Likith Rai

Fact Check | ಬುರ್ಜ್‌ ಖಲೀಫಾ ಮೇಲೆ ಶ್ರೀ ರಾಮನ ಫೋಟೋ ಪ್ರದರ್ಶಿಸಲಾಗಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಉದಯವಾಣಿ

ಸಾಮಾಜಿಕ ಜಾಲತಾಣದಲ್ಲಿ “ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ಬೆಳಕಿನಲ್ಲಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಗವಾನ್ ರಾಮನ ಚಿತ್ರ ಮೂಡಿ ಬಂದಿದೆ.” ಎಂದು ಸಾಕಷ್ಟು ಮಂದಿ ಪೋಟೋವೊಂದನ್ನು ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ  “22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ” ಮುಸ್ಲಿಂ ರಾಷ್ಟ್ರವೂ ಸಂತಸವನ್ನು ವ್ಯಕ್ತ ಪಡಿಸಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬುತ್ತಿದ್ದರೆ ಕನ್ನಡದ ಖ್ಯಾತ ದಿನ ಪತ್ರಿಕೆಯಾದ ಉದಯವಾಣಿ ಕೂಡ ತನ್ನ ಪತ್ರಿಕೆಯ 5ನೇ ಪುಟದಲ್ಲಿ…

Read More

Fact Check | ಈ ಬಾಲಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಗ ಅಲ್ಲ

ಸಾಮಾಜಿಕ ಜಾಲತಾಣದಲ್ಲಿ “ಇವರು ದಿವಂಗತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಗ.. ತಾತನಂತ ಇವರು ಕೂಡ ಅಮೋಘ ಗಾಯಕರಾಗಲಿದ್ದಾರೆ. ಈ ವಿಡಿಯೋ ಎಲ್ಲಾರಿಗೂ ಶೇರ್ ಮಾಡಿ.” ಎಂದು ಬಾಲಕನೊಬ್ಬನ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವು ಮಂದಿ ಇದು ನಿಜವೆಂದು ನಂಬಿದ್ದಾರೆ. ಫ್ಯಾಕ್ಟ್‌ಚೆಕ್‌  ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಸತ್ಯ ಶೋಧನೆಯನ್ನ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಲಾಯಿತು. ಆಗ ಬಾಲಕನಿಗೆ ಸಂಬಂಧ ಪಟ್ಟ ಹಲವು…

Read More

Fact Check | ವಂದೇ ಭಾರತ್‌ ಹೆಸರಿನಲ್ಲಿ ಯಾವುದೇ ಬಸ್‌ ಸಂಚಾರ ಆರಂಭವಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಬನಾರಸ್‌ನಿಂದ ಗಾಜಿಪುರಕ್ಕೆ ವಂದೇ ಭಾರತ್ ಬಸ್‌ ಸಂಚಾರ ಆರಂಭವಾಗಿದೆ. ಅದರ ಮೊದಲು ಚಿತ್ರ ಇದು ಎಲ್ಲಾರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು, ಇದು ನಿಜವಾದ ಬಸ್‌ ಎಂದು ನಂಬಿಕೊಂಡಿದ್ದಾರೆ. ಈ ವಂದೇ ಭಾರತ್‌ ಬಸ್‌ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಟೋವನ್ನು ಗಮನಿಸಿದಾಗ, ಇದರಲ್ಲಿ ವಂದೇ ಭಾರತ್‌ ರೈಲು ಮುಂಭಾಗದಿಂದ ನೋಡಲು ಹೇಗೆ ಕಾಣಿಸುತ್ತದೋ ಅದೇ ವಿನ್ಯಾಸವನ್ನ ಈ ವೈರಲ್‌ ಫೋಟೋದಲ್ಲಿರುವ ವಂದೇ ಭಾರತ್‌ ಬಸ್‌ನಲ್ಲಿ…

Read More

Fact Check | ಸೌದಿ ಅರೇಬಿಯಾದ ರಾಷ್ಟ್ರೀಯ ಪಠ್ಯಕ್ರಮದಲ್ಲಿ ರಾಮಾಯಣ, ಮಹಾಭಾರತವನ್ನು ಅಳವಡಿಸಿಲ್ಲ

“ಸೌದಿ ಅರೇಬಿಯಾ ತನ್ನ ಶೈಕ್ಷಣಿಕ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಅಳವಡಿಸಿಕೊಂಡಿದೆ. ಇದಕ್ಕೆ ಸಂಬಂಧ ಪಟ್ಟಂತೆ ಸ್ಮೃತಿ ಇರಾನಿಯವರು ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಸುದ್ದಿ ಎಷ್ಟು ನಿಜಾಂಶದಿಂದ ಕೂಡಿದೆ. ಈ ಸುದ್ದಿಯನ್ನ ನಂಬಬಹುದ ಅಥವಾ ನಂಬಬಾರದ ಈ ಎಲ್ಲಾ ವಿಚಾರದ ಕುರಿತಾಗಿ ಮಾಹಿತಿ ಈ ಸಂಪೂರ್ಣ ಅಂಕಣದಲ್ಲಿ ನೋಡೋಣ ಬನ್ನಿ. ಫ್ಯಾಕ್ಟ್‌ಚೆಕ್‌…

Read More

Fact Check | ಪೀರ್‌ ಪಾಷ ಬಂಗ್ಲಾವೇ ಮೂಲ ಅನುಭವ ಮಂಟಪ ಎಂಬುದಕ್ಕೆ ಯಾವುದೇ ಆಧಾರವಿಲ್ಲ

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ರೆ, ಕೆಲವರು “ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಕೆ? ಫಿರ್‌ ಸಾಬ್‌ ದರ್ಗಾ ಆಗಿರುವ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ಮತ್ತೆ ಮೂಲ ಸ್ಥಿತಿಗೆ ಬರುವುದು ಯಾವಾಗ? ಬಸವಣ್ಣನವರಿಗೆ ನ್ಯಾಯ ಸಿಗುವುದು ಯಾವಾಗ?” ಎಂದು ಪ್ರಶ್ನಿಸಿ ಕಮೆಂಟ್‌ ಮಾಡುತ್ತಿದ್ದಾರೆ.. ಈ ಕುರಿತು…

Read More

Fact Check | ನಟ ಪ್ರಭಾಸ್ ರಾಮ ಮಂದಿರಕ್ಕೆ 50 ಕೋಟಿ ರೂ ದೇಣಿಗೆ ನೀಡಿಲ್ಲ

“ರಾಮ ಮಂದಿರ ಉದ್ಘಾಟನಾ ದಿನವಾದ ಜನವರಿ 22 ರಂದು ಬರುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು ತೆಲುಗು ನಟ ಪ್ರಭಾಸ್ 50 ಕೋಟಿ ರೂ ದೇಣಿಗೆ ನೀಡುತ್ತಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸಾಕಷ್ಟು ಮಂದಿ ನಿಜವೆಂದು ನಂಬಿ ತಮ್ಮ ವೈಯಕ್ತಿಕ ಖಾತೆಗಳಲ್ಲೂ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು, ಇದೇ ವೈರಲ್‌ ಪೋಸ್ಟ್‌ ಅನ್ನು ಆಧಾರವಾಗಿಟ್ಟುಕೊಂಡು ಕನ್ನಡದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ  “ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ….

Read More

Fact Check | ಜಪಾನ್‌ನಲ್ಲಿ ರಾಮನ ಶ್ಲೋಕ ಪಠಿಸಲಾಗುತ್ತಿದೆ ಎಂಬುದು ಸುಳ್ಳು

“ರಾಮ ಮಂದಿರದ ಉದ್ಘಾಟನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಜಗತ್ತಿನಾದ್ಯಂತ ರಾಮನ ಜಪ ಆರಂಭವಾಗಿದೆ.. ಈಗ ಜಪಾನ್‌ನಲ್ಲಿ ಅಲ್ಲಿನ ನಾಗರೀಕರು ರಾಮಾಯಣದ ವಾಚನವನ್ನು ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಮತ್ತು ಎಲ್ಲರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರೂ ರಾಮನ ಶ್ಲೋಕವನ್ನು ಕಂಠಪಾಠ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತು ಇವರ ಜೊತೆ ಇನ್ನಷ್ಟು ಮಂದಿ ಈ ಶ್ಲೋಕವನ್ನು ಹೇಳುತ್ತಿರುವುದು ಕೂಡ ಕಂಡು ಬಂದಿದೆ. ಫ್ಯಾಕ್ಟ್‌ಚೆಕ್‌ ಈ ವಿಡಿಯೋ…

Read More

Fact Check | ರಾಹುಲ್‌ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ತಿಳಿಸಿದ್ದಾರೆ ಎಂಬುದು ಸುಳ್ಳು

“ಭಾರತ ಆಕ್ರಮಿತ ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆ‌ಯನ್ನು ಪ್ರಾರಂಭಿಸಿದ ರಾಹುಲ್ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ಗ್ಲೋಬಲ್ ಟೈಮ್ಸ್ ನ್ಯೂಸ್‌ನ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.” ಎಂಬ ಸುದ್ದಿಯೊಂದು ವೈರಲ್‌ ಆಗುತ್ತಿದ್ದೆ. ಅದರಲ್ಲೂ ಪ್ರಮುಖವಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಕಾರ್ಯಕರ್ತರು ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ ಕುರಿತು…

Read More

Fact Check | ರಾಮನ ಚಿತ್ರವಿರುವ 500ರೂ. ನೋಟು ಬಿಡುಗಡೆಯಾಗಲಿದೆ ಎಂಬುದು ಸುಳ್ಳು

“22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥವಾಗಿ ಬಿಡುಗಡೆಯಾಗಲಿರುವ ಭಗವಾನ್ ರಾಮನ ಚಿತ್ರದಿಂದ ಅಲಂಕರಿಸಲ್ಪಟ್ಟ ಹೊಸ 500 ರೂಪಾಯಿ ನೋಟಿನ ಚಿತ್ರ. ಎಲ್ಲರಿಗೂ ಶೇರ್‌ ಮಾಡಿ” ಎಂದು ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರಾಮ ಭಕ್ತ ಗಾಂಧೀಜಿಯವರು ಕೂಡ ಇದನ್ನೇ ಬಯಸುತ್ತಿದರು ಜೈ ಶ್ರೀರಾಮ್ 🙏 pic.twitter.com/OnJi4RITaT — wHatNext 🚩 (@raghunmurthy07) January 14, 2024 ಈ 500 ರೂ ಮುಖಬೆಲೆಯ ರಾಮನ ಚಿತ್ರವಿರುವ ಫೋಟೋ ಬಗ್ಗೆ ಸತ್ಯಾಸತ್ಯತೆಯನ್ನು ಅರಿಯದೇ ಸಾಕಷ್ಟು ಮಂದಿ…

Read More

Fact Check | ಜನ್ ಧನ್ ಯೋಜನೆಯಿಂದ ಪ್ರತಿಯೊಬ್ಬರ ಖಾತೆಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂಬುದು ಸುಳ್ಳು

“ನಿಮ್ಮ ಬ್ಯಾಂಕ್‌ ಖಾತೆಗೆ ಕೇಂದ್ರ ಸರ್ಕಾರದ ಜನ್‌ ಧನ್‌ ಯೋಜನಯಿಂದ 2 ಸಾವಿರ ರೂ. ನೀಡಲಾಗುವುದು. ತಕ್ಷಣ ಈ ಪೋಸ್ಟರ್‌ನಲ್ಲಿ ಕಾಣಿಸುತ್ತಿರುವ ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಿ” ಎಂಬ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಾಕಷ್ಟು ಮಂದಿ ಇದು ನಿಜವೆಂದ ನಂಬಿ ಸಾಕಷ್ಟು ಜನ ಶೇರ್‌ ಕೂಡ ಮಾಡುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಸರ್ಕಾರದಿಂದ ಯಾವುದಾದರು ಅಧಿಕೃತ ಆದೇಶವೇನಾದರೂ ಬಂದಿದೆಯೇ ಎಂದು ಪರಿಶೀಲನೆ ನಡೆಸಿದಾಗ ಯಾವುದೇ ರೀತಿಯಾದ ಅಧಿಕೃತ ಆದೇಶಗಳು…

Read More