Likith Rai

Fact Check | ಮುಸ್ಲಿಂ ವ್ಯಾಪಾರಿ ಚರಂಡಿ ನೀರಿನಲ್ಲಿ ತರಕಾರಿ ತೊಳೆದಿದ್ದಾನೆ ಎಂಬುದು ಸುಳ್ಳು

ಹಿಂದೂಗಳೇ ಎಚ್ಚರ..! ತರಕಾರಿ ವ್ಯಾಪಾರಿಯೊಬ್ಬರು ತಾವು ಮಾರಾಟ ಮಾಡಲು ಇಟ್ಟುಕೊಂಡಿದ್ದ ತರಕಾರಿಯನ್ನು ಚರಂಡಿ ನೀರಿನಲ್ಲಿ ತೊಳೆಯುತ್ತಿದ್ದಾರೆ. ಮುಸ್ಲಿಂ ವ್ಯಾಪಾರಿಗಳ ಈ ನಡೆಗೆ ಆಹಾರ ಜಿಹಾದ್‌ ಎನ್ನದೆ ಮತ್ತಿನ್ನೇನು ಹೇಳಬೇಕು. ಈಗಲಾದರೂ ಎಚ್ಚೆತ್ತುಕೊಳ್ಳಿ, ಮುಸ್ಲಿಂ ವ್ಯಾಪರಸ್ಥರ ಬಳಿ ವ್ಯಾಪಾರ ಮಾಡುವುದನ್ನು ಈಗಲಾದರೂ ನಿಲ್ಲಿಸಿ. ಹಿಂದೂಗಳ ಅಂಗಡಿಯಲ್ಲಿ ಮಾತ್ರ ನಿಮ್ಮ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಮುಸ್ಲಿಂ ವ್ಯಾಪಾರಿಯ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು, ವೈರಲ್‌…

Read More

Fact Check | ಉದಯಪುರದಲ್ಲಿ ಹತ್ಯೆಗೀಡಾದ ದೇವರಾಜ್‌ನ ವಿಡಿಯೋ ಎಂದು ಮತ್ತೊಂದು ವಿಡಿಯೋ ಹಂಚಿಕೆ

“ಇದು ಉದಯಪುರದ ವಿದ್ಯಾರ್ಥಿಯೇ? ದೇವರಾಜ್ ನೀಡಿದ ಈ ಧಾರ್ಮಿಕ ಮತ್ತು ಅದ್ಭುತ ಪ್ರದರ್ಶನ ಅವರ ಸಾವಿಗೆ ಕಾರಣವಾಯಿತು??”. ಎಂಬ ಪ್ರಶ್ನೆಯೊಂದಿಗೆ ಯುವಕನೊನೊಬ್ಬ ವೇದಿಯಲ್ಲಿ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಈತ ಹತ್ಯೆಗೀಡಾದ ದೇವರಾಜ್‌ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಈ ಯುವಕನಿಗೆ ಹಿಂದುತ್ವದ ಮೇಲೆ ಅತೀವವಾದ ಅಭಿಮಾನವಿತ್ತು. ಅದು ಈತನ ಸಾವಿಗೆ ಕಾರಣವಾಗಿದೆ ಎಂದು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಹಲವರು ತಮ್ಮ ವೈಯಕ್ತಿಕ…

Read More

Fact Check | ಮುಸ್ಲಿಂ ವ್ಯಕ್ತಿ ತನ್ನ ಅಂಗಡಿಯಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಲು ನಿರಾಕರಿಸಿದ್ದಾನೆ ಎಂಬುದು ನಾಟಕೀಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತ್ರಿವರ್ಣ ಧ್ವಜವನ್ನು ತನ್ನ ಅಂಗಡಿಯಲ್ಲಿ ಪ್ರದರ್ಶಿಸಲು ನಿರಾಕರಿಸಿದ್ದಾನೆ ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ “ಈ ವ್ಯಕ್ತಿಯನ್ನು ನೋಡಿ ಇಂಥವರಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಈ ಹಿಂದೆ ಕೇಸರಿ ಧ್ವಜದಲ್ಲಿ ಸಮಸ್ಯೆ ಇದ್ದ ಇವರಿಗೆ, ಈಗ ತ್ರಿವರ್ಣ ಧ್ವಜವನ್ನು ಹಾರಿಸಲು ಕಷ್ಟವಾಗುತ್ತಿದೆ. ಇಂತಹ ದೇಶದ್ರೋಹಿಗಳು ಏನೇ ಆದರೂ ತಮ್ಮ ಸಿದ್ಧಾಂತವನ್ನು ಬಿಡುವುದಿಲ್ಲ” ಎಂದು ವಿಡಿಯೋದೊಂದಿಗೆ ಟಿಪ್ಪಣಿಯನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ इन गद्दारों के साथ क्या किया जाए?…

Read More

Fact Check | ವಿಶೇಷ ಚೇತನ ನೃತ್ಯಗಾರನನ್ನು ಕಾರ್ಗಿಲ್‌ ಹಿರೋ ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ನಿಮಗೆ ಸಾಮಾನ್ಯ ವಿಡಿಯೋದಂತೆ ಭಾಸವಾಗಬಹುದು. ಇಲ್ಲಿ ಕಾಲುಗಳಿಲ್ಲದ ಯುವಕನೊಬ್ಬ ಮಹಿಳೆಯೊಂದಿಗೆ ಡಾನ್ಸ್ ಮಾಡುತ್ತಿದ್ದಾನೆ ಎಂಬುದು ನಿಮಗೆ ಮೊದಲಿಗೆ ಕಾಣಿಸುತ್ತದೆ. ಆದರೆ ಹೀಗೆ ಕಾಲುಗಳಿಲ್ಲದೆ ನೃತ್ಯ ಮಾಡುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ಇವರು ದೇಶಕ್ಕಾಗಿ ಅದರಲ್ಲೂ ಪ್ರಮುಖವಾಗಿ ಕಾರ್ಗಿಲ್ ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ಮೇಜರ್ ವಿಕ್ರಂ. ಇವರು ತಮ್ಮ ಪತ್ನಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇವರ ಮಡದಿಗೊಂದು ಬಿಗ್ ಸೆಲ್ಯೂಟ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. They are…

Read More

Fact Check | ಬಾಂಗ್ಲದೇಶದಲ್ಲಿ ಹಿಂದೂ ಪ್ರಾಂಶುಪಾಲೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ನಂತರ ಅಲ್ಲಿನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದುಗಳು ಅಪಾಯದಲ್ಲಿ ಸಿಲುಕಿದ್ದಾರೆ. ಹಲವಾರು ಹಿಂದೂ ಅಲ್ಪಸಂಖ್ಯಾತರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡುತ್ತಿದ್ದಾರೆ. ನೀಡದಿದ್ದರೆ ಅವರು ಹಲವು ಬೆದರಿಕೆಗಳನ್ನು ಮತ್ತು ಹಲ್ಲೆಯಂತಹ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಇದೀಗ ಇಂತಹದ್ದೇ ಪರಿಸ್ಥಿತಿಯನ್ನು ಅಜೀಂಪುರ ಸರ್ಕಾರಿ ಪ್ರಾಂಶುಪಾಲೆಯಾದ ಗೀತಾಂಜಲಿ ಬರುವಾ ಅವರು ಎದುರಿಸಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಕ್ಕೆ ವಿದ್ಯಾರ್ಥಿನಿಯರು ಸುತ್ತುವರೆದು ಅವರನ್ನು ಮರಕ್ಕೆ ಕಟ್ಟಿಹಾಕಿದ್ದಾರೆ.” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ Some…

Read More

Fact Check | ವಿದೇಶದಲ್ಲಿ ಪ್ರಯಾಣಿಸುವ ಎಲ್ಲಾ ಭಾರತೀಯರಿಗೆ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿದೆ ಎಂಬುದು ಸುಳ್ಳು

“ಅಕ್ಟೋಬರ್ 1, 2024 ರಿಂದ ವಿದೇಶಕ್ಕೆ ಪ್ರಯಾಣಿಸುವ ಮೊದಲು ಎಲ್ಲಾ ಭಾರತೀಯ ನಾಗರಿಕರು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ITCC) ಪಡೆಯಬೇಕು,  ಇಲ್ಲದಿದ್ದರೆ ಯಾವುದೇ ವಿದೇಶ ಪ್ರವಾಸವನ್ನು ಕೈಗೊಳ್ಳಲು ಯಾವ ಭಾರತೀಯನಿಂದಲೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ತೆರಿಗೆ ಕ್ಲಿಯರೆನ್ಸ್‌ ಪಡೆಯದೆ  ವಿದೇಶ ಪ್ರವಾಸ ಮಾಡಲು ಯತ್ನಿಸಿದರೆ ಅವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್‌ ಆಗುತ್ತಿದೆ. New ITCC requirements; Understanding the New Tax Clearance Certificate Requirement for…

Read More

Fact Check | ಬಾಂಗ್ಲಾದೇಶದಲ್ಲಿ ಹಿಂದೂ ಪ್ರಾಧ್ಯಪಕನಿಂದ ಬಲವಂತವಾಗಿ ಕುರಾನ್‌ ಪಠಿಸಲಾಗಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂ ಪ್ರಾಧ್ಯಪಕನಿಗೆ ಕುರಾನ್‌ ಓದುವಂತೆ ಒತ್ತಾಯಿಸಲಾಗುತ್ತಿದೆ. ಈ ವಿಡಿಯೋದಲ್ಲಿ ಎಷ್ಟರ ಮಟ್ಟಿಗೆ ಆ ಪ್ರಾಧ್ಯಪಕ ಒತ್ತಡಕ್ಕೆ ಬಿದ್ದಿದ್ದಾನೆ ಎಂಬುದನ್ನು ಗಮನಿಸಿ. ಬಾಂಗ್ಲಾದಲ್ಲಿ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ.? ನಾವು ಇಂದು ಇದನ್ನು ನಿರ್ಲಕ್ಷ್ಯ ಮಾಡಿದರೆ ನಾಳೆ ಭಾರತದಲ್ಲಿಯೂ ಕೂಡ ಇದೇ ರೀತಿ ಆಗಬಹುದು ಎಚ್ಚರ ವಹಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ढाका कॉलेज के एक हिंदू प्रोफेसर का इस्तीफा जमाते इस्लामी के छात्र संगठन ने…

Read More

Fact Check | ಚೆನ್ನೈನಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಅತ್ಯಾಚಾರಿಯ ಶಿರಚ್ಛೇದ ಮಾಡಿದ್ದಾನೆ ಎಂಬುದು ಸುಳ್ಳು

” ತಮಿಳುನಾಡಿನಲ್ಲಿ ತನ್ನ ಸಹೋದರಿಯನ್ನು ಅತ್ಯಾಚಾರ ಮಾಡಿದ ವ್ಯಕ್ತಿಯ ತಲೆ ಕಡಿದ ಅಣ್ಣ, ಆ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಕಾನೂನು ಶಿಕ್ಷೆ ಕೊಡಲು ತಡ ಮಾಡಿದಾಗ ಅತ್ಯಾಚಾರಿಗಳನ್ನು ಹೀಗೆಯೇ ಶಿಕ್ಷಿಸಬೇಕಿದೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ರುಂಡವನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಹೀಗೆ ಈ ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಇದು ನಜವಾಗಿಯೂ ನಡೆದ ಘಟನೆ ಎಂದು ತಮ್ಮ ಸಾಮಾಜಿಕ…

Read More

Fact Check | ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ

“ಈ ವಿಡಿಯೋ ನೋಡಿ ಜರ್ಮನಿಯ ಮಹಿಳೆ ಮರಿಯಾನ್ನೆ ಬ್ಯಾಚ್ಮಿಯರ್ ತನ್ನ ಏಳು ವರ್ಷದ ಮಗಳನ್ನು ಲೈಂಗಿಕವಾಗಿ ದೌರ್ಜನ್ಯ ಎಸಗಿ ಕೊಂದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಶೂಟ್ ಮಾಡಿದ್ದಾರೆ.  ಅವರ ಆಕ್ರೋಶ ಮತ್ತು ತನ್ನ ಮಗಳ ಸಾವಿಗೆ ನ್ಯಾಯ ಕೊಡಸಲೇ ಬೇಕು ಎನ್ನುವ ಉದ್ದೇಶದಿಂದ ಅವರು ತೆಗೆದುಕೊಂಡ ಈ ನಿರ್ಧಾರದಿಂದ ಅಲ್ಲಿ ಮಹತ್ತರವಾದ ಬದಲಾವಣೆ ಮತ್ತು ಪ್ರಬಲವಾದ ಕಾನೂನು ಜಾರಿಗೆ ಬಂದಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Marianne Bachmeier, a West German woman, took…

Read More

Fact Check | ಸರ್ಕಾರಿ ಕೆಲಸ ತೊರೆಯುವಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಸದ್ಯದ ಮಟ್ಟಿಗೆ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಅದರಲ್ಲೂ ಹಲವು ದುರುಳರು ಹಿಂದೂಗಳ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಿರುಕುಳವನ್ನು ನೀಡುತ್ತಿದ್ದಾರೆ. ಈಗ ಬಾಂಗ್ಲಾದೇಶದ ಸರ್ಕಾರಿ ಹುದ್ದೆಯಲ್ಲಿರುವ ಹಿಂದೂಗಳಿಗೆ ರಾಜೀನಾಮೆಯನ್ನು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. https://twitter.com/jpsin1/status/1822686838236258409 ಇನ್ನು ಕೆಲವರು “ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳನ್ನು ಸರ್ಕಾರಿ ಕೆಲಸದಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ” ಎಂದು…

Read More