Likith Rai

Fact Check | ವರಹಾ ಗೋಳಾಕಾರದ ಭೂಮಿಯನ್ನು ಎತ್ತಿದ್ದರು ಎಂಬುದಕ್ಕೆ ಸ್ಪಷ್ಟ ಆಧಾರಗಳಿಲ್ಲ

“5ನೇ ಶತಮಾನದವರೆಗು ಜಗತ್ತಿನ ಜನರು ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದರು. ಆದರೆ ಭೂಮಿ ಗೋಳಾಕಾರದಲ್ಲಿದೆ ಎಂದು ಪ್ರಾಚೀನ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ,” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಇದು ಇತ್ತೀಚೆಗೆ ಈ ರೀತಿಯಾದ ಸುದ್ದಿ ಹೆಚ್ಚು ಹೆಚ್ಚು ಹಬ್ಬುತ್ತಿದ್ದು, ಈ ಕುರಿತು ಫ್ಯಾಕ್ಟ್‌ಲೀ ಕೂಡ ಈ ಹಿಂದೆ ವರದಿ ಮಾಡಿತ್ತು. ಇನ್ನೂ ಕೆಲವರು ತಮ್ಮ ಆರೋಪಕ್ಕೆ ಸಾಕ್ಷಿಗಳು ಇವೆ ಎಂಬಂತೆ “ವರಹಾ ಗೋಳಾಕಾರದ ಭೂಮಿಯನ್ನು ಎತ್ತಿರುವ ವಿಗ್ರಹಗಳನ್ನು, ಚಿತ್ರಗಳನ್ನು ನೀವು ದೇವಾಲಯಗಳಲ್ಲಿ ನೋಡಬಹುದು” ಎಂದು…

Read More

Fact Check | RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ಕಾರಣ ರಾಷ್ಟ್ರವಿರೋಧಿ ಭಾವನೆಯೇ ಹೊರತು ನೆಹರು ಅಲ್ಲ

“1950ರಲ್ಲಿ ನೆಹರು ಧ್ವಜ ಸಂಹಿತೆ ಜಾರಿಗೊಳಿಸಿ ಖಾಸಗಿ ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸಿದರೆ 6 ತಿಂಗಳ ಶಿಕ್ಷೆ ಕಾನೂನು ತಂದಿದ್ದರು. ಆ ಕಾರಣಕ್ಕೆ RSS ತನ್ನ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. 2002 ರಲ್ಲಿ ವಾಜಪೇಯಿಯವರು ಪರಿಷ್ಕೃತ ಧ್ವಜ ಸಂಹಿತೆಯನ್ನು ಘೋಷಿಸಿದ ನಂತರ RSS ತನ್ನ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದೆ.” ಎಂಬ ಸುಳ್ಳು ಸುದ್ದಿಯೊಂದು ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆರ್‌ಎಸ್‌ಎಸ್‌ ಸಂಘಟನೆ ಕಳೆದ 52 ವರ್ಷಗಳಿಂದ ತನ್ನ ಶಾಖೆಯ ಪ್ರಧಾನ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸದಿರುವ…

Read More

Fact Check : ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿ ಮುಸಲ್ಮಾನರು ರಾಮ ನಾಮ ಜಪಿಸಿದ್ದಾರೆಂಬುದು ಸುಳ್ಳು

“ಮುಸಲ್ಮಾನರ ಶ್ರದ್ಧಾ ಕೇಂದ್ರ ಮೆಕ್ಕಾದ ಮಸೀದಿ ಅಲ್-ಹರಾಮ್‌ನಲ್ಲಿಯೂ ಕೂಡ ರಾಮಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೆಲವರು ಕೇಸರಿ ಬಣ್ಣದ ನಿಲವಂಗಿಯನ್ನು ಧರಿಸಿ, ರಾಮ ನಾಮವನ್ನು ಜಪ ಮಾಡಿದ್ದಾರೆ. ಜೊತೆಗೆ ಹಿನ್ನಲೆ ಸಂಗೀತದಲ್ಲಿ ರಾಮನ ಹಾಡನ್ನು ಕೇಳ ಬಹುದು” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಗೆ, ವಾಟ್ಸ್‌ಆಪ್‌ಗಳಲ್ಲಿ, ವಿವಿಧ ಅಂತರ್ಜಾಲ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆಯನ್ನ ನಡೆಸಿದಾಗ ಅಸಲಿ ವಿಚಾರ…

Read More

Fact Check | ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಸಂಸತ್ತಿನೊಳಗೆ ಹೊಡೆದಾಡಿಕೊಂಡಿದ್ದಾರೆ ಎಂಬುದು ಸುಳ್ಳು

“ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಮಾಲ್ಡೀವ್ಸ್ ಸಂಸತ್ತಿನೊಳಗೆ ಹೊಡೆದಾಡಿರುವ ವಿಡಿಯೋ ಇದು, ಎಲ್ಲಾರಿಗೂ ಶೇರ್‌ ಮಾಡಿ.” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಸಾಕಷ್ಟು ಮಂದಿ ಮಾಲ್ಡೀವ್ಸ್‌ ಅಧ್ಯಕ್ಷ ಮೊಮ್ಮದ್‌ ಮುಯಿಜ್ಜು ಅವರೆ ಹೊಡೆದಿದ್ದಾರೆ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಇದೇ ಪೋಸ್ಟ್‌ ಅನ್ನು ಮತ್ತೊಂದು ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದು, ಅದರಲ್ಲಿ ಮಾಲ್ಡೀವ್ಸ್‌ ಅಧ್ಯಕ್ಷರೇ ತಮ್ಮ ಸಂಸದರ ಕೈಯಿಂದ ಥಳಿತಕ್ಕೆ ಒಳಪಟ್ಟಿದ್ದಾರೆ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌ ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌…

Read More

Fact Check | ಸುಳ್ಳಿಗೆ ಕುಖ್ಯಾತಿ ಪಡೆದಿರುವ ಟಿವಿ ವಿಕ್ರಮದಿಂದ ಮತ್ತೊಂದು ಸುಳ್ಳು

“ಬಾಲಕಿ ಮೇಲೆ ರೇಪ್‌.. ರಾಹುಲ್‌ ಮೇಲೆ ಕೇಸ್‌” ಎಂಬ ಶೀರ್ಷಿಕೆಯಲ್ಲಿ ಟಿವಿ ವಿಕ್ರಮ ತನ್ನ ವಿಡಿಯೋವೊಂದನ್ನು ಪ್ರಸಾರ ಮಾಡಿದೆ. ಅದೇ ಥಂಬ್‌ನೈಲ್‌ನಲ್ಲಿ ಮುಸ್ಲಿಂ ಹುಡುಗಿಯನ್ನು ಕಾಪಾಡಿದ ಹಿಂದೂ ಹುಡುಗ ಎಂದು ಸಹ ಬರೆದಿದೆ. ಟಿವಿ ವಿಕ್ರಮದ ಶೀರ್ಷಿಕೆ ನೋಡಿದವರು ರಾಹುಲ್‌ ಗಾಂಧಿ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಕುರಿತು ಈ ವಿಡಿಯೋದಲ್ಲಿ ಮಾಹಿತಿ ಇದೆ ಎಂದು ಅರ್ಥ ಮಾಡಿಕೊಳ್ಳಲಿ ಎಂಬಂತೆ ಈ ಥಂಬ್‌ನೈಲ್‌ ಅನ್ನು ಟಿವಿ ವಿಕ್ರಮ ಡಿಸೈನ್‌ ಮಾಡಿದೆ. ಫ್ಯಾಕ್ಟ್‌ಚೆಕ್‌ ವಿಡಿಯೋದಲ್ಲಿ ಏನಿದೆ…

Read More

Fact Check | ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು

“ಮುಂಬೈನ ಮೀರಾ ನಾಯರ್ ಪ್ರದೇಶದಲ್ಲಿ ಜನವರಿ 22ರಂದು ರಾಮ ಯಾತ್ರೆ ಮೇಲೆ ದಾಳಿ ಮಾಡಿದವರನ್ನುಅವರ ಮನೆಯಿಂದ ಎಳೆದೊಯ್ಯಲಾಗಿದೆ. ಇದು ತುಂಬಾ ಹೆಮ್ಮೆಯ ಸಂಗತಿ. ಈಗ ಅವರಿಗೆ ಉತ್ತಮ ಬಹುಮಾನ ಸಿಗಲಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ Those who attacked Ram Yatra on 22nd in Mira Nair area of Mumbai were picked up from their home today.Much respect! Now there…

Read More

Fact Check | ಫೋಟೋಗ್ರಾಫರ್‌ ಅಳುತ್ತಿರುವ ವಿಡಿಯೋ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಲ್ಲ

“ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಬಾಲರಾಮ ಪ್ರಾಣ ಪ್ರತಿಷ್ಠೆಯ ವೇಳೆ ಬಾಲರಾಮನ ವಿಗ್ರಹವನ್ನು ನೋಡಿ ಭಾವುಕರಾಗಿ ಫೋಟೋಗ್ರಾಫರ್ ಒಬ್ಬರು ಅಳುತ್ತಿರುವ ಫೋಟೋ ಇದು.” ಎಂಬ ಫೋಟೋವೊಂದನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಫೋಟೋಗ್ರಾಫರ್‌ವೊಬ್ಬ ಏನನ್ನೋ ನೋಡಿ ಫೋಟೋ ಕ್ಲಿಕ್ಕಿಸುತ್ತಾ ಅಳುತ್ತಿರುವುದನ್ನು ಕಾಣ ಬಹುದಾಗಿದೆ. ಇದೇ ಫೋಟೋವನ್ನು ಬಳಸಿಕೊಂಡು ಬಾಲರಾಮನ ವಿಗ್ರಹದ ಪೋಟೋದೊಂದಿಗೆ ಸೇರಿಸಿ ಬಾಲರಾಮನ ವಿಗ್ರಹವನ್ನೇ ನೋಡಿ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ಛಾಯಾಗ್ರಾಹಕ ಅಳುತ್ತಿದ್ದ ಎಂದು ಸಾಕಷ್ಟು ಮಂದಿ ಹಲವು ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ….

Read More

Fact Check | ರಾಮಮಂದಿರದಲ್ಲಿ ದೇಣಿಗೆಯ ಮಹಾಪೂರ ಎಂದು ರಾಜಸ್ತಾನದ ವಿಡಿಯೋ ಹಂಚಿಕೆ!

“ಈ ವಿಡಿಯೋ ನೋಡಿ ಇದು ಅಯೋಧ್ಯೆಯಲ್ಲಿ ಮೊದಲ ದಿನ ಹರಿದು ಬಂದ ದೇಣಿಗೆ. ದೇವಾಲಯದ ಹುಂಡಿಗಳಲ್ಲಿ ಕಂತೆ ಕಂತೆ ನೋಟುಗಳನ್ನು ಭಕ್ತರು ನೀಡಿದ್ದಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿ..” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ಸುಳ್ಳು ಸುದ್ದಿಗಳು ರಾಮ ಮಂದಿರ ಉದ್ಘಾಟನೆಯ ನಂತರ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಹಲವು ಮಂದಿ ಅಯೋಧ್ಯೆಗೆ ಸಂಬಂಧ ಪಡದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಕೂಡ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಿಜವೆಂದು ನಂಬಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು…

Read More

Fact Check | ಚೀನಾದಲ್ಲಿ ಸ್ವಚ್ಚತಾ ಕಾರ್ಯಕ್ಕಾಗಿ ಕೊಕೊ ಕೋಲಾ ಬಳಸಾಗುತ್ತಿದೆ ಎಂಬುದು ಸುಳ್ಳು

“ಚೀನಾದಾದ್ಯಂತ ಕೊಕೊ ಕೋಲಾವನ್ನು ಬ್ಯಾನ್‌ ಮಾಡಲಾಗಿದೆ. ಮಾರುಕಟ್ಟೆಯಿಂದಲೂ ವಾಪಸ್‌ ಪಡೆಯಲಾಗುತ್ತಿದೆ. ಈಗ ಒಳ ಚರಂಡಿ, ಶೌಚ ಗುಂಡಿಗಳ ಸ್ವಚ್ಚತಾ ಕಾರ್ಯಕ್ಕಾಗಿ ಕೊಕೊ ಕೋಲಾವನ್ನು ಬಳಸಲಾಗುತ್ತಿದೆ.” ಎಂದು ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇನ್ನೂ ಕೆಲವು ಮಂದಿ ಚೀನಾದಲ್ಲಿ ಅಲ್ಲಿನ ಸರ್ಕಾರ ಕೊಕೊ ಕೋಲಾವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದೆ. ಲ್ಯಾಬ್‌ ಫಲಿತಾಂಶದಲ್ಲಿ ವಿಷಯುಕ್ತ ಅಂಶಗಳು ಕಂಡು ಬಂದಿವೆ. ಇದನ್ನ 150 ಕೈದಿಗಳಿಗೆ ಕುಡಿಸಲಾಗಿತ್ತು ಅದರಲ್ಲಿ…

Read More

Fact Check | ಸಿಖ್ಖರು ರಾಮನ ಸ್ಮರಣೆ ಮಾಡಿದ್ದಾರೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ

“ಈ ವಿಡಿಯೋ ನೋಡಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಸಿಖ್ಖರು ಮತ್ತು ಹಿಂದೂಗಳು ಒಟ್ಟಾಗಿ ಪ್ರಭು ರಾಮ್ ಮತ್ತು ಗುರುನಾನಕ್ ದೇವ್ ಜಿ ಅವರನ್ನು ರಾಮ್ ಕಿ ಪೇಧಿಯಲ್ಲಿ ನೆನಪಿಸಿಕೊಂಡು ಹಾಡಿದ್ದಾರೆ, ಗುರು ಗೋವಿಂದ್ ಸಿಂಗ್ ಜಿ ಅವರಿಗೆ ಗೌರವ ಸಲ್ಲಿಸಿದರು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಕುರಿತು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹೀಗೆ ಶೇರ್‌ ಮಾಡಲಾಗುತ್ತಿರುವ  ವಿಡಿಯೋಗಳಿಗೆ ಸಾಕಷ್ಟು ಮಂದಿ ನಕಾರಾತ್ಮಕ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ….

Read More