Team Kannada fact check

Fact Check| ಆರ್‌ಜಿ ಕರ್ ಪ್ರಕರಣ: ಪ್ರಾಂಶುಪಾಲರ ಕೊಠಡಿಯಲ್ಲಿ ಬರ್ತಡೇ ಆಚರಿಸಿಕೊಂಡ ವ್ಯಕ್ತಿ ಆರೋಪಿ ಸಂಜಯ್ ರಾಯ್ ಅಲ್ಲ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಪಕ್ಕದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ಕೇಕ್ ಕತ್ತರಿಸುತ್ತಿದ್ದಾನೆ ಎಂದು ಹೇಳುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಭೀಕರ ಅಪರಾಧ ಪತ್ತೆಯಾದಾಗಿನಿಂದ ಪ್ರಾಂಶುಪಾಲ ಸಂದೀಪ್ ಘೋಷ್ ಸುದ್ದಿಯಲ್ಲಿದ್ದಾರೆ. ಆಗಸ್ಟ್ 9ರಂದು ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ನಂತರ ಘೋಷ್ ಘಟನೆಯ ಬಗ್ಗೆ ಎಫ್‌ಐಆರ್…

Read More

Fact Check| ರೈಲ್ವೆ ಹಳಿಗಳಲ್ಲಿ ಮುಸ್ಲಿಮ್ ಹುಡುಗರು ಕಳ್ಳತನ ಮಾಡುತ್ತಿದ್ದಾರೆ ಎಂದು ಸುರೇಶ್ ಚವ್ಹಾಂಕೆ ಹಂಚಿಕೊಂಡ ವಿಡಿಯೋ ಪಾಕಿಸ್ತಾನದ್ದು!

ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಸದಾ ದ್ವೇಷ ಹರಡಲು ಯತ್ನಿಸುವ ಸುದರ್ಶನ್ ಟಿವಿ ಸಂಸ್ಥಾಪಕ ಸುರೇಶ್ ಚವ್ಹಾಂಕೆ ಮತ್ತೊಮ್ಮೆ ಅಂತಹುದ್ದೇ ವಿಡಿಯೋವೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಮತ್ತೊಮ್ಮೆ ಪಾಠ ಹೇಳಿಸಿಕೊಂಡಿದ್ದಾರೆ. ಚಿಕ್ಕ ಹುಡುಗರು ರೈಲು ಹಳಿಯನ್ನು ಧ್ವಂಸಗೊಳಿಸುವ/ ಕಳ್ಳತನ ಮಾಡಲು ಯತ್ನಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ಚವ್ಹಾಂಕೆ, “ಈ ವಯಸ್ಸಿನಲ್ಲಿ ಇವರು ರೈಲ್ವೆ ಹಳಿಗಳನ್ನು ಅಗೆಯುತ್ತಿದ್ದಾರೆ. ಮುಂದಿನ 50 ವರ್ಷಗಳಲ್ಲಿ ಇವರು ಏನು ಮಾಡಬಹುದೆಂದು ಯೋಚಿಸಿ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಇವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು…

Read More

Fact Check| ಗಾಜಾದಲ್ಲಿ ಹಮಾಸ್ ನಿರ್ಮಿಸಿದ ಸುರಂಗ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಹಂಗೇರಿಯದ್ದು!

ಹಮಾಸ್-ಇಸ್ರೇಲ್ ಸಂಘರ್ಷ ಮುಂದುವರೆದಿದ್ದು, ಈ ನಡುವೆ “ಹಮಾಸ್ ನಿರ್ಮಿಸಿದ ಶಸ್ತ್ರಾಸ್ತ್ರ ಕಾರ್ಖಾನೆ ಸೇರಿದಂತೆ ದೊಡ್ಡ ಸುರಂಗವನ್ನು ಇಸ್ರೇಲ್ ಪತ್ತೆ ಹಚ್ಚಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ಭೂಗತ ಜಾಗಕ್ಕೆ ಮೆಟ್ಟಿಲುಗಳನ್ನು ಇಳಿದು ಹೋಗುತ್ತಿರುವ ದೃಶ್ಯಗಳು ಈ ವೀಡಿಯೊದಲ್ಲಿವೆ. “ಇಸ್ರೇಲ್‌ನ ಗಾಜಾ ಭೂಭಾಗದಲ್ಲಿ ಭಯೋತ್ಪಾದಕರ ಸಿದ್ಧತೆಯನ್ನು ನೋಡಿ ಆಘಾತವಾಯಿತು. ಇಸ್ರೇಲ್‌ನ ಮೊಸಾದ್ ಭೂಗರ್ಭದಲ್ಲಿ ಕಾಂಕ್ರೀಟ್ ಆರ್‌ಸಿಸಿ ಸುರಂಗವನ್ನು ಎಷ್ಟು ಆಳದಲ್ಲಿ ನಿರ್ಮಿಸಲಾಗಿದೆ ನೋಡಿ… 150 ಅಡಿಗಿಂತಲೂ ಕೆಳಗೆ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇದು…

Read More

Fact Check : ಸಿರಿಯಾದ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಾದ ಇತ್ತೀಚಿನ ಘಟನೆಯೆಂದು ತಪ್ಪಾಗಿ ಹಂಚಿಕೊಳ್ಳುತ್ತಿದೆ

ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ನಡೆದ  ಸ್ಫೋಟದ ವೀಡೀಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ “ಭಯೋತ್ಪಾದಕನ ದೇಹದೊಳಗೆ ಟೈಮ್ ಬಾಂಬ್‌ನ್ನು ಇರಿಸಿ  ಪ್ಯಾಲೆಸ್ಟೀನಿಯರಿಗೆ ಹಿಂದಿರುಗಿಸಿದ ಇಸ್ರೇಲ್‌. ಅದರ ಪರಿಣಾಮ ಇದರಲ್ಲಿದೆ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌: ಸತ್ಯ :  2012ರ ಜುಲೈ ತಿಂಗಳಿನಲ್ಲಿ ಈ ವೀಡೀಯೊವನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ಸಿರಿಯಾದ ಡಮಾಸ್ಕಸ್ ಉಪನಗರದಲ್ಲಿ ಸರ್ಕಾರಿ ಪಡೆಯಿಂದ ಹತ್ಯೆಗೀಡಾದ ವ್ಯಕ್ತಿಯೋರ್ವನ ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆಯಲ್ಲಿ ಸಂಭವಿಸಿದ್ದು ಸರ್ಕಾರಿ ಪ್ರಾಯೋಜಿತ ಕಾರ್‌ಬಾಂಬ್‌ ಸ್ಪೋಟದಿಂದಾಗಿ ಅಂತ್ಯಕ್ರೀಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಸುಮಾರು 85 ಜನರು ಸಾವನ್ನಪ್ಪಿದ್ದಾಗಿ…

Read More
ಪಶ್ಚಿಮ ಬಂಗಾಳ

Fact Check : ಬಂಗಾಳದಲ್ಲಿ ಹಿಂದೂ ಮಹಿಳೆಯ ಮೇಲೆ ಹಲ್ಲೆ ಎಂದು ಮುಸ್ಲಿಂ ವ್ಯಕ್ತಿಗಳ ವಿಡಿಯೋ ಹಂಚಿಕೆ

ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ನಡೆಯುತ್ತಿರುವ ಆಕ್ರೋಶದ ನಡುವೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಕ್ರಮ ವಹಿಸುತ್ತಿಲ್ಲ ಎಂದು ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ, ಬಂಗಾಳದಲ್ಲಿ ಪೊಲೀಸರ ಎದುರಿನಲ್ಲೇ ಹಿಂದೂ ಮಹಿಳೆಯನ್ನು ಮುಸ್ಲಿಮರು ಥಳಿಸಿರುವ ಘಟನೆ ನಡೆದಿದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆ ವಿಡಿಯೋದಲ್ಲಿ ಪೊಲೀಸ್ ವಾಹನದ ಬಳಿ ಜನರ ಗುಂಪೊಂದು ಮಹಿಳೆಯ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಫೇಸ್‌ಬುಕ್‌ನಲ್ಲಿ…

Read More

Fact Check| ಕೆಪಿಎಸ್‌ಸಿ ಪರೀಕ್ಷೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ

ಕರ್ನಾಟಕದಲ್ಲಿ ಆಗಸ್ಟ್ 27ರಂದು ನಡೆಯಲಿರುವ ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಸಣ್ಣ  ಗುಂಪೊಂದು ಆಗಸ್ಟ್ 24ರಂದು ಪ್ರತಿಭಟನೆ ನಡೆಸಿದ್ದು, ಇದರ ಫೋಟೋ ಬಳಸಿಕೊಂಡು “ಕರ್ನಾಟಕದಲ್ಲಿ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ, ರಾಹುಲ್ ಗಾಂಧಿ ಮೌನವಾಗಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ‌. ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿ ಆಗುತ್ತಿರುವ ಹಗರಣಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಶೂಗಳನ್ನು ಪಾಲಿಶ್ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ….

Read More

Fact Check| ಬೈಕ್ ಗ್ಯಾಂಗ್‌ನಿಂದ ಕಿರುಕುಳ ಪ್ರಕರಣಕ್ಕೆ ತಿರುವು: ಮೂವರು ಯುವಕರು ತನಗೆ ಸಹಾಯ ಮಾಡುತ್ತಿದ್ದರು ಎಂದ ಯುವತಿ

ಉತ್ತರಪ್ರದೇಶದ ಆಗ್ರಾದಲ್ಲಿ ರಾತ್ರಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಗೆ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಸ್ಟ್ 19ರಂದು ವೈರಲ್ ಆಗಿತ್ತು. Men On Bikes Harass Woman Riding Scooter At Night In Agra. This sums up law & order situation of Uttar Pradesh 😶 pic.twitter.com/8mLAUvPRWY — Ductar Fakir 2.0 (@Chacha_huu) August 19, 2024 ಯುವತಿಯ ಸ್ಕೂಟರ‌ನ್ನು ಎಡಭಾಗದಲ್ಲಿದ್ದ ಸ್ಕೂಟರ್ ಸವಾರರು ಆಗಾಗ ಹಿಂಬದಿಯಿಂದ ಒದೆಯುತ್ತಿದ್ದರೆ,…

Read More

Fact Check| ಗುಮಾಸ್ತ-ಟೈಪಿಸ್ಟ್ ನಡುವಿನ ಜಗಳಕ್ಕೆ ನ್ಯಾಯಾಧೀಶರ ಮೇಲೆ ಹಲ್ಲೆ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

“ನ್ಯಾಯದ ಬಗ್ಗೆ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ಥಳಿಸುತ್ತಿರುವ ದೃಶ್ಯ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. यमुनानगर जगाधरी हरियाणा एक शख्स डिस्टिक कोर्ट में जज साहब को ही मारने लगा क्योंकि वह न्याय से संतुष्ट नहीं था pic.twitter.com/dkV3koxYFe — 🇮🇳Jitendra pratap singh🇮🇳 (@jpsin1) August 18, 2024 ಈ ವಿಡಿಯೋದಲ್ಲಿ ಕೊಠಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ…

Read More
ವಿದ್ಯುತ್‌ ದರ

ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಧಾರ್ಮಿಕ ಸ್ಥಳಗಳ ವಿದ್ಯುತ್ ಶುಲ್ಕದ ದರದಲ್ಲಿ ವ್ಯತ್ಯಾಸವಾಗಿದೆ ಎಂಬ ಮಾಹಿತಿ ಸುಳ್ಳು

ಸಾಮಾಜಿಕ ಮಾಧ್ಯಮಗಳು ಇತ್ತೀಚಿಗೆ ಹಂಚಿಕೊಳ್ಳುತ್ತಿರುವ ಪೋಸ್ಟ್‌ರ್‌ಗಳಲ್ಲಿ ದೆಹಲಿ ಸರ್ಕಾರವು  ಹಿಂದೂ ಧಾರ್ಮಿಕ ಸ್ಥಳಗಳ ವಿರುದ್ಧ ವಿದ್ಯುತ್ ಶುಲ್ಕದ ಬಗ್ಗೆ ಪಕ್ಷಪಾತವನ್ನು ಹೊಂದಿದೆ ಎಂಬುದರ ಕುರಿತು ಈ ಪೋಸ್ಟ್‌ನಲ್ಲಿ ನೋಡಬಹುದು. ಈ ಪೋಸ್ಟ್‌ರ್‌ ಪ್ರಕಾರ, ವಿದ್ಯುತ್ ದರಗಳು  ಸಾಮಾನ್ಯ ಜನರಿಗೆ, ಹಿಂದೂ ದೇವಾಲಯಗಳಿಗೆ ಮತ್ತು ಗೋಶಾಲೆಗಳಿಗೆ ಯೂನಿಟ್‌ಗೆ 7.85 ರೂ ನಿಗದಿಗೊಳಿಸಿದೆ. ಚರ್ಚ್ ಮತ್ತು ಮಸೀದಿಗಳಿಗೆ ಕೇವಲ ರೂ. ಪ್ರತಿ ಯೂನಿಟ್‌ಗೆ 1.85 ( ಇಲ್ಲಿ ) ನಿಗದಿಪಡಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಆದಾಗ್ಯೂ, ದೆಹಲಿಯ ವಿದ್ಯುತ್ ಇಲಾಖೆಯು ಎಲ್ಲಾ…

Read More
ವಿರಾಟ್ ಕೊಹ್ಲಿ

Fact Check: ಕೋಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ವಿರಾಟ್‌ ಕೊಹ್ಲಿ ₹50 ಕೋಟಿ ದೇಣಿಗೆ ನೀಡಿಲ್ಲ

ಕೋಲ್ಕತ್ತಾದ ಆರ್‌ಜಿಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಘಟನೆಯ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶದ ನಡುವೆ, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯವರು ಸಂತ್ರಸ್ತೆಯ ತಾಯಿಗೆ ₹ 50 ಕೋಟಿ ದೇಣಿಗೆ ನೀಡಿದ್ದಾರೆಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಿಂದಿ ಭಾಷೆಯಲ್ಲಿ “प्यार उससे करो जो खराब टाइम में मदद करे कोलकाता रैंप में विराट कोहली ने 50 करोड़ डोनेट किये उसकी मां की खुशी…

Read More