Likith Rai

Fact Check | ಇಂಗ್ಲೀಷ್‌ ನಾಮಫಲಕ ತೆರವುಗೊಳಿಸಿದ್ದನ್ನು ಕೇಸರಿ ನಾಮಫಲಕ ಎಂದು ಸುಳ್ಳು ಹಂಚಿಕೆ

“ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಕೇಸರಿ ಬಣ್ಣವನ್ನು ಬಳಸುವಂತಿಲ್ಲ ಎಂಬ ಕಾರಣಕ್ಕೆ ಜನರ ಗುಂಪೊಂದು ಅಂಗಡಿಯ ನಾಮಫಲಕಗಳನ್ನು ಧ್ವಂಸಗೊಳಿಸಿದೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಹಿಂದೂ ಅಂಗಡಿಯೊಂದನ್ನು ಧ್ವಂಸ ಮಾಡಲಾಗಿದೆ, ಈ ಬಗ್ಗೆ ಧ್ವನಿ ಎತ್ತಲು ಯಾರೂ ಇಲ್ಲದಂತಾಗಿದೆ ಎಂದು ಕೋಮು ಬಣ್ಣವನ್ನು ಬಳಿಯಲಾಗಿದೆ. ಇದನ್ನೇ ನಿಜವೆಂದು ನಂಬಿ ಸಾಮಾಜಿಕ ಜಾಲತಾಣದಲ್ಲಿ ಅನ್ಯ ಕೋಮಿನ ವಿರುದ್ಧ, ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ ವೈರಲ್‌ ವಿಡಿಯೋವನ್ನು ಬಳಸಿಕೊಂಡು ಕರ್ನಾಟಕದ ಕಾಂಗ್ರಸ್‌ ಸರ್ಕಾರದ…

Read More

Fact Check | ಇದು ಮತೀಯ ಗೂಂಡಾಗಿರಿ ಘಟನೆ ಹೊರತು ಲವ್ ಜಿಹಾದ್ ಅಲ್ಲ

“ಈ ವಿಡಿಯೋ ನೋಡಿ ಬುರ್ಖಾ ಧರಿಸಿರುವ ಯುವತಿಯು ಹಿಂದೂ ಯುವತಿಗೆ ಬುರ್ಖಾ ಧರಿಸಲು ಹೇಳಿದ್ದಾಳೆ, ಬಳಿಕ ಮುಸ್ಲಿಂ ಯುವಕನೊಂದಿಗೆ ಲವ್‌ ಜಿಹಾದ್‌ಗೆ ತಳ್ಳಲು ಪ್ರಯತ್ನಿಸಿದ್ದಾಳೆ.. ಇದೀಗ ಈಕೆಗೆ ಹಿಂದೂ ಕಾರ್ಯಕರ್ತರು ಬುದ್ದಿ ಕಲಿಸಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/bhagwakrantee/status/1764269346623291844 ಅದರಲ್ಲಿಯೂ ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯ  ಪ್ರತಿಪಾದಕರು ಈ ವಿಡಿಯೋವನ್ನು ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಇದೊಂದು ಲವ್‌ ಜಿಹಾದ್‌ ಎಂದು ಬಿಂಬಿಸುತ್ತಿದ್ದಾರೆ. ಇದನ್ನೇ ನಿಜವೆಂದು ನಂಬಿರುವ ಅನೇಕರು ವಿವಿಧ ರೀತಿಯಲ್ಲಿ ತಮ್ಮ ತಮ್ಮ…

Read More

Fact Check | ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ

“ನಾನು ಮುಂದಿನ ಜನ್ಮ ಅಂತ ಇದ್ರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಡಿಯೋ ನೋಡಿ” ಎಂದು ಸಾಕಷ್ಟು ಮಂದಿ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿ ಐಟಿಸೆಲ್‌ ಸದಸ್ಯ ರಿಶಿ ಬಿಗ್ರೀ ಮತ್ತು ಹಲವು ಬಿಜೆಪಿಯ ಕಾರ್ಯಕರ್ತರು ಇದೇ ವಿಡಿಯೋವನ್ನು ಹೆಚ್ಚು ಪ್ರಚಾರ ಮಾಡಿದ್ದಾರೆ. ಮುಂದಿನ ಜನ್ಮ ಯಾಕೆ ಇವಾಗ್ಲೇ ಕನ್ವರ್ಟ್ ಆಗಿ,🙏 pic.twitter.com/LhruF22ikk — Murali Purshotham (@MurariMurali3) March 11, 2024 ಇನ್ನು ಸುಳ್ಳು ಸುದ್ದಿಗೆ…

Read More

Fact Check | ಕನ್ನಡ ಸುದ್ದಿ ಮಾಧ್ಯಮಗಳಿಂದ ಶಾಲಾ ವೇಳಾಪಟ್ಟಿ ಬಗ್ಗೆ ಸುಳ್ಳು ಸುದ್ದಿ

“ರಂಜಾನ್ ಆಚಣೆಗಾಗಿ ಸರ್ಕಾರಿ ಶಾಲೆ ಸಮಯ ಬದಲಾವಣೆ, ರಂಜಾನ್ ತಿಂಗಳ ಆರಂಭದಿಂದ ಏಪ್ರಿಲ್ ಹತ್ರವರೆಗೆ ಅನ್ವಯವಾಗುವಂತೆ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕೆ ಶಾಲೆ ಸಮಯ ಚೇಂಜ್ ಎಂಬ ಸುದ್ದಿಯೊಂದು ವ್ಯಾಪಕವಾಗಿ ಹಬ್ಬುತ್ತಿದೆ, ಜೊತೆಗೆ ಕನ್ನಡದ ಸುದ್ದಿ ಮಾಧ್ಯಮಗಳಾದಂತಹ ಟಿವಿ9 ಕನ್ನಡ, ಸುವರ್ಣ ನ್ಯೂಸ್ ಸೇರಿದ ಹಾಗೆ ಹಲವು ದೃಶ್ಯ ಮಾಧ್ಯಮಗಳು ಕೂಡ ಇದೇ ಸುದ್ದಿಯನ್ನು ಬಿತ್ತರಿಸುವೆ” ಎಂಬ ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಂಬಿ ಸಾಕಷ್ಟು ಮಂದಿ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ…

Read More

Fact Check | ʼಬೇಟ್ ದ್ವಾರಕಾ’ ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿಲ್ಲ

” ‘ಬೇಟ್ ದ್ವಾರಕಾ’ದಲ್ಲಿರುವ ಎರಡು ದ್ವೀಪಗಳು ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿದೆ” ಎಂಬ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಲಾಗುತ್ತಿದೆ. ಇನ್ನು ಈ ಸುದ್ದಿ ನಿಜವೋ ಸುಳ್ಳೋ ಎಂದು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಗುಜರಾತ್‌ ವಕ್ಫ್‌ ಬೋರ್ಡ್‌ಗೆ ಭೂವಿವಾದದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ಇದೆ. ಆದರೆ ಇದು ನಿಜಕ್ಕೂ ಬೇಟ್‌ದ್ವಾರಕದ ದ್ವೀಪಗಳ ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನೋಡೋಣ…

Read More

Fact Check | ಬಂಧಿತ PFI ನಾಯಕನಿಗೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಂಬಂಧವಿಲ್ಲ

“ಬೆಂಗಳೂರು ನಗರದ ಹೆಚ್​ಎಎಲ್​ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎನ್​ಐಎ (NIA) ಅಲರ್ಟ್ ಆಗಿದ್ದು, ಆಂಧ್ರ ಪ್ರದೇಶದಲ್ಲಿ ಒಬ್ಬ ಶಂಕಿತ ಉಗ್ರನನ್ನು (Suspect Terrorist) ಬಂಧಿಸಿದೆ. ತೆಲಂಗಾಣದ ಕಡಪ ಜಿಲ್ಲೆಯ ಮೈದುಕೂರು ಮಂಡಲಂ ಚೆರ್ಲೋಪಲ್ಲಿಯಲ್ಲಿ ನಿಷೇಧಿತ ಪಿಎಫ್‌ಐ ಏಜೆಂಟ್‌ ಅಬ್ದುಲ್‌ ಸಲೀಂ ಬಂಧತ ಶಂಕಿತ ಉಗ್ರನಾಗಿದ್ದಾನೆ.” ಎಂಬ ಸುದ್ದಿ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ಮಂದಿ ಈ ಸುದ್ದಿಯನ್ನ ಹಂಚಿಕೊಂಡಿದ್ದು, ಕನ್ನಡದ ಏಷ್ಯಾನೆಟ್‌ ಸುರ್ವರ್ಣ ನ್ಯೂಸ್‌ ಕೂಡ ಇದೇ ವರದಿಯನ್ನ ಮಾಡಿದೆ….

Read More

Fact Check | ಈ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟ ಗೆಲ್ಲಲಿದೆ ಎಂದು ಎಡಿಟ್ ವೀಡಿಯೊ ಹಂಚಿಕೆ

“ಆಜ್‌ತಕ್‌ ನಿರೂಪಕಿ ಚಿತ್ರ ತ್ರಿಪಾಠಿ ಅವರು ತಮ್ಮ ಕಾರ್ಯಕ್ರಮ ದಂಗಲ್‌ನಲ್ಲಿ ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಬಹುದೊಡ್ಡ ಜಯ ಸಿಗಲಿದೆ ಎಂದಿದ್ದಾರೆ. ಜೊತೆಗೆ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಅವರು ಮೋದಿ ಸರ್ಕಾರದ ಸೋಲಿಗೆ, ನಿರುದ್ಯೋಗ, ಮಹಿಳಾ ಸುರಕ್ಷತೆ, ರೈತರ ಪ್ರತಿಭಟನೆ ಸೇರಿದ ಹಾಗೆ ಹಲವು ಸಮಸ್ಯೆಗಳು ಕಾರಣವಾಗಲಿದೆ ಎಂದಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದು ಕೆಲವರು ಆಜ್‌ತಕ್‌ ಸುದ್ದಿ ವಾಹಿನಿ ಸುಳ್ಳು ಸುದ್ದಿಯನ್ನು ಪ್ರಸಾರ…

Read More

Fact Check | ಬಿಜೆಪಿ ಬಿಡುಗಡೆ ಮಾಡಿರುವ FSL ವರದಿ ನಕಲಿ

“ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.” ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್…

Read More

Fact Check | ವಾಟ್ಸಾಪ್‌ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು..!

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ, ವಾಟ್ಸಾಪ್‌ ಸಂದೇಶಗಳಿಗೆ ಸಂಬಂಧಿಸಿದಂತೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ಹಲವರು ಇದನ್ನೇ ನಿಜವಾದ ಮಾಹಿತಿ ಎಂದು ನಂಬಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಸಂದೇಶದಲ್ಲಿ ಈ ಕೆಳಗಿನ ವಿಚಾರಗಳನ್ನು ಪ್ರಮುಖ ಅಂಶಗಳಂತೆ ಉಲ್ಲೇಖ ಮಾಡಲಾಗುತ್ತಿದೆ.  “ಸಂದೇಶಗಳಲ್ಲಿ ಪ್ರಸ್ತಾಪಿಸಿರುವ ಹೊಸ ನಿಯಮಗಳು ಈ ಕೆಳಗಿನಂತಿವೆ: 01. ಎಲ್ಲಾ ಕರೆಗಳು ರೆಕಾರ್ಡಿಂಗ್ ಆಗುತ್ತಿವೆ. 02. ಎಲ್ಲಾ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗುತ್ತದೆ. 03. WhatsApp, Facebook, Twitter ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ…

Read More

Fact Check | ಅರಬ್‌ನ ಹಿಂದೂ ದೇವಾಲಯದಲ್ಲಿ ಮುಸ್ಲಿಂ ಪುರಷರು ನೃತ್ಯ ಮಾಡಿದ್ದಾರೆ ಎಂಬುದು ಸುಳ್ಳು..!

“ಈ ವಿಡಿಯೋ ನೋಡಿ ಹಿಂದೂ ದೇವಾಲಯದಲ್ಲಿ ಅರಬ್ ಪುರುಷರು ನೃತ್ಯ ಮಾಡುತ್ತಿದ್ದಾರೆ.. ಅರಬ್‌ನಲ್ಲೂ ಬದಲಾವಣೆ ಆಗುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಮೂಲಕ ಅರಬ್‌ನ ಜನರು ಹಿಂದೂ ಧರ್ಮವನ್ನು ಸೇರ ಬಯಸುತ್ತಿದ್ದಾರೆ ಎಂಬ ಅರ್ಥದಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.  ಆದರೆ ವಾಸ್ತವದಲ್ಲಿ ವಿಡಿಯೋ ಕುರಿತು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಹೊರ ಬಂದಿದೆ. ಈ ವಿಡಿಯೋದಲ್ಲಿ ಹಲವು ರೀತಿಯಾಗಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಪರಿಶೀಲನೆ ನಡೆಸದೆ, ವಿಡಿಯೋದಲ್ಲಿರುವುದು ನಿಜವೇ ಎಂಬುದನ್ನು ತಿಳಿಯದೇ ಸಾಕಷ್ಟು ಮಂದಿ…

Read More