Likith Rai

Fact Check | ಪಶ್ಚಿಮ ಬಂಗಾಳದ ನಕಲಿ ಮತದಾನದ ಈ ವಿಡಿಯೋ ಇತ್ತೀಚಿನದ್ದಲ್ಲ

ದೇಶಾದ್ಯಂತ ವಿವಿಧ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ EVM ಬಳಿ ನಿಂತಿದ್ದು, ಮತ ಚಲಾಯಿಸಲು ಬರುವ ಮತದಾರರನ್ನು ತಡೆದು ಆತನೇ ಮತದಾರರ ಬದಲಾಗಿ ನಕಲಿ ಮತ ಚಲಾಯಿಸುವುದನ್ನು ನೋಡಬಹುದಾಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡು ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ನಡೆದ ನಕಲಿ…

Read More

Fact Check | ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಆಮ್ ಆದ್ಮಿ ಪಕ್ಷದ ಸಂಸದೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರಿಗೆ ದೆಹಲಿ ಮುಖ್ಯಮಂತ್ರಿ ಕಚೇರಿ ಒಳಗೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. Scene from Delhi CMs official residence Sheesh Mahal 🤣🤣🤣🤣 *This was bound to happen, Swati Maliwal has been beaten up, Kejriwal's PA has done the beating, news is…

Read More

Fact Check |POK ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿಲ್ಲ; ಮತ್ತೆ ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್

“ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತಾ ಅನ್ನೋ ಹಲವು ಪ್ರಶ್ನೆಗಳಿಗೆ ಕೆಲ ಸೂಚನೆಗಳು ಸಿಗುತ್ತಿದೆ. ಕಾರಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯರು ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೇ ಮೊದಲ ಭಾರಿಗೆ ಭಾರತದ ದ್ವಜ ಹಾರಾಡಿದೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋಗಳು ಭಾರಿ…

Read More

Fact Check | ಬಾಬಾ ರಾಮ್ ದೇವ್ ರಾಹುಲ್ ಗಾಂಧಿಯವರನ್ನು ಇತ್ತೀಚಿಗೆ ಹೊಗಳಿದ್ದಾರೆ ಎಂದು 2022ರ ವಿಡಿಯೋ ಹಂಚಿಕೆ

“ಇತ್ತೀಚಿಗೆ ಬಾಬಾ ರಾಮದೇವ್ ಅವರು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿಯವರು ಇತ್ತೀಚಿಗೆ ಎಲ್ಲೆಡೆಯಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದು, ಕೆಲವೊಂದು ಮಾಧ್ಯಮಗಳು ಕೂಡ ರಾಹುಲ್ ಗಾಂಧಿಯವರ ಕುರಿತು ಸದ್ದಿ ಪ್ರಸಾರ ಮಾಡಲು ಅವಕಾಶ ಮಾಡಿಕೊಡುತ್ತೇವೆ. ರಾಹುಲ್ ಗಾಂಧಿ ಕೂಡ ಒಬ್ಬ ಒಳ್ಳೆಯ ನಾಯಕ” ಎಂದು ಬಾಬಾ ರಾಮ್‌ ದೇವ್‌ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. बाबा ने भी माहौल को देख के पलटी मारना शुरू…

Read More

Fact Check | ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ಕಡಿತಗೊಳಿಸಿದ್ದರು ಎಂಬುದು ಸುಳ್ಳು

ಸಿಎಂ ಸಿದ್ದರಾಮಯ್ಯ ಅವರು ಲಂಡನ್‌ನಲ್ಲಿ ನಿರ್ಮಾಣವಾದ ಬಸವಣ್ಣನವರ ಪುತ್ಥಳಿಗೆ ಯಾವುದೇ ಅನುದಾನವನ್ನು ನೀಡಿಲ್ಲ. 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ  ಅಂದಿನ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಅವರು ನೀಡಿದ್ದ ಅನುದಾನವನ್ನು ಕಡಿತಗೊಳಿಸಿದ್ದರು ಎಂಬ ವಿಡಿಯೋವನ್ನು  ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇನ್ನು ಇದೇ ವಿಡಿಯೋದಲ್ಲಿ ಹಲವು ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರ ಪುತ್ತಳಿಯ ಉದ್ಘಾಟನೆಯ ಸಂದರ್ಭದಲ್ಲಿ ಬಂದಿದ್ದರು ಎಂಬ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯನವರು ಅಂದು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಬರಲಿಲ್ಲ. ಆದರೆ ಇಂದು ಲಂಡನಿಗೆ…

Read More

Fact Check | ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಅತಿಥಿ ಉಪನ್ಯಾಸಕಿ ಸಾವಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ

ಚನ್ನರಾಯಪಟ್ಟಣದಲ್ಲಿನ ಗಾಯತ್ರಿ ಬಡಾವಣೆಯ ದೀಪಾ (34) ಎಂಬ ಅತಿಥಿ ಉಪನ್ಯಾಸಕಿ ಸಾವನ್ನಪ್ಪಿರುವ ಪ್ರಕರಣದಲ್ಲಿ ಪ್ರಜ್ವಲ ರೇವಣ್ಣ ವಿಡಿಯೋ ಲೀಕ್ ವಿಚಾರಕ್ಕೆ ಸಂಬಂಧವಿದೆ ಎಂಬ ರೀತಿಯಲ್ಲಿ, ಬರಹದೊಂದಿಗೆ ಡಿಜಿಟಲ್‌ ನ್ಯೂಸ್‌ನ ವರದಿಯ ಸ್ಕೀನ್‌ಶಾಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನೋಡಿದ ಬಹುತೇಕರು ಇದೇ ನಿಜವೆಂದು ನಂಬಿ ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಈ ಪ್ರಕರಣದ ಕುರಿತು ಇನ್ನೂ ತನಿಖೆ ನಡೆಯುತ್ತಿದ್ದರು, ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ,  ಗುಮಾನಿಯ ರೀತಿಯಲ್ಲಿ ಈ ಸುದ್ದಿಯನ್ನು ಹರಡಿರುವುದರಿಂದ ಇದೀಗ ಬಹುತೇಕರು ಇದನ್ನ…

Read More

Fact Check | ಶ್ರೀನಗರದಲ್ಲಿ ಉಗ್ರಗಾಮಿ ಬಂಧನ ಎಂದು ಬ್ರೆಜಿಲ್ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇದು ಭಾರತೀಯ ಸೇನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರನೊಬ್ಬನನ್ನು ಸೆರೆಹಿಡಿದ ಪರಿ. ಈ ಉಗ್ರ ಸೈನಿಕರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ದೇಶದ ಸೈನಿಕರು ಇವನನ್ನು ಬೆಂಬಿಡದೆ ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ಆ ಮೂಲಕ ದೇಶದಲ್ಲಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ ಇನ್ನೂ ಕೆಲವರು ಈ ವಿಡಿಯೋದಲ್ಲಿ “ಮೋದಿ ಸರ್ಕಾರದಿಂದಲೇ ಈ ಉಗ್ರನನ್ನ ಬಂಧಿಸಲಾಗಿದೆ ಇದರ ಸಂಪೂರ್ಣ ಶ್ರೇಯ ಮೋದಿಯವರಿಗೆ ಸಲ್ಲಬೇಕು” ಎಂದು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ…

Read More

Fact Check | ರಾಹುಲ್ ಗಾಂಧಿಯನ್ನು ಭಾರತದ ರಾಜಕೀಯ ಹೀರೋ ಎಂದು ಎಲ್.ಕೆ.ಅಡ್ವಾಣಿ ಹೇಳಿಲ್ಲ

“ಕೇಂದ್ರದ ಮಾಜಿ ಗೃಹ ಸಚಿವರಾದ ಹಾಗೂ ಭಾರತರತ್ನ ಪುರಸ್ಕೃತರಾದ ಎಲ್ ಕೆ ಅಡ್ವಾಣಿ ಅವರು ರಾಹುಲ್ ಗಾಂಧಿ ಅವರನ್ನು ಭಾರತದ ರಾಜಕೀಯ ಹೀರೋ ಎಂದು ಕರೆದಿದ್ದಾರೆ ಆ ಮೂಲಕ ರಾಹುಲ್ ಗಾಂಧಿಯವರ ನಾಯಕತ್ವವನ್ನು ಎಲ್ ಕೆ ಅಡ್ವಾಣಿ ಅವರು ಮೆಚ್ಚಿಕೊಂಡಿದ್ದಾರೆ” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. राहुल गांधी भारतीय राजनीति का नायक है : लालकृष्ण आडवाणी.( अवधभूमि डाट काम )7. मई. 2024. देश की पूर्व गृहमंत्री भारतरत्न…

Read More

Fact Check | ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ

ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಹಲವು ಮಾಧ್ಯಮಗಳು ಕೂಡ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ, ಹಿಂದೂಗಳ ಜನಸಂಖ್ಯೆ ತೀವ್ರ ಕುಸಿತ ಕಂಡಿದೆ ಎಂಬ ಸುದ್ದಿಯನ್ನು ಲೋಕಸಭೆ ಚುನಾವಣೆಯ ವೇಳೆಯಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಈ ಸುದ್ದಿಯನ್ನು ನೋಡಿದ ಬಹುತೇಕರು ಇದು ನಿಜವಾದ ಸುದ್ದಿ ಇರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ವರದಿಯನ್ನು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯೇ ತಯಾರು ಮಾಡಿದ್ದು, ಈ ವರದಿಯಲ್ಲಿ ಹಲವು ದತ್ತಾಂಶಗಳು, ವಿವರಗಳು, ಅಭಿಪ್ರಾಯಗಳು ಇದ್ದು, ಅವುಗಳ ಮುಖಾಂತರ…

Read More

Fact Check | ಬೌದ್ಧ ಸನ್ಯಾಸಿ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬೌದ್ಧ ಸನ್ಯಾಸಿಯೊಬ್ಬ ಮಹಾಬೋಧಿ ದೇವಾಲಯದ ಕಾಣಿಕೆ ಪೆಟ್ಟಿಯಿಂದ ಹಣವನ್ನು ಕದಿಯುತ್ತಿದ್ದಾನೆ. ಕಾಣಿಕೆ ಡಬ್ಬಿಯಿಂದ ಹಣವನ್ನು ತೆಗೆದು ಎಣಿಸಿದ ಬಳಿಕ, ಗೌತಮ ಬುದ್ಧನ ಪ್ರತಿಮೆಯ ಕಾಲಿಗೆ ನಮಸ್ಕರಿಸುತ್ತಾನೆ. ಇಂತಹ ನಾಚಿಗೆಗೇಡಿನ ಸಂಗತಿಯ ಬಗ್ಗೆ ಯಾಕೆ ಕ್ರಮ ಆಗಿಲ್ಲ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಂಡು ತಮ್ಮ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಇಲ್ಲಿ ದುರಂತವೆಂದರೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕೂಡ ಈ ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ…

Read More