Likith Rai

Fact Check | 2014ರ ಫೋಟೋ ಬಳಸಿ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೆ

“5ನೇ ತರಗತಿ ಓದುತ್ತಿದ್ದ ಬಡ ವಿದ್ಯಾರ್ಥಿನಿ ರಾಹುಲ್ ಗಾಂಧಿ ಸಂದರ್ಶನದಲ್ಲಿ ಒಂದು ಪ್ರಶ್ನೆ ಮಾಡುತ್ತಾರೆ ಅದಕ್ಕಾಗಿ ಅವರ ಮೈಕ್ ಕಸಿದುಕೊಂಡು ಆ ಹುಡುಗಿಗೆ ಥಳಿಸುತ್ತಾರೆ ಎಂಬ ಬರಹದೊಂದಿಗೆ ರಾಹುಲ್‌ ಗಾಂಧಿ ಅವರಿಗೆ ಬಾಲಕಿಯೊಬ್ಬಳು ಎದ್ದು ನಿಂತು ಪ್ರಶ್ನಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಬರಹದಲ್ಲಿ ರಾಹುಲ್‌ ಗಾಂಧಿ ಅವರಿಗೆ ಹಲವು ಪ್ರಶ್ನೆಗಳನ್ನೆ ಕೇಳಲಾಗಿದೆ ಆದರೆ ಅದಕ್ಕೆ ರಾಹುಲ್‌ ಗಾಂಧಿ ಅವರು ಉತ್ತರವನ್ನೇ ನೀಡಲಿಲ್ಲ ಎಂದು ಹಂಚಿಕೊಳ್ಳಲಾಗಿದೆ. ಇನ್ನು ಈ ಫೇಸ್‌ಬುಕ್‌ ಪೋಸ್ಟ್‌ಗೆ ಸಾಕಷ್ಟು ಮಂದಿ ಆಕ್ಷೇಪರ್ಹ ಕಮೆಂಟ್‌ಗಳನ್ನು…

Read More

Fact Check | ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಜಿಹಾದಿಗಳು ನೀರು ಎರಚಿದ್ದಾರೆಂಬುದು ಸುಳ್ಳು

“ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರದ ದಿನಾಚರಣೆಯ ಸಂದರ್ಭದಲ್ಲಿ ಪಾರ್ವತಿ-ಶಿವನ ಉತ್ಸವ ಮೂರ್ತಿ ಮೆರವಣಿಗೆಯ ವೇಳೆ ಜಿಹಾದಿಗಳು ಮೂರ್ತಿಗೆ ನೀರು ಎರಚಿ ಅವಮಾನಿಸಿದರು. ಹಿಂದೂಗಳು ಎಚ್ಚೆತ್ತುಕೊಳ್ಳಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸಾಕಷ್ಟು ಮಂದಿ ಇದೇ ಸುದ್ದಿಯನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳುತ್ತಿದ್ದಾರೆ. ನಂಜನಗೂಡು ಶ್ರೀ ಕಂಟೇಶ್ವರನಿಗೆ ಅಪಮಾನ ಕೆಲ ಜಿಹಾದಿಗಳು ಎಂಜಲು ನೀರು ಎರಚಿ ಅಪಮಾನಿಸಿದ್ದಾರೆ ಅಲ್ಲಿನ ಹಿಂದೂಗಳು ಇನ್ನಾ ಬದುಕಿದ್ದೀರಾ 😡😡😡 pic.twitter.com/r87R9YNtAF — wHatNext 🚩 (@raghunmurthy07)…

Read More

Fact Check | ವಿಠ್ಠಲ್, ವಿಠ್ಠಲ್’ ಮಂತ್ರ ಪಠಿಸುವುದರಿಂದ ಹೃದಯಾಘಾತವನ್ನು ತಡೆಯಲಾಗುವುದಿಲ್ಲ

“ಪ್ರತಿದಿನ 9-10 ನಿಮಿಷಗಳ ಕಾಲ ‘ವಿಠ್ಠಲ, ವಿಠ್ಠಲ’ ಮಂತ್ರವನ್ನು ಪಠಿಸುವುದರಿಂದ ಹೃದಯಾಘಾತವನ್ನು ತಡೆಯಬಹುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಗುಣವಾಗುತ್ತದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.” ಇದನ್ನೇ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ‘ಏಷ್ಯನ್ ಜರ್ನಲ್ ಆಫ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್ನೇಟಿವ್ ಮೆಡಿಸಿನ್‘ 30 ವ್ಯಕ್ತಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, 10 ದಿನಗಳಲ್ಲಿ ಪ್ರತಿದಿನ 9 ನಿಮಿಷಗಳ ಕಾಲ ‘ವಿಠ್ಠಲ್,…

Read More

Fact Check | ರತನ್‌ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್‌ ಮತ್ತು ಬಾಂಬ್‌ ಪ್ರೂಫ್‌ ಬಸ್‌ ನೀಡಿಲ್ಲ

“ಇತ್ತೀಚೆಗೆ ರತನ್ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್ ಮತ್ತು ಬಾಂಬ್ ಪ್ರೂಫ್ ಬಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ಇರಲಿ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಾಕಷ್ಟು ಮಂದಿ ರತನ್ ಟಾಟಾ ಅವರು ಭಾರತೀಯ ಸೇನೆಗಾಗಿ ಹಲವು ರೀತಿಯ ಉಡುಗೊರೆಯನ್ನು ನೀಡಲಿದ್ದಾರೆ ಎಂಬ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೇ ರೀತಿಯ ಬಸ್ಸಿನ ವಾಹನವನ್ನು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಇದು…

Read More

Fact Check | ಕೆನಡಾದಲ್ಲಿರುವ ಹನುಮಂತನ ವಿಗ್ರಹದ ಸುತ್ತಮುತ್ತ ಮಲದ ರಾಶಿ ಕಂಡು ಬಂದಿದೆ ಎಂಬ ವರದಿ ನಕಲಿ

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವರು ಹನುಮಾನ್ ಪ್ರತಿಮೆಯ ಸುತ್ತಲೂ ಮಾನವ ಮಲದ ರಾಶಿಗಳು ಕಂಡುಬಂದಿವೆ ಎಂಬ ಶೀರ್ಷಿಕೆಯಲ್ಲಿ ‘ಟೊರೊಂಟೊ ಸನ್’ ಸುದ್ದಿ ಪ್ರಕಟಿಸಿದೆ ಎಂದು ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನು ‘ಟೊರೊಂಟೊ ಸನ್’ ವರದಿಯ ಫೋಟೋವನ್ನು ಗಮನಿಸಿದಾಗ ಇದರಲ್ಲಿನ ಅಕ್ಷರಗಳು ಅಸ್ಪಷ್ಟವಾಗಿ ಸ್ವಲ್ಪ ಬದಲಾವಣೆಯೊಂದಿಗೆ ಕಂಡು ಬಂದಿದ್ದು, ಶೀರ್ಷಿಕೆ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ…

Read More

Fact Check | ಅಯೋಧ್ಯೆಯ ರಾಮಮಂದಿರದ ಅಧಿಕಾರಿಗಳು ದಲಿತ ಬಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಅಯೋಧ್ಯೆಯಲ್ಲಿ ದಲಿತ ಬಾಲಕನ ಮೇಲೆ ರಾಮಮಂದಿರದ ಅಧಿಕಾರಿಗಳು ಹೇಗೆ ಹಲ್ಲೆ ನಡೆಸುತ್ತಿದ್ದಾರೆಂದು. ಇದು ನಿಜಕ್ಕೂ ಆಘಾತಕಾರಿ.” ಎಂದು ವ್ಯಕ್ತಿಯೊಬ್ಬ ಬಾಲಕನನ್ನು ಥಳಿಸುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಾನಾ ಬರಹಗಳೊಂದಿಗೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಈ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಇಬ್ಬರು ವ್ಯಕ್ತಿಗಳು ಸಮವಸ್ತ್ರ ಧರಿಸಿದ ಬಾಲಕನೊಬ್ಬನನ್ನು ರಸ್ತೆಯ ಮೇಲೆಯೇ ಮನಸ್ಸೋ ಇಚ್ಛೆ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಇದೇ ವಿಡಿಯೋದಲ್ಲಿ ಹಲವು ವಿದ್ಯಾರ್ಥಿಗಳಿರುವುದು,…

Read More

Fact Check | ಅಮುಲ್ ಸಂಸ್ಥೆ ‘ಶರಮ್’ ಹೆಸರಿನ ಹೊಸ ಆಹಾರ ಉತ್ಪನ್ನವನ್ನು ಬಿಡುಗಡೆ ಮಾಡಿಲ್ಲ

“ಅಮುಲ್ ‘ಶರಮ್’ ಹೆಸರಿನ ಹೊಸ ಚೀಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ”ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಸಾಕಷ್ಟು ಮಂದಿ ಇದು ನಿಜವೆಂದು ಭಾವಿಸಿ ಶೇರ್ ಕೂಡ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಕೈಯಲ್ಲಿ ಚೀಸ್ ಪಾಕೆಟ್ ಅನ್ನು ಹಿಡಿದಿರುವುದು ಕಂಡುಬರುತ್ತದೆ. ಆ ಪ್ಯಾಕೆಟ್‌ನ ಮೇಲೆ ಅಮುಲ್ ಸಂಸ್ಥೆಯ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದ್ದು ಅದರಲ್ಲಿ ಶರಮ್ ಎಂಬ ಹೆಸರನ್ನು ಕೆಂಪು ಬಣ್ಣದಲ್ಲಿ ಬರೆಯಲಾಗಿದೆ ಇನ್ನು ಪ್ಯಾಕೆಟ್ನ ಮೇಲೆ ಚೀಸ್ ಎಂದು ಬರೆಯಲಾಗಿದೆ. ಫ್ಯಾಕ್ಟ್‌ಚೆಕ್‌ ಅಮುಲ್…

Read More

Fact Check | ಮುಸ್ಲಿಂ ವ್ಯಕ್ತಿಯೊಬ್ಬ ಹಂದಿ ಮಾಂಸದ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು Prank ವಿಡಿಯೋವಾಗಿದೆ

“ಈ ವಿಡಿಯೋ ನೋಡಿ ಡಚ್ ಸೂಪರ್ ಮಾರ್ಕೆಟ್‌ನಲ್ಲಿ ಮುಸ್ಲಿಂ ವಲಸಿಗರೊಬ್ಬರು ಹಂದಿ ಮಾಂಸದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಈತನಿಗೆ ಸರಿಯಾದ ಶಿಕ್ಷೆಯಾಗಲೇ ಬೇಕು.” ಎಂಬ ಬರಹಗಳೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನ ಸಾಕಷ್ಟು ಮಂದಿ ನಿಜವೆಂದು ನಂಬಿ ಮುಸಲ್ಮಾನ ಸಮುದಾಯದ ಬಗ್ಗೆ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. Muslim immigrant in Holland urinates on the pork section of the supermarket as another films saying ‘we…

Read More

Fact Check | 5 ಸೆಕೆಂಡ್‌ಗಳ ಒಳಗಾಗಿ ಕೆಳಗೆ ಬಿದ್ದ ಆಹಾರವನ್ನು ತೆಗೆದು ಸೇವಿಸಿದರೆ ಖಾಯಿಲೆ ಬರುವುದಿಲ್ಲ ಎಂಬುದು ಸುಳ್ಳು

“ನೆಲಕ್ಕೆ ಬಿದ್ದ ಯಾವುದೇ ಆಹಾರವನ್ನು 5 ಸೆಕೆಂಡುಗಳ ಒಳಗೆ ತೆಗೆದು ಸೇವಿಸಬಹುದು. ಯಾವುದೇ ಬ್ಯಾಕ್ಟಿರಿಯಾಗಳು ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಹರಡಲು 5 ಸೆಕೆಂಡುಗಳ ಕಾಲಾವಕಾಶ ಬೇಕು. ಹಾಗಾಗಿ ಈ ಅವಧಿಯ ಒಳಗೆ ಕೆಳಗೆ ಬಿದ್ದ ಆಹಾರ ಸೇವಿಸುವುದರಿಂದ ಕಾಯಿಲೆ ಬರುವುದಿಲ್ಲ.” ಎಂಬ ಸುದ್ದಿಯೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಈ ಸುದ್ದಿಯನ್ನು ಪರಿಶೀಲನೆ ನಡೆಸಿದಾಗ ಇದೇ ರೀತಿಯ ಸುದ್ದಿ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಜೊತೆಗೆ ಹಲವು ಮಂದಿ ಇದನ್ನು 5 ಸೆಕೆಂಡ್‌…

Read More

Fact Check | ನರೇಗಾ ಯೋಜನೆಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ನಕಲಿ ವೆಬ್‌ಸೈಟ್‌ ಲಿಂಕ್‌

“ನೀವು ಕೇವಲ ದ್ವಿತಿಯ ಪಿಯುಸಿ ಪಾಸ್‌ ಆಗಿದ್ದರೆ ಸಾಕು ನಿಮಗಾಗಿ ಉದ್ಯೋಗ ಕಾಯುತ್ತಿದೆ. ಸರ್ಕಾರದ ನರೇಗಾ ಯೋಜನೆಯ ಫಲಾನುಭವಿಗಳಾಗಿ. rojgarsevak.org ವೆಬ್‌ಸೈಟ್‌ನಲ್ಲಿ ಹಲವು ಉದ್ಯೋಗಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಈಗಲೆ ಅರ್ಜಿ ಸಲ್ಲಿಸಿ ನಿಗಧಿತ ಶುಲ್ಕ ಪಾವತಿಸಿ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಉದ್ಯೋಗ ಮಾಹಿತಿಯ ಜೊತೆಗೆ ಕೆಲ ದಾಖಲೆಗಳು ಮತ್ತು ಅರ್ಜಿ ಶುಲ್ಕವನ್ನು ಕೂಡ ಕೇಳಲಾಗುತ್ತಿದೆ. ಈ ವೆಬ್‌ಸೈಟ್‌ ಕೂಡ ನೋಡಲು ಅಧಕೃತವಾದ ಸರ್ಕಾರಿ ವೆಬ್‌ಸೈಟ್‌ ಮಾದರಿಯಲ್ಲಿದ್ದು ಬಹುತೇಕರು ಇದು ಸರ್ಕಾರಿ ವೆಬ್‌ಸೈಟ್‌…

Read More