Team Kannada fact check

ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು

“ಈ ಫೊಟೋವನ್ನು ಬಹಳ ಕಷ್ಟಪಟ್ಟು ಸಂಗ್ರಹಿಸಲಾಗಿದೆ. ಇಲ್ಲಿ ನೆಹರು ಆರೆಸ್ಸೆಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ಏನು ಹೇಳುತ್ತೀರಾ ?  ನೆಹರೂ ಕೂಡ ಈಗ ಕೇಸರಿ ಭಯೋತ್ಪಾದಕರೇ ? ಅಥವಾ ಸೆಕ್ಯೂಲರ್?  ಎಂದು ದಯವಿಟ್ಟು ನಮಗೆ ತಿಳಿಸಿ”  ಎಂಬ ಸಂದೇಶದೊಂದಿಗೆ ನೆಹರೂ ಅವರ ಎರಡು ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ಚಿತ್ರಗಳಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕಪ್ಪು/ಕಂದು ಚಡ್ಡಿ, ಖಾಕಿ ಅಂಗಿ ಮತ್ತು ಬಿಳಿ ಬಣ್ಣದ ಟೋಪಿ ಧರಿಸಿ  RSSನ ಪ್ರೋಟೋಕಾಲ್‌ಗೆ ಹೋಲುವ ಕೋಲು ಹಿಡಿದಿರುವುದನ್ನು…

Read More
ರಾಹುಲ್ ಗಾಂಧಿ

ರಾಹುಲ್ ಗಾಂಧಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ್ದು ಬೆಲೆ ಏರಿಕೆ ವಿರುದ್ಧವೇ ಹೊರತು ರಾಮಮಂದಿರದ ವಿರುದ್ಧವಲ್ಲ

ರಾಮಮಂದಿರದ ಅಡಿಗಲ್ಲು ಇಟ್ಟಾಗ ಅದನ್ನು ವಿರೋಧಿಸಲು ಕೆಲವೊಂದಿಷ್ಟು ಸಂಸದರು ಕಪ್ಪು ಬಟ್ಟೆ ಹಾಕಿ ಸಂಸತ್ತಿಗೆ ಹೋಗಿದ್ದರು. ಯೋಚನೆ ಮಾಡಿ ಇವರಿಗೆ ಹಿಂದೂಗಳು ಬೇಡ ಅವರ ಓಟು ಮಾತ್ರ ಬೇಕು ಎಂಬ ಪ್ರತಿಪಾದನೆಯೊಂದಿಗೆ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುತ್ತಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಹುಡುಕಿದಾಗ ಆಗಸ್ಟ್ 05, 2022ರಂದು ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ದೇಶಾದ್ಯಂತ…

Read More
ಟಿಪ್ಪು ಸುಲ್ತಾನ್

ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನರನ್ನು ಜಿಹಾದಿ, ಅತ್ಯಾಚಾರಿ ಎಂದು ಘೋಷಿಸಿದೆ ಎಂಬುದು ಸುಳ್ಳು

‘ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನನನ್ನು ಜಿಹಾದಿ ಎಂದು ಘೋಷಿಸಿದೆ ಮತ್ತು ಸ್ವಾತಂತ್ರ್ಯ ಹೋರಾಟಗಾರನಲ್ಲ’ ಎಂದು ಹೇಳಿದೆ ಎಂದು ಬರೆಯಲಾಗಿರುವ ಪೋಸ್ಟ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಪೋಸ್ಟ್‌ನಲ್ಲಿ ‘ಟಿಪ್ಪು ಸುಲ್ತಾನ್ ಹಿಂದೂಗಳನ್ನು ಹತ್ಯೆಗೈದ, ಅತ್ಯಾಚಾರ ಮಾಡಿದ, ಮತ್ತು ಮತಾಂತರ ಮಾಡುತ್ತಿದ್ದ’ ಎಂದು ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹೇಳಿದ್ದಾರೆ’ ಎಂದು ಬರೆಯಲಾಗಿದೆ. ಪೋಸ್ಟ್‌ನಲ್ಲಿನ ಪ್ರತಿಪಾದನೆ ನಿಜವೆ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಈ ಕುರಿತು ಹುಡುಕಿದಾಗ…

Read More
5 ಲಕ್ಷ

ಹಮಾಸ್‌ 5 ಲಕ್ಷ, ನಾವು 25 ಕೋಟಿ ಶೀರ್ಷಿಕೆಯಲ್ಲಿ ಫೇಕ್ ನ್ಯೂಸ್: 2019ರ ವಿಡಿಯೋ ಪ್ರಕಟಿಸಿದ ಸುವರ್ಣ ನ್ಯೂಸ್

ಅವರು 5 ಲಕ್ಷ ಮಾತ್ರ. ಆದರೆ ನಾವು 25 ಕೋಟಿ ಮಂದಿ ಇದ್ದೇವೆ. ಮೋದಿ ಹಾಗೂ ಅಮಿತ್ ಶಾ ಸರಿಯಾಗಿ ಕೇಳಿಸಿಕೊಳ್ಳಿ. 25 ಕೋಟಿ ಜನಸಂಖ್ಯೆಯಲ್ಲಿ 5 ಕೋಟಿ ಮಂದಿ ಹೋರಾಟದಲ್ಲಿ ಪ್ರಾಣ ನೀಡಿದರೂ ನಾವು 20 ಕೋಟಿ ಇರುತ್ತೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಬದಲಿಸಿ, ಶರಿಯಾ ಕಾನೂನು ಜಾರಿಗೆ ತರುತ್ತೇವೆ ಎಂಬುದಾಗಿ ವ್ಯಕ್ತಿಯೊಬ್ಬ ಹೇಳುವ ವಿಡಿಯೋವೊಂದು ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Here a MusIim leader of India…

Read More
ಪಟಾಕಿ

ಫ್ಯಾಕ್ಟ್ ಚೆಕ್: ದೇಶಾದ್ಯಂತ ಪಟಾಕಿ ನಿಷೇಧ ಎಂದು ಸುಪ್ರೀಂ ಆದೇಶಿಸಿಲ್ಲ

ದೇಶಾದ್ಯಂತ ಪಟಾಕಿ ನಿಷೇಧಿಸಿ ಸುಪ್ರೀಂ ತೀರ್ಪು! ದೀಪಾವಳಿಗೂ ಮುನ್ನ ಮಹತ್ವದ ಆದೇಶ ಎಂಬ ಶೀರ್ಷಿಕೆಯಲ್ಲಿ ಕನ್ನಡದ ಹೊಸದಿಂಗತ, ನ್ಯೂಸ್ 18 ಕನ್ನಡ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಪ್ರಕಟಿಸಿವೆ. ಹಿಂದೂಗಳ ಹಬ್ಬಕ್ಕೆ ಮಾತ್ರ ನಿಷೇಧವೇಕೆ ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ನವೆಂಬರ್ 07 ರಂದು ದೆಹಲಿಯಲ್ಲಿ ಪಟಾಕಿ ನಿಷೇಧದ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ 2021ರ ಆದೇಶದಂತೆ ಬೇರಿಯಂ ಲವಣ ಮತ್ತು ನಿಷೇಧಿತ…

Read More

ಕಾಶ್ಮೀರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತ ಸರ್ಕಾರ ಬ್ಯಾನ್ ಮಾಡಿಲ್ಲ

ಮಹಮದ್ ರಫಿ ಬರೆದಿದ್ದ ಕಾಶ್ಮಿರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಕಾರಣ ಪಾಕಿಸ್ತಾನ ಈ ಹಾಡನ್ನು ಬ್ಯಾನ್ ಮಾಡಿ ಭಾರತದಲ್ಲಿ ಎಂದು ಅಂದಿನ ಪ್ರಧಾನಿಗೆ ಮನವಿ ಮಾಡಿದ ಕಾರಣ ನಿಲ್ಲಿಸಲಾಗಿತ್ತು…. ಅದೆಂತ ಪ್ರೀತಿ ಪಾಕಿಸ್ತಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಪ್ರಶ್ನಿಸಿ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಈ ಹಿಂದಿ ಹಾಡಿನ ಮೊದಲ ಸಾಲು ‘ಜನ್ನತ್ ಕಿ ಹೈ ತಸ್ವೀರ್ ಯೇ’ ಎಂಬ…

Read More

ಜಾರಾ ಪಟೇಲ್ ವಿಡಿಯೋಗೆ ನಟಿ ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ಡೀಪ್ ಫೇಕ್ ಎಡಿಟ್

ತುಂಡುಡುಗೆಯಲ್ಲಿ ಲಿಫ್ಟ್ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಒಂದನ್ನು ವೈರಲ್ ಮಾಡಲಾಗುತ್ತಿದೆ. ಫ್ಯಾಕ್ಟ್ ಚೆಕ್: ಇದು ಡಾಟಾ ಇಂಜಿನಿಯರ್ ಎಂದು ಕರೆದುಕೊಂಡಿರುವ ಜಾರಾ ಪಟೇಲ್ ಎಂಬುವವರ ವಿಡಿಯೋ ಆಗಿದ್ದು, ಅಕ್ಟೋಬರ್ 9 ರಂದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ ಕಿಡಿಗೇಡಿಗಳು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ನಟಿ ರಶ್ಮಿಕಾ ಮಂದಣ್ಣರವರ ಮುಖ ಸೇರಿಸಿ ತಿರುಚಿದ್ದಾರೆ.   View this post on Instagram   A post shared by…

Read More
ಹಿಂದೂಗಳ

ಫ್ಯಾಕ್ಟ್ ಚೆಕ್: ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಹದಗೆಡುತ್ತಿದೆಯೆಂದು ಮುಸ್ಲಿಮರ ವಿಡಿಯೋ ಹಂಚಿಕೆ

ಪಾಕಿಸ್ತಾನದಲ್ಲಿ ಹಿಂದೂಗಳ ಪರಿಸ್ಥಿತಿ ಭಯಾನಕವಾಗಿದೆ ಎಂದು ಪ್ರತಿಪಾದಿಸಿ ಟ್ವಿಟರ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಯಸ್ಸಾದ ಮಹಿಳೆಯ ಕೂದಲು ಹಿಡಿದು ಕ್ರೂರವಾಗಿ ಎಳೆದೊಯ್ದು ನಂತರ ಅಮಾನುಷವಾಗಿ ಥಳಿಸಲಾಗಿದೆ. ಕೆಲವು ಮಹಿಳೆಯರು ಸೇರಿದಂತೆ ಹಲವಾರು ಜನರು ಆಕೆಗೆ ಚಪ್ಪಲಿ ಮತ್ತು ದೊಣ್ಣೆಗಳಿಂದ ಥಳಿಸುವ ದೃಶ್ಯಗಳನ್ನು ವೀಡಿಯೊ ಒಳಗೊಂಡಿದೆ. The condition of #Hindu women in #Pakistan is worsening. It's hypocritical for some US Muslims to criticize minority rights in #India while ignoring…

Read More

ಅಂಬೇಡ್ಕರ್‌ರವರ ಬಗ್ಗೆ ಅಪಪ್ರಚಾರ: ಅತ್ಯಾಚಾರಿ ಎಂದು ಸುಳ್ಳು ಹರಡುತ್ತಿರುವ ಮತೀಯವಾದಿಗಳು

ಜಗತ್ತು ಕಂಡ ಶೋಷಿತರ ಪರವಾಗಿನ ಅಪ್ರತಿಮ ಹೋರಾಟಗಾರ, ಮಹಾನ್ ಜ್ಞಾನಿ, ವಿದ್ವಾಂಸ, ಭಾರತದ ಸಂವಿಧಾನದ ಕತೃ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್‌ರವರ ಕುರಿತು ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದಲಿತ ಸಮುದಾಯದಲ್ಲಿ ಹುಟ್ಟಿ, ತನ್ನ ಸ್ವಂತ ಪರಿಶ್ರಮದಿಂದ ಓದಿ, ವಿದ್ವತ್ ಗಳಿಸಿ, ಸತತ ಕೆಲಸಗಳ ಮೂಲಕ ಶೋಷಿತರ ವಿಮೋಚಕರಾದ ಅಂಬೇಡ್ಕರ್‌ರವರ ತೇಜೋವಧೆ ಮಾಡಲು ಒಂದು ವರ್ಗ ನಿರತರಾಗಿದೆ. ಹಲವಾರು ಬಲಪಂಥೀಯರಿಗೆ ಅಂಬೇಡ್ಕರ್‌ರವರ ಸಾಧನೆಗಳನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಹಾಗಾಗಿ ಅವರ ವಿರುದ್ಧ ವಿಷ…

Read More
ಪಾಕಿಸ್ತಾನದ

ಪಾಕಿಸ್ತಾನದ ಕುಸ್ತಿಪಟುವನ್ನು ಭಾರತದ ವಿಜಯಲಕ್ಷ್ಮಿ ಸೋಲಿಸಿದ್ದಾರೆ ಎಂಬುದು ಸುಳ್ಳು

ಕಳೆದ ಎರಡು ಮೂರು ವರ್ಷದಿಂದ ಮಹಿಳಾ ಕುಸ್ತಿಪಟುಗಳ ವಿಡಿಯೋ ಒಂದು ವೈರಲ್ ಆಗುತ್ತಿದೆ. “ದುಬೈನಲ್ಲಿ ನಡೆದ ಮಹಿಳಾ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಾಕಿಸ್ತಾನದ ಮಹಿಳಾ ಕುಸ್ತಿಪಟು ಗೆದ್ದಿದ್ದರು. ಭಾರತೀಯ ಮಹಿಳೆಯರನ್ನು ಗೇಲಿ ಮಾಡಿದ ಅವರು ವೇದಿಕೆಯ ಮೇಲೆ ಯಾವುದೇ ಭಾರತೀಯ ಮಹಿಳೆ ಬಂದು ತನ್ನೊಂದಿಗೆ ಸ್ಪರ್ಧಿಸಬಹುದೇ ಎಂದು ಸವಾಲು ಹಾಕಿದರು. ಇದ್ದಕ್ಕಿದ್ದಂತೆ ತಮಿಳುನಾಡಿನ ಕವಿತಾ ವಿಜಯಲಕ್ಷ್ಮಿ ಎಂಬ ಭಾರತೀಯ ಹುಡುಗಿ ತಾನು ಸಿದ್ಧ ಎಂದು ಕೈ ಎತ್ತಿದಳು. ಚಾಮುಂಡಿ ರೂಪ ತಾಳಿ, ಕುಂಕುಮ ಧರಿಸಿ ವೇದಿಕೆ ಮೇಲೆ…

Read More