋ ಹಂಚಿಕೆ

ಶಾಲಾ-ವಯಸ್ಸಿನ ಮಕ್ಕಳಿಗೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ವ್ಯಾಯಾಮಗಳಲ್ಲಿ ತರಬೇತಿ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.. ಆದರೆ ಈ ವಿಡಿಯೋ ಸತ್ಯಾಸತ್ಯತೆಯನ್ನು ಪರಶೀಲಿಸಿದಾಗ ಸಿಕ್ಕ ಉತ್ತರವೇ ಬೇರೆಯದ್ದಾಗಿತ್ತು. ಕಳೆದ ಒಂದು ಎರಡು ವಾರಗಳಿಂದ “ಹಮಾಸ್‌ ಬಂಡುಕೋರಾರು ಇಸ್ರೇಲ್‌ ವಿರುದ್ಧ ಹೋರಾಟವನ್ನು ಮುಂದುವರೆಸಲು ಶಾಲಾ ಮಕ್ಕಳಿಗೆ ಸೈನಿಕ ತರಬೇತಿಯನ್ನು ನೀಡುತ್ತಿದೆ. ಯುದ್ಧದಲ್ಲಿ ಹೋರಾಡಲು ಮಕ್ಕಳನ್ನ ಮುಂದಕ್ಕೆ ಬಿಟ್ಟು ಹಮಾಸ್‌ ಬಂಡುಕೋರರು ತಪ್ಪಿಸಿಕೊಳ್ಳಲು ರಣತಂತ್ರವನ್ನು ಹೂಡುತ್ತಿದ್ದಾರೆ…

Read More

Fact Check :ಈ ಫೋಟೋ ಇಸ್ರೇಲ್‌ನ ಸೇನೆಗೆ ಸಂಬಂಧಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಆರಂಭವಾಗುತ್ತಿದ್ದಂತೆ ಈ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ರೀತಿಯ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಅದರಲ್ಲೂ ಕೆಲವೊಂದು ಸುದ್ದಿಗಳಿಗೆ ಹಳೆಯ ಫೋಟೋಗಳನ್ನು ಬಳಸಿಕೊಂಡು ಅದು ಇತ್ತೀಚಿನ ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಫೋಟೋವಾಗಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಯೋಧೆಯೊಬ್ಬಳು ಸೈನಿಕರ ರೀತಿ ಬಟ್ಟೆ ಧರಿಸಿ ಒಂದು ಕೈಯಲ್ಲಿ ಗನ್‌ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡಿರುವ ಫೋಟೋ ಸಾಮಾಜಿಕ…

Read More

Fact Check : ಪ್ರಧಾನಿ ಮೋದಿ ಅವರ ಸರ್ಕಾರ ಅವಧಿಯಲ್ಲೂ ಬಾಂಬ್‌ ಸ್ಪೋಟಗಳು ಸಂಭವಿಸಿವೆ

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರ ಸರ್ಕಾರದ ಪರವಾಗಿ ಮತ್ತು ವಿರುದ್ಧವಾಗಿ ಹಲವಾರು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಇದಕ್ಕೆ ಪೂರಕ ಎಂಬಂತೆ “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲಿ ಇದುವರೆಗೂ ಭಾರತದಲ್ಲಿ ಬಾಂಬ್ ಸ್ಫೋಟವಾಗಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ” ಕೇಂದ್ರ ಬಿಜೆಪಿ ಸರ್ಕಾರದ ಪರವಾಗಿ ಈ ರೀತಿಯ ಸುಳ್ಳು ಸುದ್ದಿಯೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Fact Check : ಈ ಸುದ್ದಿಯ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಜಮ್ಮು ಮತ್ತು…

Read More

ಹೈದರಾಬಾದ್‌ನಲ್ಲಿ ಹಿಂದೂ ಹಬ್ಬ ಆಚರಿಸಿದ ಮಹಿಳೆಯರ ಬಂಧನವೆಂದು ಹಳೆಯ ವಿಡಿಯೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವಂತಹ ಸುಳ್ಳು ಸುದ್ದಿಗಳನ್ನ ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಳ್ಳು ಸುದ್ದಿಗಳನ್ನೇ ನಿಜವೆಂದು ನಂಬಿ ಸಾಕಷ್ಟು ಶೇರ್‌ ಕೂಡ ಮಾಡುತ್ತಾರೆ. ಇದೀಗ ಇಂತಹದ್ದೆ ಒಂದು ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದಲ್ಲಿ “ಇತ್ತೀಚೆಗೆ ಶಾಂತಿಯುತವಾಗಿ ಹೈದರಾಬಾದ್‌ನಲ್ಲಿ ಹಿಂದೂಗಳ ಹಬ್ಬವಾದ ‘ಬತುಕಮ್ಮ’ ಆಡುತ್ತಿದ್ದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದುಗಳು ಜಾಗೃತರಾಗಬೇಕು ಇದನ್ನು ಹಂಚಿಕೊಳ್ಳಿ” ಎಂದು ವಿಡಿಯೋವೊಂನ್ನು ಹಾಕಿ ಶೇರ್‌ ಮಾಡಲಾಗುತ್ತಿದೆ. Fact Check : ಈ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ  ಇದು 2018ರ…

Read More

Fact Check: ನ್ಯೂಯಾರ್ಕ್‌ನಲ್ಲಿ ಇಸ್ರೇಲ್‌ ವಿರುದ್ಧ ಯಹೂದಿಗಳ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಯುದ್ಧ ಪ್ರಾರಂಭವಾದ ನಂತರ ಸಾಕಷ್ಟು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವಿಪರೀತವಾಗಿ ಹಬ್ಬುವುದಕ್ಕೆ ಪ್ರಾರಂಭವಾಗಿದೆ., ಹೀಗಾಗಿ ಈ ಯುದ್ಧದ ಕುರಿತು ಯಾವ ಸುದ್ದಿಯನ್ನು ನಂಬಬೇಕು ಮತ್ತು ನಂಬಬಾರದು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಮನೆ ಮಾಡಿದೆ. ಇದೇ ರೀತಿಯಾಗಿ, “ಇತ್ತೀಚಿಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇಸ್ರೇಲ್ ವಿರುದ್ಧ ಸಾವಿರಾರು ಯಹೂದಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಯಹೂದಿಗಳೇ ಒತ್ತಾಯಿಸಿದ್ದಾರೆ., ಈ ಪ್ರತಿಭಟನೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ.” ಎಂಬ ಸುದ್ದಿ…

Read More

ಬಿಜೆಪಿಯು 3 ತಿಂಗಳ ಉಚಿತ ರೀಚಾರ್ಜ್‌ ನೀಡುತ್ತಿದೆ ಎಂಬುದು ಸುಳ್ಳು, ವಂಚನೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನರೆಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಿಜೆಪಿ 3 ತಿಂಗಳ ಫ್ರೀ ರೀಚಾರ್ಜ್ ಮಾಡಿಸುತ್ತಿದೆ. ಅಕ್ಟೋಬರ್ 15, 2024 ಕೊನೆಯ ದಿನಾಂಕವಾಗಿದೆ ಎಂಬ ಸಂದೇಶವೊಂದು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್: ವಾಟ್ಸಾಪ್ ನಲ್ಲಿ ಬಂದ ಸಂದೇಶದ ಕೊನೆಯಲ್ಲಿರುವ ವೆಬ್‌ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ Website Status Suspicious ಎಂಬ ಎಚ್ಚರಿಕೆ ಕಾಣುತ್ತದೆ. ಆದರೂ ಪರವಾಗಿಲ್ಲ ಮುಂದುವರೆಯಿರಿ ಎಂಬುದರ ಮೇಲೆ ಒತ್ತಿದ್ದಾಗ 404 error…

Read More

Fact Check : ಕೇರಳದಲ್ಲಿ ನಡೆದ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆಯಲ್ಲಿ ಇಟಲಿ ಧ್ವಜ ಪ್ರದರ್ಶನವಾಗಿಲ್ಲ

ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾದ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕೇರಳ ಕುರಿತು ಮತ್ತು ಅಲ್ಲಿನ ರಾಜಕೀಯ ಪಕ್ಷಗಳ ಕುರಿತು ಹೆಚ್ಚು ಸುಳ್ಳು ಸುದ್ದಿಗಳು ಹರಡುವುದಕ್ಕೆ ಪ್ರಾರಂಭವಾಗೊದೆ ಇದೇ ರೀತಿಯಾಗಿ “ಕೇರಳದಲ್ಲಿ ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಪ್ಯಾಲೆಸ್ಟೈನ್ ಧ್ವಜದ ಬದಲು ಇಟಲಿ ಧ್ವಜವನ್ನು ಪ್ರದರ್ಶಿಸಲಾಗಿದೆ. ಪ್ರತಿಭಟನಾಕಾರರಿಗೆ ಪ್ಯಾಲೆಸ್ಟೈನ್ ಧ್ವಜ ಮತ್ತು ಇಟಲಿ ಧ್ವಜದ ನಡುವೆ ಇರುವ ವ್ಯತ್ಯಾಸ ಗೊತ್ತಿಲ್ಲದಂತಾಗಿದೆ.” ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ ಈ ಕುರಿತು ಸತ್ಯಾಸತ್ಯತೆಯನ್ನ ಪರಿಶೀಲಿಸಿದಾಗ ಕೇರಳದಲ್ಲಿ…

Read More