Likith Rai

Fact Check | ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ದೇವರ ಫೋಟೋದೊಂದಿಗೆ ಶುಭಾಶಯ ಕೋರಿಲ್ಲ ಎಂಬುದು ಸುಳ್ಳು

“ಈ ಫೋಟೋಗಳನ್ನು ಗಮನಿಸಿ ಇದು ಯಾವುದೋ ಮುಸಲ್ಮಾನ ನಾಯಕ ಹಾಕಿದ ಶುಭಾಶಯಗಳ ಫೋಟೋವಲ್ಲ, ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಿಂದೂಗಳ ಹಬ್ಬಕ್ಕೆ ಶುಭಾಶಯ ತಿಳಿಸುವಾಗ ಹಾಕಿದ ಫೋಟೋ. ಈ ಯಾವ ಪೋಸ್ಟ್‌ಗಳಲ್ಲಿ ಕೂಡ ಹಿಂದೂ ದೇವರುಗಳ ಫೋಟೋ ಇಲ್ಲ. ರಾಹುಲ್‌ ಗಾಂಧಿ ಅವರು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದೂ ದೇವರುಗಳ ಫೋಟೋಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು, ಅವರು ಎಂದಿಗೂ ಹಿಂದೂ ದೇವರುಗಳ ಫೋಟೋವನ್ನು ಗೌರವಿಸಿಯೇ ಇಲ್ಲ” ಎಂಬ ರೀತಿಯಲ್ಲಿ ವಿವಿಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌…

Read More

Fact Check | ಸೇನೆಯ ಮೇಲೆ ದಾಳಿ ಎಂದು ತಪ್ಪಾಗಿ ಅಸ್ಸಾಂ ರೈಫಲ್ಸ್ – ಮಣಿಪುರ ಪೊಲೀಸರ ಘರ್ಷಣೆಯ ವಿಡಿಯೋ ಹಂಚಿಕೆ

ಇತ್ತೀಚೆಗೆ, ಇಂಫಾಲ್‌ನಲ್ಲಿ ಭಾರತೀಯ ಸೇನೆಯ ಸಿಬ್ಬಂದಿಗೆ ಮೈತೆಯ್ ಪೊಲೀಸರು ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೊಲೀಸರು ಮತ್ತು ಭದ್ರತಾ ಪಡೆಗಳ ನಡುವೆ ಮಾತಿನ ಚಕಮಕಿಯನ್ನು ತೋರಿಸುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವ ಹಲವರು ಭಾರತೀಯ ಸೈನಿಕರಿಗೆ ಮಣಿಪುರದ ಪೊಲೀಸರೇ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂಬ ಟಿಪ್ಪಣಿಯನ್ನು ಬರೆದು ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. Indian Army personnel were harassed and threatened by Meitei Police in Imphal . @Spearcorps @adgpi…

Read More

Fact Check | ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡಬೇಡಿ ಎಂದು ರಾಜ್ಯ ಸರ್ಕಾರ ಆದೇಶ ಮಾಡಿಲ್ಲ

“ಬ್ರೇಕಿಂಗ್‌ ನ್ಯೂಸ್‌ : ಧಾರ್ಮಿಕ ಪ್ರವಾಸಿ ತಾಣವಾಗಿರುವ ಹಿಂದೂ ದೇವಲಾಯಗಳ ಅಭಿವೃದ್ದಿ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ” ಎಂದು ಪೋಸ್ಟರ್‌ವೊಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟರ್‌ ನೋಡಿದ ತಕ್ಷಣ ಯಾವುದೋ ಸುದ್ದಿ ವಾಹಿನಿಯ ಬ್ರೇಕಿಂಗ್‌ ನ್ಯೂಸ್‌ ಪೋಸ್ಟರ್‌ ಎಂಬ ಭಾವನೆ ಬರುತ್ತಿರುವುದರಿಂದ, ಹಲವರು ಇದೇ ಪೋಸ್ಟರ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟರ್‌ ನೋಡಿದ ಹಲವು ಮಂದಿ, ರಾಜ್ಯ ಸರ್ಕಾರ ಧಾರ್ಮಿಕವಾಗಿ ತರಾತಮ್ಯವನ್ನು…

Read More

Fact Check | ಅಕ್ರಮ ವಲಸಿಗ ರೋಹಿಂಗ್ಯಾಗಳು ರೈಲಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದರು ಎಂಬುದು ಸುಳ್ಳು

“ರೈಲಿನಲ್ಲಿ ಪ್ರಯಾಣಿಕರ ಲಗೇಜ್ ಕದಿಯುತ್ತಿದ್ದ ಇಬ್ಬರು ಅಕ್ರಮ ರೋಹಿಂಗ್ಯಾಗಳು ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು ಪ್ರಯಾಣಿಕರು ಹಿಡಿದು ವಿಚಾರಿಸಿದ್ದು, ಆರೋಪಿಗಳು ತಪ್ಪು ಒಪ್ಪಿಕೊಂಡು ಪೆಟ್ಟು ತಿಂದಿದ್ದಾರೆ. ಈ ಅಕ್ರಮ ವಲಸಿಗ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು ಎಲ್ಲಾ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಕೆಲವು ರಾಜಕೀಯ ಪಕ್ಷಗಳು ಮತ ಬ್ಯಾಂಕ್‌ಗಾಗಿ ಅವರಿಗೆ ಸಹಾಯ ಮಾಡುತ್ತಿವೆ.” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Two illegal Rohingyas caught while stealing luggage of passengers in the train….

Read More

Fact Check | ಬದ್ಲಾಪುರ್ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮುಸ್ಲಿಂ ಅಲ್ಲ

“ಹಿಂದೂಗಳೇ ಎಚ್ಚರ ದೇಶಾದ್ಯಂತ ಮುಸಲ್ಮಾನರು ಹಿಂದೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಮುಸಲ್ಮಾನರ ಹೊಸ ಜಿಹಾದ್‌ ಕೂಡ ಆಗಿರಬಹುದು. ಇದಕ್ಕೀಗ ಸಣ್ಣ ಸಣ್ಣ ಹಿಂದೂ ಕಂದಮ್ಮಗಳು ಕೂಡ ಹೊರತಾಗಿಲ್ಲ. ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಎಂಬಲ್ಲಿ 4 ವರ್ಷದ ಹಿಂದೂ ಬಾಲಕಿಯ ಮೇಲೆ ಅಶ್ರಫ್ ಹುಸೇನ್‌ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನನ್ನು ಈಗ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗಲಾದರು ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Two 4-year-old girls…

Read More

Fact Check | ಮುಸ್ಲಿಂ ವ್ಯಾಪಾರಿ ಚರಂಡಿ ನೀರಿನಲ್ಲಿ ತರಕಾರಿ ತೊಳೆದಿದ್ದಾನೆ ಎಂಬುದು ಸುಳ್ಳು

ಹಿಂದೂಗಳೇ ಎಚ್ಚರ..! ತರಕಾರಿ ವ್ಯಾಪಾರಿಯೊಬ್ಬರು ತಾವು ಮಾರಾಟ ಮಾಡಲು ಇಟ್ಟುಕೊಂಡಿದ್ದ ತರಕಾರಿಯನ್ನು ಚರಂಡಿ ನೀರಿನಲ್ಲಿ ತೊಳೆಯುತ್ತಿದ್ದಾರೆ. ಮುಸ್ಲಿಂ ವ್ಯಾಪಾರಿಗಳ ಈ ನಡೆಗೆ ಆಹಾರ ಜಿಹಾದ್‌ ಎನ್ನದೆ ಮತ್ತಿನ್ನೇನು ಹೇಳಬೇಕು. ಈಗಲಾದರೂ ಎಚ್ಚೆತ್ತುಕೊಳ್ಳಿ, ಮುಸ್ಲಿಂ ವ್ಯಾಪರಸ್ಥರ ಬಳಿ ವ್ಯಾಪಾರ ಮಾಡುವುದನ್ನು ಈಗಲಾದರೂ ನಿಲ್ಲಿಸಿ. ಹಿಂದೂಗಳ ಅಂಗಡಿಯಲ್ಲಿ ಮಾತ್ರ ನಿಮ್ಮ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಮುಸ್ಲಿಂ ವ್ಯಾಪಾರಿಯ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು, ವೈರಲ್‌…

Read More

Fact Check | ಉದಯಪುರದಲ್ಲಿ ಹತ್ಯೆಗೀಡಾದ ದೇವರಾಜ್‌ನ ವಿಡಿಯೋ ಎಂದು ಮತ್ತೊಂದು ವಿಡಿಯೋ ಹಂಚಿಕೆ

“ಇದು ಉದಯಪುರದ ವಿದ್ಯಾರ್ಥಿಯೇ? ದೇವರಾಜ್ ನೀಡಿದ ಈ ಧಾರ್ಮಿಕ ಮತ್ತು ಅದ್ಭುತ ಪ್ರದರ್ಶನ ಅವರ ಸಾವಿಗೆ ಕಾರಣವಾಯಿತು??”. ಎಂಬ ಪ್ರಶ್ನೆಯೊಂದಿಗೆ ಯುವಕನೊನೊಬ್ಬ ವೇದಿಯಲ್ಲಿ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಈತ ಹತ್ಯೆಗೀಡಾದ ದೇವರಾಜ್‌ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಈ ಯುವಕನಿಗೆ ಹಿಂದುತ್ವದ ಮೇಲೆ ಅತೀವವಾದ ಅಭಿಮಾನವಿತ್ತು. ಅದು ಈತನ ಸಾವಿಗೆ ಕಾರಣವಾಗಿದೆ ಎಂದು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಹಲವರು ತಮ್ಮ ವೈಯಕ್ತಿಕ…

Read More

Fact Check | ಮುಸ್ಲಿಂ ವ್ಯಕ್ತಿ ತನ್ನ ಅಂಗಡಿಯಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಲು ನಿರಾಕರಿಸಿದ್ದಾನೆ ಎಂಬುದು ನಾಟಕೀಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತ್ರಿವರ್ಣ ಧ್ವಜವನ್ನು ತನ್ನ ಅಂಗಡಿಯಲ್ಲಿ ಪ್ರದರ್ಶಿಸಲು ನಿರಾಕರಿಸಿದ್ದಾನೆ ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ “ಈ ವ್ಯಕ್ತಿಯನ್ನು ನೋಡಿ ಇಂಥವರಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಈ ಹಿಂದೆ ಕೇಸರಿ ಧ್ವಜದಲ್ಲಿ ಸಮಸ್ಯೆ ಇದ್ದ ಇವರಿಗೆ, ಈಗ ತ್ರಿವರ್ಣ ಧ್ವಜವನ್ನು ಹಾರಿಸಲು ಕಷ್ಟವಾಗುತ್ತಿದೆ. ಇಂತಹ ದೇಶದ್ರೋಹಿಗಳು ಏನೇ ಆದರೂ ತಮ್ಮ ಸಿದ್ಧಾಂತವನ್ನು ಬಿಡುವುದಿಲ್ಲ” ಎಂದು ವಿಡಿಯೋದೊಂದಿಗೆ ಟಿಪ್ಪಣಿಯನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ इन गद्दारों के साथ क्या किया जाए?…

Read More

Fact Check | ವಿಶೇಷ ಚೇತನ ನೃತ್ಯಗಾರನನ್ನು ಕಾರ್ಗಿಲ್‌ ಹಿರೋ ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ನಿಮಗೆ ಸಾಮಾನ್ಯ ವಿಡಿಯೋದಂತೆ ಭಾಸವಾಗಬಹುದು. ಇಲ್ಲಿ ಕಾಲುಗಳಿಲ್ಲದ ಯುವಕನೊಬ್ಬ ಮಹಿಳೆಯೊಂದಿಗೆ ಡಾನ್ಸ್ ಮಾಡುತ್ತಿದ್ದಾನೆ ಎಂಬುದು ನಿಮಗೆ ಮೊದಲಿಗೆ ಕಾಣಿಸುತ್ತದೆ. ಆದರೆ ಹೀಗೆ ಕಾಲುಗಳಿಲ್ಲದೆ ನೃತ್ಯ ಮಾಡುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ಇವರು ದೇಶಕ್ಕಾಗಿ ಅದರಲ್ಲೂ ಪ್ರಮುಖವಾಗಿ ಕಾರ್ಗಿಲ್ ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ಮೇಜರ್ ವಿಕ್ರಂ. ಇವರು ತಮ್ಮ ಪತ್ನಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇವರ ಮಡದಿಗೊಂದು ಬಿಗ್ ಸೆಲ್ಯೂಟ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. They are…

Read More

Fact Check | ಬಾಂಗ್ಲದೇಶದಲ್ಲಿ ಹಿಂದೂ ಪ್ರಾಂಶುಪಾಲೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ನಂತರ ಅಲ್ಲಿನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದುಗಳು ಅಪಾಯದಲ್ಲಿ ಸಿಲುಕಿದ್ದಾರೆ. ಹಲವಾರು ಹಿಂದೂ ಅಲ್ಪಸಂಖ್ಯಾತರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡುತ್ತಿದ್ದಾರೆ. ನೀಡದಿದ್ದರೆ ಅವರು ಹಲವು ಬೆದರಿಕೆಗಳನ್ನು ಮತ್ತು ಹಲ್ಲೆಯಂತಹ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಇದೀಗ ಇಂತಹದ್ದೇ ಪರಿಸ್ಥಿತಿಯನ್ನು ಅಜೀಂಪುರ ಸರ್ಕಾರಿ ಪ್ರಾಂಶುಪಾಲೆಯಾದ ಗೀತಾಂಜಲಿ ಬರುವಾ ಅವರು ಎದುರಿಸಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಕ್ಕೆ ವಿದ್ಯಾರ್ಥಿನಿಯರು ಸುತ್ತುವರೆದು ಅವರನ್ನು ಮರಕ್ಕೆ ಕಟ್ಟಿಹಾಕಿದ್ದಾರೆ.” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ Some…

Read More