Likith Rai

Fact Check | ಒನ್‌ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ

“ಕಿಡಿಗೇಡಿಗಳು ರಾಮನ ಅಸ್ತಿತ್ವದ ಬಗ್ಗೆ ಮಾತಾಡ್ತವೆ.. 1839ರಲ್ಲಿದ್ದ ನಾಣ್ಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮನ ಭಾವಚಿತ್ರವಿರುವ ಸುಂದರ ನಾಣ್ಯಗಳು ಶೇರ್‌ ಮಾಡಿ.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವಿರಬಹುದು ಎಂದು ಸಾಕಷ್ಟು ಜನ ಊಹಿಸಿಕೊಂಡು ಈ ಹಿಂದಿನ ಸರ್ಕಾರಗಳನ್ನು ಟೀಕಿಸುತ್ತಿದ್ದಾರೆ. ಆದರೆ ಈ ಆರೋಪಗಳು ಕೇವಲ ಇಂದು ನಿನ್ನೆಯಿಂದ ನಡೆದಿಲ್ಲ. ಬದಲಾಗಿ ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿಯಾದ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ರಾಮಮಂದಿರದ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಈ…

Read More

Fact Check | ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂದು 2021ರ ರಣಹದ್ದುಗಳ ಫೋಟೋ ಹಂಚಿಕೆ

“ರಾಮಮಂದಿರದ ಉದ್ಘಾಟನೆಗೆ ಸಾಕ್ಷಿಯಾಗಲು ಜಟಾಯು ಪಕ್ಷಿಗಳು ಆಗಮಿಸಿವೆ. ಈ ವಿಚಾರವನ್ನು ಎಲ್ಲಾ ಹಿಂದೂಗಳಿಗೆ ಶೇರ್‌ ಮಾಡಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸಿತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತ ಮುಕ್ತಾಯವಾಗಿ ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿರುವ ಈ ಸಂದರ್ಭದಲ್ಲೇ ಸಾಕಷ್ಟು ರೀತಿಯ ಸುಳ್ಳು ಸುದ್ದಿಗಳನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್‌ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌…

Read More

Fact check | ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ 90,040 ರೇಷನ್‌ ಕಾರ್ಡ್‌ ರದ್ದುಗೊಳಿಸಲಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೆಡ್ಕಲ್‌-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ಸುಮಾರು 90,040 ರೇಷನ್‌ ಕಾರ್ಡ್‌ಗಳನ್ನು ರದ್ದು ಮಾಡಿದೆ. ಮುಂದೆ ಇಡೀ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಲ್ಲೇ ರೇಷನ್‌ ಕಾರ್ಡ್‌ ರದ್ದು ಮಾಡುವ ಸಾಧ್ಯತೆ ಇದೆ.” ಎಂಬ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. మేడ్చల్ జిల్లాలో 95,040 రేషన్ కార్డులు రద్దు.. ఆందోళనలో ప్రజలు మేడ్చల్ జిల్లాలో మొత్తంగా 95,040 తెల్ల రేషన్ కార్డులు రద్దు కాగా.. బాచుపల్లి మండలం…

Read More

Fact Check | ಮದರಸ ಶಿಕ್ಷಕರ ಸಂಬಳ ಪಾವತಿಗೆ ಕೇರಳ ಸರ್ಕಾರವು ಅನುದಾನ ಮಂಜೂರು ಮಾಡುವುದಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಕೇರಳ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ಅನಗತ್ಯ ಪ್ರಯೋಜನಗಳನ್ನು ನೀಡುತ್ತಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮದರಸಗಳ ಸಂಖ್ಯೆ ಮತ್ತು ಈ ಮದರಸಾಗಳಲ್ಲಿನ ಶಿಕ್ಷಕರಿಗೆ ಸರ್ಕಾರದ ವೆಚ್ಚದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ, 2,04,683 ಶಿಕ್ಷಕರನ್ನು ಹೊಂದಿರುವ ರಾಜ್ಯದಲ್ಲಿ 21,683 ಮದರಸಾಗಳಿವೆ. ಕೇರಳ ಸರ್ಕಾರವು ಅವರ ವೇತನದಲ್ಲಿ 123 ಕೋಟಿ ರೂ. ಅನುದಾನವನ್ನು ಮಂಜೂರು ಮಾಡುತ್ತಿದೆ” ಎಂದು ಪೋಸ್ಟ್‌ ಮಾಡಲಾಗುತ್ತಿದೆ. ಫ್ಯಾಕ್ಟ್‌ಚೆಕ್‌ ಈ ವೈರಲ್‌ ಪೋಸ್ಟ್‌ ಕನಿಷ್ಠ ಎರಡು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ…

Read More

Fact Check : ಇದು ಜಪಾನ್‌ನ 2011ರ ಸುನಾಮಿ ದೃಶ್ಯಗಳು, ಇತ್ತೀಚಿನ ಭೂಕಂಪಕ್ಕೆ ಸಂಬಂಧಿಸಿದ್ದಲ್ಲ

“ಈ ವಿಡಿಯೋ ನೋಡಿ ಇದು ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಭೂಕಂಪಕ್ಕೆ ಸಂಬಂಧಿಸಿದ ದೃಶ್ಯಗಳು. ತೀವ್ರ ಭೂಕಂಪನದಿಂದಾಗಿ ಜಪಾನ್‌ ಕಡಲಾ ತೀರದ ಜನ ವಸತಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಸುನಾಮಿ ಎಚ್ಚರಿಕೆ ನೀಡಲಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದು “ಇತ್ತೀಚೆಗೆ ಜಪಾನ್‌ನಲ್ಲಿ ಸಂಬಂಧಿಸಿದ ಭೂಕಂಪನದ ವಿಡಿಯೋ ಮತ್ತು ಅದರಿಂದ ಆದಂತಹ ಅನಾಹುತಗಳು” ಎಂದು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್‌ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋದ…

Read More

Fact Check : ಬಾಬಾಬುಡನ್ ಗಿರಿಯ ಗೋರಿ ದ್ವಂಸ ಪ್ರಕರಣ ರೀ ಓಪನ್ ಆಗಿಲ್ಲ

“ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ 2017ರಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ‌ಒಟ್ಟು 14 ಜನರ ಮೇಲೆ ಈ ಪ್ರಕರಣ ದಾಖಲಾಗಿದ್ದು, ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.” ಎಂದು ರಾಜ್ಯದ ಪ್ರಮುಖ ಮಾಧ್ಯಮ ಸಂಸ್ಥೆ ಟಿವಿ 9 ಕನ್ನಡ ಸೇರಿದ ಹಾಗೆ ಹಲವು ಮಾಧ್ಯಮಗಳು ವರದಿಯನ್ನ ಮಾಡಿವೆ. ಫ್ಯಾಕ್ಟ್‌ಚೆಕ್‌ ಈ ಸುದ್ದಿ ನಿಜವೇ ಎಂದು ಪರಿಶೀಲಿಸಲಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ…

Read More

Fact Check | ಅಯೋಧ್ಯೆಯ ರಾಮಮಂದಿರಕ್ಕಾಗಿ BHEL ಸಂಸ್ಥೆ ಗಂಟೆಗಳನ್ನು ನಿರ್ಮಿಸಿಲ್ಲ

“ಈ ವಿಡಿಯೋ ನೋಡಿ ಇದು ಅಯೋಧ್ಯೆಯ ರಾಮ ಮಂದಿರಕ್ಕಾಗಿ ಭಾರತ್‌ ಹೇವಿ ಎಲೆಕ್ಟ್ರಿಕಲ್‌ ಲಿಮಿಟೆಡ್‌ ( BHEL ) ಸಂಸ್ಥೆ ನಿರ್ಮಿಸಿರುವ ಗಂಟೆಗಳು. ಈ 42 ಗಂಟೆಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. ” ಎಂಬ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಮೋಜೋ ಸುದ್ದಿ…

Read More

Fact Check | ಜನ್‌ಧನ್‌ ಯೋಜನೆಯಲ್ಲಿ 30 ಲಕ್ಷದವರೆಗೆ ಸಾಲ, ಸಬ್ಸಿಡಿ ಸಿಗಲಿದೆ ಎಂಬುದು ಸುಳ್ಳು

” ಹೊಸ ವರ್ಷದ ಶುಭಾಶಯ, 1 ಲಕ್ಷದಿಂದ 30 ಲಕ್ಷದವರೆಗೆ ಸಾಲ, 2% ಬಡ್ಡಿ ದರ, 30% ಸಬ್ಸಿಡಿ, ನಿಮ್ಮ ಮನೆಯಲ್ಲಿ ಜನ್‌ಧನ್‌ ಸಾಲವನ್ನು ತ್ವರಿತವಾಗಿ ಪಡೆಯಿರಿ”ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಈ ಪೋಸ್ಟರ್ ಅನ್ನು ನಿಜವೆಂದು ನಂಬಿ ಸಾಲಕ್ಕಾಗಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ ಹೀಗೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಅದರಲ್ಲಿ ಮಾತನಾಡುವ ವ್ಯಕ್ತಿ ಒಂದಷ್ಟು ವಯಕ್ತಿಕ ದಾಖಲೆಗಳನ್ನು ಕೇಳುತ್ತಾನೆ. ಬಳಿಕ ಎರಡು…

Read More

Fact Check | ಕೇರಳದಲ್ಲಿ ಕ್ರಿಸ್‌ಮಸ್‌ ಹಬ್ಬದಂದು ಚಂದಾ ಎತ್ತುವ ದಂಧೆ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ ಕೇರಳದಲ್ಲಿ ಕ್ರಿಸ್‌ಮಸ್ ಹಬ್ಬದಂದು ಚಂದಾ ಎತ್ತುವ ರೀತಿ ಹೇಗಿದೆ ಎಂದು. ಕೇರಳದ ಎಡಪಂಥಿರು ಬೆಳೆಸಿದ ಸುಲಿಗೆ ದಂಧೆ ಇದು.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಬಳಸಿಕೊಂಡು ಕೇರಳದ ಎಡಪಂಥಿಯ ಪಕ್ಷಗಳ ವಿರುದ್ಧ ಮತ್ತು ಕ್ರೈಸ್ತ ಸಮುದಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕೆ ಮಾಡಲಾಗುತ್ತಿದೆ. “ಹೀಗೆ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಕುಳಿತಿದ್ದು, ಆತನ ಬಳಿ ಬಂದ ಕೆಲ ಯುವಕರ ಗುಂಪು ಕ್ರಿಸ್‌ಮಸ್‌ ಆಚರಣೆಗೆ ಚಂದಾ ವಸೂಲಿಗೆ ಮುಂದಾಗುತ್ತಾರೆ….

Read More

Fact Check | ಒಣ ಶುಂಠಿ ಸೇವನೆಯಿಂದ ಗೊರಕೆ ಸಮಸ್ಯೆ ಮತ್ತು ಕೋವಿಡ್ 19 ಕಾಯಿಲೆ ಗುಣವಾಗುವುದಿಲ್ಲ

“ಒಣ ಶುಂಠಿಯನ್ನು ಬಳಸುವುದರಿಂದ ಗೊರಕೆ ಮತ್ತು ಕೋವಿಡ್ 19 ಸಮಸ್ಯೆಗಳನ್ನು ಬಗೆಹರಿಸಬಹುದು. ಹಾಗಾಗಿ ನಿಮಗೆ ಈ ಸಮಸ್ಯೆಗಳಿದ್ದರೆ ಇಂದಿನಿಂದಲೇ ಒಣ ಶುಂಠಿಯ ಪುಡಿಗಳನ್ನು ಬಳಸಲು ಆರಂಭಿಸಿ.” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಇದು ಆರ್ಯುವೇದದಲ್ಲೂ ಹೇಳಲಾಗಿದೆ ಎಂದು ಸಾಕಷ್ಟು ಮಂದಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ರೀತಿಯ ಸುದ್ದಿ ಕೊರೋನಾ ಸಂದರ್ಭದಿಂದಲೂ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಇದು ಪ್ರಯೋಜನಕಾರಿಯಾಗಲಿದೆ. ಹಲವಾರು ಜನ ಈ ಒಣ ಶುಂಠಿಯ…

Read More