Likith Rai

Fact Check | ವಿಶ್ವಕಪ್‌ ಗೆದ್ದ ನಂತರ ರೋಹಿತ್‌ ಶರ್ಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು 2023ರ ಫೋಟೋ ಹಂಚಿಕೆ

“ಈ ಫೋಟೋ ನೋಡಿ ಇದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಗೆದ್ದ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ. ಈ ವೇಳೆ ರೋಹಿತ್‌ ಶರ್ಮಾ ಅವರ ಕುಟುಂಬವು ಕೂಡ ಅವರೊಂದಿಗೆ ಇತ್ತು. ದೇವರ ದರ್ಶನ ಪಡೆದು ದೇವಸ್ಥಾನದ ಮುಂದೆ ಅವರು ಕಂಡು ಬಂದಿದ್ದಾರೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಫೋಟೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ರೋಹಿತ್‌ ಶರ್ಮಾ…

Read More

Fact Check | ಜಸ್ಟಿನ್ ಬೈಬರ್ ಹಾರ್ಮೋನಿಯಂ ನುಡಿಸುತ್ತಿರುವ ಫೋಟೋ AI- ರಚಿತವಾಗಿದೆ

ಸಾಮಾಜಿಕ ಜಾಲತಾಣದಲ್ಲಿ “ಜಸ್ಟಿನ್‌ ಬೈಬ್‌ರ್‌ ಅವರು ಅನಂತ್‌ ಅಂಬಾನಿ ಮತ್ತು ರಾಧಿಕ ಮರ್ಚೆಂಟ್‌ ಅವರ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಇದರಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ಉಡುಪು ಧರಿಸಿ ಹರ್ಮೋನಿಯಂ ಕೂಡ ನುಡಿಸಿದ್ದಾರೆ. ಜಸ್ಟಿನ್‌ ಬೈಬರ್‌ ಅವರ ಭಾರತೀಯ ಶೈಲಿಯ ಕಾರ್ಯಕ್ರಮದ ಈ ಫೋಟೋಗೆ ನಿಮ್ಮ ಮೆಚ್ಚುಗೆ ಇರಲಿ” ಎಂದು ಜಸ್ಟಿನ್‌ ಬೈಬರ್‌ ಅವರು ಹರ್ಮೋನಿಯಂ ನುಡಿಸುವ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ನೋಡಿದಾಗ ಹಲವು ಅನುಮಾನಗಳು ಸಹಜವಾಗಿ ಮೂಡುತ್ತವೆ. ಆದರೂ ಕೆಲವರು…

Read More

Fact Check | ಬ್ರಿಟನ್ ಬ್ಯಾಂಕುಗಳ್ಳಲ್ಲಿ ಮೋದಿ ರಹಸ್ಯವಾಗಿ ಕಪ್ಪು ಹಣ ಇಟ್ಟಿದ್ದಾರೆ ಎಂದು ವಿಕಿಲೀಕ್ಸ್ ವರದಿ ಪ್ರಕಟಿಸಿಲ್ಲ

“ಬ್ರಿಟನ್‌ನಲ್ಲಿ ಅಧಿಕಾರ ಬದಲಾದ ತಕ್ಷಣ ಬಹಿರಂಗಗಳು ಹೊರಬರಲಾರಂಭಿಸಿವೆ, ರಿಷಿ ಸುನಕ್ ಸೋತ ನಂತರ ಮೋದಿ ಮತ್ತು ಅವರ ಮಂತ್ರಿಗಳ ಕಪ್ಪುಹಣದ ರಹಸ್ಯ ಬಯಲಾಗುತ್ತಿದೆ. 14 ವರ್ಷಗಳಲ್ಲಿ ಮೋದಿಯವರ ಮಂತ್ರಿಗಳ ಕಪ್ಪುಹಣ ನೂರು ಪಟ್ಟು ಹೆಚ್ಚಾಗಿದೆ. ಬ್ರಿಟನ್‌ನ ರಹಸ್ಯ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಮೊದಲ ಪಟ್ಟಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತ 24 ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸಿ ಈ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಹಲವರು ಇದೇ ಸಂದೇಶವನ್ನು ಬಳಸಿಕೊಂಡು…

Read More

Fact Check |ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೆ ಆಗಲು ಅನರ್ಹರಾಗಿದ್ದಾರೆ ಎಂಬುದು ಸುಳ್ಳು

“ಕಮಲಾ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷರ ಹುದ್ದೆಯನ್ನು ಅಲಂಕರಿಸಲು ಅನರ್ಹರಾಗಿದ್ದಾರೆ. ಏಕೆಂದರೆ ಆಕೆಯ ಜನನದ ಸಮಯದಲ್ಲಿ ಅವರ ಪೋಷಕರು ಯುಎಸ್ಎ ಪ್ರಜೆಗಳಾಗಿರಲಿಲ್ಲ. ಹಾಗಾಗಿ ಈ ಬಾರಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಗಾದಿಯ ರೇಸ್‌ನಿಂದ ಹೊರ ಉಳಿಯಲಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ದಾಖಲೆಗಳು ಕೂಡ ಲಭ್ಯವಾಗಿದ್ದು, ಈಗ ಅಮೆರಿಕದ ಉಪಾಧ್ಯಕ್ಷೆಯಾಗಿ ಮುಂದುವರೆದಿರುವ ಅವರು ಇನ್ನು ಮುಂದೆ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಿಲ್ಲ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  💥At the…

Read More

Fact Check | ಬೆಂಗಳೂರು ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಸುಳ್ಳು ಮಾಹಿತಿ ವೈರಲ್‌

“ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ)ನ ಮೂವರು ಇಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಕರ್ನಾಟಕ ಬಸ್‌ಗೆ ‘ಮ್ಯಾಗ್ನೆಟಿಕ್ ಬಾಂಬ್’ ದಾಳಿಯನ್ನು ನಡೆಸಲಾಗಿದೆ. ಈ ಬಾಂಬ್‌ ದಾಳಿಯಲ್ಲಿ ಡಿಆರ್‌ಡಿಒ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರಿನ ಪಶ್ಚಿಮದ 4 ಕಿಲೋ ಮೀಟರ್‌ ದೂರದಲ್ಲಿ  DRDO ನ HAL ತೇಜಸ್‌ ಫೈಟರ್‌ ಟೆಸ್ಟ್‌ ನಡೆಯುತ್ತಿದ್ದ ವೇಳೆ ಸಂಭವಿಸಿದೆ ” ಎಂದು ಫೋಟೋದೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕರ್ನಾಟಕ ಹೊರತು ಪಡಿಸಿ ವಿವಿಧ ರಾಜ್ಯಗಳು ಸೇರಿದಂತೆ ಹಲವು ದೇಶಗಳಲ್ಲೂ ಈ…

Read More

Fact Check | ಹುತಾತ್ಮ ಸೈನಿಕನ ಪತ್ನಿಯ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡಿದ ವ್ಯಕ್ತಿ ಬಂಧನ ಎಂದು ಬೇರೆ ಫೋಟೋ ಹಂಚಿಕೆ

ಕೀರ್ತಿಚಕ್ರ ಪ್ರಶಸ್ತಿ ಪುರಸ್ಕೃತ, ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರನಾದ ಅಹ್ಮದ್‌.ಕೆ ಎಂಬ ವ್ಯಕ್ತಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ ಮಾಡಿದ್ದು, ಇದು ದೇಶಾದ್ಯಂತ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು. ಜೊತೆಗೆ ಆ ಪ್ರೊಫೈಲ್‌ ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹ ಸಾರ್ವಜನಿಕ ವಲಯದಿಂದ ಕೂಡ ಬಂದಿದ್ದು, ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖವಾಡ ಧರಿಸಿದ ವ್ಯಕ್ತಿಯನ್ನು ಹೊಂದಿರುವ ಚಿತ್ರವನ್ನು ಬಳಸಿಕೊಂಡು ಕೆಲವರು “ದೆಹಲಿ ಪೊಲೀಸರು…

Read More

Fact Check | ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

” ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ-20 ಟ್ರೋಫಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋತ ನಂತರ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಅವರು ಸನಾತನ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಈ ನ್ಯೂಸ್‌ ನೋಡಿ, ಇದು ಬಿಬಿಸಿಯ ಅಧಿಕೃತ ವರದಿಯಾಗಿದೆ. ಇದರಲ್ಲಿ ಡೇವಿಡ್‌ ಮಿಲ್ಲರ್‌ ಅವರು ಮತಾಂತರಗೊಂಡ ವರದಿಯನ್ನು ಪ್ರಕಟಗೊಳಿಸಲಾಗಿದೆ.” ಎಂದು ಬಿಬಿಸಿ ಬಂಗಾಳದ ವರದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನು ನೋಡಿದ ಹಲವು ಬಿಬಿಸಿಯೇ ಈ ವರದಿ ಮಾಡಿದ್ದಾಗ…

Read More

Fact Check | ಪ್ರಾಂಶುಪಾಲೆಯರ ಜಗಳದ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ” ಕರ್ನಾಟಕದ ಸರ್ಕಾರಿ ಶಾಲೆಯೊಂದಕ್ಕೆ ಪ್ರಾಂಶುಪಾಲರಾಗಿ ಹಿಂದೂ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ, ಆದರೆ ಶಾಲೆಯ ಕ್ರಿಶ್ಚಿಯನ್ ಸಿಬ್ಬಂದಿ ಅವರನ್ನು ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ. ಬದಲಿಗೆ ಕ್ರೈಸ್ತ ಮಹಿಳೆಯನ್ನು ಆಕೆಯ ಜಾಗದಲ್ಲಿ ಕೂರಿಸಲಾಯಿತು. ವೀಡಿಯೋದಲ್ಲಿ, ಪಕ್ಕದಲ್ಲಿ ನಿಂತಿದ್ದ ಕೆಲವರು ಮಹಿಳೆಯನ್ನು ಬಲವಂತವಾಗಿ ಕುರ್ಚಿಯಿಂದ ಮೇಲಕ್ಕೆತ್ತುವುದನ್ನು ನಾವು ನೋಡಬಹುದು, ನಂತರ ಇನ್ನೊಬ್ಬ ಕ್ರಿಶ್ಚಿಯನ್‌ ಮಹಿಳೆಯನ್ನು ಪ್ರಾಂಶುಪಾಲೆಯ ಕುರ್ಚಿಯ ಮೇಲೆ ಕೂರಿಸಿ ಚಪ್ಪಾಳೆ ಹೊಡೆಯಲು ಇವರು ಪ್ರಾರಂಭಿಸಿದರು.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌…

Read More

Fact Check | ಸಂವಿಧಾನದ ಕುರಿತು ಶಾಸಕಿ ಕಿರಣ್ ಚೌಧರಿ ಹೇಳಿಕೆ ಬಿಜೆಪಿ ಸೇರಿದ ನಂತರ ನೀಡಿದ್ದೆ ಹೊರತು ಕಾಂಗ್ರೆಸ್‌ನಲ್ಲಿದ್ದಾಗ ಅಲ್ಲ

“ಶಾಸಕಿ ಕಿರಣ್ ಚೌಧರಿ ಅವರು  “ಮೋದಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬ ಆರೋಪವು ತಮ್ಮ ಪಕ್ಷದಿಂದ ಪ್ರಾರಂಭಿಸಿದ ಚುನಾವಣ ಪ್ರಚಾರ” ಎಂದು ಒಪ್ಪಿಕೊಂಡಿದ್ದಾರೆ. ಇದು ಅವರು ಕಾಂಗ್ರೆಸ್‌ನಲ್ಲಿ ಇರುವಾಗಲೇ ಹೇಳಿದ್ದಾರೆ. ಕಾಂಗ್ರೆಸ್‌ನ ಅಸಲಿ ಮುಖವನ್ನು ಕಾಂಗ್ರೆಸ್‌ನ ಶಾಸಕಿಯೇ ಬಹಿರಂಗ ಪಡಿಸಿದ್ದರು.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಸಾಕಷ್ಟು ಮಂದಿ ಕಾಂಗ್ರೆಸ್‌ ವಿರೋದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. https://www.youtube.com/watch?v=WZKVv9Pxbfo ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋದಲ್ಲಿ ಶಾಸಕಿ ಕಿರಣ್‌ ಚೌಧರಿ ಅವರೇ ಈ…

Read More

Fact Check | ಕೇರಳದಲ್ಲಿ ಯುಪಿ ಪೇಂಟರ್‌ ಕೊಲೆ ಎಂಬ ವಿಡಿಯೋ ಭಾರತದ್ದದಲ್ಲ, ಬ್ರೆಜಿಲ್‌ನದ್ದು

“ಈ ವಿಡಿಯೋ ನೋಡಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ಮನೆ ಪೇಂಟರ್ ಒಬ್ಬರನ್ನು ಕೇರಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೇರಳದಲ್ಲಿಇಂತಹ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಕೆಲವರು ಈ ಘಟನೆ ಉತ್ತರಖಂಡ್‌ನಲ್ಲಿ ನಡೆದಿದೆ ಎಂದರೆ, ಮತ್ತೆ ಕೆಲವರು ಈ ಘಟನೆ ನೋಯ್ಡಾದಲ್ಲಿ ನಡೆದಿದೆ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ವೈರಲ್‌ ವೀಡಿಯೋದಲ್ಲಿ, ಮರದ ಆಸರೆಯ ಮೇಲೆ ನಿಂತುಕೊಂಡು ಗೋಡೆಗೆ ಪೇಂಟಿಂಗ್ ಮಾಡುತ್ತಿರುವಂತೆ ಕಾಣುವ ವ್ಯಕ್ತಿಯನ್ನು, 13…

Read More