Likith Rai

Fact Check | ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕಪಿಲ್‌ ಸಿಬಲ್‌ ಹೇಳಿಲ್ಲ

“ಸುಪ್ರೀಂ ಕೋರ್ಟ್ ವಕೀಲ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್‌ ಸಿಬಲ್‌ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು” ಎಂಬ ಪೋಸ್ಟ್‌ವೊಂದನ್ನು ಕಪಿಲ್‌ ಸಿಬಲ್‌ ಹೆಸರಿನಲ್ಲಿ ಮಾಡಲಾದ ಟ್ವಿಟ್‌ವೊಂದರ ಸ್ಕ್ರೀನ್‌ ಶಾಟ್‌ನಲ್ಲಿ ವ್ಯಾಪವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಅವರು ವಾಟ್ಸ್‌ಆಪ್‌ನಲ್ಲಿ ಬಂದಿದ್ದು ನನ್ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೇ ರಿ ಟ್ವೀಟ್‌ ಮಾಡಿರುವ ಸಾಕಷ್ಟು ಮಂದಿ ಕಾಂಗ್ರೆಸ್‌ನ…

Read More

Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಕ್ರಿಸ್‌ಮಸ್ ದಿನದಂದು ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಸಾಂಟಾ ಕ್ಲಾಸ್‌ನ ವೇಷ ಧರಿಸುವುದಕ್ಕೆ ಅನುವು ಮಾಡಿಕೊಡುವುದನ್ನು ನಿಷೇಧಿಸಿ ಹೊಸ ಆದೇಶವನ್ನು ಹೊರಡಿಸಿದ್ದಾರೆ.” ಎಂಬ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಧ್ಯಪ್ರದೇಶದ ಸರ್ಕಾರ ಹಾಗು ಇತರೆ ರಾಜ್ಯಗಳ ರಾಜ್ಯ ಸರ್ಕಾರಗಳನ್ನು ಹೋಲಿಕೆ ಮಾಡಿ ಮಧ್ಯಪ್ರದೇಶದ  ಸಿಎಂ ಮೋಹನ್‌ ಯಾದವ್‌ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೊಗಳಲು ಆರಂಭಿಸಿದ್ದಾರೆ. ಇಷ್ಟೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿಯ…

Read More

Fact Check | ಇನ್‌ಸ್ಟಾಗ್ರಾಮ್‌ ಸರ್ಕಾರಕ್ಕೆ ಗ್ರೂಪ್‌ ಚಾಟ್‌ಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ

“Instagram ತನ್ನ ಎಲ್ಲಾ ಬಳಕೆದಾರರ ಗ್ರೂಪ್‌ ಚಾಟ್‌ಗಳನ್ನು ನೋಡಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದೆ. ಆ ಮೂಲಕ ನೀವು ಯಾವುದಾದರು ಗುಂಪಿನಲ್ಲಿದ್ದರೆ ಸರ್ಕಾರ ನಿಮ್ಮ ಸಂದೇಶಗಳನ್ನು ನೋಡಲು ಸಾಧ್ಯವಾಗುತ್ತದೆ.” ಎಂಬ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇನ್‌ಸ್ಟಾಗ್ರಾಮ್‌ ಅನ್ನು ಡಿಲೀಟ್‌ ಮಾಡಿ ಎಂದು ಸಾಕಷ್ಟು ಮಂದಿ ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಈ ಸಂದೇಶದ ಕುರಿತು  ನಮ್ಮ ತಂಡ ಫ್ಯಾಕ್ಟ್‌ಚೆಕ್‌ ನಡೆಸಲು ಮುಂದಾದಗ…

Read More

Fact Check | ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಮೆಕ್‌ ಡೊನಾಲ್ಡ್‌ ಅನಾವರಣಗೊಳಿಸಿಲ್ಲ

“ಈ ಫೋಟೋ ನೋಡಿ ಮೆಕ್ ಡೊನಾಲ್ಡ್ ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಅನಾವರಣಗೊಳಿಸಿದೆ, ಹೀಗಾಗಿ ಮೆಕ್‌ ಡೊನನಾಲ್ಡ್ಸ್‌ನ ಎಲ್ಲಾಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು” ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವು ತಿಂಗಳುಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದು, ಮೆಕ್‌ ಡೊನಾಲ್ಡ್ಸ್‌ ವಿರುದ್ಧದ ಈ ಸುದ್ದಿ ಬಹಳ ವೈರಲ್‌ ಕೂ ಆಗುತ್ತಿದೆ. ಫ್ಯಾಕ್ಟ್‌ಚೆಕ್‌  ಈ ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ನಮ್ಮ ತಂಡ ಮೊದಲು ಮೆಕ್‌…

Read More

Fact Check | ಕಾಂಗ್ರೆಸ್ ಜಾರಿಗೊಳಿಸಲು ಹೊರಟಿದ್ದ ಕೋಮು ಹಿಂಸೆ ತಡೆ ಮಸೂದೆಯಲ್ಲಿ ಹಿಂದೂಗಳಿಗೆ ತಾರತಮ್ಯವೆಸಗಿಲ್ಲ

“ಕೋಮು ಮತ್ತು ಉದ್ದೇಶಿತ ಹಿಂಸಾಚಾರ ತಡೆ (ಪಿಸಿಟಿವಿ) ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2013 ರಲ್ಲಿ ಸಂಸತ್ತಿನಲ್ಲಿ ಮಂಡಿಸಿತು. ಅದರ ನಿಬಂಧನೆಗಳನ್ನು‌ ಗಮನಿಸಿದರೆ ಮುಸ್ಲಿಂ ಪರವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಿ ತಾರತಮ್ಯವೆಸಗಿದೆ.” ಎಂದು ಡಿಜಿಟಲ್‌ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬ ಮಾತನಾಡಿದ್ದ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ. ಈ ವಿಡಿಯೋದಲ್ಲಿ ಪಿಸಿಟಿವಿ ಅಂದ್ರೆ ಪ್ರಿವೆನ್ಷನ್‌ ಆಫ್‌ ಕಮ್ಯುನಲ್‌ ಆಂಡ್‌ ಟಾರ್ಗೆಟೆಡ್‌ ವೈಲೆನ್ಸ್‌ ಮಸೂದೆ ಕೇವಲ ಮುಸ್ಲಿಮರ ಪರವಾಗಿದೆ ಮತ್ತು ಇದು ಹಿಂದೂಗಳನ್ನು ಹತ್ತಿಕ್ಕು ಮಸೂದೆಯಾಗಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಈ…

Read More

Fact Check | ಪ್ರಧಾನಿ ಮೋದಿ ಖಾಲಿ ಇರುವ ಜಾಗದತ್ತ ಕೈ ಬೀಸಿದ್ದಾರೆ ಎಂಬುದು ಎಡಿಟ್ ಮಾಡಿದ ವಿಡಿಯೋ..!

“ಪ್ರಧಾನಿ ಮೋದಿ ಇತ್ತೀಚೆಗೆ ಹೆಚ್ಚು ಹೆಚ್ಚು ಖಾಲಿ ಜಾಗಗಳತ್ತ ಕೈ ಬೀಸುತ್ತಿದ್ದಾರೆ. ಈ ವಿಡಿಯೋ ನೋಡಿ ಮತ್ತೆ ಪ್ರಧಾನಿ ಅವರು ಜನರೇ ಇರದ ಜಾಗದತ್ತ ಕೈ ಬೀಸುತ್ತಿದ್ದಾರೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವ್ಯಾಪಕವಾದ ಟೀಕೆಯನ್ನು ಕೂಡ ಮಾಡಲಾಗುತ್ತಿದೆ. विश्वफेकू अपनी शक्तियों का ईस्तेमाल करते हुए 🤣🤪😆😛😁😜😝😝#Panauti #BJparty #BJPFailedIndia pic.twitter.com/cC8vyK0c91 — Bhushan (@Bhushan__89) December 7, 2023 ಆದರೆ…

Read More

Fact Check | ಎಲ್ಲರ ಖಾತೆಗೆ 15 ಲಕ್ಷ ರೂ. ಜಮೆಯ ಭರವಸೆಯ ಸುದ್ದಿ ವಿಡಂಬನೆ ಹೊರತು ನಿಜವಲ್ಲ

“2013-14ರ ಹಳೆಯ ನ್ಯೂಸ್‌ ಪೇಪರ್‌ವೊಂದರಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ₹ 15 ಲಕ್ಷ ರೂ. ಜಮಾ ಮಾಡುವುದಾಗಿ ನರೇಂದ್ರ ಮೋದಿ ಅವರ ಚುನಾವಣಾ ಭರವಸೆಯನ್ನು ನೀಡಿದ್ದಾರೆ ಎಂಬ ವರದಿ ಮಾಡಲಾಗಿದೆ.” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮೋದಿ ಅವರು 2014ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದರ ಕುರಿತು ಇರುವ ಏಕೈಕ ವರದಿ ಇದು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಸಾಕಷ್ಟು ಮಂದಿ…

Read More

Fact Check | COVID-19 ನ Omicron XBB ರೂಪಾಂತರವು ಹೆಚ್ಚು ಮರಣ ಪ್ರಮಾಣ ಹೊಂದಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “COVID-19 ನ Omicron XBB ರೂಪಾಂತರವು ಐದು ಪಟ್ಟು ಹೆಚ್ಚು ವೈರಸ್ ತೀವ್ರತೆ ಮತ್ತು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ಮರಣ ಪ್ರಮಾಣದ ಆಪತ್ತನ್ನು ಹೊಂದಿದೆ ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಇದು ನಿಜವಿರಬಹುದು ಎಂದು ತಮ್ಮ ತಮ್ಮ ಖಾತೆಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕರೋನಾ ವೈರಸ್‌ನ JN1 ರೂಪಾಂತರಿಯಿಂದಾಗಿ ಕೋವಿಡ್ 19 ಸೋಂಕು ಹರಡುವಿಕೆ ತೀವ್ರ ಗೊಳ್ಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಒಂದಷ್ಟು ಸಣ್ಣ ಪ್ರಮಾಣದ…

Read More

Fact Check | ಡಾಕ್ಟರ್ ಕಣ್ಣು ಮುಚ್ಚಿಕೊಂಡು ಚಿಕಿತ್ಸೆ ಕೊಡ್ಲಿ ಎಂಬುದು ಕಾಲ್ಪನಿಕ ಸಂದರ್ಶನ

ಮುಸ್ಲಿಂ ಮಹಿಳೆಯರಿಗೆ ಧರ್ಮವೇ ಮುಖ್ಯ ಹೊರತು ಬೇರೆಯಲ್ಲ. ಅವರು ಯಾರಿಗೂ ತಮ್ಮ ಮುಖ ತೋರಿಸುವುದಿಲ್ಲ. ಉದಾಹರಣೆಗೆ ಈ ವಿಡಿಯೋ ನೋಡಿ. ಸಂದರ್ಶನಕಾರನೊಬ್ಬ ಮುಸ್ಲಿಂ ಮಹಿಳೆಗೆ ನಿಮಗೆ ಹಲ್ಲಿನ ಸಮಸ್ಯೆ ಕಾಣಿಸಿಕೊಂಡಾಗ ದಂತ ವೈದ್ಯರ ಬಳಿಗೆ ಹೋಗಬೇಕಾದರೆ ಅವರು ನಿಮ್ಮ ಮುಖವನ್ನು ತೋರಿಸಬೇಕಲ್ಲವೆ? ಆಗ ನೀವು ಬುರ್ಕಾ ತೆಗೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. I will remove hijab while getting treated by a male dentist only if he closes his eyes during…

Read More

Fact Check | ಅಯ್ಯಪ್ಪ ಭಕ್ತಾಧಿಗಳಿಗೆ ಖಾಸಗಿ ಬಸ್‌ ವ್ಯವಸ್ಥೆ, ಹಜ್‌ ಯಾತ್ರಾರ್ಥಿಗಳಿಗೆ ಐಷಾರಾಮಿ ಸೌಲಭ್ಯ ಎಂಬುದು ಸುಳ್ಳು

ಶಬರಿಮಲೆ ದೇವಸ್ಥಾನದಲ್ಲಿ ಭಕ್ತರ ನಿರ್ವಹಣೆಯ ಕೊರತೆ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲಿ ಪ್ರಮುಖವಾಗಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲಾಗಿದೆ. ಆ ಪೋಸ್ಟ್‌ನಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರವು ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಖಾಸಗಿ ಬಸ್‌ನ ವ್ಯವಸ್ಥೆ ಮಾಡುತ್ತದೆ. ಆದರೆ ಹಜ್ ಯಾತ್ರೆಗೆ ತೆರಳುವ ಅನ್ಯಧರ್ಮೀಯರಿಗೆ ಐಷಾರಾಮಿ ವಿಮಾನದ ವ್ಯವಸ್ಥೆಯನ್ನು ಮಾಡುತ್ತದೆ ಎಂದು ಬರೆದುಕೊಂಡು…

Read More