Likith Rai

Fact Check | ನಾಟಕೀಯ ವಿಡಿಯೋವನ್ನ ಫ್ಲೈಟ್‌ನಲ್ಲಿ ನಡೆದ ನಿಜವಾದ ಗಲಾಟೆ ಎಂದು ತಪ್ಪಾಗಿ ಹಂಚಿಕೆ

“ತನ್ನ ಮಗಳಿಗೆ ಸಂಸ್ಕಾರ ಕಲಿಸಿಕೊಡಲಾಗದ ಅಪ್ಪನೊಬ್ಬ ಹಿರಿಯ ನಾಗರಿಕನೊಂದಿಗೆ ಎಷ್ಟು ಅಸಭ್ಯವಾಗಿ ಮಾತನಾಡುತ್ತಾ, ಜಗಳವಾಡುತ್ತಿದ್ದಾನೆ ನೋಡಿ.. ಭಾರತೀಯ ಏರ್‌ಲೈನ್ಸ್ ನಿಧಾ‌ನವಾಗಿ ಭಾರತೀಯ ರೈಲ್ವೇಯಾಗಿ ಬದಲಾಗುತ್ತಿದೆ.” ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. https://twitter.com/TheFake_Ascetic/status/1730545363096908119 ಈ ಕುರಿತು ಪರಿಶೀಲನೆ ನಡೆಸದೇ ಸಾಕಷ್ಟು ಮಂದಿ ಶೇರ್‌ ಮಾಡುತ್ತಿದ್ದು, ಹಲವು ಮಂದಿ ವಿವಿಧ ರೀತಿಯಾದ ತಲೆಬರಹದೊಂದಿಗೆ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಮಂದಿ ಇದು ಭಾರತೀಯ ಏರ್‌ಲೈನ್ಸ್‌ ಆಗಿರಲು ಸಾಧ್ಯವಿಲ್ಲ ಎಂದು ಕಮೆಂಟ್‌ ಕೂಡ ಮಾಡುತ್ತಿದ್ದಾರೆ. ಈ…

Read More

Fact Check |’ದೆಹಲಿ ಏಮ್ಸ್’ನಲ್ಲಿ 7 ಚೀನಾದ ‘ನ್ಯೂಮೋನಿಯಾ’ ಕೇಸ್ ಪತ್ತೆ ವರದಿ ಸುಳ್ಳು

“ಕೋವಿಡ್ ಬಳಿಕ ಚೀನಾದಲ್ಲಿ ನ್ಯೂಮೋನಿಯಾ ರೀತಿಯ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೇ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ.” ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ ಇನ್ನು ಕೆಲ ಮಾಧ್ಯಮಗಳಲ್ಲಿ “ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನಚ್ಚರಿಕೆ ವಹಿಸಿತ್ತು. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ 7 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣ ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ…

Read More

Fact Check | ನಟ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ಓಡಾಡಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ನಟ ಸನ್ನಿ ಡಿಯೋಲ್ ಕುಡಿದು ರಸ್ತೆಯಲ್ಲಿ ತೂರಾಡುತ್ತಾ ನಡೆಯುತ್ತಿದ್ದರು. ಈ ವೇಳೆ ಆಟೋ ರಿಕ್ಷಾ ಚಾಲಕನೋರ್ವ ಸನ್ನಿ ಡಿಯೋಲ್ ಅವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದ್ದಾನೆ.” ಎಂಬ ತಲೆ ಬರಹದೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನು ಈ ತಲೆ ಬರಹದೊಂದಿಗೆ ಕೆಲವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಕಮೆಂಟ್‌ ಮಾಡಿ ಸನ್ನಿ ಲಿಯೋನ್‌ ಅವರ ವಿರುದ್ಧ ಕಿಡಿ ಕಾರಿದ್ದರೆ. ಅವರ…

Read More

Fact Check | ಪ್ರವಾಹದ ನೀರಿನಲ್ಲಿ ಜನರು ಆಟವಾಡುತ್ತಿರುವ ವಿಡಿಯೋ ಚೆನೈಗೆ ಸಂಬಂಧಿಸಿದಲ್ಲ..!

“ನೋಡಿ ಚೆನೈನಲ್ಲಿ ಮಿಚಾಂಗ್ ಚಂಡಮಾರುತದ ಅಬ್ಬರದ ನಡುವೆ ಅಲ್ಲಿನ ಜನರು ಹೇಗೆ ಪ್ರವಾಹದ ನೀರಿನಲ್ಲಿ, ವಾಲಿಬಾಲ್, ಪುಶ್ಅಪ್ ಗೇಮ್‌ಗಳನ್ನು ಆಡುತ್ತಿದ್ದಾರೆ” ಎಂಬ ತಲೆ ಬರಹದೊಂದಿಗೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ  ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವಿನ ಸತ್ಯಾಸತ್ಯತೆಯ ಬಗ್ಗೆ ಅರಿಯದೆ ಸಾಕಷ್ಟು ಜನ ಅಚ್ಚರಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಪರಿಶೀಲನೆ ನಡೆಸದೆ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ People on social media :prayers for Chennai they are in trouble 🙏 Meanwhile people of…

Read More

Fact Check | ರಾಹುಲ್ ಗಾಂಧಿಯವರನ್ನು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸಲಾಗಿತ್ತು ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬಲು ಪ್ರಾರಂಭವಾಗಿದೆ. ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಆಡಳಿತರೂಢ ಬಿಜೆಪಿಯ ವಿರುದ್ಧ ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದೇ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಜನಸಾಮಾನ್ಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬುವುದು ವಾಸ್ತವಾಗಿದೆ.   “ಇತ್ತೀಚೆಗೆ  2001ರಲ್ಲಿ ಅಮೆರಿಕದಲ್ಲಿ 1.60 ಲಕ್ಷ ಅಮೆರಿಕನ್ ಡಾಲರ್ ಮತ್ತು ಮಾದಕ ವಸ್ತುಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ…

Read More

Fact Check | ಭಾರತವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ವ್ಯಂಗ್ಯವಾಡಿ ಪ್ರಶ್ನಿಸಿದೆ ಎಂಬುದು ಸುಳ್ಳು

“ಇಸ್ರೇಲ್ ಜೊತೆ ಭಾರತೀಯ ನಿಲುವು ? ನಮ್ಮನ್ನು ಬೆಂಬಲಿಸಲು ನಿಮಗೆ ಕೇಳಿದವರು ಯಾರು? ನಿಮ್ಮ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಶೇಕಡ ಒಂದರಷ್ಟು ಪ್ರಯತ್ನ ನಡೆದಿಲ್ಲ. ಒಂದು ದಿನದಲ್ಲಿ ಕನಸು ಕಾಣುವುದನ್ನು ನಿಲ್ಲಿಸಿ. ” ಎಂದು ಇಸ್ರೇಲ್‌ ಟ್ವೀಟ್‌ ಮಾಡಿದೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ನ ಮೂಲಕ ಭಾರತದ ವಿರುದ್ಧ ಇಸ್ರೇಲ್‌ ಈ ಹಿಂದೆಯಿಂದ ಅಮಾಧನ ಹೊಂದಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದೇ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ…

Read More

Fact Check | ಫಿಲಿಫೈನ್ಸ್‌ನಲ್ಲಿ ನಡೆದ ಭೂಕಂಪದ ವಿಡಿಯೋ ಎಂದು ಜಪಾನ್‌ ,ತೈವಾನ್‌ ಭೂಕಂಪದ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಮೊನ್ನೆ ಮೊನ್ನೆ ಫಿಲಿಫೈನ್ಸ್‌ನಲ್ಲಿ ನಡೆದಿರುವ ಭೀಕರ ಭೂಕಂಪನದ ವಿಡಿಯಯೋಗಳು. ಸುಮಾರು 7.8 ತೀವ್ರತೆಯ ಭೂಕಂಪದಲ್ಲಿ ಸಾಕಷ್ಟ ಮಂದಿ ಸಾವನ್ನಪ್ಪಿದ್ದಾರೆ.” ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ಭಯಾನಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಮೊನ್ನೆ ಮೊನ್ನೆ ನಡೆದ ಫಿಲಿಫೈನ್‌ನ ಭೂಕಂಪಕ್ಕೂ ಈ ವಿಡಿಯೋಗಳಿಗೂ ಹೊಂದಾಣಿಕೆ ಕಂಡು ಬಂದಿಲ್ಲ. ಹಾಗಾಗಿ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ…

Read More

Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಜನ ಮಾಜಿ ಸಿಬ್ಬಂದಿಗಳ ಶಿಕ್ಷೆಯನ್ನು ಕತಾರ್‌ ರದ್ದು ಮಾಡಿದೆ. ಮೋದಿ ಮತ್ತು ತನ್ನ ಅಧಿಕೃತ ಹೇಳಿಕೆಯಲ್ಲಿ ನಮಗೆ ಭಾರತದ ಸ್ನೇಹವೇ ಮುಖ್ಯವೆಂದು ಹೇಳಿದೆ. ಇದು ಮೋದಿ ಸರ್ಕಾರದ ಶಕ್ತಿ” ಎಂದು ಪ್ರಧಾಣಿ ಮೋದಿ ಅವರ ಫೋಟೋದೊಂದಿಗೆ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಕಳೆದ ತಿಂಗಳು ಕತಾರ್‌ನ ನ್ಯಾಯಾಲಯವು ಕತಾರ್ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ಒಮಾನಿ ಕಂಪನಿಯಿಂದ ನೇಮಕಗೊಂಡ ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ…

Read More

Fact Check | ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ  “ಇಂಗ್ಲೇಂಡ್‌ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.” ಎಂಬ ಸುದ್ದಿ ವೈರಲ್‌ ಆಗಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವೈರಲ್‌ ಆಗಿರುವ ಫೋಟೋ ಹಾಗೂ ಈ ಕುರಿತು ಹಬ್ಬಿರುವ ಸುಳ್ಳು ಸುದ್ದಿ ಬಟಾ ಬಯಲಾಗಿದೆ. ಆದರೆ ಅಂಪೈರ್‌ ರಿಚರ್ಡ್ ಕೆಟಲ್ಬರೋ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನೇ ಬಹುತೇಕರು ನಂಬಿದ್ದು ಈ ವಿಚಾರವನ್ನು ಪರಿಶೀಲನೆ ನಡೆಸದೆ ಬಹುತೇಕರು ಶೇರ್‌ ಮಾಡಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ರೀತಿ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಬಹಳ…

Read More

Fact Check | 10 ನಿಮಿಷದಲ್ಲಿ ಸಕ್ಕರೆ ಖಾಯಿಲೆ ಗುಣಪಡಿಸಲು ಸಾಧ್ಯವಿಲ್ಲ, ಆ ಔಷಧಿಯ ಕುರಿತು ಟಿವಿ ಪ್ರಚಾರ ಸುಳ್ಳು

ಇತ್ತೀಚಿನ ದಿನಗಳಲ್ಲಿ ಸುಳ್ಳು ಜಾಹಿರಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಇದನ್ನೇ ನಂಬಿ ಸಾಕಷ್ಟು ಜನ ಮೋಸ ಹೋಗುತ್ತಿದ್ದಾರೆ ಇದೀಗ ಇಂತಹದ್ದೇ ಒಂದು ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದೆ. ಅದರಲ್ಲಿ ಖ್ಯಾತ ಸುದ್ದಿ ನಿರೂಪಕರಾದ ಅರ್ನಬ್‌ ಗೋಸ್ವಾಮಿ, ಸೇರಿದಂತೆ ದೇಶದ ಪ್ರಖ್ಯಾತ ಸುದ್ದಿ ವಾಹಿನಿಗಳ ನಿರೂಪಕರು 10 ನಿಮಿಷದಲ್ಲಿ ಮಧುಮೇಹ ಗುಣಪಡಿಸುವ ಔಷಧಿಯ ಕುರಿತು ತಮ್ಮ ತಮ್ಮ ಸುದ್ದಿ ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದಾರೆ. ನೀವು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಔಷಧಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಈ…

Read More