Likith Rai

Fact Check | ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿಯೊಂದು ಬಿಡಿಸಿದೆ ಎಂಬುದು ಸುಳ್ಳು

ಇದೇ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವದ ವೇಳೆ ಕೇರಳದ ಒಂದು ಪ್ರದೇಶದಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಧ್ವಜವನ್ನು ಮೇಲೆ ಏರಿಸಿ ಹಾರಿಸುವಾಗ ಧ್ವಜಸ್ತಂಭದ ತುದಿ ಭಾಗದಲ್ಲಿ ಸಿಲುಕಿಕೊಂಡಿದೆ. ಕೆಳಗಿನಿಂದ ಎಷ್ಟೇ ಹಗ್ಗ ಜಗ್ಗಾಡಿದರೂ ಅದು ತೆರೆದುಕೊಂಡಿಲ್ಲ. ಆಗ ಒಂದು ಬದಿಯಿಂದ ಅಚಾನಕ್ಕಾಗಿ ಹಾರಿ ಬಂದ ಹಕ್ಕಿಯೊಂದು ರಾಷ್ಟ್ರಧ್ವಜದ ಕಗ್ಗಂಟನ್ನು ಬಿಡಿಸಿದೆ. ಆಗ ಧ್ವಜ ಹಾರಾಡಿದ್ದು, ಬಳಿಕ ಆ ಹಕ್ಕಿ ಹಾರಿ ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. …

Read More

Fact Check | ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕೇಜ್ರಿವಾಲ್ ನಿಂದಿಸಿಲ್ಲ. ಅದು ಎಡಿಟೆಡ್‌ ವಿಡಿಯೋ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂದರ್ಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, “ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ನಕಲಿ ಉತ್ತರಾಧಿಕಾರಿ (ನಕ್ಲಿ ಸಂತನ್) ಎಂದು ಹೇಳಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಹಿಂದಿಯಲ್ಲಿ ಕೇಜ್ರಿವಾಲ್‌ ಅವರು  “ಉದ್ಧವ್ ಠಾಕ್ರೆ ಜೋ ಹೈ, ವೋ ಅಪ್ನೆ ಬಾಪ್ ಕಿ ‘ನಕ್ಲಿ ಸಂತಾನ್’ ಹೈ” ಎಂದು ಹೇಳುವುದನ್ನು ಕೇಳಬಹುದು. Udhav dhakre apne…

Read More

Fact Check | ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ಹತ್ಯೆಯನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ಎಂದು ಹಂಚಿಕೆ

“ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯುನಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿ ಹಿಂದುಗಳ ಮೇಲಿನ ದಾಳಿ ಕಡಿಮೆಯಾಗಿಲ್ಲ. ಅಮಾಯಕ ಹಿಂದೂಗಳ ಮನೆಗಳ ಒಳಗೆ ನುಗ್ಗಿ ಉದ್ರಿಕ್ತ ಮುಸಲ್ಮಾನರ ಗುಂಪು ಹಿಂದೂಗಳ ನರಮೇಧವನ್ನು ಮಾಡುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಮಕ್ಕಳ ಸಾವಿನ ಚಿತ್ರಣವಿದ್ದು ಇದೇ ಕಾರಣದಿಂದ ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಕೂಡ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಬಾಂಗ್ಲಾದೇಶದಲ್ಲಿ ಇನ್ನೂ ಕೂಡ…

Read More

Fact Check | ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಅತ್ಯಾಚಾರ ಎಂದು ಮತ್ತೊಂದು ಪ್ರಕರಣದ‌ ಫೋಟೋ ಹಂಚಿಕೆ

“ಈ ಬೆಲ್ಜಿಯಂ ಮಹಿಳೆ ಪಾಕಿಸ್ತಾನಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಪಾಕಿಸ್ತಾನಿ ಮುಸ್ಲಿಮರು ಅವರನ್ನು ಅಪಹರಿಸಿ 5 ದಿನಗಳ ಕಾಲ ಅತ್ಯಾಚಾರ ಮಾಡಿ, ನಂತರ ಅವರ ಕೈಗಳನ್ನು ಕಟ್ಟಿ ನಿರ್ಜನ ರಸ್ತೆಯಲ್ಲಿ ಬಿಟ್ಟು ಓಡಿಹೋದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ದೇಶವನ್ನು ಲೆಕ್ಕಿಸದೆ, ರಾಕ್ಷಸರು ಒಂದೇ ಆಲೋಚನೆಯನ್ನು ಹೊಂದಿದ್ದಾರೆ. ಏಕೆಂದರೆ ಅವರೆಲ್ಲರೂ ಒಂದೇ ಸಿದ್ಧಾಂತವನ್ನು ನಂಬುತ್ತಾರೆ.” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನೋಡಿದ ಹಲವರು ಇದು ನಿಜವಾದ ಘಟನೆ ಎಂದು…

Read More

Fact Check | ಇಂಗ್ಲೆಂಡ್‌ನ ಪೊಲೀಸರು ಮುಸಲ್ಮಾನರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ ಎಂಬುದು ಸುಳ್ಳು

“ಇಂಗ್ಲೆಂಡ್‌ನ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಅವರ ಪ್ರಾಬಲ್ಯ ಅಲ್ಲಿನ ಭವಿಷ್ಯಕ್ಕೆ ಆಪತ್ತನ್ನು ತರಲಿದೆ. ಇದು ಆ ದೇಶಕ್ಕೆ ಅರ್ಥವಾಗುತ್ತಿಲ್ಲ ಈಗ ಇಂಗ್ಲೆಂಡಿನ ಪೊಲೀಸರು ಮುಸ್ಲಿಂ ನಾಯಕರ ಕಾಲಿಗೆ ಬಿದ್ದಿದ್ದಾರೆ. ಇದು ಶರಣಾಗತಿಯ ಸಂಕೇತ” ಎಂದು ಹಲವರು ಸಾಮಾಜಿಕ ಜಾಲತನದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಇಂಗ್ಲೆಂಡ್‌ನಲ್ಲಿ ಕ್ರೈಸ್ತ ಸಮುದಾಯದ ಅವನತಿಯ ಸಂಕೇತವೆಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. This image reflects current policing strategy perfectly. pic.twitter.com/QEOUAzEbY5 — Paul Golding (@GoldingBF) August 15,…

Read More

Fact Check | ಕೋಲ್ಕತ್ತಾ ಪ್ರಕರಣದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆಗೈಯ್ಯಲಾಗಿದೆ ಎಂಬುದು ಸುಳ್ಳು

“14 ಆಗಸ್ಟ್ 2024 ರ ರಾತ್ರಿ, ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಮಹಿಳೆಯರಿಂದ “ರಿಕ್ಲೈಮ್ ದಿ ನೈಟ್” ಪ್ರತಿಭಟನೆಯನ್ನು ಆಯೋಜಿಸಲಾಯಿತು. ಈ ಫ್ರತಿಭಟನೆಯಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿ ಅಂಕಿತಾ ಬೌರಿ ಎಂಬಾಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಯಾರು ಕೂಡ ಏನನ್ನು ಮಾತನಾಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಿದ ಹಲವರು…

Read More

Fact Check | ರಾಹುಲ್ ಗಾಂಧಿ ಮುಂದೆ ಉದ್ಧವ್ ಠಾಕ್ರೆ ನಮಸ್ಕರಿಸುತ್ತಿರುವ ಫೋಟೋ ಎಡಿಟ್ ಮಾಡಲಾಗಿದೆ

“ಈ ಫೋಟೋವನ್ನು ನೋಡಿ.. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮುಂದೆ ನಮಸ್ಕರಿಸುತ್ತಿದ್ದಾರೆ. ಈ ಕುರ್ಚಿಯ ದುರಾಸೆ ಒಬ್ಬ ವ್ಯಕ್ತಿಯನ್ನು ಏನು ಬೇಕಾದರೂ ಮಾಡಿಸ ಬಲ್ಲದು. ಭಾರತೀಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಂಡಿಯಾ ಮೈತ್ರಿಕೂಟ ಖುರ್ಚಿಗಾಗಿ ಹೋರಾಡುತ್ತಿದೆ ಎಂಬುದನ್ನು ಮರೆಯದಿರಿ.” ಎಂದು ಫೋಟೋವೊಂದನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/kanganaranautin/status/1823577791507337676 ಈ ಫೋಟೋ ನೋಡಿದ ಹಲವು ಮಂದಿ ಉದ್ಧವ್ ಠಾಕ್ರೆ‌ ಅವರು ನಿಜಕ್ಕೂ ರಾಹುಲ್‌ ಗಾಂಧಿ ಅವರಿಗೆ ನಮಸ್ಕರಿಸಿದ್ದಾರೆ ಎಂದು…

Read More

Fact Check | ಕ್ಯಾಡ್‌ಬರಿಸ್ ಚಾಕೊಲೇಟ್‌ನಲ್ಲಿ ದನದ ಮಾಂಸ ಬೆರೆಸಲಾಗುತ್ತಿದೆ ಎಂಬುದು ಸುಳ್ಳು.!

“ಹಿಂದೂಗಳೇ ಎಚ್ಚರ ನೀವು ತಿನ್ನುವ ಕ್ಯಾಡ್‌ಬರೀಸ್‌ನ ಚಾಕೊಲೇಟ್‌ಗಳಲ್ಲಿ (ಡೈರಿ ಮಿಲ್ಕ್, ಫೈವ್ ಸ್ಟಾರ್ ಇತ್ಯಾದಿ) ದನದ ಮಾಂಸವನ್ನು ಬೆರೆಸಲಾಗುತ್ತಿದೆ. ಇದನ್ನು ಸ್ವತಃ ಕ್ಯಾಡ್‌ಬರೀಸ್‌ ಕಂಪನಿಯೇ ಒಪ್ಪಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಕ್ಯಾಡ್‌ಬರೀಸ್‌ನ ಯಾವುದೇ ಚಾಕೊಲೇಟ್‌ ರ್ಯಾಪರ್‌ಗಳನ್ನು ಗಮನಿಸಿ ಅದರಲ್ಲಿ ಹಸಿರು ಬಣ್ಣದ ಗುರುತು ಇರುತ್ತದೆ, ಇದು ಹಲಾಲ್‌ ಬೀಫ್‌ ಬೆರೆಸಿರುವ ಸೂಚನೆ. ಇನ್ನು ಈ ಕುರಿತು ಕ್ಯಾಡ್‌ಬರೀಸ್‌ ತನ್ನ ಅಧಿಕೃತವಾಗಿ ವೆಬ್‌ಸೈಟನಲ್ಲಿ ಕೂಡ ಉಲ್ಲಖಿಸಲಾಗಿದೆ” ಎಂದು ಸ್ಕ್ರೀನ್‌ಶಾಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. He vegetarians please note that…

Read More

Fact Check | ಈಜಿಪ್ಟ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ “ಗುಜರಾತ್‌ನ ವಲ್ಸಾದ್‌ನಲ್ಲಿರುವ ಡಿಪಿಎಸ್ ಶಾಲೆಯಲ್ಲಿ  ಶಕೀಲ್ ಅಹ್ಮದ್ ಅನ್ಸಾರಿ ಎಂಬ ಮುಸ್ಲಿಂ ಶಿಕ್ಷಕ ಮಕ್ಕಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಇವನ ಈ ದಾಳಿಗೆ ಮಕ್ಕಳು ನಲುಗಿದ್ದಾರೆ. ಹಿಂದುಗಳೇ ಈ ಬಗ್ಗೆ ಎಚ್ಚರದಿಂದಿರಿ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಾಕಷ್ಟು ಮಂದಿ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ವಿಡಿಯೋ ಕೂಡ ವೈರಲ್‌ ಆಗುತ್ತಿದ್ದು, ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. आप के whatsapp पे जितने भी नंबर एवं ग्रुप हैं…

Read More

Fact Check | ಕಾಣೆಯಾದ ಮಗನಿಗಾಗಿ ಪ್ರತಿಭಟಿಸಿದ ಬಾಂಗ್ಲಾದ ಮುಸ್ಲಿಂ ವ್ಯಕ್ತಿಯನ್ನು ಹಿಂದೂ ಎಂದು ಸುಳ್ಳು ಹರಡಿದ ANI

“ಬಾಂಗ್ಲಾದೇಶ: ತನ್ನ ಕಾಣೆಯಾದ ಮಗನ ಪೋಸ್ಟರ್‌ನೊಂದಿಗೆ ಪ್ರತಿಭಟಿಸುವ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರೊಬ್ಬರು “ನಾನು ನನ್ನ ಜೀವವನ್ನು ನೀಡುತ್ತೇನೆ, ಆದರೆ ನನ್ನ ಮಗುವಿಗೆ ನ್ಯಾಯ ಸಿಗಬೇಕು. ನನ್ನ ಮಗು ಎಲ್ಲಿದೆ? ನನ್ನ ಮಗುವಿನ ಬಗ್ಗೆ ವಿಚಾರಿಸಲು ನಾನು ಮನೆಯಿಂದ ಮನೆಗೆ ಹೋಗುತ್ತಿದ್ದೇನೆ, ಆದರೆ ಯಾರೂ ನನ್ನ ಮಾತುಗಳನ್ನು ಕೇಳಲು ತಯಾರಿಲ್ಲ.” ಎಂದು ANI ಕಿರು ವರದಿಯನ್ನು ಎಕ್ಸ್‌ನಲ್ಲಿ  ಪೋಸ್ಟ್‌ ಮಾಡಿ ಅಳಿಸಿ ಹಾಕಿದೆ. ಇದನ್ನ ನೋಡಿದ ಹಲವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಹೀಗಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.  ANI…

Read More