Team Kannada fact check

Fact Check| ಆರ್‌ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ ಎಂಬುದು ಸುಳ್ಳು

ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ‌. ಫ್ಯಾಕ್ಟ್‌ಚೆಕ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಸ್ವಯಂ ಪ್ರೇರಿತವಾಗಿ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಪಶ್ಚಿಮ ಬಂಗಾಳ ಸರ್ಕಾರದ ಪರ ಕಪಿಲ್ ಸಿಬಲ್‌ರವರು ವಾದ ಮಂಡಿಸುತ್ತಿದ್ದಾರೆ. ಹಾಗಾಗಿ ಕಪಿಲ್ ಸಿಬಲ್‌ರವರು ಆರೋಪಿ ಸಂಜಯ್ ರಾಯ್ ಪರ ವಾದ ಮಂಡಿಸುತ್ತಿದ್ದಾರೆ ಎಂದು ಸುಳ್ಳು….

Read More

Fact Check| ಈ ಹಿಂದೂ ಮಹಿಳೆಗೆ 24 ಮಕ್ಕಳಿದ್ದಾರೆ ಎಂಬುದು ಸುಳ್ಳು

“ಈ ಹಿಂದೂ ಮಹಿಳೆ 16ಗಂಡು ಮಕ್ಕಳು ಮತ್ತು 8 ಹೆಣ್ಣು ಮಕ್ಕಳು ಸೇರಿದಂತೆ 24 ಮಕ್ಕಳಿಗೆ ಜನ್ಮ ನೀಡಿದ್ದಾಳೆ” ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತನೊಬ್ಬ ನಡೆಸುವ ಸಂದರ್ಶನದ ಹಾಗೆ ಚಿತ್ರಿಸಲಾದ ವಿಡಿಯೋ ಕ್ಲಿಪ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಮಹಿಳೆಯೊಂದಿಗೆ ಹಲವು ಯೂಟ್ಯೂಬ್ ಚಾನೆಲ್‌ಗಳು ಸಂದರ್ಶನ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ವಿಡಿಯೋದಲ್ಲಿ ತನಗೆ 24 ಮಕ್ಕಳಿದ್ದಾರೆ ಎಂದು ಹೇಳಿಕೊಳ್ಳುವ ಹಿಂದೂ ಮಹಿಳೆಯ ಹೆಸರು ಖುಷ್ಬು ಪಾಠಕ್. ಸಾಮಾಜಿಕ ಜಾಲತಾಣದಲ್ಲಿ…

Read More
ಟ್ರಂಪ್

Fact Check: COVID-19 ಕುರಿತು ಟ್ರಂಪ್ ಮಾತನಾಡಿರುವ ಹಳೆಯ ವೀಡಿಯೊವನ್ನು ಇತ್ತೀಚಿನ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

2024 ರ ಯುಎಸ್ಎ ಅಧ್ಯಕ್ಷೀಯ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಲು ಲಾಕ್‌ಡೌನ್‌ಗಳನ್ನು ಮತ್ತು ಲಸಿಕೆಗಳ ಆದೇಶಗಳನ್ನು ಹೊರಡಿಸಲು ಸಜ್ಜಾಗಿರುವುದರಿಂದ, ಯುನೈಟೆಡ್‌ ಸ್ಟೇಟ್ಸ್‌ನ ಮಾಜಿ ಅಧ್ಯಕ್ಷರು ಮತ್ತು ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್‌ರವರು ಅವುಗಳ ವಿರುದ್ಧ ಹೊಸ ರೂಪಾಂತರವನ್ನು ತರುವ ಉದ್ದೇಶದಿಂದ ಸಲಹೆಯನ್ನು ನೀಡುತ್ತಿರುವ ವಿಡೀಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ವೀಡಿಯೊಗಳನ್ನು ನೀವು ( ಇಲ್ಲಿ , ಇಲ್ಲಿ , ಇಲ್ಲಿ , ಮತ್ತು ಇಲ್ಲಿ ) ನೋಡಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಕಾಳಜಿಯ ಉದ್ದೇಶವನ್ನಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು…

Read More

Fact Check| ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿಯ ಕೊನೆಯ ಕ್ಷಣಗಳು ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಮೇಕಪ್ ಕಲಾವಿದೆಯದ್ದು

ಕೋಲ್ಕತ್ತಾ ಆರ್‌‌ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೊಳಗಾದ ವೈದ್ಯಕೀಯ ವಿದ್ಯಾರ್ಥಿನಿಯ ಜೀವನದ ಕೊನೆಯ ಕ್ಷಣಗಳು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.   ಫ್ಯಾಕ್ಟ್‌ಚೆಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕೋಲ್ಕತ್ತಾ ಮೂಲದ ಮೇಕಪ್ ಕಲಾವಿದೆ ಝೀನತ್ ರಹ್ಮಾನ್‌ ಅವರದ್ದು ಎಂದು ಗುರುತಿಸಲಾಗಿದೆ. ಸಿನೆಮಾ ನಟಿಯರ ಮೇಕಪ್ ಹಾಗೂ ಉಡುಗೆಯ ನಕಲು, ಭೀಕರ ಘಟನೆಗಳು ಹಾಗೂ ಸಿನೆಮಾದ ತುಣುಕುಗಳನ್ನು ಮರು ಸೃಷ್ಟಿಸುವ ಕೆಲಸವನ್ನು ಝೀನತ್ ರಹ್ಮಾನ್ ಮಾಡುತ್ತಾರೆ. 2020ರಿಂದ ತಮ್ಮ ಇನ್ಸ್ಟಾ…

Read More

Fact Check| ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಟಿಎಂಸಿ ನಾಯಕನ ಮಗನಲ್ಲ

ಕೋಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸೌಮೆನ್ ಮಹಾಪಾತ್ರ ಅವರ ಪುತ್ರ ಡಾ. ಸುಭ್‌ದೀಪ್ ಸಿಂಗ್ ಮಹಾಪಾತ್ರ‌ ಅವರ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿವೆ. “ಈತ ಟಿಎಂಸಿ ಶಾಸಕನ ಪುತ್ರ. ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಪ್ರಕರಣದಲ್ಲಿ ಈತನಿಗೆ ನಂಟಿದೆ. ಈಗ ಈತ ತಲೆ ಮರೆಸಿಕೊಂಡಿದ್ದಾನೆ‌. ಬಂಧನಕ್ಕೊಳಗಾದ ವ್ಯಕ್ತಿ…

Read More

Fact Check| ಐಶ್ವರ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಭಿಷೇಕ್ ವಿಚ್ಛೇದನ ಘೋಷಿಸಿದ್ರಾ? ಸತ್ಯ ಇಲ್ಲಿದೆ ಓದಿ…

ಬಾಲಿವುಡ್ ತಾರಾ ದಂಪತಿ ಐಶ್ವರ್ಯ ರೈ ಬಚ್ಚನ್‌ರೊಂದಿಗೆ ಅಭಿಷೇಕ್ ಬಚ್ಚನ್ ವಿಚ್ಛೇದನ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅನಂತ್ ಅಂಬಾನಿ ವಿವಾಹ ಸಂಭ್ರಮದಲ್ಲಿ ಐಶ್ವರ್ಯಾ ರೈ ಬಚ್ಚನ್​​ ತಮ್ಮ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಫೋಟೋ ಬೂತ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ವಿಡಿಯೋ ಹರಿಬಿಡಲಾಗಿದ್ದು, ವಿಚ್ಛೇದನ ಕುರಿತ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿತ್ತು. ಫ್ಯಾಕ್ಟ್‌ಚೆಕ್ ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ ಎನ್ನಲಾದ ವಿಡಿಯೋ ಡೀಪ್ ಫೇಕ್​ ತಂತ್ರಜ್ಞಾನ ಬಳಸಿ ತಯಾರಿಸಿದ್ದು ಎಂಬುದು…

Read More

Fact Check| ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಮಾರಾಟ ಮಾಡಿಲ್ಲ

ವಿದೇಶಾಂಗ ಸಚಿವ ಜೈಶಂಕರ್‌ರವರ ಮೂರು ದಿನಗಳ ಮಾಲ್ಡೀವ್ಸ್ ಪ್ರವಾಸದ ಚಿತ್ರಗಳು ವೈರಲ್ ಆದ ಬೆನ್ನಲ್ಲೇ “ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಮಾರಾಟ ಮಾಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಚೀನಾ ವಿರುದ್ಧ ಮೋದಿ ಸರಕಾರಕ್ಕೆ ರಾಜತಾಂತ್ರಿಕ ಗೆಲುವು. 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್  ಎಂಬ ಶೀರ್ಷಿಕೆಯಲ್ಲಿ  ಪೋಸ್ಟ್ ಕಾರ್ಡ್ ಸುಳ್ಳು ಮಾಹಿತಿಯನ್ನು ಹರಿಬಿಡುತ್ತಿದೆ‌. ಇದರಂತೆಯೇ ಸಾಮಾಜಿಕ ಜಾಲತಾಣ ಎಕ್ಸ್‌ನ ಕೆಲವು ಅಧಿಕೃತ ಖಾತೆಗಳಲ್ಲಿ…

Read More

Fact Check| ಬೌದ್ಧರ ಮೇಲೆ ದಾಳಿ ಎಂದು 2012ರ ಕಾಕ್ಸ್ ಬಜಾರ್ ಹಿಂಸಾಚಾರದ ಫೋಟೋ ಹಂಚಿಕೊಂಡ ಬಲಪಂಥೀಯರು

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಹಾಗೂ ಪಲಾಯನದ ಬಳಿಕ ದೇಶದಲ್ಲಿ ಪ್ರತಿಭಟನಾಕಾರರಿಂದ ಅವಾಮೀ ಲೀಗ್ ನಾಯಕರ ಮೇಲೆ ದಾಳಿ ಭುಗಿಲೆದಿದ್ದು, ಹಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಈ ನಡುವೆ ಬಾಂಗ್ಲದೇಶದಲ್ಲಿರುವ ಅಲ್ಪಸಂಖ್ಯಾತ ಬೌದ್ಧ ಧರ್ಮೀಯರ ಮೇಲೆ ಬಹುಸಂಖ್ಯಾತ ಮುಸ್ಲಿಮರಿಂದ ಹಿಂಸಾಚಾರ ನಡೆಯುತ್ತಿದೆ ಎಂದು ಬುದ್ಧ ಪ್ರತಿಮೆಗಳನ್ನು ಧ್ವಂಸಗೊಳಿಸಿ, ವಿಹಾರಕ್ಕೆ ಬೆಂಕಿ ಹಚ್ಚಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರಗಳು 2012ರಲ್ಲಿ ನಡೆದ ಕಾಕ್ಸ್ ಬಜಾರ್ ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎಂಬ ವಿಷಯ ಬಹಿರಂಗವಾಗಿದೆ‌….

Read More

Fact Check| ಸೌದಿ ಏರ್‌ಲೈನ್ಸ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ಇಸ್ಲಾಮೋಫೋಬಿಕ್ ತಿರುವು ನೀಡಿ ವಿಡಿಯೋ ಹಂಚಿಕೆ

ಮುಸ್ಲಿಮರ ಧಾರ್ಮಿಕ ಆಚರಣೆಯ ವಿಷಯಗಳಲ್ಲಿ ಹಿಜಾಬ್‌ನ ಬಳಿಕ ಅತಿ ಹೆಚ್ಚು ಇಸ್ಲಾಮೋಫೋಬಿಕ್ ವರದಿಗಳು ಪ್ರಕಟವಾಗಿರುವುದು ನಮಾಝ್ ಕುರಿತಾಗಿದೆ. ನಮಾಝ್‌ಗೆ ಸಂಬಂಧಿಸಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದ್ದು, ಪ್ರಯಾಣಿಕನೋರ್ವ ವಿಮಾನದಲ್ಲಿ ನಮಾಝ್ ಮಾಡುವ ಮೂಲಕ ಇತರೆ ಪ್ರಯಾಣಿಕರಿಗೆ ಅಡಚಣೆಯುಂಟು ಮಾಡುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಹರಿಬಿಡಲಾಗಿದೆ. ವಿಡಿಯೋದಲ್ಲೇನಿದೆ? ವ್ಯಕ್ತಿಯೊಬ್ಬ ವಿಮಾನದಲ್ಲಿ ನಮಾಝ್ ಮಾಡುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಲಾಗಿದ್ದು ” ಇಲ್ಲಿಂದ ದಾಟಬೇಡಿ; ನಾನು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಿದೆ” ಎಂದು ವ್ಯಂಗ್ಯಾತ್ಮಕ ಶೀರ್ಷಿಕೆ ನೀಡಲಾಗಿದೆ….

Read More

Fact Check| ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರಿಂದ ಬೆಂಕಿ ಹಚ್ಚಲಾದ ಧಾರ್ಮಿಕ ಕಟ್ಟಡ ಮಂದಿರವಲ್ಲ; ಸೂಫೀ ದರ್ಗಾ!

ಶೇಖ್ ಹಸೀನಾ ರಾಜೀನಾಮೆ ಹಾಗೂ ಪಲಾಯನದ ಬಳಿಕ ಆಗಸ್ಟ್ 5ರಂದು ಸೋಮವಾರ ಜಸ್ಸೋರ್‌ನಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯ ವೇಳೆ ಅವಾಮಿ ಲೀಗ್ ನಾಯಕರು ಮತ್ತು ವಿವಿಧ ಕಾರ್ಮಿಕರ ರಚನೆಗಳು, ಅವರಿಗೆ ಸೇರಿದ ಮನೆಗಳು ಮತ್ತು ವ್ಯವಹಾರಿಕ ಕಟ್ಟಡಗಳ ಮೇಲೆ ದೇಶಾದ್ಯಂತ ಗುರಿಯಾಗಿಸಿ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ವಿಧ್ವಂಸಕ ಕೃತ್ಯಗಳು, ಲೂಟಿ ಮತ್ತು ಬೆಂಕಿ ಹಚ್ಚುವಿಕೆಯಿಂದಾಗಿ ಬಾಂಗ್ಲಾದೇಶದ ಜಸ್ಸೋರ್‌ ಜಿಲ್ಲೆಯೊಂದರಲ್ಲಿಯೇ 24 ಮಂದಿ ಹತರಾಗಿದ್ದಾರೆ. ಈ ನಡುವೆ ದಿನೇ ದಿನೇ ಹೆಚ್ಚುತ್ತಿರುವ ಸುಳ್ಳು ಸುದ್ದಿಗಳು, ಅವಾಮಿ ಲೀಗ್…

Read More