Likith Rai

Fact Check | ಬಾಂಗ್ಲಾದಲ್ಲಿ ಹಿಂದೂ ವೃದ್ದನ ಹತ್ಯೆ ಎಂದು ತಪ್ಪಾಗಿ ಅವಾಮಿ ಲೀಗ್ ನಾಯಕನ ಹತ್ಯೆ ವಿಡಿಯೋ ಹಂಚಿಕೆ

“ದುರಂತ ವಿಡಿಯೋ – ಹೃದಯ ವಿದ್ರಾವಕ, ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿಯ ಭಯೋತ್ಪಾದಕರು ಒಬ್ಬ ವೃದ್ಧ ಹಿಂದೂ ವ್ಯಕ್ತಿಯನ್ನು ಹತ್ಯೆಗೈದು ಪ್ರತಿಮೆಯ ಮೇಲೆ ನೇತು ಹಾಕಿದ್ದಾರೆ. ಇಸ್ಲಾಮಿಸ್ಟ್‌ಗಳು ಅವನ ಸುತ್ತಲೂ ಅಲ್ಲಾ ಹು ಅಕ್ಬರ್‌ ಘೋಷಣೆಗಳನ್ನು ಎತ್ತುತ್ತಿರುವುದು ಕಂಡುಬಂದಿತು… ನಿಜಗುಣಾನಂದ ಸ್ವಾಮಿ ಎಲ್ಲಿ ಇದ್ದಿಯೋ ಮುಟ್ಟಾಳ. ಭಾರತದಲ್ಲಿರುವ ರೋಹಿಂಗ್ಯ ಮತ್ತು ಬಾಂಗ್ಲ ವಲಸಿಗರನ್ನು ಪಬ್ಲಿಕೆ ಓಡಿಸಬೇಕಾಗುತ್ತದೆ” ಎಂದು ಸಂಬಂಧವೇ ಇಲ್ಲದೇ ವಿಡಿಯೋವೊಂದರ ಜೊತೆ ಕೋಮು ದ್ವೇಷವನ್ನು ಹರಡುವ ಟಿಪ್ಪಣಿಯನ್ನು ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಬರಹವನ್ನು ಪರಿಶೀಲನೆ ನಡೆಸದೇ…

Read More

Fact Check | ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂಬುದು ಸುಳ್ಳು

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದದ್ದಾರೆ, ಈ ವೇಳೆ ಬಾಂಗ್ಲಾದ ಗಲಭೆಯನ್ನು ನಿಯಂತ್ರಿಸುವಾಗ ಸೇನಾ ಸಿಬ್ಬಂದಿ ಬೆಂಗಾಳಿಯಲ್ಲಿ ಮಾತನಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಲವು ತಪ್ಪು ಸಂದೇಶಗಳಿಂದ ಕೂಡ ಹಂಚಿಕೊಳ್ಳಲಾಗುತ್ತಿದ್ದು, ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವಿಡಿಯೋ ಬಂದರೂ ಅದು ನಿಜವೆಂದು ನಂಬಿಕೊಳ್ಳುವ ವರ್ಗಗಳು ಉತ್ಪತಿಯಾಗಿವೆ. ಹೀಗಾಗಿ ಜನ ಸಾಮಾನ್ಯರಲ್ಲಿ ಗೊಂದಲ ಕೂಡ ಮೂಡುತ್ತಿವೆ. BREAKING: The Bangladesh Army has deployed soldiers…

Read More

Fact Check | ವಯನಾಡ್ ಭೂಕುಸಿತದ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ರಾಹುಲ್‌ ಗಾಂಧಿ ಪ್ರಸಿದ್ಧ ಹೋಟೆಲ್‌ಗೆ ತೆರಳಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡ್‌ನಲ್ಲಿ ಉಂಟಾದ ಭೂಕುಸಿತದ ಭೇಟಿ ವೇಳೆ ಐಷಾರಾಮಿ ಹೋಟೆಲ್‌ಗೆ ಭೇಟಿ ನೀಡಿದ್ದರು ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವರು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಾಗೆಯೇ ಈ ವಿಡಿಯೋ ಹಲವು ರೀತಿಯಾದ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಹಲವಾರು ಮಂದಿ ವಿವಿಧ ರೀತಿಯ ಟಿಪ್ಪಣಿಗಳನ್ನು ಬರೆದು ರಾಹುಲ್‌ ಗಾಂಧಿ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. https://twitter.com/Modified_Hindu9/status/1819473558050947142 ಇನ್ನೂ…

Read More

Fact Check | ಲುಪೋ ಚಾಕೊಲೇಟ್ ಕೇಕ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ ಎಂಬುದು ಸುಳ್ಳು

ಲುಪೋ ಚಾಕಲೇಟ್ ಕೇಕ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಕುರಿತು ಪೋಸ್ಟ್‌ ಮಾಡಿರುವ ಹಲವರು ”ಎಲ್ಲೆಡೆ ಡ್ರಗ್ಸ್‌ ಮಾಫಿಯಾಗಳು ಬಲಗೊಳ್ಳುತ್ತಿವೆ, ತಮ್ಮ ಹಿಡಿತವನ್ನು ಅವರು ಬಿಗಿಗೊಳಿಸುತ್ತಿದ್ದಾರೆ. ಮಕ್ಕಳು ಬೇಕರಿ ತಿನಿಸುಗಳನ್ನು ಖರೀದಿಸುವಾಗ ಜಾಗರೂಕರಾಗಿರುವಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಮಾದಕ ವ್ಯಸನಕ್ಕೆ ದೂಡಲು ನೀವೆ ಸಹಕರಿಸಿದಂತಾಗುತ್ತದೆ” ಎಂಬ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Scary stuff pic.twitter.com/RCSmDtNmHx — Sandra Gold (@SandraSandygold) May 26, 2024…

Read More

Fact Check | ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯ ಅತ್ಯಾಚಾರ ಎಂದು ಬೆಂಗಳೂರಿನ ವಿಡಿಯೋ ಹಂಚಿಕೆ

“ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವನ್ನು ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂ ಹೆಣ್ಣು ಮಕ್ಕಳು ಪ್ರತಿನಿತ್ಯ ಈ ರೀತಿಯಾದ ನರಕಗಳನ್ನು ಎದುರಿಸಬೇಕಾಗಿದೆ. ಬಾಂಗ್ಲಾದೇಶಕ್ಕೆ ನಿಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಮುನ್ನ ಎಚ್ಚರ ವಹಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದೊಂದಿಗೆ ಟಿಪ್ಪಣಿಯನ್ನು ಓದಿದ ಹಲವರು ಬಾಂಗ್ಲಾದೇಶದಲ್ಲಿ ನಿಜಕ್ಕೂ ಹಿಂದೂ ಹುಡುಗಿಯ ಮೇಲೆ ಮುಸ್ಲಿಂ ಯುವಕರು ಅತ್ಯಾಚಾರ ಮಾಡಿದ್ದಾರೆ ಎಂದುಕೊಂಡಿದ್ದಾರೆ. ಹೀಗಾಗಿ ಈ ಕುರಿತು ಯಾವುದೇ ರೀತಿಯಾದ ಪರಿಶೀಲನೆ…

Read More

Fact Check | ಬಾಕ್ಸರ್ ಇಮಾನೆ ಖಲೀಫ್ ಲೈಂಗಿಕ ಅಲ್ಪಸಂಖ್ಯಾತರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ!

“XY ಕ್ರೋಮೋಸೋಮ್‌ಗಳನ್ನು ಹೊಂದಿರುವ ಅವರು ಜೈವಿಕ ಪುರುಷ ಲಕ್ಷಣಗಳನ್ನು ಹೊಂದಿರುವ, ಪುರುಷ ದೈಹಿಕ ಸಾಮರ್ಥ್ಯವಿರುವ ಬಾಕ್ಸರ್ ಇಮಾನೆ ಖಲೀಫ್ ಅವರನ್ನು ಮಹಿಳೆಯರ ಬಾಕ್ಸಿಂಗ್‌ಗೆ ಅನುಮತಿ ನೀಡಲಾಗಿದೆ. ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಅತಿದೊಡ್ಡ ರಾಜಕೀಯ ನಡೆದಿದೆ. ಆದರೆ ಈ ಬಗ್ಗೆ ಯಾರು ಕೂಡ ಧೈರ್ಯವಾಗಿ ಪ್ರಶ್ನೆ ಮಾಡುತ್ತಿಲ್ಲ ಇದರಿಂದ ಇಟಲಿಯ 25 ವರ್ಷದ ಬಾಕ್ಸರ್ ಏಂಜೆಲಾ ಕ್ಯಾರಿನಿ ಅವರಿಗೆ ಬಹುದೊಡ್ಡ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಸಿಗಬೇಕು” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಬಾಕ್ಸರ್ ಇಮಾನೆ ಖಲೀಫ್ ಲೈಂಗಿಕ ಅಲ್ಪಸಂಖ್ಯಾತೆ ಎಂದು…

Read More

Fact Check | ಬಾಂಗ್ಲಾದೇಶದ ಶಿಥಿಲಗೊಂಡ ಸೇತುವೆಯ ಫೋಟೋವನ್ನು ಗುಜರಾತ್‌ನದ್ದು ಎಂದು ತಪ್ಪಾಗಿ ಹಂಚಿಕೆ

ಶಿಥಿಲಗೊಂಡ ಸೇತುವೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, “ಇದು ಪ್ರಧಾನಿ ಮೋದಿವರು ಗುಜರಾತ್‌ ಮಾಡಲ್‌, ಗುಜರಾತ್‌ನಲ್ಲಿ ಮಾತ್ರ ಇಂತಹ ಸೇತುವೆಗಳನ್ನು ನೋಡಲು ಸಾಧ್ಯ, ಈ ರೀತಿಯ ಸೇತುವೆಗಳನ್ನು ಮೋದಿ ಸರ್ಕಾರ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ. ಇದು ನವ ಭಾರತ” ಎಂದು ಹಲವರು ಈ ಫೋಟೋವನ್ನು ಹಂಚಿಕೊಂಡು ವ್ಯಂಗ್ಯವಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋವನ್ನು ಬಳಸಿಕೊಂಡು ಇನ್ನು ಕೆಲವರು ಇದು ಕೇರಳದ ಫೋಟೋ ಎಂದು ಹಂಚಿಕೊಂಡಿರೆ…

Read More

Fact Check | ಹಮಾಸ್ ನಾಯಕನನ್ನು ಕೊಂದ ನಂತರ ಮೊಸಾದ್ ಮುಖ್ಯಸ್ಥರು ನೃತ್ಯ ಮಾಡಿದ್ದಾರೆ ಎಂಬುದು ಸುಳ್ಳು 

ಹಮಾಸ್ ನಾಯಕ ಇಸ್ಮೈಲ್ ಹನಿಯಾನನ್ನು ಇಸ್ರೇಲ್‌ನ ಮೊಸಾದ್‌ ತನ್ನ ರಹಸ್ಯ ಕಾರ್ಯಾಚರಣೆಯ ಮೂಲಕ ಆತನನ್ನು ಹತ್ಯೆ ಮಾಡಿದೆ. ಈ ಹತ್ಯೆ ಜಗತ್ತಿನಲ್ಲಿ ಬಹಳ ದೊಡ್ಡ ಸಂಚಲನವನ್ನು ಉಂಟು ಮಾಡಿದ್ದು, ಇಸ್ರೇಲ್‌ಮ ಮೊಸಾದ್‌ನ ಈ ಕಾರ್ಯಕ್ಕೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿವೆ. ಇದರ ನಡುವೆ ಇದೀಗ ಇಸ್ರೇಲ್‌ನ ಗುಪ್ತಚರ ಇಲಾಖೆಯ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ವಿಡಿಯೋವೊಂದು ವೈರಲ್ ಆಗುತ್ತದೆ ಈ ವಿಡಿಯೋದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾನನ್ನು ಹತ್ಯೆ ಮಾಡಿದ ನಂತರ ಮೊಸಾದ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು…

Read More

Fact Check | ಮೋದಿ ಸರ್ಕಾರಕ್ಕೂ ಮುನ್ನ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರಲಿಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಸುಳ್ಳು

ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿತ್ತು. ಆದರೆ ನಾವು ಪದಕಗಳ ಪಟ್ಟಿಯಲ್ಲಿ ಇರಲಿಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದಲ್ಲಿ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಕೆಲಸ ಮಾಡಲಾಗಿದೆ. ಆ ಮೂಲಕ ಈ ಬಾರಿಯ ಮೊದಲ ಪದಕವನ್ನು ಭಾರತೀಯ ಮಹಿಳೆಯೊಬ್ಬರು ಗೆದ್ದಿರುವುದು ನನಗೆ ತುಂಬಾ ಸಂತಸವನ್ನು ತಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ನೀಡಿದ್ದಾರೆ. ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು, ಹಲವರು…

Read More

Fact Check | ಒಲಿಂಪಿಕ್ ಪದಕ ವಿಜೇತ ಟರ್ಕಿಯ ಡಿಕೆಕ್ ಯೂಸುಫ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಎಂಬುದು ಸುಳ್ಳು

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ರಜತ ಪದಕ ಪಡೆದ ಟರ್ಕಿಯ ಯೂಸುಫ್ ಡಿಕೆಕ್‌ ಅವರಿಗೆ ಸಂಬಂಧಿಸಿದಂತೆ ಹಲವು ಕತೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಪ್ರಮುಖವಾಗಿ “ಯೂಸುಫ್ ಅವರು ಒಂದು ಸಣ್ಣ ಗ್ಯಾರೆಜ್‌ ಒಂದರಲ್ಲಿ ಮ್ಯಾಕನಿಕ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಇತ್ತೀಚೆಗ ತಮ್ಮ ವಿಚ್ಛೇದಿತ ಪತ್ನಿಯೊಂದಿಗಿನ ಗಲಾಟೆಯ ನಂತರ ನೇರವಾಗಿ ಒಲಂಪಿಕ್‌ ಶೂಟಿಂಗ್‌ಗೆ ಭಾಗಿಯಾಗಿ ಪದಕ ಗೆದ್ದಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. Dikec Yusuf, who only recently took up…

Read More