Likith Rai

“ನಾನು ಮೀಸಲಾತಿ ವಿರೋಧಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಲ್ಲ..!

“ಈ ವಿಡಿಯೋ ನೋಡಿ ಸಂಸತ್ತಿನ ಒಳಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ‌ಗೆ ಮೀಸಲಾತಿ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಮೀಸಲಾತಿ ರದ್ದು ಮಾಡುವ ಸೂಚನೆ ನೀಡಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಪ್ರಧಾನಿ ಮೋದಿ ಅವರನ್ನು ಮೀಸಲಾತಿ ವಿರೋಧಿ ಮೀಸಲಾತಿಯನ್ನು ಶೀಘ್ರದಲ್ಲೇ ರದ್ದು ಪಡಿಸಲಾಗುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು…

Read More

Fact Check | ಯುಸಿಸಿ ವಿರುದ್ಧ ಮುಸಲ್ಮಾನರು ಬೃಹತ್‌ ರ್ಯಾಲಿ ನಡೆಸಿದ್ದಾರೆಂದು 2022ರ ವಿಡಿಯೋ ಹಂಚಿಕೆ.!

“ಈ ವಿಡಿಯೋ ನೋಡಿ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ ಹಿನ್ನೆಲೆ ಅಲ್ಲಿನ ಸರ್ಕಾರದ ಹಾಗೂ ಬಿಜೆಪಿ ವಿ ರುದ್ಧ ಹರಿದ್ವಾರದಲ್ಲಿ ಮುಸ್ಲಿಮರು ಬೃಹತ್‌ ಸಂಖ್ಯೆಯಲ್ಲಿ ಜಮಾಯಿಸಿ ರ್ಯಾಲಿ ನಡೆಸಿದ್ದಾರೆ” ಎಂದು ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಕೋಮು ಸಾಮರಸ್ಯ ಹಾಳು ಮಾಡಲು ಕೆಲ ಬಲಪಂಥಿಯ ಪ್ರೊಪಗೆಂಡ ವ್ಯಕ್ತಿಗಳು ಹಂಚಿಕೊಳ್ಳುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ತಿಳಿಯದ ಸಾಕಷ್ಟು ಮಂದಿ ನಾಗರಿಕರು ಇದು ನಿಜವಿರಬಹುದು ಎಂದು ಇದೇ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಕೂಡ ಮಾಡುತ್ತಿದ್ದಾರೆ. ಆ ಮೂಲಕ ಸಾಮಾಜದ ಸ್ವಾಸ್ಥ್ಯ…

Read More

Fact Check | ಸಿಬಿಎಸ್‌ಇ 9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌, ರಿಲೇಷನ್‌ಶಿಪ್‌ ಕುರಿತು ಪಠ್ಯ ಎಂದು ಸುಳ್ಳು ಮಾಹಿತಿ ಹಂಚಿಕೆ

“9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್‌, ರಿಲೇಷನ್‌ಶಿಪ್‌ ಕುರಿತು ಪಾಠಗಳನ್ನು ಮಾಡಲಾಗುತ್ತಿದೆ. ಈ ಪೋಟೋಗಳನ್ನು ಒಮ್ಮೆ ಸರಿಯಾಗಿ ನೋಡಿ ನಿಮ್ಮ ಮಕ್ಕಳು ಸಿಬಿಎಸ್‌ಇ ಸಿಲೆಬಸ್‌ನವರಾಗಿದ್ದರೆ ಅವರು ಅದನ್ನೇ ಕಲಿಯುತ್ತಿದ್ದಾರೆ ಎಂದರ್ಥ ಎಚ್ಚರ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಕೇವಲ ಸಿನಿಮಾ, ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಸುಳ್ಳು ಸುದ್ದಿಗಳು ಇದೀಗಾ ಶಿಕ್ಷಣ ಕ್ಷೇತ್ರದಲ್ಲೂ ಕಂಡುಬಂದಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ಪ್ರೇಮ, ಡೇಟಿಂಗ್​​​ಗೆ ಸಂಬಂಧಿಸಿದ…

Read More

Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!

“ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನೂ ಪಕ್ಷದ ಕಾರ್ಯಕರ್ತನಿಗೆ ನೀಡಿದ ರಾಹುಲ್‌ ಗಾಂಧಿ, ಇದು ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗ ನೀಡುವ ಮರ್ಯಾದೆ.” ಎಂದು ವಿಪಕ್ಷಗಳು ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ಮಂದಿ ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ವಿವಾದ ತಲೆದೂರಿದೆ. How shameless First, Rahul Gandhi made @himantabiswa ji eat biscuits 🍪 from same plate as his pet dog 🐕…

Read More

Fact Check | ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿಡಲು ಸಾಧ್ಯ ಎಂದು ನಕಲಿ ಆನೆಯ ವಿಡಿಯೋ ಹಂಚಿಕೆ

“ನೋಡಿ ಈ ಆನೆ ಹೇಗೆ ಸಂಗೀತದ ಸದ್ದಿಗೆ ಕುಣಿಯುತ್ತಿದೆ ಎಂದು. ಇಂತಹ ಪವಾಡಗಳು ಕೇವಲ ಸನಾತನ ಧರ್ಮದಿಂದ ಮಾತ್ರ ಸಾಧ್ಯ ಮತ್ತು ಸನಾತನ ಧರ್ಮದಿಂದ ಮಾತ್ರ ಪ್ರಾಣಿಗಳನ್ನು ಖುಷಿಯಾಗಿ ಇಡಲು ಸಾಧ್ಯ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು ನೋಡಿದಾಗ ಮೊದ ಮೊದಲು ಇದು ನಿಜವಾದ ಆನೆಯಂತೆಯೇ ಕಾಣುತ್ತದೆ. ಹೀಗಾಗಿ ಸಾಕಷ್ಟು ಮಂದಿ ವಿಡಿಯೋವನ್ನು ಸರಿಯಾಗಿ ಗಮನಿಸದೆ ಇದು ನಿಜವೆಂದು ಭಾವಿಸಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗದರೆ ಈ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು…

Read More

Fact Check | ನೈಲ್‌ ನದಿ ಬಳಿಯ ಸರೋವರದಲ್ಲಿ ಮಾನವ ಮುಖದ ಹೋಲಿಕೆಯ ಮೀನು ಪತ್ತೆಯಾಗಿಲ್ಲ

“ನೈಲ್ ನದಿಯ ಬಳಿ ಸರೋವರವೊಂದರಲ್ಲಿ ಮಾನವ ಮುಖದ ಮೀನು ಪತ್ತೆಯಾಗಿದೆ. ಇದನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಿದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದು, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಿತ್ರ ಜೀವಿಯು ನೋಡಲು ದೇಹಾಕಾರದಲ್ಲಿ ಮಾನವನಂತೆ ಇದ್ದು, ಇದರ ಮುಖ ಮಾತ್ರ ಮೀನಿನಂತೆ ಇರುವುದರಿಂದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸುವುದರ ಜೊತೆಗೆ ಇದು ನಿಜವಿರಬಹುದು ಎಂದು ನಂಬಿದ್ದಾರೆ.  ಇದಕ್ಕೆ ಪೂರಕ ಎಂಬಂತೆ ಹೆಡ್‌ಟ್ಯಾಪ್‌ ಎಂಬ…

Read More

Fact Check |ಇದು ವಿಚಿತ್ರ ಜೀವಿಯಲ್ಲ, ಇದರ ಹೆಸರು ಜೈಂಟ್ ಆಂಟ್‌ಈಟರ್‌.. ಗುಬ್ಬಿಗೆ ಬಂದಿದೆ ಎಂಬುದು ಸುಳ್ಳು!

“ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು? ಕನಕಪುರ ಭಾಗದ ಕಾಡುಗಳಲ್ಲಿ ಕೂಡ ಈ ಮುಳ್ಳುಹಂದಿಯ ಮತ್ತೊಂದು ಪ್ರಬೇಧ ಇದೆ ಎಂದು ತಿಳಿದುಬಂದಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ. ಇನ್ನೂ ಕೆಲವರು ಈ ಸುದ್ದಿಯಿಂದಾಗಿ ತುಮಕೂರು ಅರಣ್ಯವಲಯದ ಸುತ್ತಮುತ್ತಲು ವಾಸಿಸುವ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಬರೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಪ್ರಾಣಿ ಯಾವುದು? ಇದು ನಿಜಕ್ಕೂ ವಿಚಿತ್ರ ಪ್ರಾಣಿಯೇ…

Read More

Fact Check | ಪ.ಬಂಗಾಳದ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಕೇವಲ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ  “ಪಶ್ಚಿಮ ಬಂಗಾಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ 2019 ರಲ್ಲಿ, ಯಾವುದೇ ಹಿಂದೂ ಆಯ್ಕೆಯಾಗಿಲ್ಲ, ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಮುಸ್ಲಿಮರು” ಎಂಬ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಕೂಡ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ಈ ಬಗ್ಗೆ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಲವಾರು ಮಂದಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಹಾಗೂ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕಷ್ಟು ಮಂದಿ…

Read More

Fact Check | ತನ್ನ ಸಾವಿನ ಬಗ್ಗೆ ತಾನೆ ಸುಳ್ಳು ಸುದ್ದಿ ಹರಡಿದ ನಟಿ ಪೂನಂ ಪಾಂಡೆ

ಮಾಡೆಲ್ ಹಾಗೂ ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಆಕೆಯ ಸೋಷಿಯಲ್ ಮೀಡಿಯಾ ತಂಡ ಶುಕ್ರವಾರ ಬೆಳಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್‌ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅಲ್ಲದೇ, ಸಾವಿನ ಬಗ್ಗೆ ಹತ್ತಾರು ಗೊಂದಲಗಳು ಸೃಷ್ಟಿಯಾಗಿತ್ತು.   View this post on Instagram   A post shared by Poonam Pandey (@poonampandeyreal) ಪೂನಂ ಪಾಂಡೆ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅವರ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಅವರ ತಂಡ, “ಇಂದು ಮುಂಜಾನೆ ಸಾಕಷ್ಟು…

Read More

Fact Check | ತಮಿಳುನಾಡು ಸಿಎಂ ಸ್ಟಾಲಿನ್‌ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

“ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿದ್ದರೆ, ನಾವು ಸೋತರೂ ಪರವಾಗಿಲ್ಲ. ಡಿಎಂಕೆ ಹಿಂದೂಗಳ ಮತ ಭಿಕ್ಷೆ ಬೇಡುವ ಮಟ್ಟಕ್ಕೆ ಇಳಿಯುವುದಿಲ್ಲ.” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಿಂದೂ ವಿರೋಧಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್‌ 7 ತಮಿಳ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್‌…

Read More