Likith Rai

Fact Check | ಹಿಂದೂಗಳು ಬಾಂಗ್ಲಾದೇಶದಿಂದ ದೋಣಿಗಳಲ್ಲಿ ಪಲಾಯನ ಮಾಡುತ್ತಿದ್ದಾರೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು 29 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ, ಈ ವಿಡಿಯೋ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಅಲ್ಲಿನ ಹಿಂದೂಗಳು ದೋಣಿಗಳಲ್ಲಿ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವು ದೋಣಿಗಳು ಸಂಚರಿಸುತ್ತಿರುವುದನ್ನು ನೋಡಬಹುದಾಗಿದ್ದು, ಇದು ಇತ್ತೀಚೆಗಿನ ವಿಡಿಯೋ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ. الهندوس يفرون هرباً من بنجلادش بعد تعرض الكثير منهم الى جرائم بشعة على يد المسلمين! …… pic.twitter.com/pODjSuNh6p —…

Read More

Fact Check | ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ‘ಹಿಂದೂಗಳ ಮೇಲೆ ದಾಳಿ’ ಎಂದು ಹಂಚಿಕೆ

“ಬಾಂಗ್ಲಾದೇಶದಲ್ಲಿ ಪ್ರತಿದಿನವೂ ಪರಿಸ್ಥಿತಿ ಕೈ ಮೀರುತ್ತಿದೆ. ಅಲ್ಲಿನ ಹಿಂದುಗಳ ದೌರ್ಜನ್ಯ ದರ್ಪಗಳು ಹೆಚ್ಚಾಗುತ್ತಿದ್ದು, ಬಾಂಗ್ಲಾದೇಶದ ಮುಸಲ್ಮಾನರು ಅಮಾಯಕ ಹಿಂದುಗಳ ನೆತ್ತರು ಹರಿಸುತ್ತಿದ್ದಾರೆ. ಈ ವಿಡಿಯೋ ನೋಡಿ ಇಲ್ಲಿ ಸತ್ತು ಬಿದ್ದಿರುವವರೆಲ್ಲರೂ ಹಿಂದೂ ಹೆಣ್ಣುಮಕ್ಕಳು. ಇವರನ್ನು ಕಂಡ ಕಂಡಲ್ಲಿ ಬಾಂಗ್ಲಾದ ಮುಸಲ್ಮಾನರು ಕೊಂದು ಹಾಕಿದ್ದಾರೆ.” ಎಂದು ಬರಹದೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಈ ವಿಡಿಯೋದಲ್ಲಿ ಹಲವು ಹೆಂಗಸರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಮತ್ತು ಅವರ ಸುತ್ತಮುತ್ತಲಿರುವವರು ಜೋರಾಗಿ ಅಳುತ್ತಿರುವುದನ್ನು ನೋಡಬಹುದಾಗಿದೆ. ವೈರಲ್ ವಿಡಿಯೋದಲ್ಲಿನ ಬರಹವನ್ನು ನೋಡಿ ಹಲವು ಮಂದಿ…

Read More

Fact Check | ಬಾಂಗ್ಲಾದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ವಿಡಿಯೋ ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಇದರ ವಿಡಿಯೋವನ್ನು ನೋಡಿ, ಹೇಗೆ ಇಸ್ಲಾಂಗೆ ಮತಾಂತರಗೊಳ್ಳದವರನ್ನು ರಹಸ್ಯವಾಗಿ ಕೊಂದು ಹಾಕಲಾಗುತ್ತಿದೆ? ಈ ಬಗ್ಗೆ ಭಾರತದಲ್ಲಿನ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯಗಳಿಗೆ ತಲೆಬಾಗಲು ಸಿದ್ಧರಾಗಬೇಕಾಗುತ್ತದೆ!” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. बांग्लादेश में किस तरह हिन्दुओं को बन्धक बनाकर मुसलमान बनाय जा रहा हैं। pic.twitter.com/6owf8CcMGk — बिजेंद्र सिंह चौधरी 💚मोदी…

Read More

Fact Check | ಇದು ಬಾಂಗ್ಲಾದ ಹಿಂದೂಗಳ ರ್ಯಾಲಿ ಅಲ್ಲ, ಬದಲಿಗೆ ಛಾತ್ರಾ ಲೀಗ್‌ ರ್ಯಾಲಿ

“ಬಾಂಗ್ಲಾದೇಶದಲ್ಲಿ ಅಲ್ಲಿನ ಪ್ರಧಾನಿ ಪಲಾಯನಗೈದ ನಂತರ ಮುಸಲ್ಮಾನರು ಹಿಂದೂಗಳ ಮೇಲೆ ವ್ಯಾಪಕವಾಗಿ ದಾಳಿ ನಡೆಸುತ್ತಿದ್ದಾರೆ. ಇದು ಹಿಂದೂ ಸಮುದಾಯವನ್ನು ಬಾಂಗ್ಲಾದಿಂದ ಓಡಿಸುವ ಮತ್ತು ಹಿಂದೂಗಳನ್ನು ಹತ್ತಿಕ್ಕುವ ಕೆಲಸವಾಗಿದೆ. ಇದರ ವಿರುದ್ಧ ಇದೀಗ ಹಿಂದೂಗಳು ಒಗ್ಗಾಟ್ಟಾಗಿ ಬಹುದೊಡ್ಡ ಮೆರವಣಿಗೆಯನ್ನೇ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಬಾಂಗ್ಲಾದಲ್ಲಿ ಕೇಸರಿ ಅಲೆಯೇ ಎದ್ದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ढाका की सड़कों पर भगवा सैलाब बांग्लादेश में हिंदुओं पर हो रहे हमले के विरोध…

Read More

Fact Check | ಬಾಂಗ್ಲಾದೇಶದ ಕೈದಿಗಳ ಅವಶೇಷಗಳು ಎಂದು ಫ್ರಾನ್ಸ್‌ನ ಫೋಟೋ ಹಂಚಿಕೆ

“ಸುಮಾರು 15 ವರ್ಷಗಳ ಅನ್ಯಾಯ ಮತ್ತು ದಬ್ಬಾಳಿಕೆಯಿಂದ ಸಾವಿರಾರು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸಿನಾ” ಎಂದು ಮಾನವನ ಅಸ್ತಿಪಂಜರಗಳಿಂದ ತುಂಬಿರುವ ಕೋಣೆಯೊಂದರ ಫೋಟೋವನ್ನು ಹಂಚಿಕೊಂಡು, ಬಾಂಗ್ಲಾದೇಶದ ಮಾಜಿ ಪ್ರಧಾನಿಯಿಂದ ಶೋಷಣೆ ಎಂಬ ರೀತಿಯಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. A new example of cruelty!Ex-PM of #Bangladesh, #HasinaWajid's prison basement revealed the remains of thousands of innocent lives.Was there a long period of tyranny…

Read More

Fact Check | ಇಸ್ರೇಲ್‌ಗೆ ಅಮೆರಿಕ ತನ್ನ ವಿಮಾನವಾಹಕ ನೌಕೆ ಕಳುಹಿಸಿದೆ ಎಂದು ದಕ್ಷಿಣ ಕೊರಿಯಾ ಪೋಟೊ ಹಂಚಿಕೆ

ಈ ಫೋಟೋ ನೋಡಿ. ಇದು ಹೆಜ್ಬುಲ್ಲಾ ಮತ್ತು ಹೌತಿಗಳೊಂದಿಗಿನ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಬೆಂಬಲಿಸಲು ಯುಎಸ್ (ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕ) ತನ್ನ ವಿಮಾನವಾಹಕ ನೌಕೆಯನ್ನು ಕೆಂಪು ಸಮುದ್ರಕ್ಕೆ ಕಳುಹಿಸಿದೆ. ಆ ಮೂಲಕ ಅಮೆರಿಕ ಮತ್ತೊಂದು ನರಮೇಧಕ್ಕೆ ಸಿದ್ದವಾಗುತ್ತಿದೆ. ಈ ಬಗ್ಗೆ ಜಗತ್ತು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸುದ್ದಿಯನ್ನು ಆದಷ್ಟು ಎಲ್ಲರಿಗೂ ಶೇರ್‌ ಮಾಡಿ ” ಎಂದು ಫೋಟೋವೊಂದರ ಜೊತೆ ಟಿಪ್ಪಣಿ ಬರೆದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Are you ready to send your kids to…

Read More

Fact Check | ಸನಾತನಿಗಳ ಮೇಲಿನ ದಾಳಿ ಕುರಿತು ಪ್ರಧಾನಿ ಮೋದಿ ಹೇಳಿಕೆ ಹಳೆಯದ್ದಾಗಿದೆ

“ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚೆಗಿನ ಭಾಷಣದಲ್ಲಿ ಸನಾತನಿಗಳ ಮೇಲೆ ದಾಳಿ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಅದರಲ್ಲೂ ಬಾಂಗ್ಲಾದೇಶದಲ್ಲಿ ನಡೆದ ಸನಾತನಿಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರಧಾನಿಗಳ ಧ್ವನಿ ಇತ್ತು. ಹೀಗಾಗಿ ಭಾರತದಲ್ಲಿ ಕೂಡ ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ಕರೆಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂಗಳು ಜಾಗೃತಿಯಿಂದ ಇರಬೇಕು ಎಂದು ಸ್ವತಃ ಪ್ರಧಾನಿಗಳೇ ಕರೆಕೊಟ್ಟಿರುವುದರಿಂದ ಎಲ್ಲರೂ ಸಿದ್ದರಾಗಿ” ಎಂಬ ಬರಹದೊಂದಿಗೆ ಟಿಪ್ಪಣಿಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಗಮನಿಸದಾಗ ಹಲವರು ಪ್ರಧಾನಿ ಮೋದಿ ಅವರೇ ಭಾರತದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಎಚ್ಚತ್ತುಕೊಳ್ಳಬೇಕು…

Read More

Fact Check | ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಹಿಂದೂಗಳು ಮತಾಂತರಗೊಳ್ಳುವಂತೆ ಹೇಳಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರ ಹತ್ಯಾಕಾಂಡ ಮುಂದುವರೆದಿರುವುದಕ್ಕೆ ನಾನು ವಿಷಾದಿಸುತ್ತೇನೆ, ಆದರೆ ಬಾಂಗ್ಲಾದೇಶವು ಇಸ್ಲಾಮಿಕ್ ರಾಷ್ಟ್ರವಾಗಿದೆ ಮತ್ತು ಸೆಕ್ಯುಲರ್ ಅಲ್ಲ. ಈಗ, ಮುಸ್ಲಿಮರು ಇಲ್ಲಿ ಬಹುಸಂಖ್ಯಾತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹಿಂದೂಗಳು ಮತ್ತು ಬೌದ್ಧರು ಸುರಕ್ಷಿತವಾಗಿ ಬದುಕಲು ಬಯಸಿದರೆ, ಅವರು ಇಸ್ಲಾಂಗೆ ಮತಾಂತರಗೊಳ್ಳಬೇಕು ಅಥವಾ ಭಾರತಕ್ಕೆ ಹೋಗಬೇಕು.” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಹೇಳಿಕೆ ನೀಡಿದ್ದಾರೆ ಎಂದು ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ…

Read More

Fact Check | ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಇಸ್ಲಾಂಗೆ ಮತಾಂತರವಾಗಲಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ವೇಲ್ಸ್‌ ರಾಜಕುಮಾರಿ ಹಿಜಾಬ್‌ ಧರಿಸಿ ಇಂಗ್ಲೇಡ್‌ ಪೂರ್ತಿ ತಿರುಗುತ್ತಿದ್ದಾರೆ. ಈ ಮೂಲಕ ಅವರು ಕೂಡ ಅಧಿಕೃತವಾಗಿ ಇಸ್ಲಾಂಗೆ ಮತಾಂತರಗೊಳ್ಳುವುದರಲ್ಲಿ ಅನುಮಾನವಿಲ್ಲ. ಈಗ ಯಾರನ್ನೇ ಭೇಟಿಯಾದರು ಅವರು ಹಿಜಾಬ್‌ ಧರಿಸುತ್ತಾರೆ. ಇಂಗ್ಲೆಂಡ್‌ ನಿಧಾನವಾಗಿ ಇಸ್ಲಾಂ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದೆ. ಈ ಬಗ್ಗೆ ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ ಇಂಗ್ಲೆಂಡ್‌ ಅಪಾಯಕ್ಕೆ ಸಿಲುಕಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ವಿಡಿಯೊವೊಂದಿಗೆ ಟಿಪ್ಪಣಿಯೊಂದು ವೈರಲ್‌ ಆಗುತ್ತಿದೆ. Kate Middleton wearing hijab 👇 Britain 🇬🇧 fell faster than anticipated. pic.twitter.com/miNEygeBqx —…

Read More

Fact Check | ಬಾಂಗ್ಲಾದೇಶದ ಮೇಯರ್ ಈಜುತ್ತಿರುವ ವೀಡಿಯೊಗೆ ಸುಳ್ಳು ಕೋಮು ಆಯಾಮ ನೀಡಿ ಹಂಚಿಕೆ

“ಈ ವಿಡಿಯೋ ನೋಡಿ ಹೀಗೆ ಈಜೂತ್ತಿರುವವನು ಹಿಂದೂ ಸಮುದಾಯಕ್ಕೆ ಸೇರಿದ ವ್ಯಕ್ತಿ, ಆತನಿಗೆ ಕಲ್ಲು ಹೊಡೆಯುತ್ತಿರುವವರು ಮುಸ್ಲಿಂ ಸಮುದಾಯದವರು. ಈ ಘಟನೆ ಬೇರೆಲ್ಲೂ ನಡೆದಿಲ್ಲ. ಪಕ್ಕದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ಘಟನೆ ನಡೆದಿದೆ. ಆ ಹಿಂದೂ ವ್ಯಕ್ತಿಯ ಮಗಳು ಮತ್ತು ಮಡದಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಬಳಿಕ ಆತನನ್ನು ಕೂಡ ಕಲ್ಲು ಹೊಡೆದು ಕೊಲ್ಲಲು ಯತ್ನಿಸುತ್ತಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಇಂದಿನ ಹಿಂದೂಗಳ ಪರಿಸ್ಥಿತಿ” ಎಂದು ಟಿಪ್ಪಣಿ ಬರೆದು ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Islamist Mob…

Read More