ರಾಹುಲ್ ಗಾಂಧಿ ಅರ್ಥವಿಲ್ಲದ ಭಾಷಣ ಮಾಡಿದ್ದಾರೆ ಎಂಬುವುದು ಸುಳ್ಳು..!
ಕಳೆದ ಕೆಲ ದಿನಗಳಿಂದ ರಾಹುಲ್ ಗಾಂಧಿಯವರು ಅರ್ಥವಿಲ್ಲ ಭಾಷಣ ಮಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಯಾರಿಗೂ ಅರ್ಥವಾಗುತ್ತಿಲ್ಲ, ಯಾರಿಗಾದರೂ ಅರ್ಥವಾದರೆ ನಮಗೆ ತಿಳಿಸಿ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಆದರೆ ಇದರ ಹಿಂದಿನ ಸತ್ಯ ಬೇರೆಯದ್ದೇ ಇದೆ. ಹೌದು.. ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂಬ ವಿಡಿಯೋದಲ್ಲಿ ಅವರು “ನನ್ನ ತಂದೆ ಕೊಲ್ಲಲ್ಪಟ್ಟರು, ನಾನು ಆ ರೀತಿ ಮಾಡಿಲ್ಲ, ನಾನು ಆಸ್ಪತ್ರೆಯಲ್ಲಿದ್ದೆ, ನನಗೆ ಈ ರೀತಿ ಆಗಿದ್ದರೆ ನಾನು ಸಾಯಿಸುತ್ತಿದ್ದೆ ಎಂದು ಭಾವಿಸಿದ್ದೆ” ; ಎಂಬ…